Home
ಸುದ್ದಿಜಾಲ

ಫೋನ್‌ಪೇ ಬಳಕೆದಾರರಿಗೆ ಗುಡ್‌ನ್ಯೂಸ್‌! ಬರಲಿದೆ ಹೊಸ ಆ್ಯಪ್‌ ಸ್ಟೋರ್‌!

ಜನಪ್ರಿಯ ಯುಪಿಐ ಪಾವತಿ ಅಪ್ಲಿಕೇಶನ್‌ ಫೋನ್‌ಪೇ ತನ್ನ ಬಳಕೆದಾರರಿಗೆ ಗುಡ್‌ನ್ಯೂಸ್‌ ನೀಡಿದೆ. ಶೀಘ್ರದಲ್ಲೇ ಭಾರತದಲ್ಲಿ ಆಂಡ್ರಾಯ್ಡ್‌ ಬಳಕೆದಾರರಿಗಾಗಿ ಹೊಸ ಆಪ್‌ಸ್ಟೋರ್‌ ಪರಿಚಯಿಸುವುದಕ್ಕೆ ಮುಂದಾಗಿದೆ. ಈ ಹೊಸ ಆಪ್‌ ಸ್ಟೋರ್‌ಗೆ ಸಂಬಂಧಿಸಿದ ಕೆಲಸಗಳು ನಡೆಯುತ್ತಿವೆ ಎಂದು ವರದಿಯಾಗಿದೆ.

ಹೌದು, ಫೋನ್‌ಪೇ ಭಾರತದಲ್ಲಿ ಹೊಸ ಆಪ್‌ ಸ್ಟೋರ್‌ ಪರಿಚಯಿಸಲು ಸಿದ್ಧತೆ ನಡೆಸಿದೆ. ಈ ಆಪ್‌ ಸ್ಟೋರ್‌ನಲ್ಲಿ ಗ್ರಾಹಕರಿಗೆ ಸಂದರ್ಭಕ್ಕೆ ತಕ್ಕಂತೆ ಹೈಪರ್‌ ಲೋಕಲೈಸ್ಡ್‌ ಸೇವೆಗಳನ್ನು ನೀಡುವು ಗುರಿಯನ್ನು ಹೊಂದಲಾಗಿದೆ ಎನ್ನಲಾಗಿದೆ. ಇದರಿಂದ ಗ್ರಾಹಕರಿಗೆ ಉನ್ನತ ಗುಣಮಟ್ಟದ ಸೇವೆ ಲಭ್ಯವಾಗಲಿದೆ ಎಂದು ಹೇಳಲಾಗಿದೆ. ಹಾಗಾದ್ರೆ ಫೋನ್‌ಪೇ ಪರಿಚಯಿಸಲಿರುವ ಹೊಸ ಆಪ್‌ ಸ್ಟೋರ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಫೋನ್‌ಪೇ ಬಳಕೆದಾರರಿಗೆ ಗುಡ್‌ನ್ಯೂಸ್‌! ಬರಲಿದೆ ಹೊಸ ಆ್ಯಪ್‌ ಸ್ಟೋರ್‌!

ಫೋನ್‌ಪೇ ತನ್ನ ಗ್ರಾಹಕರಿಗೆ ಗುಣಮಟ್ಟದ ಸೇವೆ ನೀಡಲು ಹೊಸ ಮಾದರಿಯ ಸೇವೆಗಳನ್ನು ಪರಿಚಯಿಸುತ್ತಲೇ ಬಂದಿದೆ. ಇದೀಗ ಒಂದು ಹೆಜ್ಜೆ ಮುಂದೆ ಹೋಗಿ ತನ್ನದೇ ಆದ ಹೊಸ ಆ್ಯಪ್‌ ಸ್ಟೋರ್‌ ಅನ್ನು ಪರಿಚಯಿಸಲು ಮುಂದಾಗಿದೆ. ಈ ಆ್ಯಪ್‌ ಸ್ಟೋರ್‌ ಆಂಡ್ರಾಯ್ಡ್‌ ಬಳಕೆದಾರರಿಗೆ ಮಾತ್ರ ಲಭ್ಯವಾಗಲಿದೆ. ಸದ್ಯ ಇನ್ನು ಕೂಡ ಅಭಿವೃದ್ಧಿ ಹಂತದಲ್ಲಿರುವ ಈ ಆ್ಯಪ್‌ ಸ್ಟೋರ್‌ ಬಳಕೆದಾರರಿಗೆ ಹೈಪರ್‌ ಲೋಕಲೈಸ್ಡ್‌ ಸೇವೆಗಳನ್ನು ನೀಡಲಿದೆ ಎನ್ನಲಾಗಿದೆ.

ಫೋನ್‌ಪೇ ಬಳಕೆದಾರರಿಗೆ ಗುಡ್‌ನ್ಯೂಸ್‌! ಬರಲಿದೆ ಹೊಸ ಆ್ಯಪ್‌ ಸ್ಟೋರ್‌!

ಇನ್ನು ಆ್ಯಪ್‌ ಸ್ಟೋರ್‌ ಭಾರತದ ಹಲವು ಭಾಷೆಗಳಲ್ಲಿ ಲಭ್ಯವಾಗಲಿದೆ. ಇದರಿಂದ ಗುಣಮಟ್ಟದ ಬಳಕೆದಾರರನ್ನು ಪಡೆದುಕೊಳ್ಳಲು ಡೆವಲಪರ್‌ಗಳಿಗೆ ಸಹಾಯ ಮಾಡಲಿದೆ ಎಂದು ವರದಿಯಾಗಿದೆ. ಇದರಲ್ಲಿ ಫೋನ್‌ಪೇ ಆಂತರಿಕ ಡಾಕ್ಯುಮೆಂಟ್‌ಗೆ ಪ್ರವೇಶ ಸಿಗಲಿದೆ. ಇದರಲ್ಲಿ ಗುಣಮಟ್ಟದ ಜಾಹೀರಾತುಗಳು, ವೈಯಕ್ತೀಕರಿಸಿದ ಗ್ರಾಹಕರ ಗುರಿ, 12 ಭಾಷೆಗಳಿಗೆ ಬೆಂಬಲ ಹಾಗೂ ದಿನದ ಲೈವ್ ಚಾಟ್ ಬೆಂಬಲವನ್ನು ಈ ಡಾಕ್ಯುಮೆಂಟ್ ಬಹಿರಂಗಪಡಿಸಲಿದೆ.

ಭಾರತದಲ್ಲಿ ಫೋನ್‌ಪೇ ಈಗಾಗಲೇ ಗೂಗಲ್‌ಪೇಗೆ ಅತಿ ದೊಡ್ಡ ಪ್ರತಿಸ್ಪರ್ಧಿಯಾಗಿ ಗುರುತಿಸಿಕೊಂಡಿದೆ. ಈಗಾಗಲೇ ಭಾರತದಲ್ಲಿ 450 ಮಿಲಿಯನ್ ನೋಂದಾಯಿತ ಬಳಕೆದಾರರನ್ನು ಹೊಂದಿರುವ ಫೋನ್‌ಪೇ ತನ್ನದೇ ಆ್ಯಪ್‌ ಸ್ಟೋರ್‌ ಹೊಂದುವುದಕ್ಕೆ ಸೂಕ್ತ ಸಮಯ ಎಂದು ಭಾವಿಸಿದೆ ಎಂದು ವರದಿಯಾಗಿದೆ. ಒಂದು ವೇಳೆ ಫೋನ್‌ಪೇ ಹೊಸ ಆ್ಯಪ್‌ ಸ್ಟೋರ್‌ ಪರಿಚಯಿಸಿದರೆ ಗೂಗಲ್‌ ಪೇ ನೊಂದಿಗೆ ಇನ್ನಷ್ಟು ಪೈಪೋಟಿ ನಡೆಸಲಿದೆ ಎನ್ನಲಾಗಿದೆ.

ಫೋನ್‌ಪೇ ಬಳಕೆದಾರರಿಗೆ ಗುಡ್‌ನ್ಯೂಸ್‌! ಬರಲಿದೆ ಹೊಸ ಆ್ಯಪ್‌ ಸ್ಟೋರ್‌!

ಫೋನ್‌ಪೇ ಟ್ರಾನ್ಸಕ್ಷನ್‌ ಲಿಮಿಟ್‌

ಫೋನ್‌ಪೇ ದೈನಂದಿನ UPI ವಹಿವಾಟಿನ ಮಿತಿಯನ್ನು 1,00,000ರೂ.ವರೆಗೂ ನೀಡಿದೆ. ಆದರೆ ಫೋನ್‌ಪೇ ಮೂಲಕ ಒಬ್ಬ ವ್ಯಕ್ತಿಯು ಪ್ರತಿದಿನ ಗರಿಷ್ಠ 10 ಅಥವಾ 20 ವಹಿವಾಟುಗಳನ್ನು ಮಾತ್ರ ನಡೆಸಬಹುದಾಗಿದೆ. ಫೋನ್‌ಪೇ ನಲ್ಲಿಯೂ ಕೂಡ ಎರಡು ಸಾವಿರ ರೂ.ವರೆಗೆ ಮನಿ ರಿಕ್ವೆಸ್ಟ್‌ ಕಳುಹಿಸಬಹುದಾಗಿದೆ.

ಗೂಗಲ್‌ ಪೇ ಟ್ರಾನ್ಸಕ್ಷನ್‌ ಲಿಮಿಟ್‌

ಗೂಗಲ್‌ ಪೇನಲ್ಲಿ ಒಬ್ಬ ವ್ಯಕ್ತಿ ಒಂದು ದಿನಕ್ಕೆ ನಡೆಸಬಹುದಾದ ವಹಿವಾಟಿನ ಒಟ್ಟು ಮೊತ್ತ ಒಂದು ಲಕ್ಷ ಆಗಿದೆ. ಆದರೆ ಎಲ್ಲಾ UPI ಅಪ್ಲಿಕೇಶನ್‌ಗಳು ಮತ್ತು ಬ್ಯಾಂಕ್ ಖಾತೆಗಳಲ್ಲಿ ದಿನಕ್ಕೆ ಒಟ್ಟು 10 ವಹಿವಾಟುಗಳನ್ನು ಮಾತ್ರ ಅನುಮತಿಸಲಿದೆ. ಒಂದು ವೇಳೆ ನೀವು ಮನಿ ರಿಕ್ವೆಸ್ಟ್‌ನಲ್ಲಿ 2,000ರೂ. ಕ್ಕಿಂತ ಹೆಚ್ಚಿನ ಹಣವನ್ನು ಕಳುಹಿಸಿದರೆ, ಗೂಗಲ್‌ಪೇ ತನ್ನ ದೈನಂದಿನ ವಹಿವಾಟಿನ ಮಿತಿಗಳನ್ನು ಅಮಾನತುಗೊಳಿಸುತ್ತದೆ.

ಪೇಟಿಎಂ UPI ವರ್ಗಾವಣೆ ಮಿತಿ

ಪೇಟಿಎಂ UPI ಬಳಕೆದಾರರಿಗೆ 1 ಲಕ್ಷದವರೆಗೆ ಹಣ ವರ್ಗಾವಣೆಯನ್ನು ಅನುಮತಿಸುತ್ತದೆ. ಇದಲ್ಲದೆ, ಅಪ್ಲಿಕೇಶನ್ ದೈನಂದಿನ ಮತ್ತು ಗಂಟೆಗೊಮ್ಮೆ ಹಣ ವರ್ಗಾವಣೆಗೆ ನಿರ್ಬಂಧಗಳನ್ನು ವಿಧಿಸಿದೆ. ಪೇಟಿಎಂ ಗಂಟೆಯ ಹಣ ವರ್ಗಾವಣೆಯ ಮಿತಿ 20,000ರೂ ಆಗಿದೆ. ಅಂದರೆ ಪ್ರತಿ ಗಂಟೆಗೆ ಒಟ್ಟು 5 ವಹಿವಾಟುಗಳನ್ನು ಮಾತ್ರ ಬೆಂಬಲಿಸಲಿದೆ. ಆದರೆ, ದಿನದ ವಹಿವಾಟಿನ ಸಂಖ್ಯೆ 20 ಆಗಿದೆ.

Best Mobiles in India

English summary
PhonePe is working on its own app store in India for Android users
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+