Home
ಸುದ್ದಿಜಾಲ

Amazon Great Indian Sale 2020: ಸ್ಮಾರ್ಟ್‌ಸ್ಪೀಕರ್‌ಗಳಿಗೆ ವಿಶೇಷ ರಿಯಾಯಿತಿ!

ಇ-ಕಾಮರ್ಸ್‌ ದೈತ್ಯ ಅಮೆಜಾನ್‌ ವಿಶೇಷ ದಿನಗಳಲ್ಲಿ ಭಾರಿ ಡಿಸ್ಕೌಂಟ್‌ ಮೇಳ ಆಯೋಜಿಸುತ್ತಲೇ ಇರುತ್ತೆ. ಇದೀಗ ಗಣರಾಜ್ಯೋತ್ಸವ ಪ್ರಯುಕ್ತ ಜನವರಿ 19 ರಿಂದ 22ರವೆರೆಗೆ ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಸೇಲ್‌ ಮೇಳವನ್ನ ಆಯೋಜಿಸಿದ್ದು, ಈಗಾಗ್ಲೆ ಗ್ರಾಹಕರು ತಮಗಿಷ್ಟದ ಉತ್ಪನ್ನಗಳನ್ನ ರಿಯಾಯಿತಿ ದರದಲ್ಲಿ ಖರೀದಿಸುತ್ತಿದ್ದಾರೆ. ಸದ್ಯ ಈ ಬಾರಿಯ ಗ್ರೇಟ್‌ ಇಂಡಿಯನ್‌ ಸೇಲ್‌ನಲ್ಲಿ ಲ್ಯಾಪ್‌ಟಾಪ್‌, ಟಿವಿ, ಸ್ಮಾರ್ಟ್‌ಫೋನ್‌ಗಳು ಸೇರಿದಂತೆ ಎಲ್ಲಾ ಮಾದರಿಯ ಸ್ಮಾರ್ಟ್‌ ಪ್ರಾಡಕ್ಟ್‌ಗಳ ಮೇಲೂ ರಿಯಾಯಿತಿ ದೊರೆಯುತ್ತಿದ್ದು, ಸ್ಮಾರ್ಟ್‌ ಸ್ಪೀಕರ್‌ಗಳ ಮೇಲೂ ಭರ್ಜರಿ ಡಿಸ್ಕೌಂಟ್‌ ನೀಡಲಾಗ್ತಿದೆ.

ಹೌದು

ಹೌದು ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಸೇಲ್‌ನಲ್ಲಿ ಸ್ಮಾರ್ಟ್‌ ಪ್ರಾಡಕ್ಟ್‌ಗಳನ್ನ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗ್ತಿದೆ. ಸ್ಮಾರ್ಟ್‌ಹೋಮ್‌ ಪ್ರಾಡಕ್ಟ್‌ಗಳಾಗಿರುವ ಸ್ಮಾರ್ಟ್‌ ಸ್ಪೀಕರ್‌ಗಳಿಗೆ ಮಾರುಕಟ್ಟೆಯಲ್ಲಿ ಬಾರಿ ಬೇಡಿಕೆ ಇರೋದು ನಿಮಗೆಲ್ಲಾ ಗೊತ್ತೆ ಇದೆ. ಹ್ಯಾಡ್ಸ್‌ ಪ್ರಿಯಾಗಿ ಕೆಲಸ ಮಾಡಬಲ್ಲ ಸ್ಮಾರ್ಟ್‌ ಸ್ಪೀಕರ್‌ಗಳು ಕೂಡ ಇಂದೂ ಮಾರುಕಟ್ಟೆಯಲ್ಲಿ ಸಿಗೊದ್ರಿಂದ ಸಹಜವಾಗಿಯೇ ಅಮೆಜಾನ್‌ ಮೇಳದಲ್ಲಿ ಸ್ಮಾರ್ಟ್‌ ಸ್ಪೀಕರ್‌ಗಳ ಮಾರಾಟ ಜೋರಾಗಿಯೇ ನಡೆಯುತ್ತಿದೆ. ಸದ್ಯ ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಸೇಲ್ ಪ್ರಯುಕ್ತ ರಿಯಾಯಿತಿ ದರದಲ್ಲಿ ಲಭ್ಯವಾಗ್ತಿರುವ ಟಾಪ್‌ 5 ಸ್ಮಾರ್ಟ್‌ ಸ್ಪೀಕರ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿ.

ಎಕೋ ಇನ್‌ಪುಟ್‌ ಪೋರ್ಟ್‌ಬಲ್‌ ಸ್ಮಾರ್ಟ್‌ ಸ್ಪೀಕರ್‌

ಎಕೋ ಇನ್‌ಪುಟ್‌ ಪೋರ್ಟ್‌ಬಲ್‌ ಸ್ಮಾರ್ಟ್‌ ಸ್ಪೀಕರ್‌

ಈ ಸ್ಮಾರ್ಟ್‌ ಸ್ಪೀಕರ್‌ ಬ್ಯಾಟರಿ ಆಪ್‌ರೇಟೆಡ್‌ ಸ್ಮಾರ್ಟ್‌ ಸ್ಪೀಕರ್‌ ಆಗಿದ್ದು, ಪ್ಯಾಭ್ರಿಕ್‌ ಡಿಸೈನ್‌ ಹೊಂದಿದೆ. 4800mah ಬ್ಯಾಟರಿ ಪ್ಯಾಕ್‌ಆಪ್‌ ಹೊಂದಿರುವ ಈ ಸ್ಮಾರ್ಟ್ ಸ್ಪೀಕರ್‌ 11ಗಂಟೆಗಳ ಸ್ಟ್ಯಾಂಡ್‌ ಬೈ ಪ್ಲೇಬ್ಯಾಕ್‌ ಮ್ಯೂಸಿಕ್‌ ಕೇಳಬಹುದಾಗಿದೆ. ಜೊತೆಗೆ ಈ ಸ್ಮಾರ್ಟ್‌ ಸ್ಪೀಕರ್‌ ಗೂಗಲ್‌ ಅಸಿಸ್ಟಂಟ್‌, ಅಲೆಕ್ಸಾ, ಮೂಲವೂ ನಿಯಂತ್ರಿಸಬಹುದಾಗಿದ್ದು, ವಾತಾವರಣದ ಮಾಹಿತಿಯನ್ನ ಸಹ ತಿಳಿಸಿಕೊಡುವ ವ್ಯವಸ್ಥೆ ಈ ಸ್ಮಾರ್ಟ್‌ ಸ್ಪೀಕರ್‌ ಒಳಗೊಂಡಿದೆ. ಇದೀಗ ರಿಯಾಯಿತಿ ದರದಲ್ಲಿ ಕೇವಲ 3,399ರೂ ಗಳಿಗೆ ಖರೀದಿಸಬಹುದಾಗಿದೆ.

ಎಕೋ ಡಾಟ್‌ ಆಂಡ್‌ ಸ್ಮಾರ್ಟ್ ಬಲ್ಬ್‌ ಬಂಡಲ್‌

ಎಕೋ ಡಾಟ್‌ ಆಂಡ್‌ ಸ್ಮಾರ್ಟ್ ಬಲ್ಬ್‌ ಬಂಡಲ್‌

ಹೆಸರೇ ಹೇಳುವಂತೆ ಈ ಈ ಬಂಡಲ್ ಎಕೋ ಡಾಟ್ ಮತ್ತು ವಿಪ್ರೊ 9 ಡಬ್ಲ್ಯೂ ಸ್ಮಾರ್ಟ್ ವೈಟ್ ಬಲ್ಬ್ ಅನ್ನು ಒಳಗೊಂಡಿದೆ. ಈ ಸ್ಮಾರ್ಟ್‌ ಸ್ಪೀಕರ್‌ ಆಂಡ್‌ ಬಲ್ಬ್‌ ಜೊತೆಗೆ ಬರಲಿದ್ದು, ನಿಮ್ಮ ಧ್ವನಿ ಮೂಲಕ ಸ್ಮಾರ್ಟ್ ಸ್ಪೀಕರ್‌ ಹಾಗೂ ಬಲ್ಬ್‌ಗಳನ್ನ ನಿಯಂತ್ರಿಸಬಹುದಾಗಿದೆ. ಇನ್ನು ಎಕೋ ಡಾಟ್ ಅತ್ಯಂತ ಜನಪ್ರಿಯ ಧ್ವನಿ-ನಿಯಂತ್ರಿತ ಸ್ಪೀಕರ್ ಆಗಿದ್ದು, ಹೊಸ ಫ್ಯಾಬ್ರಿಕ್ ವಿನ್ಯಾಸ ಹೊಂದಿರುವ ಸುಧಾರಿತ ಸ್ಪೀಕರ್ ಆಗಿದೆ. ಅಲೆಕ್ಸಾ, ಗೂಗಲ್‌ ಅಸಿಸ್ಟಂಟ್‌ ನಿಂದ ನಿಯಂತ್ರಿಸಬಹುದಾಗಿದ್ದು ಉತ್ತಮ ಸೌಂಟ್‌ ಸಿಸ್ಟಂ ಹೊಂದಿದೆ. ಇದೀಗ ರಿಯಾಯಿತಿ ದರದಲ್ಲಿ ಕೇವಲ 2,998 ರೂಗಳಿಗೆ ಲಭ್ಯವಾಗಲಿದೆ.

ಜೆಬಿಎಲ್‌ ಫ್ಲಿಪ್‌ 3

ಜೆಬಿಎಲ್‌ ಫ್ಲಿಪ್‌ 3

ಜೆಬಿಎಲ್‌ ಫ್ಲಿಪ್‌ 3 ಸ್ಟೆಲ್ತ್‌ ವಾಟರ್‌ ಪ್ರೂಪ್‌ ಪೋರ್ಟ್‌ಬಲ್‌ ಬ್ಲೂಟೂತ್‌ ಸ್ಪೀಕರ್‌ ಇದಾಗಿದ್ದು, ಡೀಪ್‌ ಬಾಸ್‌ ಸೌಂಡ್‌ ಸಿಸ್ಟಂ ಅನ್ನ ಒಳಗೊಂಡಿದೆ. ಇನ್ನು ಈ ಸ್ಮಾರ್ಟ್ ಸ್ಪೀಕರ್‌
ವೈರ್‌ಲೆಸ್‌ ಬ್ಲೂಟೂತ್‌ ಸ್ಟ್ರೀಮಿಂಗ್‌ ವ್ಯವಸ್ಥೆಯನ್ನ ಹೊಂದಿದ್ದು, ಸ್ಮಾರ್ಟ್‌ ಹೋಮ್‌ಗಳಿಗೆ ಅತ್ಯುತ್ತಮ ಸ್ಪೀಕರ್‌ ಆಗಿದೆ. ಐಪಿಎಕ್ಸ್‌7 ವಾಟರ್‌ ಪ್ರೂಪ್‌ ಡ್ಯುರೆಬಲ್‌ ಫ್ಯಾಬ್ರಿಕ್‌ ಮೆಟರಿಯಲ್‌ ವಿನ್ಯಾಸವನ್ನ ಹೊಂದಿದೆ. ಅಲ್ಲದೆ ಈ ಸ್ಪೀಕರ್‌ 10ಗಂಟೆಗಳ ಕಾಲ ಪ್ಲೇ ಬ್ಯಾಕ್‌ ಮ್ಯೂಸಿಕ್‌ ಸಾಮರ್ಥ್ಯವನ್ನ ಹೊಂದಿದೆ. ಸದ್ಯ ರಿಯಾಯಿತಿ ದರದಲ್ಲಿ ಕೇವಲ 4,199 ರೂ, ಗಳಿಗೆ ಲಭ್ಯವಾಗಲಿದೆ.

ಮಿಫಾ ಎ1 ಎಚ್‌ಡಿ ಸ್ಟಿರಿಯೊ ಸೌಂಡ್ ಸಿಸ್ಟಮ್

ಮಿಫಾ ಎ1 ಎಚ್‌ಡಿ ಸ್ಟಿರಿಯೊ ಸೌಂಡ್ ಸಿಸ್ಟಮ್

ಈ ಸ್ಮಾರ್ಟ್‌ ಸ್ಪೀಕರ್‌ ಟಿಡಬ್ಲ್ಯೂಎಸ್ ಟೆಕ್ನಾಲಜಿ ಯನ್ನ ಹೊಂದಿರುವ ಬ್ಲೂಟೂತ್ ಸ್ಪೀಕರ್ ಆಗಿದ್ದು, ಬ್ಲೂಟೂತ್ ಅಲ್ಲದ ಸಾಧನಗಳಿಗೆ 3.5 ಎಂಎಂ ಆಡಿಯೊ ಕೇಬಲ್‌ ಮೂಲಕ ಬೆಂಬಲಿಸುತ್ತದೆ. ಜೊತೆಗೆ ಈ ಸ್ಮಾರ್ಟ್‌ ಸ್ಪೀಕರ್‌ ಆಕ್ಸ್-ಇನ್ ಜ್ಯಾಕ್, 32 ಜಿಬಿ ಮೆಮೊರಿ ಕಾರ್ಡ್ ಅನ್ನು ಸಹ ಬೆಂಬಲಿಸುತ್ತದೆ. ಜೊತೆಗೆ ಈ ಸ್ಮಾರ್ಟ್‌ ಸ್ಪೀಕರ್‌ ಉತ್ತಮ ಸೌಂಡ್‌ ಸಿಸ್ಂ ಹೊಂದಿದ್ದು, ಪ್ಲೇ ಬ್ಯಾಕ್‌ ಮ್ಯೂಸಿಕ್‌ನಲ್ಲಿ ಒಳೆಯ ಬಾಳಿಕೆ ಬರಲಿದೆ. ಸದ್ಯ ಇದರ ಬೆಲೆ ರಿಯಾಯಿತಿ ದರದಲ್ಲಿ ಕೇವಲ 1,555 ರೂ,ಆಗಿದೆ.

ಜೆಬಿಎಲ್ ಗೋ ಪೋರ್ಟಬಲ್ ವೈರ್‌ಲೆಸ್ ಬ್ಲೂಟೂತ್ ಸ್ಪೀಕರ್

ಜೆಬಿಎಲ್ ಗೋ ಪೋರ್ಟಬಲ್ ವೈರ್‌ಲೆಸ್ ಬ್ಲೂಟೂತ್ ಸ್ಪೀಕರ್

ಇದು ಉತ್ತಮ ಗುಣ ಮಟ್ಟದ ಸೌಂಡ್‌ ಸಿಸ್ಟಂ ಹೊಂದಿದ್ದು, ಗ್ರಾಹಕರ ಆಕರ್ಷಣೆಗೆ ತಕ್ಕ ವಿನ್ಯಾಸವ್ನನ ಹೊಂದಿರುವ ಸ್ಮಾರ್ಟ್‌ ಸ್ಪೀಕರ್‌ ಆಗಿದೆ. ಇದು ವೈರ್‌ಲೆಸ್‌ ಬ್ಲೂಟೂತ್‌ ಸ್ಟ್ರೀಮಿಂಗ್‌ ಹೊಂದಿರುವ ಸ್ಮಾರ್ಟ್‌ ಸ್ಪೀಕರ್‌ ಆಗಿದೆ, ಜೊತೆಗೆ 3.7voltes ವೋಲ್ಟೇಜ್ ಸಾಮರ್ಥ್ಯ ಹೊಂದಿದ್ದು, 5ಗಂಟೆಗಳ ಪ್ಲೇಬ್ಯಾಕ್‌ ಮ್ಯೂಸಿಕ್‌ ನೀಡುವ ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಆಪ್‌ ಒಳಗೊಂಡಿದೆ. ಸದ್ಯ ರಿಯಾಯಿತಿ ದರದಲ್ಲಿ ಈ ಸ್ಮಾರ್ಟ್‌ ಸ್ಪೀಕರ್‌ ಕೇವಲ 1,499 ರೂ,ಗಳಿಗೆ ಖರೀದಿಗೆ ಲಭ್ಯವಾಗಲಿದೆ.

Best Mobiles in India

English summary
Amazon is offering massive discounts and interesting deals on the purchase of smartspeakers.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+