Philips: ಫಿಲಿಪ್ಸ್‌ನಿಂದ ಬರಲಿದೆ ಮೂರು ವಿಭಿನ್ನ ಇಯರ್‌ಫೋನ್‌!

|

ಎಲೆಕ್ಟ್ರಾನಿಕ್ಸ್‌ ಉತ್ಪನ್ನಗಳ ಮಾರುಕಟ್ಟೆಯಲ್ಲಿ ಜನಪ್ರಿಯತೆ ಗಳಿಸಿರುವ ನೆದರ್‌ಲ್ಯಾಂಡ್‌ ಮೂಲದ ಫಿಲಿಪ್ಸ್‌ ಕಂಪೆನಿ ತನ್ನ ಹೊಸ ಮಾದರಿಯ ಮೂರ ಜೋಡಿ ವೈರ್‌ಲೆಸ್‌ ಹೆಡ್‌ಫೋನ್‌ಗಳನ್ನ ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಈ ಹೆಡ್‌ಫೋನ್‌ಗಳನ್ನು ಮುಖ್ಯವಾಗಿ ಸ್ಪೋರ್ಟ್ಸ್‌ ಮತ್ತು ಫಿಟ್‌ನೆಸ್ ನಲ್ಲಿ ತೊಡಗಿರುವವರನ್ನು ಗುರಿಯಾಗಿಸಿಕೊಂಡು ತಯಾರಿಸಲಾಗಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಈ ಮೂರು ಹೆಡ್‌ಫೋನ್‌ಗಳು ವಿವಿದ ಬಗೆಯ ವೈರ್‌ಲೆಸ್ ಆಡಿಯೊ ರೂಪದಲ್ಲಿ ಬರಲಿದೆ ಎಂದು ಹೇಳಲಾಗಿದೆ.

ಹೌದು

ಹೌದು ಡಂಚ್‌ ಮೂಲದ ಎಲೆಕ್ಟ್ರಾನಿಕ್ಸ್‌ ಉತ್ತನ್ನಗಳ ಕಂಪೆನಿ ಫಿಲಿಪ್ಸ್‌ ಹೊಸ ಬಗೆಯ ಫಿಲಿಪ್ಸ್‌ ST702 ಟ್ರೂ ವಾಯರ್‌ಲೆಸ್‌ ಇಯರ್‌ಫೋನ್‌, ಫಿಲಿಪ್ಸ್‌ SH402 ಆನ್‌-ಇಯರ್-ವಾಯರ್‌ಲೆಸ್‌ ಹೆಡ್‌ಫೋನ್‌, ಫಿಲಿಪ್ಸ್‌ SN503 ನೆಕ್‌ಬ್ಯಾಂಡ್‌ ಸ್ಟೈಲ್‌ ಇಯರ್‌ಫೋನ್‌, ಎಂಬ ಮೂರು ವಿವಿಧ ಮಾದರಿಯ ವಾಯರ್‌ ಲೆಸ್‌ ಇಯರ್‌ಫೋನ್‌ಗಳನ್ನ ಮಾರುಕಟ್ಟೆಗೆ ಪರಿಚಯಿಸುವುದಾಗಿ ಹೇಳಿಕೊಂಡಿದೆ. ಮೂರು ಇಯರ್‌ಫೋನ್‌ಗಳು ವಿವಿಧ ಬಗೆಯ ಫೀಚರ್ಸ್‌ಗಳನ್ನ ಹೊಂದಿದ್ದು ಅವುಗಳನ್ನ ತಿಳಿದುಕೊಳ್ಳಲು ಈ ಲೇಖನವನ್ನ ಓದಿ.

ಫಿಲಿಪ್ಸ್‌ ST702 ಇಯರ್‌ಫೋನ್‌

ಫಿಲಿಪ್ಸ್‌ ST702 ಇಯರ್‌ಫೋನ್‌

ಫಿಲಿಪ್ಸ್ ST702 ಟ್ರೂಲಿ ವಾಯರ್‌ಲೆಸ್‌ ಯರ್‌ಬಡ್‌ ಹೊಸ ಮಾದರಿಯ ಇಯರ್‌ಬಡ್‌ ಆಗಿದ್ದು, ಇದು ವಾಟರ್‌ ಫ್ರೂಪ್‌ ಮತ್ತು ಬೆವರು ನಿರೋಧಕವನ್ನ ಒಳಗೊಂಡಿದೆ. ಈ ಇಯರ್‌ಬಡ್‌ ವಿಶೇಷತೆಯೆಂದರೆ ಈ ಇಯರ್‌ಬಡ್‌ಗಳು ಸ್ವಯಂ ಕ್ಲಿನಿಂಗ್‌ ಸಾಮರ್ಥ್ಯವನ್ನು ಒಳಗೊಂಡಿದ್ದು, ಯುವಿ-ಕ್ಲಿನಿಂಗ್‌ ಸಾಧನವನ್ನ ಅಳವಡಿಸಲಾಗಿದೆ. ಇದಲ್ಲದೆ ಇವುಗಳಲ್ಲಿ 6mm ನಿಯೋಡಿಯಮ್‌ ಡ್ರೈವರ್‌ ನೀಡಿರುವುದರಿಂದ, ಟಚ್‌ ಕಂಟ್ರೋಲ್‌ ಮೂಲಕ, ಪ್ಲೇ ಬ್ಯಾಂಕ್‌ ಮ್ಯೂಸಿಕ್‌ ಅನ್ನ ನಿಯಂತ್ರಿಸಲು ಉಪಯುಕ್ತವಾಗಿದೆ. ಈ ಇಯರ್‌ಬಡ್‌ಗಳು ಪ್ರತಿ ಚಾರ್ಜ್‌ಗೆ 6 ಗಂಟೆಗಳ ಬ್ಯಾಟರಿ ಅವಧಿ ಹೊಂದಿದ್ದು, ಕೇವಲ 15 ನಿಮಿಷ ಚಾರ್ಜಿಂಗ್‌ ಮಾಡಿದ್ರೆ ಒಂದೂವರೆ ಗಂಟೆ ಪ್ಲೇಬ್ಯಾಕ್ ಸಮಯ ಸಿಗುತ್ತದೆ.

ಫಿಲಿಪ್ಸ್‌ SH402 ಇಯರ್‌ಫೋನ್‌

ಫಿಲಿಪ್ಸ್‌ SH402 ಇಯರ್‌ಫೋನ್‌

ಈ ಹೆಡ್‌ಫೋನ್‌ಗಳು ಫಿಲಿಪ್ಸ್‌ ಕಂಪೆನಿ ಬಿಡುಗಡೆ ಮಾಡಲಿರುವ ಹೊಸ ಮಾದರಿಯ ಹೆಡ್‌ಫೋನ್‌ಗಳಲ್ಲಿ ಒಂದಾಗಿದ್ದು, ಒಂದೇ ಚಾರ್ಜ್‌ನಲ್ಲಿ 20 ಗಂಟೆಗಳ ಪ್ಲೇಬ್ಯಾಕ್‌ ಟೈಂ ಅನ್ನು ನೀಡಲಿದೆ. ಇದಲ್ಲದೆ ಈ ಹೆಡ್‌ಫೋನ್‌ನಲ್ಲಿ ತೆರವು ಮಾಡಬಹುದಾದ ಕೂಲ್‌ ಇಯರ್‌ಕಪ್‌ ನೀಡಲಾಗಿದ್ದು, ಅವುಗಳನ್ನ ಸ್ವಚ್ಚಗೊಳಿಸಿದ ನಂತರ ಟ್ಯಾಪ್‌ ಮಾಡಿ ಉಪಯೋಗಿಸಬಹುದಾಗಿದೆ. ಜೊತೆಗೆ ಇದು ವಾಟರ್‌ಪ್ರೂಪ್‌ ಮತ್ತು ಬೆವರು ನಿರೋಧಕ ವ್ಯವಸ್ಥೆಯನ್ನ ಹೊಂದಿವೆ. ಈ ಹೆಡ್‌ಫೋನ್‌ ಕೇವಲ 10 ನಿಮಿಷಗಳ ಚಾರ್ಜಿಂಗ್ ನಲ್ಲಿ ಎರಡು ಗಂಟೆಗಳ ಪ್ಲೇಬ್ಯಾಕ್ ಮ್ಯೂಸಿಕ್‌ ಕೇಳುವ ಅವಕಾಶ ನೀಡುತ್ತದೆ.

ಫಿಲಿಪ್ಸ್‌ SN503 ಇಯರ್‌ಫೋನ್‌

ಫಿಲಿಪ್ಸ್‌ SN503 ಇಯರ್‌ಫೋನ್‌

ಇದು ಫಿಲಿಪ್ಸ್‌ ಕಂಪೆನಿ ಬಿಡುಗಡೆ ಮಾಡಲಿರುವ ಹೊಸ ಇಯರ್‌ಫೋನ್‌ಗಳಲ್ಲಿ ಮೂರನೇ ಮಾದರಿಯದಾಗಿದ್ದು, ಇದು ನೆಕ್‌ಬ್ಯಾಂಡ್‌ ಶೈಲಿಯ ಇಯರ್‌ಫೋನ್‌ ಆಗಿದೆ. ಇನ್ನು ಈ ಇಯರ್‌ ಫೋನ್‌ ಫಿಲಿಪ್ಸ್ ST702 ನಿಜವಾದ ವೈರ್‌ಲೆಸ್ ಇಯರ್‌ಬಡ್‌ಗಳ ನೆಕ್‌ಬ್ಯಾಂಡ್ ನ ಹೊಸ ಆವೃತ್ತಿಯಾಗಿದ್ದು. ಈ ಇಯರ್‌ಫೋನ್‌ 6 ಗಂಟೆಗಳ ಬ್ಯಾಟರಿ ಅವಧಿಯನ್ನ ಹೊಂದಿದ್ದು, ವಾಟರ್‌ ಪ್ರೂಪ್‌ ಮತ್ತು ಬೆವರು ನಿರೋಧಕ ವ್ಯವಸ್ಥೆಯನ್ನ ಹೊಂದಿದೆ.

ಬೆಲೆ

ಬೆಲೆ

ಇನ್ನು ಫಿಲಿಪ್ಸ್‌ ಕಂಪೆನಿಯ ಈ ಮೂರು ಇಯರ್‌ಫೋನ್‌ಗಳು ಕೂಡ 2020ರ ಮೊದಲ ತ್ರೈಮಾಸಿಕದಲ್ಲಿ ಯುಕೆಯಲ್ಲಿ ಬಿಡುಗಡೆಯಾಗಲಿದ್ದು,ಮುಂದಿನ ದಿನಗಳಲ್ಲಿ ಭಾರತದಲ್ಲೂ ಬಡುಗಡೆಯಾಗಲಿದೆ ಎಂದು ಹೇಳಲಾಗ್ತಿದ್ದು, ಫಿಲಿಪ್ಸ್‌ ST702 ಟ್ರೂಲಿ ವಾಯರ್‌ಲೆಸ್‌ ಇಯರ್‌ಫೋನ್ ಬೆಲೆ 199 ಯುರೋ (ಅಂದಾಜು 15,600.ರೂ,)ಆಗಿದ್ದು, SH402 ಆನ್‌-ಇಯರ್‌ಹೆಡ್‌ಫೋನ್‌ 69 ಯುರೋ (ಸುಮಾರು 5,420 ರೂ) ಹಾಗೂ SN503 ನೆಕ್‌ಬ್ಯಾಂಡ್‌ ಸ್ಟೈಲ್‌ ಇಯರ್‌ಬಡ್ಸ್‌ 129 ಯುರೋ (ಅಂದಾಜು 10,152 ರೂ)ಬೆಲೆಯನ್ನ ಹೊಂದಿರಲಿದೆ ಎಂದು ನಿರೀಕ್ಷಿಸಲಾಗಿದೆ.

Best Mobiles in India

English summary
Philips recently announced three pairs of headphones to be launched this year.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X