ದೂರವಾಣಿ ನಂಬರ್‌ ಬಗ್ಗೆ ತಿಳಿಯಲೇಬೇಕಾದ ಮಾಹಿತಿಗಳು

By Ashwath
|

ದೂರವಾಣಿಗೆ ನಂಬರ್‌ ಸಂಪರ್ಕ ಹೇಗಾಯ್ತು ? ವಿಶ್ವದ ಪ್ರಥಮ ಟೆಲಿಫೋನ್‌ ಕೋಡ್ ಯಾವ ಪ್ರದೇಶಕ್ಕೆ ನೀಡಲಾಯ್ತು ? ಪ್ರಪಂಚದ ದುಬಾರಿ ಬೆಲೆಯ ಫೋನ್‌ ನಂಬರ್‌ ಯಾರು ಖರೀದಿಸಿದ್ದಾರೆ ? ಹೀಗೆ ಇಲ್ಲಿ ನಮ್ಮ ದೂರವಾಣಿ ಸಂಖ್ಯೆಗಳ ಇತಿಹಾಸಕ್ಕೆ ಸಂಬಂಧಿಸಿದಂತೆ ನಾವು ತಿಳಿದುಕೊಳ್ಳಲೇಬೇಕಾದ ಕೆಲ ಮಾಹಿತಿಗಳಿವೆ. ಒಂದೊಂದೆ ಪುಟ ತಿರುಗಿಸಿ ಈ ಮಾಹಿತಿಯನ್ನು ನೋಡಿಕೊಂಡು ಹೋಗಿ.

ದೂರವಾಣಿ  ನಂಬರ್‌ ಇತಿಹಾಸ

ದೂರವಾಣಿ ನಂಬರ್‌ ಇತಿಹಾಸ

ದೂರವಾಣಿಯ ಆರಂಭದ ಕಾಲದಲ್ಲಿ ಜನರು ಕರೆ ಮಾಡಬೇಕಾದ್ರೆ ಮೊದಲು ದೂರವಾಣಿ ಕಂಪೆನಿಯ ಆಪರೇಟರ್‌ಗೆ ಫೋನ್‌ ಮಾಡಿ ತಮಗೆ ಬೇಕಾದವರಿಗೆ ಮಾತನಾಡಲು ಲೈನ್‌ ಕನೆಕ್ಟ್‌ ಮಾಡಬೇಕು ಎಂದು ತಿಳಿಸಬೇಕಾಗಿತ್ತು. 1880ರಲ್ಲಿ ಇಂಗ್ಲೆಂಡ್‌ನ ಮ್ಯಾಚೆಂಸ್ಟರ್‌ ಸಾಂಕ್ರಮಿಕ ರೋಗಕ್ಕೆ ತುತ್ತಾಗಿತ್ತು.ಈ ಸಂದರ್ಭದಲ್ಲಿ ಅಲ್ಲಿನ ಡಾಕ್ಟರ್‌ ಮತ್ತು ಗ್ರಹಂ ಬೆಲ್‌ ಚರ್ಚಿಸಿ ಒಂದು ವೇಳೆ ದೂರವಾಣಿ ಆಪರೇಟರ್‌ಗೆ ಈ ಕಾಯಿಲೆ ಬಂದರೆ ಮುಂದೆ ನಗರದಲ್ಲಿ ದೂರವಾಣಿ ವ್ಯವಸ್ಥೆ ಅಸ್ತವ್ಯಸ್ಥವಾಗುತ್ತದೆ. ಈ ರೀತಿ ಆಗದಂತೆ ಮುನ್ನೆಚ್ಚರಿಕೆಯಾಗಿ ಈ ವ್ಯವಸ್ಥೆಯನ್ನು ಬದಲಾಯಿಸಲು ನಿರ್ಧರಿಸಿದರು.ಈ ಘಟನೆಯಿಂದಾಗಿ ನಂತರ ನೇರವಾಗಿ ನಂಬರ್‌ ಡಯಲ್‌ ಮಾಡುವ ವ್ಯವಸ್ಥೆ ಜಾರಿಗೆ ಬಂದಿತು.

ಪ್ರಥಮ ಟೆಲಿಫೋನ್‌ ಕೋಡ್‌

ಪ್ರಥಮ ಟೆಲಿಫೋನ್‌ ಕೋಡ್‌

ಪ್ರಥಮ ಟೆಲಿಫೋನ್‌ ಕೋಡ್‌ ಮೊದಲು ಪಡೆದ ಪ್ರದೇಶ ಅಮೆರಿಕದ ನ್ಯೂ ಜೆರ್ಸಿ. 1951ರಲ್ಲಿ 201 ಸಂಖ್ಯೆಯನ್ನು ಟೆಲಿಫೋನ್‌ ಕೋಡ್‌ ಆಗಿ ನೀಡಲಾಗಿತ್ತು.

ದುಬಾರಿ ಫೋನ್‌ ನಂಬರ್‌

ದುಬಾರಿ ಫೋನ್‌ ನಂಬರ್‌

ಪ್ರಪಂಚದ ದುಬಾರಿ ಫೋನ್‌ ನಂಬರ್‌ 666-6666 . ಕತರ್‌ ವ್ಯಕ್ತಿಯೊಬ್ಬ 207 ಮಿಲಿಯನ್‌ ಡಾಲರ್‌ ನೀಡಿ ಈ ನಂಬರ್‌ನ್ನು ಖರೀದಿಸಿದ್ದ.

ಆಪಲ್‌ಗೂ  88-8888 ನಂಬರ್‌ಗೆ ಏನು ಸಂಬಂಧ ?

ಆಪಲ್‌ಗೂ 88-8888 ನಂಬರ್‌ಗೆ ಏನು ಸಂಬಂಧ ?

ಅತಿ ದುಬಾರಿ ಬೆಲೆಗೆ ಫೋನ್‌ ನಂಬರ್‌ನ್ನು ಖರೀದಿಸಿದ ಎರಡನೇ ವ್ಯಕ್ತಿ ಆಪಲ್‌ ಕಂಪೆನಿಯ ಸಹ ಸಂಸ್ಥಾಪಕ ಸ್ಟೀವ್‌ ವೋಜ್ನಾಯಿಕ್‌.ಆದರೆ ನಂಬರ್‌ ಸಿಕ್ಕಿದ್ದೇ ತಡ ಪ್ರತಿದಿನ 100ಕ್ಕೂ ಹೆಚ್ಚು ಬೇನಾಮಿ ವ್ಯಕ್ತಿಗಳು ಕರೆ ಮಾಡಿ ಸ್ಟಿವ್ ಜೊತೆ ಮಾತನಾಡುತ್ತಿದ್ದರಂತೆ!. ಕೊನೆಗೆ ಈ ಕಿರಿಕಿರಿಯಿಂದ ಬೇಸತ್ತು ಈ ನಂಬರ್‌ ಸ್ಟಿವ್‌ ವೋಜ್ನಾಯಿಕ್‌ ಮಾರಿದರಂತೆ.

ಮೊದಲ ತುರ್ತು ದೂರವಾಣಿ ನಂಬರ್‌

ಮೊದಲ ತುರ್ತು ದೂರವಾಣಿ ನಂಬರ್‌

ಮೊದಲ ತುರ್ತು ದೂರವಾಣಿ ನಂಬರ್‌ ಆರಂಭಗೊಂಡಿದ್ದು ಲಂಡನ್‌ನಲ್ಲಿ. ಜುಲೈ, 1937ರಲ್ಲಿ ತುರ್ತುನಂಬರ್‌ಗಾಗಿ 999 ಸಂಖ್ಯೆಯನ್ನು ಡಯಲ್‌ ಮಾಡಲು ಆರಂಭಿಸಿದರು. ಈ ನಂಬರ್‌ ಡಯಲ್‌ ಮಾಡಿದ ಕೂಡಲೇ ದೇಶ ಎಲ್ಲ ದೂರವಾಣಿ ಆಫೀಸ್‌ನಲ್ಲಿ ಒಂದೇ ಬಾರಿಗೆ ಶಬ್ಧದ ಮೂಲಕ ಕೆಂಪು ದೀಪ ಆನ್‌ ಆಗುತಿತ್ತು. ಕೆಂಪು ದೀಪ ಬಂದೊಡನೇ ಎಲ್ಲಾ ಟೆಲಿಫೋನ್‌ ಆಪರೇಟರ್‌ಗಳು ಜಾಗೃತರಾಗುತ್ತಿದ್ದರು

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X