ಪಯೋನೀರ್ ಸಂಸ್ಥೆಯಿಂದ ಹೊಸ ಟ್ಯಾಬ್ಲೆಟ್‌ ಲಾಂಚ್‌!..ವಿಶೇಷ ರಚನೆ!

|

ಇದು ಟೆಕ್ನಾಲಜಿ ಜಮಾನ. ಈ ಜಮಾನದಲ್ಲಿ ಟೆಕ್ನಾಲಜಿ ಸಾಕಷ್ಟು ಮುಂದುವರೆದಿದ್ದು,ಎಲ್ಲವು ಸ್ಮಾರ್ಟ್‌ ಆಗುತ್ತಿದೆ. ವಿಜ್ಞಾನದ ಆವಿಷ್ಕಾರಗಳು ಮಾನವನ ಬದುಕಿನ ಪಥವನ್ನೇ ಬದಲಾಯಿಸಿಬಿಟ್ಟಿವೆ. ಸದ್ಯ ಈಗಿನ ಜಮಾನ ಮುಮದುವರೆದ ಟೆಕ್ನಾಲಜಿಯ ಪರಿಣಾಮ ಸ್ಮಾರ್ಟ್‌ ಆಗಿ ಪರಿವರ್ತನೆ ಆಗಿದೆ. ಸ್ಮಾರ್ಟ್‌ಫೋನ್‌ಗಳು, ಸ್ಮಾರ್ಟ್‌ ಕ್ಯಾಮೆರಾಗಳು, ಸ್ಮಾರ್ಟ್‌ ಲ್ಯಾಪ್‌ಟಾಪ್‌ಗಳು ಇದೀಗ ಸ್ಮಾರ್ಟ್‌ ಟ್ಯಾಬ್ಲೆಟ್‌ಗಳು ಹೀಗೆ ಎಲ್ಲವು ಸ್ಮಾರ್ಟ್‌ ಸ್ಮಾರ್ಟ್. ಸದ್ಯ ಇದೀಗ ಸ್ಮಾರ್ಟ್‌ ಟ್ಯಾಬ್ಲೆಟ್‌ಗಳು ಕೂಡ ಸಾಕಷ್ಟು ಆಪ್ಡೇಟ್‌ ಆಗಿದ್ದು, ಹೊಸ ಮಾದರಿಯಲ್ಲಿ ಮಾರುಕಟ್ಟೆಗೆ ಲಗ್ಗೆ ಹಾಕ್ತಿವೆ.

ಹೌದು

ಹೌದು, ಮಾರುಕಟ್ಟೆಯಲ್ಲಿ ನಾನಾ ಮಾದರಿಯ ಟ್ಯಾಬ್ಲೆಟ್‌ಗಳು ಲಬ್ಯವಿವೆ. ಹೊಸ ಮಾದರಿಯ ಟ್ಯಾಬ್ಲೆಟ್‌ಗಳು ಗ್ರಾಹಕರನ್ನ ಆಕರ್ಷಿಸುತ್ತಲೇ ಇವೆ. ಸದ್ಯ ಇದೀಗ ಇನ್-ಕಾರ್ ಎಂಟರ್ಟೈನ್ಮೆಂಟ್ ಸಿಸ್ಟಮ್ ತಯಾರಕ ಪಯೋನೀರ್ ಇಂಡಿಯಾ ಡಿಟ್ಯಾಚೇಬಲ್ ಬಹುಪಯೋಗಿ ಟ್ಯಾಬ್ಲೆಟ್ ಕಾಂಬೊವನ್ನು ಬಿಡುಗಡೆ ಮಾಡಿದೆ. ಈ ಮಾದರಿಯ ಟ್ಯಾಬ್ಲೆಟ್‌ ಗ್ರಾಹಕರಿಗೆ ಹೊಸ ಅನುಭವವನ್ನ ನೀಡಲಿವೆ. ಇನ್ನು ಈ ಹೊಸ ಟ್ಯಾಬ್ಲೆಟ್‌ ಹೊಸ ವಿನ್ಯಾಸವನ್ನ ಹೊಂದಿದ್ದು, ಇದರ ಬೆಲೆಯನ್ನ 33,890 ರೂಗಳಿಗೆ ನಿಗಧಿ ಪಡಿಸಲಿದೆ.

ಮಾದರಿಯ

ಇನ್ನು ಈ ಹೊಸ ಮಾದರಿಯ ಟ್ಯಾಬ್ಲೆಟ್‌ ಕಾಂಬೊ ಆಗಿ ಸ್ಮಾರ್ಟ್ ಯುನಿಟ್ ರಿಸೀವರ್ SDA-835 TAB ಮತ್ತು SPH-T20BT ಟ್ರೂಲಿ ಆಂಡ್ರಾಯ್ಡ್ ಓಎಸ್‌ ಬೆಂಬಲವನ್ನ ಒಳಗೊಂಡಿದೆ. ಇನ್ನು ಈ ಟ್ಯಾಬ್ಲೆಟ್‌ನಲ್ಲಿ ಗೂಗಲ್ ಮ್ಯಾಪ್‌, ಯೂಟ್ಯೂಬ್, ಜಿಮೇಲ್, ಪಯೋನೀರ್‌ನ ಯೂನಿಕ್‌ ಆಪ್‌ ಪಯೋನೀರ್ ಸ್ಮಾರ್ಟ್ ಸಿಂಕ್ ಅಪ್ಲಿಕೇಶನ್ ಅನ್ನು ಸಹ ಇದು ಒಳಗೊಂಡಿರಲಿದೆ. ಅಲ್ಲದೆ ಇದಕ್ಕೂ ಹೆಚ್ಚಿನ ಆಪ್‌ಗಳನ್ನ ಮೊದಲೇ ಒಳಗೊಂಡಿರಲಿದೆ ಎಂದು ಕಂಪೆನಿ ಹೇಳಿದೆ.

ಇದಲ್ಲದೆ

ಇದಲ್ಲದೆ ನಾವು ವರ್ಷಗಳಲ್ಲಿ ಸ್ಪರ್ಧಾತ್ಮಕ ಉತ್ಪನ್ನಗಳನ್ನು ಹೊರತರುತ್ತಿದ್ದೇವೆ ಮತ್ತು SDA-835 TAB ಮತ್ತು SPH-T20BT ಯೊಂದಿಗೆ ನಾವು ಟ್ಯಾಬ್ಲೆಟ ಅನ್ನು ಹಲವಾರು ಎತ್ತರಕ್ಕೆ ಏರಿಸಿದ್ದೇವೆ ಎಂದು ವ್ಯವಸ್ಥಾಪಕ ನಿರ್ದೇಶಕ ಹಿಡಕಿ ಇಶಿ ಸ್ಯಾನ್ ತಮ್ಮ ಕಂಪೆನಿಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇನ್ನು SDA-835TAB ಟ್ಯಾಬ್ಲೆಟ್ 8-ಇಂಚಿನ ಹೈ-ರೆಸಲ್ಯೂಶನ್ ಸ್ಕ್ರೀನ್ ಡಿಸ್ಪ್ಲೇ ಮತ್ತು ಪಯೋನೀರ್‌ನ ಆಡಿಯೊಫೈಲ್ ಧ್ವನಿ ಗುಣಮಟ್ಟವನ್ನು ಹೊಂದಿದೆ.

ಕಂಪನಿಯ

ಇನ್ನು ಕಂಪನಿಯ ಪ್ರಕಾರ, ಈ ಬಹುಪಯೋಗಿ ಟ್ಯಾಬ್ಲೆಟ್ ಅನ್ನು ವಾಹನದ ಒಳಗೆ ಮತ್ತು ಹೊರಗೆ ಬಳಸಬಹುದು, ಅಲ್ಲದೆ ಇದರ ಆಡಿಯೊ ರಿಸೀವರ್, SPH-T20 BT2-DIN ರಿಸೀವರ್ ಅನ್ನು ಟ್ಯಾಬ್ಲೆಟ್ ಮೌಂಟ್ ಕ್ರ್ಯಾಡಲ್, ಮೊಸ್ಫೆಟ್ 50WX4 ಆಂಪ್ಲಿ, 3RCA ಪ್ರಿಂಟ್, ರಿಯರ್ ಕ್ಯಾಮೆರಾ ಇನ್‌ಫುಟ್‌ ಮತ್ತು ಬ್ಲೂಟೂತ್ ಹೊಂದಿದೆ. ಜೊತೆಗೆ ರಿಯರ್‌ ಸ್ಕ್ರೀನ್‌ ಕನೆಕ್ಟ್‌ ಮಾಡಲು ಇದು ವೀಡಿಯೊ output, ಸ್ಟೀರಿಂಗ್ ವೀಲ್ ಕಂಟ್ರೋಲ್‌ ಮತ್ತು ಆಡಿಯೊ ಟ್ಯೂನಿಂಗ್ ಸೆಟ್ಟಿಂಗ್‌ಗಳನ್ನು ಸಂಪರ್ಕಿಸಲು ವೈರ್ಡ್ ರಿಮೋಟ್ ಅನ್ನು ಸಹ ಹೊಂದಿದೆ. ಸದ್ಯ ಇದು ಹೊಸ ಮಾದರಿಯ ಕಾಂಬೋ ಆಗಿದ್ದು ಗ್ರಾಹಕರಿಗೆ ಉತ್ತಮ ಅನುಭವ ನಿಡಲಿದೆ.

Best Mobiles in India

English summary
Smart unit receiver SDA-835TAB and SPH-T20BT as a combo has certified access to genuine Android OS and comes with pre-installed apps such as Google Maps, YouTube, Gmail, Pioneer’s unique app “Pioneer Smart Sync app” and more.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X