Home
ಸುದ್ದಿಜಾಲ

ಸ್ಪೀಕರ್‌ ಮಾರುಕಟ್ಟೆಯಲ್ಲಿ ಬಿರುಗಾಳಿ ಎಬ್ಬಿಸಿದ ಫಿಲಿಪ್ಸ್‌ ಕಂಪೆನಿ! ಆರು ಹೊಸ ಮಾಡೆಲ್‌ ಎಂಟ್ರಿ!

ಫಿಲಿಪ್ಸ್‌ ಕಂಪೆನಿ ಎಲೆಕ್ಟ್ರಾನಿಕ್ಸ್‌ ಬ್ರ್ಯಾಂಡ್‌ ವಿಭಾಗದಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿದೆ. ಅದರಲ್ಲೂ ಫಿಲಿಪ್ಸ್‌ ಕಂಪೆನಿಯ ಸ್ಪೀಕರ್‌ಗಳಿಗೆ ಭಾರತದಲ್ಲಿ ಭಾರಿ ಬೇಡಿಕೆಯಿದೆ. ಅದಕ್ಕೆ ತಕ್ಕಂತೆ ಇದೀಗ ಫಿಲಿಪ್ಸ್ ಭಾರತದಲ್ಲಿ ಆರು ಹೊಸ ಸ್ಪೀಕರ್ ಮಾಡೆಲ್‌ಗಳನ್ನು ಬಿಡುಗಡೆ ಮಾಡಿದೆ. ಇವುಗಳಲ್ಲಿ ಸೌಂಡ್‌ಬಾರ್ ಮಾಡೆಲ್‌, ಪಾರ್ಟಿ ಸ್ಪೀಕರ್ ಮಾಡೆಲ್‌, ಮೂರು ಟವರ್ ಸ್ಪೀಕರ್ ಮಾಡೆಲ್‌ಗಳು ಮತ್ತು ಮಲ್ಟಿಮೀಡಿಯಾ ಸ್ಪೀಕರ್ ಮಾಡೆಲ್‌ಗಳು ಸೇರಿವೆ.

ಹೌದು, ಫಿಲಿಪ್ಸ್‌ ಕಂಪೆನಿ ಭಾರತದಲ್ಲಿ ಆರು ಹೊಸ ಸ್ಪೀಕರ್ ಮಾಡೆಲ್‌ಗಳನ್ನು ಬಿಡುಗಡೆ ಮಾಡಿದೆ. ಇನ್ನು ಈ ಸ್ಪೀಕರ್‌ಗಳನ್ನು 'ಫೆಸ್ಟಿವಲ್ ಥೆರಪಿ' ಅಭಿಯಾನದ ಅಡಿಯಲ್ಲಿ ವಿಶೇಷ ಆಫರ್‌ಗಳ ಮೂಲಕ ಕೂಡ ಖರೀದಿಸಬಹುದು. ಇದರಲ್ಲಿ ಬಳಕೆದಾರರು ಫಿಲಿಪ್ಸ್‌ ಆಡಿಯೊ ಉತ್ಪನ್ನಗಳನ್ನು ಕೇವಲ 1ರೂ ಡೌನ್ ಪಾವತಿಗೆ ಖರೀದಿಸಬಹುದು. ಇನ್ನುಳಿದಂತೆ ಈ ಹೊಸ ಸ್ಪೀಕರ್‌ಗಳ ವಿನ್ಯಾಸ ಹೇಗಿದೆ? ಇವುಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸ್ಪೀಕರ್‌ ಮಾರುಕಟ್ಟೆಯಲ್ಲಿ ಬಿರುಗಾಳಿ ಎಬ್ಬಿಸಿದ ಫಿಲಿಪ್ಸ್‌ ಕಂಪೆನಿ!

ಫಿಲಿಪ್ಸ್‌ ಕಂಪೆನಿ ಇದೀಗ ಪರಿಚಯಿಸಿರುವ ಆರು ಹೊಸ ಸ್ಪೀಕರ್‌ಗಳನ್ನು ವಿವಿಧ ಮಾಡೆಲ್‌ಗಳಾಗಿ ವಿಭಾಗಿಸಲಾಗಿದೆ. ಇವುಗಳಲ್ಲಿ SPA9085, SPA9125, ಮತ್ತು SPA9160 ಟವರ್ ಸ್ಪೀಕರ್‌ಗಳು ಎಂದು ಗುರುತಿಸಲಾಗಿದೆ. ಇನ್ನು SPA8170 ಮಲ್ಟಿಮೀಡಿಯಾ ಸ್ಪೀಕರ್ ಆಗಿದ್ದು, ಫಿಲಿಪ್ಸ್ TAB4218 ಸೌಂಡ್‌ಬಾರ್ ಮತ್ತು TAX5708 ಪಾರ್ಟಿ ಸ್ಪೀಕರ್ ಅನ್ನು ಒಳಗೊಂಡಿದೆ.

ಫಿಲಿಪ್ಸ್‌ ಟವರ್ ಸ್ಪೀಕರ್ಗಳ ವಿಶೇಷತೆ ಏನು?
ಫಿಲಿಪ್ಸ್ SPA9085, SPA9125, ಮತ್ತು SPA9160 ಸ್ಪೀಕರ್‌ಗಳು ಟವರ್‌ ಸ್ಪೀಕರ್‌ಗಳಾಗಿವೆ. ಈ ಸ್ಪೀಕರ್‌ಗಳು ಕ್ರಮವಾಗಿ 100W, 130W ಮತ್ತು 160W ವರೆಗೆ ಸೌಂಡ್‌ ಪ್ರೊಡಕ್ಷನ್‌ ಅನ್ನು ನೀಡುತ್ತದೆ. ಜೊತೆಗೆ ಈ ಸ್ಪೀಕರ್‌ಗಳು ವಾಯರ್‌ಲೆಸ್ ಮೈಕ್ರೊಫೋನ್‌ಗಳನ್ನು ಹೊಂದಿದ್ದು, ಕ್ಯಾರಿಯೋಕೆ ಸೆಷನ್‌ಗಳನ್ನು ಸಕ್ರಿಯಗೊಳಿಸುತ್ತದೆ. ಇದಲ್ಲದೆ ಸ್ಪೀಕರ್‌ಗಳು ಮರದ ಚೌಕಟ್ಟಿನ ವಿನ್ಯಾಸವನ್ನು ಹೊಂದಿವೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್, ಯುಎಸ್‌ಬಿ ಪೋರ್ಟ್, ಎಫ್‌ಎಂ ರೇಡಿಯೊ ಕಾರ್ಯನಿರ್ವಹಣೆ ಮತ್ತು ಬಾಹ್ಯ ಮೈಕ್ರೊಫೋನ್‌ಗಳನ್ನು ಕನೆಕ್ಟ್‌ ಮಾಡಲು ಮೈಕ್ ಇನ್ ಅನ್ನು ಸಹ ನೀಡಲಾಗಿದೆ. ಇದಲ್ಲದೆ ಲ್ಯಾಪ್‌ಟಾಪ್‌ಗಳು ಮತ್ತು MP3 ಪ್ಲೇಯರ್‌ಗಳಂತಹ ಬಾಹ್ಯ ಸಾಧನಗಳನ್ನು ಕನೆಕ್ಟ್‌ ಮಾಡುವುದಕ್ಕೆ ಕೂಡ ಅವಕಾಶ ಮಾಡಿಕೊಡಲಿದೆ.

ಸ್ಪೀಕರ್‌ ಮಾರುಕಟ್ಟೆಯಲ್ಲಿ ಬಿರುಗಾಳಿ ಎಬ್ಬಿಸಿದ ಫಿಲಿಪ್ಸ್‌ ಕಂಪೆನಿ!

ಫಿಲಿಪ್ಸ್ TAX5708 ಪಾರ್ಟಿ ಸ್ಪೀಕರ್ ವಿಶೇಷತೆ ಏನು?
ಫಿಲಿಪ್ಸ್ TAX5708 ಪಾರ್ಟಿ ಸ್ಪೀಕರ್ ಡೈನಾಮಿಕ್ ಬಾಸ್ ಬೂಸ್ಟ್ ಬಟನ್ ಅನ್ನು ನೀಡಲಿದೆ. ಇದು ಬಳಕೆದಾರರಿಗೆ ವಿವಿಧ ಬಾಸ್ ಪ್ರಿಸೆಟ್ಸ್‌ ಆಯ್ಕೆ ಮಾಡಲು ಅವಕಾಶ ನೀಡಲಿದೆ. ಇದರೊಂದಿಗೆ ಈ ಸ್ಪೀಕರ್‌ ಹಲವಾರು ಪಾರ್ಟಿ ಲೈಟ್ ಮೋಡ್‌ಗಳನ್ನು ಹೊಂದಿದೆ. ಇದು ವಿವಿಧ ಲೈಟ್‌ ಎಫೆಕ್ಟ್‌ಗಳನ್ನು ಉತ್ಪಾದಿಸಲು ಸಂಗೀತಕ್ಕೆ ಸಿಂಕ್ ಮಾಡಬಹುದು. ಇದರೊಂದಿಗೆ ಬಳಕೆದಾರರು ಐದು ಲೈಟ್‌ ವಿಧಾನಗಳನ್ನು ಆಯ್ಕೆ ಮಾಡುವುದಕ್ಕೆ ಕೂಡ ಅವಕಾಶ ನೀಡಿದೆ.

ಫಿಲಿಪ್ಸ್ TAB4218 ಸೌಂಡ್‌ಬಾರ್ ಫೀಚರ್ಸ್‌ ಹೇಗಿದೆ?
ಫಿಲಿಪ್ಸ್ TAB4218 ಸ್ಪೀಕರ್‌ 2.1 ಚಾನೆಲ್ ಸೌಂಡ್‌ಬಾರ್ ಆಗಿದೆ. ಇದು 120W ಸೌಂಡ್‌ ಔಟ್‌ಪುಟ್ ಅನ್ನು ನೀಡಲಿದೆ. ಸೌಂಡ್‌ ಎಕ್ಸ್‌ಪಿರಿಯನ್ಸ್‌ ಅನ್ನು ಹೆಚ್ಚು ತಲ್ಲೀನಗೊಳಿಸುವುದಕ್ಕಾಗಿ 3 EQ ಮೋಡ್‌ಗಳೊಂದಿಗೆ ವೈರ್ಡ್ ಸಬ್ ವೂಫರ್‌ ನೀಡಲಾಗಿದೆ. ಈ ವಿಧಾನಗಳು ಬಳಕೆದಾರರಿಗೆ ವಿವಿಧ ಸೌಂಡ್‌ ಪ್ರೊಫೈಲ್‌ಗಳಿಂದ ಆಯ್ಕೆ ಮಾಡುವುದಕ್ಕೆ ಅವಕಾಶ ಹೊಂದಿದೆ. ಜೊತೆಗೆ ನಿರ್ದಿಷ್ಟ ಆದ್ಯತೆಗಳಿಗೆ ಹೊಂದಿಸಲು ಆಡಿಯೊ ಔಟ್‌ಪುಟ್ ಅನ್ನು ಕಸ್ಟಮೈಸ್ ಮಾಡಬಹುದು. ಇದು ಬ್ಲೂಟೂತ್ ಕನೆಕ್ಟಿವಿಟಯನ್ನು ಬೆಂಬಲಿಸಲಿದ್ದು, USB ಪೋರ್ಟ್ ಮೂಲಕ USB ಡ್ರೈವ್‌ಗಳಿಂದ ನೇರ ಪ್ಲೇಬ್ಯಾಕ್ ಹೊಂದಿದೆ.

ಸ್ಪೀಕರ್‌ ಮಾರುಕಟ್ಟೆಯಲ್ಲಿ ಬಿರುಗಾಳಿ ಎಬ್ಬಿಸಿದ ಫಿಲಿಪ್ಸ್‌ ಕಂಪೆನಿ!

ಫಿಲಿಪ್ಸ್ SPA8170 ಮಲ್ಟಿಮೀಡಿಯಾ ಸ್ಪೀಕರ್ ಫೀಚರ್ಸ್‌
ಫಿಲಿಪ್ಸ್ SPA8170 4.1 ಚಾನೆಲ್ ಮಲ್ಟಿಮೀಡಿಯಾ ಸ್ಪೀಕರ್ ಆಗಿದೆ. ಇದು 100W ಸೌಂಡ್ ಔಟ್‌ಪುಟ್‌ನ ಸೌಂಡ್‌ ಔಟ್‌ಪುಟ್ ನೀಡಲಿದೆ. ಇದು 6.5-ಇಂಚಿನ ವೈರ್ಡ್ ಸಬ್ ವೂಫರ್‌ ಆಗಿದ್ದು, ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್, ಯುಎಸ್‌ಬಿ ಪೋರ್ಟ್ ಹೊಂದಿದೆ.

ಫಿಲಿಪ್ಸ್ ಆರು ಹೊಸ ಸ್ಪೀಕರ್‌ಗಳನ್ನು ಬಿಡುಗಡೆ ಮಾಡಿದೆ: ಭಾರತದ ಬೆಲೆ, ಲಭ್ಯತೆ
ಭಾರತದಲ್ಲಿ ಫಿಲಿಪ್ಸ್‌ ಟವರ್‌ ಸ್ಪೀಕರ್‌ ಆಗಿರುವ SPA9085 ಮಾಡೆಲ್‌ 19,990ರೂ.ಬೆಲೆಯನ್ನು ಹೊಂದಿದೆ. ಇದರ SPA9125 ಟವರ್ ಸ್ಪೀಕರ್ 28,990 ರೂ. ಬೆಲೆಯನ್ನು ಪಡೆದುಕೊಂಡಿದೆ. ಜೊತೆಗೆ SPA9160 ಸ್ಪೀಕರ್‌ 30,990ರೂ ಬೆಲೆ ಹೊಂದಿದೆ. ಇನ್ನು ಫಿಲಿಪ್ಸ್ TAX5708 ಪಾರ್ಟಿ ಸ್ಪೀಕರ್ ಭಾರತದಲ್ಲಿ 38,990ರೂ. ಬೆಲೆಗೆ ಮಾರಾಟವಾಗುತ್ತಿದೆ. ಇದಲ್ಲದೆ ಫಿಲಿಪ್ಸ್ TAB4218 ಸೌಂಡ್‌ಬಾರ್ ಬೆಲೆ 13,490ರೂ ಆಗಿದ್ದು, ಆದರೆ SPA8170 ಮಲ್ಟಿಮೀಡಿಯಾ ಸ್ಪೀಕರ್ 9,490ರೂ.ಬೆಲೆಯನ್ನು ಪಡೆದುಕೊಂಡಿದೆ.

Best Mobiles in India

English summary
Philips has Launched six new speaker models in India: Price Details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+