ಭಾರತದಲ್ಲಿ ಫಿಲಿಪ್ಸ್ ಕಂಪೆನಿಯಿಂದ ಎರಡು ಹೊಸ ಸೌಂಡ್‌ಬಾರ್ ಲಾಂಚ್!..ಬೆಲೆ ಎಷ್ಟು?
ಎಲೆಕ್ಟ್ರಾನಿಕ್ಸ್ ಪ್ರಾಡಕ್ಟ್‌ಗಳ ದೈತ್ಯ ಫಿಲಿಪ್ಸ್ ಕಂಪೆನಿ ಭಾರತದಲ್ಲಿ ಎರಡು ಹೊಸ ಸೌಂಡ್‌ಬಾರ್‌ಗಳನ್ನು ಪರಿಚಯಿಸಿದೆ. ಇನ್ನು ಈ ಸೌಂಡ್‌ಬಾರ್‌ಗಳನ್ನು ಫಿಲಿಪ್ಸ್ TAB 7305 ಮತ್ತು ಫಿಲಿಪ್ಸ್ TAB 5305 ಎಂದು ಹೆಸರಿಸಲಾಗಿದೆ. ಇನ್ನು ಈ ಹೊಸ ಸೌಂಡ್‌ಬಾರ್ ಮಾದರಿಗಳು ವಾಯರ್‌ಲೆಸ್ ಸಬ್ ವೂಫರ್‌ಗಳೊಂದಿಗೆ ಬರುತ್ತವೆ. ಜೊತೆಗೆ ಎರಡೂ 2.1 ಚಾನೆಲ್ ಸೆಟಪ್ ಅನ್ನು ನೀಡುತ್ತವೆ.

ಹೌದು, ನೆದರ್‌ಲ್ಯಾಂಡ್ ಮೂಲದ ಫಿಲಿಪ್ಸ್ ಕಂಪೆನಿ ಎರಡು ಹೊಸ ಸೌಂಡ್‌ಬಾರ್‌ಗಳನ್ನು ಲಾಂಚ್ ಮಾಡಿದೆ. ಇದರಲ್ಲಿ TAB5305 ಗೆ ಹೋಲಿಸಿದರೆ ಫಿಲಿಪ್ಸ್ TAB7305 ಹೆಚ್ಚಿನ ಧ್ವನಿ ಉತ್ಪಾದನೆಯೊಂದಿಗೆ ಹೆಚ್ಚು ಶಕ್ತಿಶಾಲಿಯಾಗಿದೆ. ಎರಡು ಮಾದರಿಗಳು ಮಲ್ಟಿ ಕನೆಕ್ಟಿವಿಟಿ ಆಯ್ಕೆಗಳೊಂದಿಗೆ ಬರಲಿವೆ. ಇದರಲ್ಲಿ ಫಿಲಿಪ್ಸ್ TAB7305 ಫಿಲಿಪ್ಸ್ TAB5305 ಗಿಂತ ಕೆಲವು ಹೆಚ್ಚುವರಿ ಫೀಚರ್ಸ್‌ಗಳನ್ನು ಹೊಂದಿದೆ. ಇನ್ನು ಈ ಸೌಂಡ್‌ಬಾರ್ ಮಾದರಿಗಳೊಂದಿಗೆ ವಾಲ್ ಬ್ರಾಕೆಟ್‌ಗಳನ್ನು ಒದಗಿಸಲಾಗಿದೆ. ಆದ್ದರಿಂದ ಟಿವಿಯ ಅಡಿಯಲ್ಲಿ ಇಲ್ಲದಿದ್ದರೆ ಅವುಗಳನ್ನು ನಿಮ್ಮ ಗೋಡೆಯ ಮೇಲೆ ಆರೋಹಿಸಬಹುದು. ಇನ್ನುಳಿದಂತೆ ಈ ಸೌಂಡ್‌ಬಾರ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಫಿಲಿಪ್ಸ್ TAB7305 ಒಟ್ಟು 300W ಸ್ಪೀಕರ್ ಸಿಸ್ಟಮ್ ಔಟ್‌ಪುಟ್ ಅನ್ನು ಹೊಂದಿದೆ. ಇದರಲ್ಲಿ ಸೌಂಡ್‌ಬಾರ್ ಸ್ವತಃ 160W ಅನ್ನು ನೀಡುತ್ತದೆ ಮತ್ತು ಸಬ್ ವೂಫರ್ 140W ಅನ್ನು ನೀಡುತ್ತದೆ. ಮತ್ತೊಂದೆಡೆ, ಫಿಲಿಪ್ಸ್ TAB5305, ಒಟ್ಟು 70W ನ ಸೌಂಡ್ ಔಟ್‌ಪುಟ್ ಅನ್ನು ನೀಡಲಿದೆ. ಇದರಲ್ಲಿ ಸೌಂಡ್‌ಬಾರ್‌ನಿಂದ 30W ಮತ್ತು ಸಬ್ ವೂಫರ್‌ನಿಂದ 40W ಹೊಂದಿದೆ. ಈ ಎರಡೂ ಸೌಂಡ್‌ಬಾರ್‌ಗಳು 2.1 ಚಾನಲ್ ಸಂರಚನೆಯನ್ನು ಹೊಂದಿವೆ ಮತ್ತು ಸಬ್ ವೂಫರ್ ವಾಯರ್‌ಲೆಸ್ ಆಗಿವೆ.

ಇನ್ನು ಫಿಲಿಪ್ಸ್ TAB 7305 ಬ್ಲೂಟೂತ್ 4.2, 3.5mm ಆಡಿಯೊ ಜ್ಯಾಕ್, HDMI 1.4 ARC ಅಥವಾ ಆಡಿಯೋ ರಿಟರ್ನ್ ಚಾನೆಲ್, ಯುಎಸ್‌ಬಿ ಪೋರ್ಟ್ ಮತ್ತು ಡಿಜಿಟಲ್ ಆಪ್ಟಿಕಲ್ ಇನ್‌ಪುಟ್‌ನೊಂದಿಗೆ ಬರುತ್ತದೆ. ಇದು HDMI-CEC ಫೀಚರ್ಸ್ ಅನ್ನು ಸಹ ಬೆಂಬಲಿಸುತ್ತದೆ. ಫಿಲಿಪ್ಸ್ TAB5305 ನೊಂದಿಗೆ, ನೀವು ಯುಎಸ್‌ಬಿ ಪೋರ್ಟ್ ಮತ್ತು HDMI-CEC ವೈಶಿಷ್ಟ್ಯವನ್ನು ಕಳೆದುಕೊಳ್ಳುತ್ತೀರಿ.ಬೆಂಬಲಿತ ಆಡಿಯೊ ಸ್ವರೂಪಗಳಿಗೆ ಸಂಬಂಧಿಸಿದಂತೆ, ಫಿಲಿಪ್ಸ್ TAB 7305 ಡಾಲ್ಬಿ ಡಿಜಿಟಲ್, LPCM 2C, HDMI ARC ಮೂಲಕ ಡಾಲ್ಬಿ ಡಿಜಿಟಲ್ ಪ್ಲಸ್, ಆಪ್ಟಿಕಲ್ ಸಂಪರ್ಕದ ಮೂಲಕ ಡಾಲ್ಬಿ ಡಿಜಿಟಲ್ ಮತ್ತು LPCM 2C ಮತ್ತು ಬ್ಲೂಟೂತ್ ಮೂಲಕ SBC ಬೆಂಬಲಿಸುತ್ತದೆ. ಫಿಲಿಪ್ಸ್ TAB5305 ನಲ್ಲಿ, ನೀವು HDMI ARC ಮತ್ತು ಆಪ್ಟಿಕಲ್ ಮೂಲಕ LPCM 2ch ಮತ್ತು ಬ್ಲೂಟೂತ್ ಮೂಲಕ SBC ಅನ್ನು ಮಾತ್ರ ಪಡೆಯಬಹುದಾಗಿದೆ.

ಇನ್ನು ಫಿಲಿಪ್ಸ್‌ನ TAB 7305 ಸೌಂಡ್‌ಬಾರ್‌ನ ಬೆಲೆ ರೂ. 21,990 ಮತ್ತು ಫಿಲಿಪ್ಸ್ TAB 5305 ಬೆಲೆ ರೂ. 14,990 ರೂ. ಬೆಲೆಯನ್ನು ಹೊಂದಿದೆ. ಇನ್ನು ಈ ಎರಡು ಮಾದರಿಗಳು ಪ್ರಮುಖ ಆನ್‌ಲೈನ್ ಮತ್ತು ಆಫ್‌ಲೈನ್ ಮಳಿಗೆಗಳಲ್ಲಿ ಖರೀದಿಗೆ ಲಭ್ಯವಿರುತ್ತವೆ.


Click it and Unblock the Notifications