ಪಿಲಿಪ್ಸ್‌ನಿಂದ 5,300 mAh ಬ್ಯಾಟರಿ ಸ್ಮಾರ್ಟ್‌ಫೋನ್‌ ಬಿಡುಗಡೆ

Written By:

ಟ್ಯಾಬ್ಲೆಟ್‌ಗಳಿಗೆ 4,000 mAh ಅಥವಾ ಅದಕ್ಕಿಂತ ಹೆಚ್ಚಿನ mAh ಬ್ಯಾಟರಿಗಳನ್ನು ಕಂಪೆನಿಗಳು ನೀಡುವುದು ಸಾಮಾನ್ಯ. ಆದರೆ ಈಗ ನೆದರ್‌‌ಲ್ಯಾಂಡ್‌ ಪಿಲಿಪ್ಸ್‌‌ ಕಂಪೆನಿ 5,300 mAh ಬ್ಯಾಟರಿ ಹೊಂದಿರುವ ಸ್ಮಾರ್ಟ್‌‌ಫೋನ್‌ ಬಿಡುಗಡೆ ಮಾಡಿದೆ.

ಪಿಲಿಪ್ಸ್‌ ಈ ಸ್ಮಾರ್ಟ್‌ಫೋನ್‌ ಚೀನಾದ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು ಯೂರೋಪ್‌ನ ಕೆಲ ದೇಶಗಳಲ್ಲಿ ಈ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಲಾಗುವುದು ಎಂದು ಪಿಲಿಪ್ಸ್‌ ಹೇಳಿದೆ. ಈ ಸ್ಮಾರ್ಟ್‌‌ಫೋನಿಗೆ 1,699 ರೆನ್‌ಮಿನ್ಬಿ(ಅಂದಾಜು 16 ಸಾವಿರ ರೂ.) ಬೆಲೆಯನ್ನು ಪಿಲಿಪ್ಸ್‌ ನಿಗದಿ ಮಾಡಿದೆ.

ಈ ಸ್ಮಾರ್ಟ್‌‌ಫೋನ್‌ ಬ್ಯಾಟರಿ ಸ್ಟ್ಯಾಂಡ್‌ ಬೈ ಟೈಂ 1604 ಗಂಟೆ ಅಥವಾ 66 ದಿನಗಳವರೆಗೆ ಇರಲಿದೆ ಎಂದು ಪಿಲಿಪ್ಸ್‌ ಹೇಳಿದೆ. ಬ್ಯಾಟರಿ ದೊಡ್ಡದಾಗಿರುವುದರಿಂದ ಸ್ಮಾರ್ಟ್‌ಫೋನ್‌ 11.6 ಮಿ.ಮೀ ದಪ್ಪ ಹೊಂದಿದ್ದು ಆಂಡ್ರಾಯ್ಡ್‌ 4.2 ಜೆಲ್ಲಿ ಬೀನ್‌ ಓಎಸ್‌,1.3GHz ಮೀಡಿಯಾ ಟೆಕ್‌ ಪ್ರೊಸೆಸರ್‌‌,1 GB RAMನ್ನು ಒಳಗೊಂಡಿದೆ.

 ಪಿಲಿಪ್ಸ್‌ನಿಂದ 5,300 mAh ಬ್ಯಾಟರಿ ಸ್ಮಾರ್ಟ್‌ಫೋನ್‌ ಬಿಡುಗಡೆ

ಪಿಲಿಪ್ಸ್‌ ಡಬ್ಲ್ಯೂ6618

ವಿಶೇಷತೆ
ಡ್ಯುಯಲ್‌ ಸಿಮ್‌
5 ಇಂಚಿನ ಸ್ಕ್ರೀನ್‌(540 x 960 ಪಿಕ್ಸೆಲ್‌)
ಆಂಡ್ರಾಯ್ಡ್‌ 4.2 ಜೆಲ್ಲಿ ಬೀನ್‌ ಓಎಸ್‌
1.3GHz ಮೀಡಿಯಾ ಟೆಕ್‌ ಪ್ರೊಸೆಸರ್‌‌
1 GB RAM
4 ಜಿಬಿ ಆಂತರಿಕ ಮೆಮೊರಿ
5,300 mAh ಬ್ಯಾಟರಿ

ನಿರಂತರ ಸುದ್ದಿಗಾಗಿ ಕನ್ನಡ ಗಿಝ್‌‌ಬಾಟ್‌‌ನ್ನು ಫೇಸ್‌ಬುಕ್‌ನಲ್ಲಿ Like ಮಾಡಿ, ಟ್ವೀಟರ್‌ನಲ್ಲಿ Follow ಮಾಡಿ‌

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot