ನಿಮ್ಮ ಸ್ಮಾರ್ಟ್‌ಫೋನ್‌ಗಳನ್ನು ಈ ಸ್ಥಳಗಳಲ್ಲಿ ಇರಿಸಲೇಬೇಡಿ

By Shwetha
|

ನೀವು ಬಳಸುವ ನಿಮ್ಮ ಫೋನ್ ಅತ್ಯಮೂಲ್ಯ ವಸ್ತುವಾಗಿದ್ದು ಅದನ್ನು ಎಲ್ಲೆಂದರಲ್ಲಿ ಇಡುವುದು ಅಷ್ಟೊಂದು ಕ್ಷೇಮವಲ್ಲ. ನಿಮ್ಮ ಈ ಅಜಾಗರೂಕತೆ ಬೆಲೆಬಾಳುವ ವಸ್ತುವಿಗೆ ಹಾನಿಯನ್ನುಂಟು ಮಾಡಬಹುದು. ತದನಂತರ ಅದಕ್ಕಾಗಿ ಮರುಗಿ ಪ್ರಯೋಜನವಿರುವುದಿಲ್ಲ. ಈ ತರಹದ ನಷ್ಟ ನಿಮಗೆ ಉಂಟಾಗಬಾರದು ಎಂದಾದಲ್ಲಿ ನಿಮ್ಮ ಡಿವೈಸ್‌ನ ಸುರಕ್ಷತೆಯನ್ನು ನೀವು ಹೆಚ್ಚು ಮುತುವರ್ಜಿಯಿಂದ ಮಾಡಬೇಕಾಗುತ್ತದೆ.

ಇದನ್ನು ಮಾಡುವುದು ಹೇಗೆ ಎಂಬುದನ್ನೇ ಇಂದಿನ ಲೇಖನದಲ್ಲಿ ನಾವು ತಿಳಿಸುತ್ತಿದ್ದೇವೆ. ಈ ಸ್ಥಳಗಳಲ್ಲಿ ನಿಮ್ಮ ಫೋನ್ ಅನ್ನು ಇರಿಸುವ ಮುನ್ನ ನೀವು ಕೊಂಚ ಯೋಚಿಸಿದರೆ ಸಾಕು ಫೋನ್‌ಗುಂಟಾಗುವ ನಷ್ಟವನ್ನು ತಡೆಯಬಹುದಾಗಿದೆ. ಬನ್ನಿ ಆ ಸ್ಥಳಗಳಾವುವು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನೋಡೋಣ.

#1

#1

ಹೆಚ್ಚಿನ ಜನರಿಗೆ ತಿಳಿದಿದೆ ಸೂರ್ಯನ ಬಿಸಿಲು ಎಷ್ಟು ಪ್ರಖರವಾಗಿರುತ್ತದೆಂದು. ಆದರೆ ಕೆಲವೊಮ್ಮೆ ಅಚಾನಕ್ ಆಗಿ ನಾವು ಬಿಸಿಲಿನ ಕೆಳಗೆ ನಮ್ಮ ಫೋನ್ ಇಟ್ಟು ಮರೆತುಬಿಟ್ಟಿರುತ್ತೇವೆ. ಹೆಚ್ಚವರಿ ಬಿಸಿ ಮತ್ತು ಶೀತ ನಿಮ್ಮ ಫೋನ್‌ಗೆ ಹಾನಿಯನ್ನುಂಟು ಮಾಡಬಹುದು. ಆದ್ದರಿಂದ ಇಂತಹ ಹವಾಮಾನ ವೈಪರೀತ್ಯಗಳಿಂದ ನಿಮ್ಮ ಡಿವೈಸ್ ಅನ್ನು ಸುರಕ್ಷಿತವಾಗಿರಿಸಿ.

#2

#2

ನಿಮ್ಮ ಫೋನ್ ಅನ್ನು ಪ್ಯಾಂಟ್‌ನ ಹಿಂಭಾಗದಲ್ಲಿ ಇರಿಸುವುದು ಅಷ್ಟೊಂದು ಉತ್ತಮ ಉಪಾಯವಲ್ಲ. ಹೆಚ್ಚಿನ ಫೋನ್‌ಗಳ ಸ್ಕ್ರೀನ್‌ಗೆ ಇದು ಹಾನಿಯನ್ನುಂಟು ಮಾಡುವುದು ನಿಜ. ಅಂತೆಯೇ ಫೋನ್ ಅತಿಯಾಗಿ ಬಿಸಿಯಾಗುವುದು ಕಳ್ಳತನಕ್ಕೆ ಇದು ಕಾರಣ ಕೂಡ ಆಗಿರುತ್ತದೆ.

#3

#3

ಕಳ್ಳತನವಾಗುತ್ತದೆ ಎಂಬ ಭಯದಿಂದ ನಿಮ್ಮ ಫೋನ್ ಅನ್ನು ನೀವು ಬ್ಯಾಗ್‌ನ ತಳಭಾಗದಲ್ಲಿ ಇಡುತ್ತೀರಿ ಅಲ್ಲವೇ? ಆದರೆ ಇದರಿಂದ ನಿಮ್ಮ ಫೋನ್‌ಗೆ ಒತ್ತಡ ಬೀಳುತ್ತದೆ ಎಂಬುದು ನಿಮಗೆ ಗೊತ್ತೇ? ನಿಮ್ಮ ಫೋನ್ ಕೆಳಭಾಗದಲ್ಲಿ ಇದ್ದ ಸಂದರ್ಭದಲ್ಲಿ ಇತರೆ ಸಾಮಾಗ್ರಿಗಳನ್ನು ಅದರ ಮೇಲೆ ನೀವು ಇರಿಸುತ್ತೀರಿ ಇದರಿಂದ ಫೋನ್‌ಗೆ ಹಾನಿ ಖಂಡಿತ.

#4

#4

ನೀವು ಯಾವುದೇ ಕೆಲಸದಲ್ಲಿರುವಾಗ ನಿಮ್ಮ ಫೋನ್ ಅನ್ನು ಅಡುಗೆ ಮನೆಯಲ್ಲಿ ಕೂಡ ನೀವು ಇಟ್ಟಿರುವ ಸಾಧ್ಯತೆ ಇರುತ್ತದೆ. ಆದರೆ ಇದು ಹೆಚ್ಚು ಅಪಾಯಕಾರಿಯಾದುದು. ಆದಷ್ಟು ಬೆಂಕಿಯಿಂದ ನಿಮ್ಮ ಫೋನ್ ಅನ್ನು ದೂರವಿರಿಸಿ. ಫೋನ್‌ನ ರಿಂಗ್ ಟೋನ್ ಅನ್ನು ಗಟ್ಟಿಯಾಗಿಸಿ ಇದರಿಂದ ನೀವು ಯಾವುದೇ ಕೆಲಸದಲ್ಲಿದ್ದರೂ ಫೋನ್ ರಿಂಗ್ ಆಗುವ ಧ್ವನಿ ನಿಮಗೆ ಕೇಳಿಸುತ್ತದೆ.

#5

#5

ನಿಮ್ಮ ಫೋನ್ ಅನ್ನು ಸ್ನಾನದ ಮನೆಯಲ್ಲಿ ಇರಿಸುವುದು ಕೊಂಚ ಅಪಾಯಕಾರಿಯೂ ಹೌದು. ಬಚ್ಚಲು ಮನೆಯಲ್ಲಿ ನೀರು ಸಾಮಾನ್ಯವಾಗಿ ಇರುವುದರಿಂದ ಈ ನೀರಿಗೆ ಫೋನ್ ಬೀಳುವ ಸಾಧ್ಯತೆ ಇರುತ್ತದೆ.

#6

#6

ಯಾವುದೇ ಮೇಲ್ಮೈಯ ತುದಿಯಲ್ಲಿ ನಿಮ್ಮ ಫೋನ್ ಅನ್ನು ಇರಿಸಬೇಡಿ. ಫೋನ್ ವೈಬ್ರೇಶನ್ ಆದಾಗ ಮೇಜಿನ ತುದಿಯಲ್ಲಿ ನೀವು ಇರಿಸಿರುವಂತಹ ಫೋನ್ ಕೆಳಗೆ ಬೀಳುವ ಸಾಧ್ಯತೆ ಹೆಚ್ಚು. ಇದು ಫೋನ್ ಸ್ಕ್ರೀನ್‌ಗೆ ಹಾನಿಯನ್ನುಂಟು ಮಾಡುತ್ತದೆ ಅಂತೆಯೇ ಇತರ ಸಮಸ್ಯೆಗಳನ್ನು ಉಂಟುಮಾಡುತ್ತದೆ.

#7

#7

ಬೇಸಿಗೆ ಮತ್ತು ಚಳಿಗಾಲದ ಸಮಯಗಳಲ್ಲಿ ನಿಮ್ಮ ಫೋನ್ ಅನ್ನು ಕಾರಿನಲ್ಲಿ ಇರಿಸಬೇಡಿ. ಕಾರಿನಲ್ಲಿ ಫೋನ್ ಇದ್ದಾಗ ಇದು ಅತಿಯಾದ ಬಿಸಿ ಮತ್ತು ತಂಪಿಗೆ ಸಿಕ್ಕಿ ಹಾನಿಯಾಗುವ ಸಾಧ್ಯತೆ ಇರುತ್ತದೆ. ಅಂತೆಯೇ ಕಾರಿನಲ್ಲಿ ಫೋನ್ ಇದ್ದಾಗ ಕಳ್ಳತನವಾಗುವ ಸಾಧ್ಯತೆ ಕೂಡ ಹೆಚ್ಚು.

#8

#8

ಸಮುದ್ರತೀರಗಳಲ್ಲಿ ಮೋಜು ಮಾಡುವಾಗ ಸೆಲ್ಫಿ ತೆಗೆಸಿಕೊಳ್ಳುವುದು ಮತ್ತು ಫೋಟೋಗಳನ್ನು ತೆಗೆಯುವ ಹವ್ಯಾಸ ಸರ್ವೇ ಸಾಮಾನ್ಯ. ಆದರೆ ಈ ಮೋಜು ಅತಿರೇಕಕ್ಕೆ ಇಳಿದಾಗ ಫೋನ್‌ಗೆ ಹಾನಿ ಖಂಡಿತ. ಇನ್ನು ತೆಗೆದುಕೊಂಡೇ ಹೋಗಬೇಕು ಎಂದಾದಲ್ಲಿ ಫೋನ್ ಅನ್ನು ಸುರಕ್ಷಿತವಾಗಿರಿಸುವ ಪ್ಲಾಸ್ಟಿಕ್ ಬ್ಯಾಗ್‌ಗಳನ್ನು ನಿಮ್ಮೊಂದಿಗೆ ಒಯ್ಯಿರಿ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಪ್ರಾಣದ ಹಂಗು ತೆರೆದು ಸೆಲ್ಫಿ ಸ್ಪರ್ಧೆಗೆ ಸಜ್ಜಾದವರು!!!</a><br /><a href=ವಿಜ್ಞಾನಿಗಳಿಂದ 3 ನಕ್ಷತ್ರಗಳಿರುವ ಅಪರೂಪದ ಗ್ರಹ ಪತ್ತೆ!!
ವಿಶ್ವದ ಮೂಲೆಗಳಲ್ಲಿ ಈ ದೈತ್ಯ ಮಾನವರು ಇದ್ದದ್ದು ಹೌದು!
2ನೇ ಮಹಾಯುದ್ಧ ಸಮಯದಲ್ಲಿ ತೆಗೆದ ಕಪ್ಪು-ಬಿಳುಪು ಫೋಟೋಗಳು" title="ಪ್ರಾಣದ ಹಂಗು ತೆರೆದು ಸೆಲ್ಫಿ ಸ್ಪರ್ಧೆಗೆ ಸಜ್ಜಾದವರು!!!
ವಿಜ್ಞಾನಿಗಳಿಂದ 3 ನಕ್ಷತ್ರಗಳಿರುವ ಅಪರೂಪದ ಗ್ರಹ ಪತ್ತೆ!!
ವಿಶ್ವದ ಮೂಲೆಗಳಲ್ಲಿ ಈ ದೈತ್ಯ ಮಾನವರು ಇದ್ದದ್ದು ಹೌದು!
2ನೇ ಮಹಾಯುದ್ಧ ಸಮಯದಲ್ಲಿ ತೆಗೆದ ಕಪ್ಪು-ಬಿಳುಪು ಫೋಟೋಗಳು" />ಪ್ರಾಣದ ಹಂಗು ತೆರೆದು ಸೆಲ್ಫಿ ಸ್ಪರ್ಧೆಗೆ ಸಜ್ಜಾದವರು!!!
ವಿಜ್ಞಾನಿಗಳಿಂದ 3 ನಕ್ಷತ್ರಗಳಿರುವ ಅಪರೂಪದ ಗ್ರಹ ಪತ್ತೆ!!
ವಿಶ್ವದ ಮೂಲೆಗಳಲ್ಲಿ ಈ ದೈತ್ಯ ಮಾನವರು ಇದ್ದದ್ದು ಹೌದು!
2ನೇ ಮಹಾಯುದ್ಧ ಸಮಯದಲ್ಲಿ ತೆಗೆದ ಕಪ್ಪು-ಬಿಳುಪು ಫೋಟೋಗಳು

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಮತ್ತಷ್ಟು ಸುದ್ದಿಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ

Best Mobiles in India

English summary
To make your phone last longer, here is a list of places you should never take your phone with you.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X