ಫೇಸ್ ಬುಕ್ ಪಾಸ್ವರ್ಡ್ ಜೊತೆ ಆಟವಾಡಬಹುದು

Posted By: Varun
ಫೇಸ್ ಬುಕ್ ಪಾಸ್ವರ್ಡ್ ಜೊತೆ ಆಟವಾಡಬಹುದು

ನಿಜಕ್ಕೂ ಇದು ಇಂಟರೆಸ್ಟಿಂಗ್ ಆಗಿದೆ. ಬೇಕಿದ್ದರೆ ಟ್ರೈ ಮಾಡಿ. ನಿಮ್ಮ ಫೇಸ್ ಬುಕ್ ಖಾತೆಗೆ ಲಾಗ್ ಇನ್ ಆಗಬೇಕಾದರೆ ಪಾಸ್ವರ್ಡ್ ಕೊಡಬೇಕು ತಾನೇ. ಆದರೆ ನಿಮಗೆ ಗೊತ್ತಿರದ ವಿಷಯವೇನೆಂದರೆ ನೀವು 3 ರೀತಿಯ ಪಾಸ್ವರ್ಡ್ ಬಳಸಿ ಕೂಡಾ ನಿಮ್ಮ ಖಾತೆಗೆ ಲಾಗ್ ಇನ್ ಮಾಡಬಹುದು. ಇದೇನು ಯಾವುದೋ ಹ್ಯಾಕ್ ಮಾಡೋ ಟ್ರಿಕ್ ಇರಬಹುದಾ ಅಂತ ಅನ್ಕೋಬೇಡಿ. ನಿಜ ಏನು ಅಂದರೆ ಫೇಸ್ ಬುಕ್ ವೆಬ್ಸೈಟೇ ಈ ಸೌಲಭ್ಯವನ್ನು ಒದಗಿಸುತ್ತದೆ. ಇದು ಹೇಗೆ ವರ್ಕ್ ಆಗುತ್ತದೆ ಅಂತ ವಿವರವಾಗಿ ಹೇಳುತ್ತೇನೆ.

1ನೇ ರೀತಿ - ನಿಮ್ಮ ಫೇಸ್ ಬುಕ್ ಖಾತೆಯ ಪಾಸ್ವರ್ಡ್ internEt ಎಂದಿಟ್ಟುಕೊಳ್ಳಿ. ನೀವು ಬೇಕಾದರೆ INTERNeT ಎಂದು ಟೈಪ್ ಮಾಡಿ ಕೂಡಾ ಲಾಗಿನ್ ಮಾಡಬಹುದು.

2ನೇ ರೀತಿ- ನಿಮ್ಮ ಪಾಸ್ವರ್ಡ್ ನ ಮೊದಲ ಅಕ್ಷರ ಇಂಗ್ಲಿಷ್ ವರ್ಣಮಾಲೆಯ ಸಣ್ಣ ಅಕ್ಷರವಾಗಿದ್ದರೆ, ನೀವು ಅದರ ಬದಲಿಗೆ, ದೊಡ್ಡ ಅಕ್ಷರವನ್ನು ಬಳಸಿಯೂ ಲಾಗಿನ್ ಮಾಡಬಹುದು.

3ನೇ ರೀತಿ- ಅದೇ ರೀತಿ ನಿಮ್ಮ, ಪಾಸ್ವರ್ಡ್ ನ ಮೊದಲ ಅಕ್ಷರ ಇಂಗ್ಲಿಷ್ ವರ್ಣಮಾಲೆಯ ದೊಡ್ಡ ಅಕ್ಷರವಾಗಿದ್ದರೆ, ನೀವು ಅದರ ಬದಲಿಗೆ, ಸಣ್ಣ ಅಕ್ಷರವನ್ನು ಬಳಸಿಯೂ ಲಾಗಿನ್ ಮಾಡಬಹುದು.

ಇದೆಲ್ಲ ಓದಿದ ಮೇಲೆ ನೀವು ಕೇಳಬಹುದು. ಯಾಕಪ್ಪಾ ಫೇಸ್ ಬುಕ್ ಈ ರೀತಿಯ ಪಾಸ್ವರ್ಡ್ ನ ಅಕ್ಷರಗಳನ್ನು ಬದಲು ಮಾಡಿದರೂ ಲಾಗಿನ್ ಆಗುವುದಕ್ಕೆ ಬಿಡುತ್ತದೆ ಎಂದು. ಕಾರಣ ಇಷ್ಟೇ. ಸಾಮಾನ್ಯವಾಗಿ ನಾವು ಲಾಗಿನ್ ಮಾಡುವಾಗ ಅವಸರ ಅವಸರವಾಗಿ ಕೆಲವೊಮ್ಮೆ ಕ್ಯಾಪ್ಸ್ ಲಾಕ್ ಆನ್ ಆಗಿ ಟೈಪ್ ಮಾಡುತ್ತೇವೆ, ಇಲ್ಲವೇ ಶಿಫ್ಟ್ ಕೀ ಅಪ್ಪಿ ತಪ್ಪಿ ಒತ್ತಿಯೂ ಪಾಸ್ವರ್ಡ್ ಟೈಪ್ ಮಾಡಬಹುದಾದ ಸಾಧ್ಯತೆ ಇರುತ್ತದೆ. ಇದನ್ನೆಲ್ಲಾ ಗಮನದಲ್ಲಿ ಇಟ್ಟುಕೊಂಡೇ ಫೇಸ್ ಬುಕ್ ಈ ರೀತಿ ಲಾಗಿನ್ ಆಗಲು ಬಿಡುತ್ತದೆ.

ಇದನ್ನು ಈಗಲೇ ಟ್ರೈ ಮಾಡಿ ನಿಮ್ಮ ಸ್ನೇಹಿತರಿಗೂ ಇದರ ಬಗ್ಗೆ ಹೇಳಿ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot