ಫೋನ್ ಪೇ ನಲ್ಲಿ ಹೆಚ್ಚಿನ ಹಣ ಕಳುಹಿಸದಿದ್ರೂ, ಈ ಪ್ರಾಬ್ಲಂ ಯಾಕೆ ಬರುತ್ತೆ?

|

ಕೆಲವೊಮ್ಮೆ ನಿಮ್ಮ ಫೋನ್‌ಪೇ ಮತ್ತು ಗೂಗಲ್‌ಪೇ ಆ್ಯಪ್‌ಗಳಲ್ಲಿ ಹಣ ಕಳುಹಿಸುವಾಗ ಡೈಲಿ ಲಿಮಿಟ್‌ ಮುಗಿದಿದೆ ಎಂದು ಬರಲಿದೆ. ಒಂದು ದಿನಕ್ಕೆ ಒಂದು ಲಕ್ಷ ಕಳುಹಿಸುವ ಅವಕಾಶವಿದೆ, ನಾನು ಒಂದು ಲಕ್ಷ ವಹಿವಾಟು ನಡೆಸಿಲ್ಲ, ಆದರೂ ಯಾಕೆ ಡೈಲಿ ಲಿಮಿಟ್‌ ಆಗಿದೆ ಅಂತಾ ಚರ್ಚೆ ಮಾಡೋರನ್ನ ನಾವು ಕಾಣಬಹುದು. ಇದು ಸುಖಾಸುಮ್ಮನೇ ಆಗೋದಲ್ಲ, ಇದಕ್ಕೂ ಕೂಡ ಅಸಲಿ ಕಾರಣವಿದೆ. ಅದೆನಪ್ಪಾ ಅಂದರೆ ಎನ್‌ಪಿಸಿಐ ಪ್ರಕಾರ ಒಂದು ದಿನಕ್ಕೆ ನೀವು ನಡೆಸಬಹುದಾದ ಒಟ್ಟು ಯುಪಿಐ ವಹಿವಾಟುಗಳ ಮೇಲೆ ಕೂಡ ಲಿಮಿಟ್‌ ವಿಧಿಸಲಾಗಿದೆ.

ಪಾವತಿ

ಹೌದು, ದೈನಂದಿನ ಅಗತ್ಯಗಳನ್ನು ಪಡೆದುಕೊಳ್ಳುವಲ್ಲಿ ಯುಪಿಐ ಪಾವತಿ ಅಪ್ಲಿಕೇಶನ್‌ಗಳು ಪ್ರಮುಖ ಪಾತ್ರವನ್ನು ವಹಿಸುತ್ತಿವೆ. ಇದಕ್ಕೆ ತಕ್ಕಂತೆ ಯುಪಿಐ ಪಾವತಿ ಅಪ್ಲಿಕೇಶನ್‌ಗಳು ಕೂಡ ತಮ್ಮ ಬಳಕೆದಾರರಿಗೆ ಹಲವು ಅನುಕೂಲಕರ ಫೀಚರ್ಸ್‌ಗಳನ್ನು ಬಂದಿವೆ. ಇದರ ನಡುವೆ ದೈನಂದಿನ ವಹಿವಾಟಿನ ವಿಚಾರದಲ್ಲಿ ಸರ್ಕಾರ ನಿರ್ಬಂಧವನ್ನು ಕೂಡ ಹೇರಿದೆ. ಹಾಗಾದ್ರೆ ಯುಪಿಐ ಮೂಲಕ ಒಂದು ದಿನದಲ್ಲಿ ನೀವು ಎಷ್ಟು ವಹಿವಾಟು ನಡೆಸಬೋದು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಫೋನ್‌ಪೇ

ಫೋನ್‌ಪೇ, ಗೂಗಲ್‌ ಪೇ, ಪೇಟಿಎಂ ಸೇರಿದಂತೆ ಹಲವು ಯುಪಿಐ ಆ್ಯಪ್‌ಗಳ ಮೂಲಕ ಹಣ ವರ್ಗಾವಣೆ ಮಾಡುವ ಪ್ರಮಾಣ ಹೆಚ್ಚಾದಂತೆ ಸರ್ಕಾರ ಕೂಡ ಹೊಸ ನೀತಿ ನಿಯಮಗಳ್ನು ಜಾರಿಗೆ ತಂದಿದೆ. ಅದರಂತೆ ಎನ್‌ಪಿಸಿಐ ನಿಯಮಾವಳಿಗಳ ಪ್ರಕಾರ ಯುಪಿಐ ಪಾವತಿ ಅಪ್ಲಿಕೇಶನ್‌ಗಳ ಮೂಲಕ ಒಬ್ಬ ವ್ಯಕ್ತಿ ದಿನಕ್ಕೆ ಗರಿಷ್ಠ ಒಂದು ಲಕ್ಷ ಹಣವನ್ನು ವರ್ಗಾವಣೆ ಮಾಡಬಹುದು. ಆದರೆ ಕೆನರಾ ಬ್ಯಾಂಕ್‌ ಅಕೌಂಟ್‌ ಹೊಂದಿರುವ ಬಳಕೆದಾರರು ದಿನಕ್ಕೆ 25,000ರೂ.ಗಳನ್ನು ಮಾತ್ರ ವರ್ಗಾವಣೆ ಮಾಡಲು ಅವಕಾಶ ನೀಡಿದೆ.

ವರ್ಗಾವಣೆ

ಹಣ ವರ್ಗಾವಣೆ ಮಿತಿ ಬ್ಯಾಂಕ್‌ನಿಂದ ಬ್ಯಾಂಕ್‌ಗೆ ಬದಲಾಗುತ್ತದೆ. ಆದರೆ ಒಂದು ದಿನದ ಗರಿಷ್ಠ ವಹಿವಾಟು ಮಾತ್ರ ಒಂದು ಲಕ್ಷಕ್ಕೆ ಸೀಮಿತವಾಗಿದೆ. ಇದಲ್ಲದೆ ಒಂದು ದಿನದಲ್ಲಿ ನೀವು ನಡೆಸಬಹುದಾದ ಒಟ್ಟು UPI ವರ್ಗಾವಣೆಗಳ ಮೇಲೆ ಕೂಡ ಲಿಮಿಟ್‌ ಇದೆ. ಇದನ್ನು ತಿಳಿಯದೇ ಹೋದರೆ ನಿಮಗೆ ಅಗತ್ಯದ ಸಂದರ್ಭದಲ್ಲಿ ಹಣವಿದ್ದರೂ ಕೂಡ ವಹಿವಾಟು ನಡೆಸಲು ಸಾಧ್ಯವಾಗದಿರಬಹುದು. ಅಂದರೆ ಒಬ್ಬ ವ್ಯಕ್ತಿ UPI ಬಳಸಿಕೊಂಡು ಒಂದು ದಿನಕ್ಕೆ ಇಪ್ಪತ್ತು ವರ್ಗಾವಣೆಗಳನ್ನು ಮಾತ್ರ ಮಾಡಬಹುದಾಗಿದೆ. ಡೈಲಿ ಲಿಮಿಟ್‌, ಇಲ್ಲವೇ ದೈನಂದಿನ ಯುಪಿಐ ವಹಿವಾಟುಗಳ ಲಿಮಿಟ್‌ ಮುಗಿದ ನಂತರ ಮತ್ತೆ ಹಣ ಕಳುಹಿಸಬೇಕಾದರೆ ನೀವು 24 ಗಂಟೆಗಳ ಕಾಲ ಕಾಯಬೇಕು.

ಗೂಗಲ್‌ ಪೇ ಟ್ರಾನ್ಸಕ್ಷನ್‌ ಲಿಮಿಟ್‌

ಗೂಗಲ್‌ ಪೇ ಟ್ರಾನ್ಸಕ್ಷನ್‌ ಲಿಮಿಟ್‌

ಗೂಗಲ್‌ ಪೇನಲ್ಲಿ ಒಬ್ಬ ವ್ಯಕ್ತಿ ಒಂದು ದಿನಕ್ಕೆ ನಡೆಸಬಹುದಾದ ವಹಿವಾಟಿನ ಒಟ್ಟು ಮೊತ್ತ ಒಂದು ಲಕ್ಷ ಆಗಿದೆ. ಆದರೆ ಎಲ್ಲಾ UPI ಅಪ್ಲಿಕೇಶನ್‌ಗಳು ಮತ್ತು ಬ್ಯಾಂಕ್ ಖಾತೆಗಳಲ್ಲಿ ದಿನಕ್ಕೆ ಒಟ್ಟು 10 ವಹಿವಾಟುಗಳನ್ನು ಮಾತ್ರ ಅನುಮತಿಸಲಿದೆ. ಒಂದು ವೇಳೆ ನೀವು ಮನಿ ರಿಕ್ವೆಸ್ಟ್‌ನಲ್ಲಿ 2,000ರೂ. ಕ್ಕಿಂತ ಹೆಚ್ಚಿನ ಹಣವನ್ನು ಕಳುಹಿಸಿದರೆ, ಗೂಗಲ್‌ಪೇ ತನ್ನ ದೈನಂದಿನ ವಹಿವಾಟಿನ ಮಿತಿಗಳನ್ನು ಅಮಾನತುಗೊಳಿಸುತ್ತದೆ.

ಫೋನ್‌ಪೇ ಟ್ರಾನ್ಸಕ್ಷನ್‌ ಲಿಮಿಟ್‌

ಫೋನ್‌ಪೇ ಟ್ರಾನ್ಸಕ್ಷನ್‌ ಲಿಮಿಟ್‌

ಫೋನ್‌ಪೇ ದೈನಂದಿನ UPI ವಹಿವಾಟಿನ ಮಿತಿಯನ್ನು 1,00,000ರೂ.ವರೆಗೂ ನೀಡಿದೆ. ಆದರೆ ಫೋನ್‌ಪೇ ಮೂಲಕ ಒಬ್ಬ ವ್ಯಕ್ತಿಯು ಪ್ರತಿದಿನ ಗರಿಷ್ಠ 10 ಅಥವಾ 20 ವಹಿವಾಟುಗಳನ್ನು ಮಾತ್ರ ನಡೆಸಬಹುದಾಗಿದೆ. ಫೋನ್‌ಪೇ ನಲ್ಲಿಯೂ ಕೂಡ ಎರಡು ಸಾವಿರ ರೂ.ವರೆಗೆ ಮನಿ ರಿಕ್ವೆಸ್ಟ್‌ ಕಳುಹಿಸಬಹುದಾಗಿದೆ.

ಪೇಟಿಎಂ UPI ವರ್ಗಾವಣೆ ಮಿತಿ

ಪೇಟಿಎಂ UPI ವರ್ಗಾವಣೆ ಮಿತಿ

ಪೇಟಿಎಂ UPI ಬಳಕೆದಾರರಿಗೆ 1 ಲಕ್ಷದವರೆಗೆ ಹಣ ವರ್ಗಾವಣೆಯನ್ನು ಅನುಮತಿಸುತ್ತದೆ. ಇದಲ್ಲದೆ, ಅಪ್ಲಿಕೇಶನ್ ದೈನಂದಿನ ಮತ್ತು ಗಂಟೆಗೊಮ್ಮೆ ಹಣ ವರ್ಗಾವಣೆಗೆ ನಿರ್ಬಂಧಗಳನ್ನು ವಿಧಿಸಿದೆ. ಪೇಟಿಎಂ ಗಂಟೆಯ ಹಣ ವರ್ಗಾವಣೆಯ ಮಿತಿ 20,000ರೂ ಆಗಿದೆ. ಅಂದರೆ ಪ್ರತಿ ಗಂಟೆಗೆ ಒಟ್ಟು 5 ವಹಿವಾಟುಗಳನ್ನು ಮಾತ್ರ ಬೆಂಬಲಿಸಲಿದೆ. ಆದರೆ, ದಿನದ ವಹಿವಾಟಿನ ಸಂಖ್ಯೆ 20 ಆಗಿದೆ.

Best Mobiles in India

Read more about:
English summary
Phone and Google Pay Daily Transaction Limit as per NPCI regulations.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X