Home
ಸುದ್ದಿಜಾಲ

ATM ಮೂಲಕ PF ಹಣ ಪಡೆಯಲು ಅವಕಾಶ: ಯಾವಾಗ ಪ್ರಾರಂಭ?

ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ತನ್ನ ಸದಸ್ಯರಿಗೆ ಮತ್ತೊಂದು ಮಹತ್ವದ ಸೌಲಭ್ಯವನ್ನು ಒದಗಿಸಲು ಸಿದ್ಧತೆ ನಡೆಸುತ್ತಿದೆ. ಇತ್ತೀಚಿನ ಒಂದು ವರದಿಯ ಪ್ರಕಾರ, ಜನವರಿ 2026 ರಿಂದ ಎಟಿಎಂಗಳ ಮೂಲಕ ತಮ್ಮ ಪಿಎಫ್ (PF) ಖಾತೆಯಲ್ಲಿರುವ ಹಣವನ್ನು ಹಿಂಪಡೆಯಲು ಅವಕಾಶ ನೀಡುವ ಸಾಧ್ಯತೆಯಿದೆ. ಈ ಹೊಸ ಸೌಲಭ್ಯವು ಲಕ್ಷಾಂತರ ನೌಕರರಿಗೆ ತುರ್ತು ಸಂದರ್ಭಗಳಲ್ಲಿ ಹಣ ಪಡೆಯುವುದನ್ನು ಇನ್ನಷ್ಟು ಸುಲಭಗೊಳಿಸಲಿದೆ.! ಈ ಕುರಿತಂತೆ ಮತ್ತಷ್ಟು ಮಾಹಿತಿಯನ್ನು ನೋಡೋಣ ಬನ್ನಿ.

ಹೌದು, ಮನಿ ಕಂಟ್ರೋಲ್ ವೆಬ್‌ಸೈಟ್ ವರದಿಯ ಪ್ರಕಾರ, ಇಪಿಎಫ್‌ಒದ ಉನ್ನತ ಸಮಿತಿಯಾದ ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟೀಸ್ (CBT) ಈ ಕುರಿತು ಅಕ್ಟೋಬರ್ ಎರಡನೇ ವಾರದಲ್ಲಿ ನಡೆಯುವ ಸಭೆಯಲ್ಲಿ ಈ ಸೇವೆ್ಎ ಅನುಮೋದನೆ ನೀಡುವ ಸಾಧ್ಯತೆಯಿದೆ. ಸಿಬಿಟಿ ಸದಸ್ಯರ ಪ್ರಕಾರ, ಈಗಾಗಲೇ EPFO ಸಂಸ್ಥೆಯ ಐಟಿ ಮೂಲಸೌಕರ್ಯ ಒದಗಿಸುವ ತಂಡವು ಇಂತಹ ವಹಿವಾಟುಗಳಿಗೆ ಸಿದ್ಧವಾಗಿದೆ ಎಂದು ಸಂಸ್ಥೆಯ ಮೂಲಗಳನ್ನು ಉಲ್ಲೇಖಿಸಿ ಮನಿ ಕಂಟ್ರೋಲ್ ವರದಿ ಮಾಡಿದೆ.

ಕಾರ್ಮಿಕ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಹೇಳಿದಂತೆ, ಪಿಎಫ್ (PF) ಸದಸ್ಯರು ತಮ್ಮ ಉಳಿತಾಯ ನಿಧಿಯನ್ನು ಸುಲಭವಾಗಿ ಪಡೆಯುವಂತೆ ಮಾಡುವ ಸರ್ಕಾರದ ಗುರಿಯ ಭಾಗವಾಗಿ ಈ ಎಟಿಎಂ ಸೌಲಭ್ಯವನ್ನು ಪರಿಗಣಿಸಲಾಗಿದೆ. ಸಚಿವಾಲಯವು ಈಗಾಗಲೇ ಬ್ಯಾಂಕ್‌ಗಳು ಮತ್ತು ಆರ್‌ಬಿಐ ಜೊತೆ ಈ ಕುರಿತು ಮಾತುಕತೆ ನಡೆಸಿದೆ ಎಂದು ಈ ವರದಿಯು ಹೇಳಿದೆ. ಹಾಗಾದರೆ, PF ಖಾತೆದಾರರು ATM ನಿಂದ ಹಣ ವಿತ್‌ಡ್ರಾ ಮಾಡುವುದು ಹೇಗಿರಲಿದೆ ಎಂಬುದನ್ನು ನೋಡೋಣ ಬನ್ನಿ.

ATM ಮೂಲಕ PF ಹಣ ಪಡೆಯಲು ಅವಕಾಶ: ಯಾವಾಗ ಪ್ರಾರಂಭ?

ATM ನಿಂದ PF ಹಣ ವಿತ್‌ಡ್ರಾ ಹೊಸ ಸೌಲಭ್ಯದ ಪ್ರಮುಖ ಅಂಶಗಳು

  • ಎಟಿಎಂ ಕಾರ್ಡ್: ಪಿಎಫ್ ಹಣ ವಿತ್‌ಡ್ರಾ ಮಾಡಲು ಇಪಿಎಫ್‌ಒ ತನ್ನ ಸದಸ್ಯರಿಗೆ ಒಂದು ವಿಶೇಷ ಕಾರ್ಡ್ ನೀಡುವ ಸಾಧ್ಯತೆಯಿದೆ.
  • ಹಿಂಪಡೆಯುವ ಮಿತಿ: ಎಟಿಎಂನಿಂದ ವಿತ್‌ಡ್ರಾ ಮಾಡಲು ನಿರ್ದಿಷ್ಟ ಮಿತಿ ಇರಲಿದೆ. ಕೆಲವು ವರದಿಗಳ ಪ್ರಕಾರ, ಇದು ₹1 ಲಕ್ಷ ಅಥವಾ ಪಿಎಫ್ ಖಾತೆಯ ಬ್ಯಾಲೆನ್ಸ್‌ನ ಶೇಕಡಾ 50ರಷ್ಟು ಆಗಿರಬಹುದು. ನಿಖರವಾದ ಮಿತಿಯನ್ನು ಇನ್ನೂ ನಿರ್ಧರಿಸಲಾಗಿಲ್ಲ.
  • ಪಾರದರ್ಶಕತೆ ಮತ್ತು ಭದ್ರತೆ: ಆಧಾರ್ ಕಾರ್ಡ್ ಲಿಂಕ್ ಮಾಡಲಾದ ಖಾತೆಗಳು ಮತ್ತು ಬಲವಾದ ಭದ್ರತಾ ಕ್ರಮಗಳಿಂದ ಈ ಪ್ರಕ್ರಿಯೆಯು ಸುರಕ್ಷಿತವಾಗಿರುತ್ತದೆ. ಮೃತ ಖಾತೆದಾರನ ನಾಮಿನಿ ಕೂಡ ತನ್ನ ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡಿ ಹಣ ಹಿಂಪಡೆಯಲು ಸಾಧ್ಯವಾಗಬಹುದು.
  • ತ್ವರಿತ ಮತ್ತು ಸುಲಭ: ಪ್ರಸ್ತುತ ಪಿಎಫ್ ವಿತ್‌ಡ್ರಾ ಪ್ರಕ್ರಿಯೆಗಿಂತ ಇದು ಹೆಚ್ಚು ಸರಳ ಮತ್ತು ವೇಗವಾಗಿರಲಿದೆ. ವಿಶೇಷವಾಗಿ ಇಂಟರ್ನೆಟ್ ಸೌಲಭ್ಯ ಕಡಿಮೆ ಇರುವ ಗ್ರಾಮೀಣ ಪ್ರದೇಶಗಳಲ್ಲಿ ಇದು ತುಂಬಾ ಅನುಕೂಲಕರವಾಗಿದೆ.

ಈ ಹೊಸ ಸೌಲಭ್ಯ ಜಾರಿಗೆ ಬಂದರೆ, ಪಿಎಫ್ ಸದಸ್ಯರು ತಮ್ಮ ಎಟಿಎಂ ಕಾರ್ಡ್ ಬಳಸಿ ಪಿನ್ ನಮೂದಿಸಿ ನೇರವಾಗಿ ಎಟಿಎಂನಿಂದಲೇ ಹಣ ಪಡೆಯಬಹುದು. ಇದು ತುರ್ತು ವೈದ್ಯಕೀಯ ವೆಚ್ಚಗಳು, ಹಣಕಾಸಿನ ಅಗತ್ಯಗಳು ಅಥವಾ ಇತರ ಅನಿವಾರ್ಯ ಸಂದರ್ಭಗಳಲ್ಲಿ ಹೆಚ್ಚು ಉಪಯುಕ್ತವಾಗಲಿದೆ.

ಈ ಹಿಂದೆ PF ಹಣವನ್ನು ATM ಮೂಲಕ ಪಡೆಯುವ ಕುರಿತು ಎಎನ್‌ಐ ಸುದ್ದಿ ಸಂಸ್ಥೆ ಜೊತೆ ಮಾತನಾಡಿದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಕಾರ್ಯದರ್ಶಿ ಸುಮಿತಾ ದಾವ್ರಾ ಅವರು, EPFO ಸದಸ್ಯರು ಮುಂಬರುವ ಮೇ ತಿಂಗಳ ಅಂತ್ಯ ಅಥವಾ ಜೂನ್ ವೇಳೆಗೆ ತಮ್ಮ ಭವಿಷ್ಯ ನಿಧಿ ಖಾತೆಗೆ ಸುಲಭವಾಗಿ ಪ್ರವೇಶಿಸಬಹುದೆಂದು ಎಂದು ತಿಳಿಸಿದ್ದರು. EPFO ಸದಸ್ಯರು ತಮ್ಮ ಪಿಎಫ್ ಖಾತೆಯಲ್ಲಿರುವ ಮೊತ್ತವನ್ನು ನೇರವಾಗಿ ATM ಮತ್ತು UPI ಮೂಲಕ ವೀಕ್ಷಿಸಬಹುದು. ಅವರು ಸ್ವಯಂಚಾಲಿತ ವ್ಯವಸ್ಥೆಯ ಮೂಲಕ ತಕ್ಷಣವೇ 1 ಲಕ್ಷ ರೂ.ವರೆಗೆ ಹಣ ಹಿಂಪಡೆಯಲು ಮತ್ತು ವರ್ಗಾವಣೆ ಮಾಡಲು ತಮ್ಮ ಆದ್ಯತೆಯ ಬ್ಯಾಂಕ್ ಖಾತೆಯನ್ನು ಆಯ್ಕೆ ಮಾಡಬಹುದು ಎಂದು ಹೇಳಿದ್ದರು.

ಆದರೆ, ಸಮಯ ಮುಂದೆ ಬಂದಿದೆ. ಇದೀಗ ಈ ಪ್ರಸ್ತಾವನೆಗೆ ಶೀಘ್ರವೇ ಅಧಿಕೃತ ಅನುಮೋದನೆ ಸಿಗುವ ನಿರೀಕ್ಷೆಯಿದೆ. ಈ ಮೂಲಕ, ಸರ್ಕಾರವು ತನ್ನ ನಾಗರಿಕರಿಗೆ ಆರ್ಥಿಕ ಭದ್ರತೆಯನ್ನು ಮತ್ತಷ್ಟು ಸುಗಮಗೊಳಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಡಲಿದೆ ಎಂದು ಆಶಿಸೋಣ.

Best Mobiles in India

English summary
According to a Money Control report, the Central Board of Trustees (CBT), the apex decision-making body of EPFO, is expected to approve the ATM withdrawal facility for Provident Fund members in its meeting scheduled for the second week of October. CBT members revealed that EPFO’s IT infrastructure team is already prepared to handle such transactions, paving the way for ATM withdrawals from January 2026.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+