Home
ಸುದ್ದಿಜಾಲ

ಹೊಸ ಆ್ಯಪ್‌ ಸ್ಟೋರ್‌ ಪರಿಚಯಿಸಲು ಮುಂದಾದ PhonePe: ಗೂಗಲ್‌ಗೆ ಬಿಗ್‌ ಶಾಕ್‌!

ಜನಪ್ರಿಯ ಯುಪಿಐ ಪಾವತಿ ಕಂಪೆನಿ PhonePe ಭಾರತದಲ್ಲಿ ತನ್ನ ಸ್ವಂತ ಮೊಬೈಲ್‌ ಅಪ್ಲಿಕೇಶನ್‌ ಸ್ಟೋರ್‌ ಪರಿಚಯಿಸಲು ಸಿದ್ದತೆ ನಡೆಸಿದೆ. ಇದನ್ನು Indus Appstore ಎಂದು ಹೆಸರಿಸಲಾಗಿದ್ದು, ಸಂಪೂರ್ಣ ಸ್ವದೇಶಿ ಆಂಡ್ರಾಯ್ಡ್ ಆಧಾರಿತ ಅಪ್ಲಿಕೇಶನ್ ಆಗಿದೆ. ಇನ್ನು ಈ ಅಪ್ಲಿಕೇಶನ್ ಸ್ಟೋರ್ ಇಂಗ್ಲಿಷ್ ಜೊತೆಗೆ 12 ಭಾರತೀಯ ಭಾಷೆಗಳಲ್ಲಿ ಅಪ್ಲಿಕೇಶನ್‌ಗಳನ್ನು ಪಟ್ಟಿ ಮಾಡಲು ದೃಢೀಕರಿಸಿದೆ.

ಹೌದು, PhonePe ಸಂಸ್ಥೆಯು ತನ್ನದೇ ಆದ ಹೊಸ ಆ್ಯಪ್ ಸ್ಟೋರ್‌ ಪರಿಚಯಿಸಲು ತಯಾರಿ ನಡೆಸಿದೆ. ಈ ಆ್ಯಪ್‌ ಸ್ಟೋರ್‌ನಲ್ಲಿ ಹಲವು ಸೇವೆಗಳನ್ನು ನೀಡುವ ಅಪ್ಲಿಕೇಶನ್‌ಗಳನ್ನು ಕಾಣಬಹುದಾಗಿದೆ. ಇದರಿಂದ ಫೋನ್‌ಪೇ ಅಪ್ಲಿಕೇಶನ್‌ನಲ್ಲಿಯೇ ಹಲವು ಸೇವೆಗಳನ್ನು ಪಡೆದುಕೊಳ್ಳುವುದಕ್ಕೆ ಅವಕಾಶ ಸಿಗಲಿದೆ. ಹಾಗಾದ್ರೆ ಫೋನ್‌ಪೇ ಸಂಸ್ಥೆಯ ಹೊಸ ಅಪ್ಲಿಕೇಶನ್‌ ಸ್ಟೋರ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಹೊಸ ಆ್ಯಪ್‌ ಸ್ಟೋರ್‌ ಪರಿಚಯಿಸಲು ಮುಂದಾದ PhonePe: ಗೂಗಲ್‌ಗೆ ಬಿಗ್‌ ಶಾಕ್‌!

ಫೋನ್‌ Indus Appstore ಅನ್ನು ಪರಿಚಯಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಈ ಆಪ್‌ ಸ್ಟೋರ್‌ ಇದೇ ಫೆಬ್ರವರಿ 21 ರಂದು ಪ್ರಾರಂಭವಾಗಲಿದೆ. ಫೋನ್‌ಪೇ ಮಾಲೀಕತ್ವದ ಈ ಅಪ್ಲಿಕೇಶನ್‌ ಆಂಡ್ರಾಯ್ಡ್‌-ಆಧಾರಿತ ಮೊಬೈಲ್ ಅಪ್ಲಿಕೇಶನ್ ಸ್ಟೋರ್ನಲ್ಲಿ ದೊರೆಯಲಿದೆ. ಬಳಕೆದಾರರ ಅನುಭವವನ್ನು ಸುಧಾರಿಸುವ ಹಾಗೂ ಅವರ ಅನುಕೂಲಕ್ಕೆ ಬೇಕಾಗುವ ಹಲವು ವಿಧದ ಶ್ರೇಣಿಯ ಅಪ್ಲಿಕೇಶನ್‌ಗಳನ್ನು ತರಲಿದೆ.

ಇನ್ನು ಆ್ಯಪ್ ಸ್ಟೋರ್ ಇಂಗ್ಲಿಷ್ ಮತ್ತು ಹಿಂದಿ, ಮಲಯಾಳಂ, ಮರಾಠಿ ಮತ್ತು ತಮಿಳು ಸೇರಿದಂತೆ 12 ಭಾರತೀಯ ಭಾಷೆಗಳಲ್ಲಿ ಲಭ್ಯವಾಗಲಿದೆ. ಈಗಾಗಲೇ ಫ್ಲಿಪ್‌ಕಾರ್ಟ್, ಇಕ್ಸಿಗೋ, ಡೊಮಿನೊಸ್ ಪಿಜ್ಜಾ, ಸ್ನಾಪ್‌ಡೀಲ್, ಜಿಯೋಮಾರ್ಟ್ ಮತ್ತು ಬಜಾಜ್ ಫಿನ್‌ಸರ್ವ್ ಸೇರಿದಂತೆ ವಿವಿಧ ಅಪ್ಲಿಕೇಶನ್‌ಗಳನ್ನು ಆನ್‌ಬೋರ್ಡ್ ಮಾಡಿದೆ. Indus Appstore ಅನ್ನು ಪ್ರಾರಂಭಿಸುವ ಮೂಲಕ ಗೂಗಲ್‌ ಪ್ಲೇ ಸ್ಟೋರ್‌ಗೆ ಸೆಡ್ಡು ಹೊಡೆಯುವ ಪ್ರಯತ್ನವನ್ನು ಕೂಡ ಮಾಡುವುದಕ್ಕೆ ಮುಂದಾಗಿದೆ.

ಹೊಸ ಆ್ಯಪ್‌ ಸ್ಟೋರ್‌ ಪರಿಚಯಿಸಲು ಮುಂದಾದ PhonePe: ಗೂಗಲ್‌ಗೆ ಬಿಗ್‌ ಶಾಕ್‌!

ಇನ್ನು ಫೋನ್‌ಪೇ ಸಂಸ್ಥೆಯ ಇಂಡಸ್ ಆಪ್‌ಸ್ಟೋರ್‌ನಲ್ಲಿ ಹಲವು ಪ್ರಸಿದ್ಧ ಬ್ರ್ಯಾಂಡ್‌ಗಳು ಈಗಾಗಲೇ ತಮ್ಮ ಅಪ್ಲಿಕೇಶನ್‌ಗಳನ್ನು ಪಟ್ಟಿಮಾಡಿವೆ. ಅದರಲ್ಲೂ ಈ ಪಟ್ಟಿಯಲ್ಲಿರುವ ಪ್ರಮುಖ ಬ್ರ್ಯಾಂಡ್‌ಗಳಲ್ಲಿ Flipkart, Ixigo, Domino's Pizza, Mobile Premier League (MPL), Snapdeal, JioMart, Bajaj Finserv, TOI, ಮತ್ತು Wow Skincare ಗಳು ಸೇರಿವೆ. ಜೊತೆಗೆ A23 ರಮ್ಮಿ, ಗೇಮ್ಸ್‌ಕ್ರಾಫ್ಟ್, ಡ್ರೀಮ್ 11, ರಮ್ಮಿ ಪ್ಯಾಶನ್ ಮತ್ತು ನಜಾರಾ ಟೆಕ್ನಾಲಜೀಸ್‌ನಂತಹ ಗೇಮ್ ಡೆವಲಪರ್‌ಗಳೊಂದಿಗೆ ಕೂಡ ಸಹಯೋಗವನ್ನು ಹೊಂದಿದೆ.

ಫೋನ್‌ಪೇ ಸಂಸ್ಥೆಯು ತನ್ನ ಅಪ್ಲಿಕೇಶನ್ ಮಾರುಕಟ್ಟೆಯನ್ನು ಆಂಡ್ರಾಯ್ಡ್ ಡೆವಲಪರ್‌ಗಳಿಗೆ ತೆರೆದ ಸುಮಾರು ನಾಲ್ಕು ತಿಂಗಳ ನಂತರ ಈ ಸುದ್ದಿ ಹೊರ ಬಂದಿದೆ. ಇನ್ನು ಇಂಡಸ್ ಆಪ್‌ಸ್ಟೋರ್ ಪ್ಲಾಟ್‌ಫಾರ್ಮ್‌ ನಲ್ಲಿ ಅಪ್ಲಿಕೇಶನ್‌ನಲ್ಲಿನ ಖರೀದಿಗಳಿಗೆ ಶೂನ್ಯ ಕಮಿಷನ್ ಭರವಸೆಯನ್ನು ನೀಡಿದೆ. ಆದರೆ Google ಮತ್ತು Apple ನ ಅಪ್ಲಿಕೇಶನ್ ಸ್ಟೋರ್‌ಗಳು ಇತರ ಶುಲ್ಕಗಳ ಜೊತೆಗೆ ಅಪ್ಲಿಕೇಶನ್‌ನಲ್ಲಿನ ಖರೀದಿಗಳಿಗೆ 15% ಮತ್ತು 25% ಕಮಿಷನ್ ವಿಧಿಸುತ್ತಿವೆ ಅನ್ನೊದು ಗಮನಿಸಬೇಕಾದ ವಿಚಾರವಾಗಿದೆ.

ಹೊಸ ಆ್ಯಪ್‌ ಸ್ಟೋರ್‌ ಪರಿಚಯಿಸಲು ಮುಂದಾದ PhonePe: ಗೂಗಲ್‌ಗೆ ಬಿಗ್‌ ಶಾಕ್‌!

ಎಲ್ಲದಕ್ಕಿಂತ ಮಿಗಿಲಾಗಿ ಈ ಅಪ್ಲಿಕೇಶನ್‌ ಸ್ಟೋರ್‌ ನಿಮಗೆ ಸ್ಥಳೀಯ ಭಾಷೆಗಳಲ್ಲಿಯೇ ಲಭ್ಯವಾಗಲಿದೆ. ಇದರಿಂದ ಗೂಗಲ್ ಪ್ಲೇ ಸ್ಟೋರ್‌ನ ಏಕಸ್ವಾಮ್ಯಕ್ಕೆ ಪೆಟ್ಟು ಬೀಳಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಇದೇ ನಿಟ್ಟಿನಲ್ಲಿ ಈ ಹಿಂದೆ ಫ್ಲಿಪ್‌ಕಾರ್ಟ್‌ನ ಭಾಗವಾಗಿದ್ದ ವಾಲ್‌ಮಾರ್ಟ್-ಬೆಂಬಲಿತ ಸ್ಟಾರ್ಟ್‌ಅಪ್ ಫೋನ್‌ಪೇ, ಕಳೆದ ವರ್ಷ ನವೆಂಬರ್‌ನಲ್ಲಿ ತನ್ನ ಹೊಸ ಆಪ್ ಸ್ಟೋರ್ ಅನ್ನು ತಮ್ಮ ಸಾಧನಗಳಲ್ಲಿ ಸಂಯೋಜಿಸಲು ನೋಕಿಯಾ ಮತ್ತು ಲಾವಾ ಜೊತೆ ಕೈಜೋಡಿಸಿದೆ ಎಂದು ವರದಿಯಾಗಿದೆ.

Best Mobiles in India

English summary
PhonePe is gearing up to unveil its own mobile app store soon in India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+