ಪ್ಲೇ ಕಂಪೆನಿಯ ಪ್ಲೇಗೊ BH-70 ಹೆಡ್‌ಫೋನ್ ಬಿಡುಗಡೆ.!
ಟೆಕ್ ಜಗತ್ತಿನಲ್ಲಿ ಸ್ಮಾರ್ಟ್‌ಫೋನ್‌ಗಳಿಗೆ ಮಾರುಕಟ್ಟೆ ಇರುವಂತೆಯೆ ಹೆಡ್‌ಫೋನ್‌ಗಳಿಗೂ ಭಾರಿ ಬೇಡಿಕೆ ಇದೆ. ಈಗಾಗ್ಲೆ ಮಾರುಕಟ್ಟೆಯಲ್ಲಿ ಹಲವು ಕಂಪೆನಿಗಳ ವೈವಿಧ್ಯಮಯ ಹೆಡ್‌ಫೋನ್‌ಗಳು ಲಭ್ಯವಿವೆ, ಆದರೂ ಗ್ರಾಹಕರು ಮಾತ್ರ ತಮಗಿಷ್ಟವಾದ ಬ್ರ್ಯಾಂಡ್‌ನ ಹೆಡ್‌ಫೋನ್‌ಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಇನ್ನು ತನ್ನದೇ ಆದ ಹೆಡ್‌ಫೋನ್‌ಗಳನ್ನ ಮಾರುಕಟ್ಟೆಗೆ ಪರಿಚಯಿಸಿ ಸೈ ಎನಿಸಿಕೊಂಡಿರುವ ಪ್ಲೇ ಕಂಪೆನಿ ಇದೀಗ ಹೊಸ ಮಾದರಿಯ ಹೆಡ್‌ಫೋನ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ಹೌದು, ಭಾರತದ ಗುರ್‌ಗಾಂವ್ ಮೂಲದ ಕಂಪೆನಿ ಪ್ಲೇ ತನ್ನ ಹೊಸ ಪ್ಲೇಗೊ BH-70 ನಾಯಿಸ್ ಕ್ಯಾನ್ಸೆಲಿಂಗ್ ವೈರ್‌ಲೆಸ್ ಹೆಡ್‌ಫೋನ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಹೆಡ್‌ಫೋನ್‌ಗಳು ಆಕ್ಟಿವ್ AI- ಚಾಲಿತ ವೈಯಕ್ತೀಕರಣವನ್ನು ಹೊಂದಿದ್ದು, ಎಡ ಮತ್ತು ಬಲಭಾಗದ ಆಡಿಯೊವನ್ನು ಸ್ವಯಂಚಾಲಿತವಾಗಿ ಪ್ಲೇ ಮಾಡಲು ಇದು ಡಿವೈಸ್‌ಗೆ ಸಹಾಯ ಮಾಡಲಿದೆ. ಇದಲ್ಲದೆ, ಇದು ಹೈಬ್ರಿಡ್ ಆಕ್ಟಿವ್ ನಾಯಿಸ್ ಕ್ಯಾನ್ಸೆಲೇಶನ್, ಸ್ಮಾರ್ಟ್-ಟಚ್-ಮತ್ತು-ಟಾಕ್, ಆಟೋ- ಪಾಸ್ - ಪ್ಲೇ ಫೀಚರ್ಸ್‌ಗಳನ್ನ ಒಳಗೊಂಡಿದೆ.

ಪ್ಲೇಗೊ BH-70
ಪ್ಲೇಗೊ BH-70 ಹೆಡ್‌ಫೋನ್‌ಗಳು 40MM ಆಡಿಯೋ ಡ್ರೈವರ್‌ಗಳನ್ನು ಹೊಂದಿದ್ದು ಅದು ಬಾಸ್ ಮತ್ತು ಟ್ರಿಬಲ್ ಬ್ಯಾಲೆನ್ಸ್ ಹಾಗೂ ಫರ್ಪೆಕ್ಟ್ ಮಿಕ್ಸ್ ಔಟ್‌ಪುಟ್ ಅನ್ನು ನೀಡುತ್ತದೆ. ಇದಲ್ಲದೆ ಈ ಹೆಡ್‌ಫೋನ್‌ನಲ್ಲಿ ಆಕ್ಟಿವ್ ನಾಯಿಸ್ ಕ್ಯಾನ್ಸಲೇಶನ್ ವಿವಿಧ ಮೋಡ್‌ಗಳಲ್ಲಿ ಲಭ್ಯವಿದೆ. ಅದರಲ್ಲಿ ಟ್ರಾನ್ಸ್‌ಪರೆನ್ಸಿ ಮೋಡ್ ಸುತ್ತಲಿನ ಆಂಬಿಯೆಂಟ್ ಸೌಂಡ್ ಅನ್ನು ಕೇಳಲು ಅನುಮತಿಸುತ್ತದೆ. ಇದರಿಂದ ನಿಮ್ಮ ಸುತ್ತಲೂ ಏನಾಗುತ್ತಿದೆ ಅನ್ನೊದರ ಅರಿವು ನಿಮಗೆ ತಿಳಿಯಲಿದೆ. ಇನ್ನು ವಾಯ್ಸ್ ಮೋಡ್ ಇದು ಗೂಗಲ್ ಗೂಗಲ್ ಅಸಿಸ್ಟೆಂಟ್, ಅಮೆಜಾನ್ ಅಲೆಕ್ಸಾ ಅಥವಾ ಸಿರಿಯನ್ನು ನಿಯಂತ್ರಿಸಲು ಹೆಡ್‌ಫೋನ್‌ಗಳು ಧ್ವನಿ ಆಜ್ಞೆಗಳನ್ನು ಸಹ ಬೆಂಬಲಿಸುತ್ತವೆ.

ಪ್ಲೇಗೊ BH-70 ವಿನ್ಯಾಸ
ಈ ಹೆಡ್‌ಫೋನ್‌ಗಳನ್ನು ಬಳಕೆದಾರರ ಉತ್ತಮ ಅನುಭವಕ್ಕೆ ತಕ್ಕಂತೆ ವಿನ್ಯಾಸಗೊಳಿಸಲಾಗಿದೆ. ಈ ಹೆಡ್‌ಫೋನ್‌ನಲ್ಲಿ ಮೈಕ್ರೋಎಲೆಕ್ಟ್ರಾನಿಕ್ಸ್, ಸೆನ್ಸಾರ್,ಆಲ್ಗಾರಿದಮ್, ಹಾಗೂ ವಿನ್ಯಾಸದಲ್ಲಿ ಉತ್ತಮವಾಗಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಅಲ್ಲದೆ ಬಳಕೆದಾರರ ಉತ್ತಮ ಅನುಭವಕ್ಕಾಗಿ ನಾವು ಅಗತ್ಯವಿರುವ ಎಲ್ಲಾ ಫೀಚರ್ಸ್‌ಗಳನ್ನ ಮತ್ತು ಆಡಿಯೊಫೈಲ್‌ಗಳಿಗೆ ಉತ್ತಮ ಆಡಿಯೋ ಡ್ರೈವರ್‌ಗಳನ್ನ ಅಳವಡಿಸಿದ್ದೇವೆ ಅಂತಾ ಪ್ಲೇ ಕಂಪೆನಿಯ ಸಿಇಒ ಶ್ರೀ ಸಂದೀಪ್ ಬಂಗಾ ಹೇಳಿದ್ದಾರೆ.

ಪ್ಲೇಗೊ BH-70 ವಿಶೇಷತೆ
ಇನ್ನು ಈ ಹೆಡ್‌ಫೋನ್ AI- ಚಾಲಿತ ಹೆಡ್‌ಫೋನ್ ಆಗಿದ್ದು, ಇದು ಆಂಡ್ರಾಯ್ಡ್ ಮತ್ತು ಐಒಎಸ್ ಆಧಾರಿತ ಎರಡು ಡಿವೈಸ್‌ಗಳಲ್ಲು ಪ್ಲೇಗೊ ಅಪ್ಲಿಕೇಶನ್‌ನೊಂದಿಗೆ ಕಾನ್ಫಿಗರ್ ಮಾಡಬಹುದು. ಇದಲ್ಲದೆ ಪ್ಲೇಗೊ ಸ್ಮಾರ್ಟ್ ಅಪ್ಲಿಕೇಶನ್ AI- ಚಾಲಿತ ಆಡಿಯೊ ಕರ್ವ್ ಆಪ್ಟಿಮೈಸೇಶನ್ ಅನ್ನು ಅನುಮತಿಸುತ್ತದೆ. ಇದಲ್ಲದೆ, ಇದು ರಾಕ್, ಪಾಪ್, ಜಾಜ್ ಮತ್ತು ಮಾದರಿಯ ಹಾಡುಗಳನ್ನ ಕೇಳಲು ಈಕ್ವಲೈಜರ್ ಅನ್ನು ಸಹ ನೀಡಲಾಗಿದೆ.

ಬ್ಯಾಟರಿ ಮತ್ತು ಇತರೆ
ಪ್ಲೇಗೊ BH-70 ಹೆಡ್‌ಫೋನ್ 1,000mAh ಬ್ಯಾಟರಿ ಪ್ಯಾಕ್‌ಆಪ್ ಅನ್ನು ಹೊಂದಿದೆ. ಇದು ಬಳಕೆದಾರರಿಗೆ 24 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ ಎಂದು ಬ್ರ್ಯಾಂಡ್ ಹೇಳಿಕೊಂಡಿದೆ. ಇದಲ್ಲದೆ ಪ್ಲೇಗೊ ಹೆಡ್‌ಫೋನ್ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್ 5.0 ನಿಂದ ನಿಯಂತ್ರಿಸಬಹುದಾಗಿದೆ. ಇದಲ್ಲದೆ ಆಪ್ಟ್-x ಆಡಿಯೊ ಕೊಡೆಕ್ ಅನ್ನು ಹೊಂದಿದ್ದು, CVC 6.0 ನಾಯಿಸ್ ಕ್ಯಾನ್ಸಲೇಶನ್ ಮೈಕ್ರೊಫೋನ್‌ಗಳನ್ನ ಹೊಂದಿದೆ.

ಬೆಲೆ ಮತ್ತು ಲಭ್ಯತೆ
ಪ್ಲೇಗೊ BH-70 ಹೆಡ್‌ಫೋನ್‌ಗಳು ಗ್ರ್ಯಾಫೈಟ್ ಕಪ್ಪು ಮತ್ತು ಮೆಡಾಲಿಯನ್ ಬ್ರೌನ್ ಕಲರ್‌ಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಹೆಡ್‌ಫೋನ್‌ಗಳ ಬೆಲೆ 14,999 ರೂ.ಆಗಿದೆ. ಸದ್ಯ ಈ ಹೆಡ್‌ಫೋನ್‌ಗಳನ್ನ ಪ್ಲೇ ಬ್ರ್ಯಾಂಡ್‌ವೆಬ್‌ಸೈಟ್‌ನಿಂದ ಖರೀದಿಸಬಹುದಾಗಿದೆ.


Click it and Unblock the Notifications








