ಫಿಲಿಪ್ಸ್ ಕಂಪೆನಿಯಿಂದ ಹೊಸ ಮಾನಿಟರ್ ಲಾಂಚ್!..ಬಹು ಭಾಷೆಗಳಿಗೆ ಬೆಂಬಲ!
ಫಿಲಿಪ್ಸ್ ಕಂಪೆನಿ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳಿಗೆ ಸಾಕಷ್ಟು ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಜೊತೆಗೆ ಫಿಲಿಪ್ಸ್ ಕಂಪೆನಿಯ ಮಾನಿಟರ್‌ಗಳಿಗೂ ಸಹ ಟೆಕ್ ವಲಯದಲ್ಲಿ ಹೆಚ್ಚಿನ ಡಿಮ್ಯಾಂಡ್ ಇದೆ. ಇದೀಗ ಫಿಲಿಪ್ಸ್ ಕಂಪೆನಿ ಹೊಸ ಮಾನಿಟರ್ ಒಂದನ್ನು ಬಿಡುಗಡೆ ಮಾಡಿದ್ದು, ಟೆಕ್ ಮಾರುಕಟ್ಟೆಯಲ್ಲಿ ಸಖತ್ ಹೈಪ್ ಕ್ರಿಯೆಟ್ ಮಾಡಿದೆ.
ಹೌದು, ಫಿಲಿಪ್ಸ್ ಕಂಪೆನಿ ಹೊಸ ಫಿಲಿಪ್ಸ್ 49B2U5900CH ಮಾನಿಟರ್ ಅನ್ನು ಬಿಡುಗಡೆ ಮಾಡಿದೆ. ಇದನ್ನು ಕಚೇರಿ ಕೆಲಸಗಳಿಗಾಗಿಯೇ ವಿನ್ಯಾಸಗೊಳಿಸಲಾಗಿದ್ದು, ಪರಿಣಾಮಕಾರಿ ಕಾರ್ಯಕ್ಷೇತ್ರದ ಪರಿಹಾರವನ್ನು ಬಯಸುವ ವ್ಯಕ್ತಿಗಳ ಅಗತ್ಯಗಳನ್ನು ಪೂರೈಸಲಿದೆ. ಇದು 48.8-ಇಂಚಿನ VA ಪ್ಯಾನೆಲ್ ಅನ್ನು ಒಳಗೊಂಡಿದೆ. ಇನ್ನುಳಿದಂತೆ ಇದರಲ್ಲಿರುವ ಫೀಚರ್ಸ್ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಫಿಲಿಪ್ಸ್ 49B2U5900CH ಫೀಚರ್ಸ್ ಹೇಗಿದೆ?
ಫಿಲಿಪ್ಸ್ 49B2U5900CH ಮಾನಿಟರ್ 48.8-ಇಂಚಿನ VA ಪ್ಯಾನೆಲ್ ಅನ್ನು ಹೊಂದಿದೆ. ಇನ್ನು ಡಿಸ್‌ಪ್ಲೇ 5120 x 1440 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದೆ. ಈ ಸ್ಮಾರ್ಟ್ ಮಾನಿಟರ್ 75 Hz ರಿಫ್ರೆಶ್ ರೇಟ್ ಬೆಂಬಲಿಸಲಿದ್ದು, W-LED ಟೆಕ್ನಾಲಜಿಯೊಂದಿಗೆ, VA LCD ಪ್ಯಾನೆಲ್ ಅನ್ನು ಹೊಂದಿದೆ. ಇದು ಮೃದುವಾದ 75 Hz ರಿಫ್ರೆಶ್ ರೇಟ್‌ನಲ್ಲಿ ಪ್ರತಿ ಇಂಚಿಗೆ 109 ಪಿಕ್ಸೆಲ್‌ಗಳ ಪಿಕ್ಸೆಲ್ ಸಾಂದ್ರತೆಯನ್ನು ನೀಡುತ್ತದೆ.
ಈ ಮಾನಿಟರ್ ಕಲರ್ ಮತ್ತು HDR ಸಾಮರ್ಥ್ಯಗಳ ವಿಷಯದಲ್ಲಿ 8-ಬಿಟ್ + FRC ಕಾನ್ಫಿಗರೇಶನ್ ಮೂಲಕ 1.07 ಬಿಲಿಯನ್ ಕಲರ್‌ಗಳನ್ನು ಬೆಂಬಲಿಸಲಿದೆ. ಇದು NTSC 97% ಮತ್ತು sRGB 119% ಕಲರ್ ಗ್ಯಾಮಟ್‌ಗಳನ್ನು ಒಳಗೊಂಡಿದೆ. ಜೊತೆಗೆ ಇದು HDR ಡಿಸ್‌ಪ್ಲೇ HDR 400 ಪ್ರಮಾಣೀಕೃತವಾಗಿದೆ. ಅಲ್ಲದೆ ಮಾನಿಟರ್ 93% ರಿಂದ 105% ವರೆಗಿನ ಅಡಾಪ್ಟಿವ್ ಸಿಂಕ್, ಸ್ಮಾರ್ಟ್‌ಇಮೇಜ್ ಮತ್ತು ಸ್ಮಾರ್ಟ್ ಯೂನಿಫಾರ್ಮಿಟಿಯಂತಹ ಫೀಚರ್ಸ್‌ಗಳನ್ನು ಸಹ ಒಳಗೊಂಡಿದೆ.

ಫಿಲಿಪ್ಸ್ 49B2U5900CH ಮಾನಿಟರ್ ಮೈಕ್ರೊಫೋನ್‌ನೊಂದಿಗೆ ಪಾಪ್-ಅಪ್ 5.0-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ. ಅಲ್ಲದೆ ವಿಂಡೋಸ್ ಹಲೋಗಾಗಿ ಎಲ್‌ಇಡಿ ಸೂಚಕ, ಇನ್‌ಬಿಲ್ಟ್ 3W ಸ್ಪೀಕರ್‌ಗಳೊಂದಿಗೆ ಬರಲಿದೆ. ಇದರ ದಕ್ಷತಾಶಾಸ್ತ್ರದ ವಿನ್ಯಾಸವು ಎತ್ತರ ಹೊಂದಾಣಿಕೆ, ಸ್ವಿವೆಲ್ ಮತ್ತು ಟಿಲ್ಟ್ ಅನ್ನು ಅನುಮತಿಸುತ್ತದೆ. ಇನ್ನು ಮಾನಿಟರ್ ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೇಗದ ಚಾರ್ಜ್ ಸಾಮರ್ಥ್ಯ, ಎತರ್ನೆಟ್ LAN ಮತ್ತು ಆಡಿಯೊ ಪೋರ್ಟ್‌ಗಳು ಸೇರಿದಂತೆ USB ಪೋರ್ಟ್ ಅನ್ನು ಬೆಂಬಲಿಸಲಿದೆ.
ಇದಲ್ಲದೆ ಹೆಚ್ಚುವರಿಯಾಗಿ ಈ ಮಾನಿಟರ್ ಮಲ್ಟಿ ಲ್ಯಾಂಗ್ವೇಜ್‌ಗಳನ್ನು ಬೆಂಬಲಿಸುತ್ತದೆ. ಇದು SmartImage, ಮೆನು ನ್ಯಾವಿಗೇಷನ್ ಮತ್ತು ವಿದ್ಯುತ್ ನಿರ್ವಹಣೆಗೆ ಅನುಕೂಲಕರ ನಿಯಂತ್ರಣಗಳನ್ನು ನೀಡುತ್ತದೆ. ಇದರೊಂದಿಗೆ ಫಿಸಿಕಲ್ ಫೀಚರ್ಸ್‌ಗಳಲ್ಲಿ VESA ಮೌಂಟ್ ಬೆಂಬಲ, ಕೆನ್ಸಿಂಗ್ಟನ್ ಲಾಕ್ ಮತ್ತು ಇಯರ್‌ಫೋನ್ ಹುಕ್ ಸೇರಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ HDMI, DisplayPort ಮತ್ತು USB-C ಇನ್‌ಪುಟ್‌ಗಳು ಸೇರಿವೆ, ಇದು ವಿವಿಧ ಸಾಧನಗಳಿಗೆ ಮಲ್ಟಿಫೇಸ್ ಹೊಂದಾಣಿಕೆಯನ್ನು ಒದಗಿಸುತ್ತದೆ.

ಬೆಲೆ ಮತ್ತು ಲಭ್ಯತೆ
ಫಿಲಿಪ್ಸ್ 49B2U5900CH ಮಾನಿಟರ್ ಪ್ರಸ್ತುತ UK ಅಲ್ಲಿ £949.99(ಅಂದಾಜು 96,663ರೂ) ಬೆಲೆಯನ್ನು ಹೊಂದಿದೆ. ಇದು ಭಾರತದಲ್ಲಿ ಬಿಡುಗಡೆ ಆಗಲಿದೆಯಾ ಎಂಬುದರ ಬಗ್ಗೆ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ.
ಇನ್ನು ಫಿಲಿಪ್ಸ್ ಕಂಪೆನಿ ಇತ್ತೀಚಿಗೆ ಭಾರತದಲ್ಲಿ ಆರು ಹೊಸ ಸ್ಪೀಕರ್‌ಗಳನ್ನು ಬಿಡುಗಡೆ ಮಾಡಿದೆ. ಈ ಸ್ಪೀಕರ್‌ಗಳನ್ನು ವಿವಿಧ ಮಾಡೆಲ್‌ಗಳಾಗಿ ವಿಭಾಗಿಸಲಾಗಿದೆ. ಇವುಗಳಲ್ಲಿ SPA9085, SPA9125, ಮತ್ತು SPA9160 ಟವರ್ ಸ್ಪೀಕರ್‌ಗಳು ಎಂದು ಗುರುತಿಸಲಾಗಿದೆ. ಇನ್ನು SPA8170 ಮಲ್ಟಿಮೀಡಿಯಾ ಸ್ಪೀಕರ್ ಆಗಿದ್ದು, ಫಿಲಿಪ್ಸ್ TAB4218 ಸೌಂಡ್‌ಬಾರ್ ಮತ್ತು TAX5708 ಪಾರ್ಟಿ ಸ್ಪೀಕರ್ ಅನ್ನು ಒಳಗೊಂಡಿದೆ.


Click it and Unblock the Notifications








