Home
ಸುದ್ದಿಜಾಲ

ಭಾರತದಲ್ಲಿ 5G ಫೋನ್‌ಗಳನ್ನು ಖರೀದಿಸುವ ಮುನ್ನ ಈ ವಿಷಯಗಳ ಬಗ್ಗೆ ಎಚ್ಚರವಿರಲಿ!

ಭಾರತದಲ್ಲಿ 5G ನೆಟ್‌ವರ್ಕ್‌ ಪ್ರಾರಂಭವಾದ ನಂತರ 5G ಫೋನ್‌ಗಳಿಗೆ ಹೆಚ್ಚಿನ ಬೇಡಿಕೆ ಬಂದಿದೆ. ಕಳೆದ ಎರಡು ವರ್ಷಗಳಿಂದಲೂ 5G ಮೊಬೈಲ್‌ಗಳು ಮಾರುಕಟ್ಟೆಯಲ್ಲಿದ್ದರೂ ಸಹ ಈ ವರ್ಷ 5G ಮೊಬೈಲ್‌ಗಳು ಹೆಚ್ಚು ಸದ್ದು ಮಾಡುವ ಸೂಚನೆ ನೀಡಿವೆ. ಈಗಾಗಲೇ ಮಾರುಕಟ್ಟೆಯಲ್ಲಿ 5G ಫೋನ್‌ಗಳನ್ನು ಖರೀದಿಸುವವರ ಸಂಖ್ಯೆ ಹೆಚ್ಚಾಗಿದೆ. ಇದೇ ಕಾರಣಕ್ಕೆ ಬಹುತೇಕ ಎಲ್ಲಾ ಮೊಬೈಲ್‌ ಬ್ರ್ಯಾಂಡ್‌ಗಳು ಕೂಡ 5G ಫೋನ್‌ಗಳನ್ನು ಮಾರುಕಟ್ಟೆಯಲ್ಲಿ ಪರಿಚಯಿಸುತ್ತಿವೆ.

5G

ಹೌದು, ಭಾರತದಲ್ಲಿ 5G ಸ್ಮಾರ್ಟ್‌ಫೋನ್‌ಗಳ ಪೂರೈಕೆ ಹೆಚ್ಚಾಗಿದೆ. ಈಗಾಗಲೇ ಹಲವು ಪ್ರಮುಖ ನಗರಗಳಲ್ಲಿ 5G ನೆಟ್‌ವರ್ಕ್‌ ಲಭ್ಯವಾಗ್ತಿದೆ, ಅಲ್ಲದೆ ಈ ವರ್ಷದ ಅಂತ್ಯಕ್ಕೆ ದೇಶದ ಎಲ್ಲಾ ಕಡೆಗಳಲ್ಲೂ 5G ನೆಟ್‌ವರ್ಕ್‌ ಲಭ್ಯವಾಗಲಿದೆ. ಆದರಿಂದ 5G ಮೊಬೈಲ್‌ ಖರೀದಿಸುವವರ ಪ್ರಮಾಣ ಹೆಚ್ಚಿದೆ. ನೀವು ಕೂಡ 5G ಸ್ಮಾರ್ಟ್‌ಫೋನ್‌ ಖರೀದಿಸಲು ಬಯಸಿದರೆ, ಕೆಲವು ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ಉತ್ತಮ. ಹಾಗಾದ್ರೆ 5G ಮೊಬೈಲ್‌ ಖರೀದಿಸುವಾಗ ನೀವು ಗಮನಿಸಲೇಬೇಕಾದ ವಿಚಾರಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಪ್ರೊಸೆಸರ್‌ ಬಗ್ಗೆ ಅರಿವಿರಲಿ

ಪ್ರೊಸೆಸರ್‌ ಬಗ್ಗೆ ಅರಿವಿರಲಿ

5G ಸ್ಮಾರ್ಟ್‌ಫೋನ್‌ ಖರೀದಿಸುವಾಗ ಅದು ಯಾವ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ ಎಂಬುದರ ಅರಿವು ನಿಮಗಿರಬೇಕು. ಯಾಕಂದ್ರೆ ಎಲ್ಲಾ 5G ಚಿಪ್‌ಸೆಟ್‌ಗಳು ಕೂಡ ಒಂದೇ ಆಗಿರುವುದಿಲ್ಲ. ನೀವು ಖರೀದಿಸುವ ಫೋನ್‌ನ ಚಿಪ್ ಮತ್ತು ಫೋನ್ ಎಂಎಂವೇವ್ ಮತ್ತು ಸಬ್-6GHz ಎರಡನ್ನೂ ಬೆಂಬಲಿಸುತ್ತದೆಯೇ ಎಂಬುದು ಮುಖ್ಯವಾಗಲಿದೆ. mmWave 5G ಬ್ಯಾಂಡ್‌ಗಳು ಅತ್ಯುತ್ತಮವಾದ 5G ವೇಗವನ್ನು ನೀಡಲಿವೆ ಅನ್ನೊದು ಇದಕ್ಕೆ ಮುಖ್ಯ ಕಾರಣ. ಅಲ್ಲದೆ ಸಬ್‌-6GHz ಬ್ಯಾಂಡ್‌ಗಳು 4G ಗಿಂತ ಉತ್ತಮ ವೇಗವನ್ನು ನೀಡುತ್ತವೆ ಎಂದು ಹೇಳಲಾಗಿದೆ.

ಎಷ್ಟು ಬ್ಯಾಂಡ್‌ಗಳನ್ನು ಬೆಂಬಲಿಸಲಿದೆ ಅನ್ನೊದನ್ನ ಪರಿಶೀಲಿಸಿ

ಎಷ್ಟು ಬ್ಯಾಂಡ್‌ಗಳನ್ನು ಬೆಂಬಲಿಸಲಿದೆ ಅನ್ನೊದನ್ನ ಪರಿಶೀಲಿಸಿ

ಇನ್ನು ನೀವು ಖರೀದಿಸುವ 5G ಸ್ಮಾರ್ಟ್‌ಫೋನ್‌ ಭಾರತದಲ್ಲಿ ಎಷ್ಟು 5G ಬ್ಯಾಂಡ್‌ಗಳನ್ನು ಬೆಂಬಲಿಸಲಿದೆ ಅನ್ನೊದನ್ನು ಪರಿಶೀಲಿಸಲಿ. ಹೆಚ್ಚಿನ ಬ್ಯಾಂಡ್‌ಗಳನ್ನು ಬೆಂಬಲಿಸಲಿದರೆ ಮಾತ್ರ ಫೋನ್‌ ವೇಗವಾಗಿ ಕಾರ್ಯನಿರ್ವಹಿಸಲಿದೆ. ಅಂದರೆ ಭಾರತದಲ್ಲಿ 11ಕ್ಕೂ ಹೆಚ್ಚಿನ 5G ಬ್ಯಾಂಡ್‌ ಬೆಂಬಲಿಸುವ 5G ಫೋನ್‌ಗಳನ್ನು ಖರೀದಿಸುವುದು ಸೂಕ್ತವಾಗಿದೆ.

ಬಜೆಟ್‌ 5G ಫೋನ್‌ ಖರೀದಿಸುವಾಗ ಎಚ್ಚರಿಕೆ ಅಗತ್ಯ

ಬಜೆಟ್‌ 5G ಫೋನ್‌ ಖರೀದಿಸುವಾಗ ಎಚ್ಚರಿಕೆ ಅಗತ್ಯ

ಬಜೆಟ್‌ ಬೆಲೆಯ 5G ಫೋನ್‌ಗಳನ್ನು ಆಯ್ಕೆ ಮಾಡುವಾಗ ಉತ್ತಮ ಪ್ರೊಸೆಸರ್‌ ದಕ್ಷತೆಯ ಜೊತೆಗೆ ಸಂಪೂರ್ಣ 5G ವೇಗವನ್ನು ನೀಡುವುದರ ಬಗ್ಗೆ ಮಾಹಿತಿ ಪಡೆಯಿರಿ. ಯಾಕೆಂದ್ರೆ ಬಜೆಟ್‌ ಬೆಲೆಯ 5G ಫೋನ್‌ಗಳು ಸೀಮಿತ 5G ಸೇವೆಯನ್ನು ನೀಡುವ ಸಾದ್ಯತೆ ಇರುತ್ತದೆ. ಅಲ್ಲದೆ ಬಜೆಟ್‌ ಬೆಲೆಯ ಫೋನ್‌ ಖರೀದಿಸುವುದಾದರೆ ಇತ್ತೀಚಿಗೆ ಬಿಡುಗಡೆಯಾದ 5G ಫೋನ್‌ಗಳನ್ನು ಖರೀದಿಸಿರಿ.

ಬ್ಯಾಟರಿ ಬ್ಯಾಕ್‌ಅಪ್‌ ಬಗ್ಗೆ ಇರಲಿ ಗಮನ

ಬ್ಯಾಟರಿ ಬ್ಯಾಕ್‌ಅಪ್‌ ಬಗ್ಗೆ ಇರಲಿ ಗಮನ

5G ನೆಟ್‌ವರ್ಕ್‌ ವೇಗದ ನೆಟ್‌ವರ್ಕ್‌ ಆಗಿರುವುದರಿಂದ ಹೆಚ್ಚಿನ ಬ್ಯಾಟರಿ ಬ್ಯಾಕ್‌ಅಪ್‌ ಕೇಳಲಿದೆ. ಆದರಿಂದ ನೀವು 5G ಸ್ಮಾರ್ಟ್‌ಫೋನ್‌ ಖರೀದಿಸುವಾಗ ಕನಿಷ್ಠ 5000mAh ಸಾಮರ್ಥ್ಯ ಬ್ಯಾಟರಿ ಬ್ಯಾಕ್‌ಅಪ್‌ ಇರುವ ಫೋನ್‌ ಆಯ್ಕೆ ಮಾಡಿರಿ.

ಸಾಫ್ಟ್‌ವೇರ್‌ ಅಪ್ಡೇಟ್‌ ನೀಡುವ ಫೋನ್‌ಗಳಿಗೆ ಅಧ್ಯತೆ ನೀಡಿ

ಸಾಫ್ಟ್‌ವೇರ್‌ ಅಪ್ಡೇಟ್‌ ನೀಡುವ ಫೋನ್‌ಗಳಿಗೆ ಅಧ್ಯತೆ ನೀಡಿ

ಇನ್ನು ಭಾರತದಲ್ಲಿ 5G ತಂತ್ರಜ್ಞಾನ ಹೊಸದಾಗಿರುವುದರಿಂದ ನಿಯಮಿತವಾಗಿ ಸಾಫ್ಟ್‌ವೇರ್‌ ಅಪ್ಡೇಟ್‌ ನೀಡುವ ಫೋನ್‌ಗಳಿಗೆ ಹೆಚ್ಚಿನ ಅಧ್ಯತೆ ನೀಡುವುದು ಸೂಕ್ತ. ಭವಿಷ್ಯದ ದಿನಗಳಲ್ಲಿ ತಂತ್ರಜ್ಞಾನ ಬದಲಾಗುತ್ತಾ ಹೋದಂತೆ ಹೊಸ ಅಪ್ಡೇಟ್‌ಗಳ ಅವಶ್ಯಕತೆಯಿರಲಿದೆ. ಆದರಿಂದ ನಿಯಮಿತವಾಗಿ ಅಪ್ಡೇಟ್‌ಗಳನ್ನು ನೀಡುವ ಸ್ಮಾರ್ಟ್‌ಫೋನ್‌ ಆಯ್ಕೆ ಮಾಡಿರಿ.

ಎಂದ

5G ಫೋನ್‌ ಎಂದ ಮಾತ್ರಕ್ಕೆ ಕೇವಲ ಫೀಚರ್ಸ್‌ಗಳಿಗೆ ಮಾರುಹೋಗಿ ಖರೀದಿಸಬೇಡಿ. ಆ ಸ್ಮಾರ್ಟ್‌ಫೋನ್‌ನಲ್ಲಿ ಲಭ್ಯವಿರುವ ಆಯ್ಕೆಗಳು, ಫೀಚರ್ಸ್‌ಗಳು, ಬ್ಯಾಂಡ್‌ಗಳ ಬೆಂಬಲ ಎಲ್ಲದರ ಅರಿವು ನಿಮಗಿರಬೇಕಾಗುತ್ತದೆ.

Best Mobiles in India

English summary
Planning to buy a 5G phone? here are some important things
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+