Subscribe to Gizbot

ಭಾರತದಲ್ಲಿ ಶುರುವಾಯಿತು ಬಿಟ್ ಕಾಯಿನ್ ವ್ಯವಹಾರ..!

Written By: Lekhaka

ಬಿಟ್ ಕಾಯಿನ್ ಗ್ಲೊಬಲ್ ಮಾರುಕಟ್ಟೆಯಲ್ಲಿ ಬಳಕೆಯಾಗುತ್ತಿದ್ದು, ಇದೇ ಕಾರಣದಿಂದಾಗಿ ಭಾರತದಲ್ಲಿ ಈ ಕುರಿತಂತೆ ಸಾಕಷ್ಟು ಚರ್ಚೆಗಳು ಶುರುವಾಗಿದೆ. ಅದರಲ್ಲೂ ಯುವ ಸಮುಹವು ಹೆಚ್ಚಿನ ಪ್ರಮಾಣದಲ್ಲಿ ಬಿಟ್ ಕಾಯಿನ್ ಮೇಲೆ ಹೂಡಿಕೆಯನ್ನು ಮಾಡಲು ಮುಂದಾಗಿದೆ. ಇದಲ್ಲದೇ ಈ ಬಿಟ್ ಕಾಯಿನ್ ಎಂಬ ವರ್ಚುವಲ್ ಕೆರೆಸ್ಸಿ ಹೆಚ್ಚಿನ ಜನರನ್ನು ಸೆಳೆಯುತ್ತಿದ್ದು, ಇದಕ್ಕಾಯೇ ಹೊಸ ಆಪ್ ವೊಂದನ್ನು ಲಾಂಚ್ ಮಾಡಿದೆ.

ಭಾರತದಲ್ಲಿ ಶುರುವಾಯಿತು ಬಿಟ್ ಕಾಯಿನ್ ವ್ಯವಹಾರ..!

ದುಬೈ ಮೂಲಕ ಕ್ರಿಪ್ಟೋ ಕರೆಸ್ಸಿ ಡಿಲರ್ ಪ್ಲೋಟೊ ಎಕ್ಸ್ ಚೇಂಜ್ ಭಾರತದಲ್ಲಿ ಬಿಟ್ ಕಾಯಿನ್ ಟ್ರೆಂಡಿಗ್ ಗಾಗಿ ಆಪ್ ವೊಂದನ್ನು ಲಾಂಚ್ ಮಾಡಿದೆ ಎನ್ನಲಾಗಿದೆ. ಇದು ಭಾರತದ ಪ್ರಥಮ ಬಿಟ್ ಕಾಯಿನ್ ಟ್ರೆಡಿಂಗ್ ಆಪ್ ಆಗಿರಲಿದೆ. ಇದು ಬಿಟ್ ಕಾಯಿನ್ ವ್ಯಾಲೆಟ್ ಮಾದರಿಯಲ್ಲಿ ಕಾರ್ಯನಿರ್ಹಿಸಲಿದೆ ಎನ್ನಲಾಗಿದೆ.

ಭಾರತದಲ್ಲಿ ಶುರುವಾಯಿತು ಬಿಟ್ ಕಾಯಿನ್ ವ್ಯವಹಾರ..!

ಈ ಆಪ್ ಆಂಡ್ರಾಯ್ಡ್ ಮತ್ತು ಐಒಎಸ್ ಗಳಲ್ಲಿ ಕಾರ್ಯನಿರ್ವಹಿಸಲಿದ್ದು, ಇದು ಪೇಮೆಂಟ್ ಪ್ರೋಸೆಸ್ ಮತ್ತು ಬ್ಯಾಂಕ್ ಗಳ ನಡುವೆ ಕಾರ್ಯನಿರ್ವಹಿಸಲಿದೆ. ಈ ಆಪ್ ಬಿಟ್ ಕಾಯಿನ್ ಆಡ್ರಸ್ ಮೂಲಕ ವರ್ಗಾವಣೆಯನ್ನು ಮಾಡಲಿದೆ ಎನ್ನಲಾಗಿದೆ. ಇದಕ್ಕಾಗಿ 10 ಅಂಕಿಗಳ ಮೊಬೈಲ್ ನಂಬರ್ ಅನ್ನು ಬಳಕೆ ಮಾಡಿಕೊಳ್ಳಲಿದೆ.

ಇದಲ್ಲದೇ ಯುಪಿಎ ಆಪ್ ಮಾದರಿಯಲ್ಲಿ 4 ಅಂಕೆಗಳ ಪಿನ್ ಕೋಡ್ ವೊಂದನ್ನು ಬಳಕೆದಾರರಿಗೆ ನೀಡಲಿದೆ. ಇದು ಬಿಟ್ ಕಾಯಿನ್ ಗಳನ್ನು ಸ್ಟೋರ್ ಮಾಡಲು ಮತ್ತು ಖರ್ಚು ಮಾಡಲು ಬಳಕೆಗೆ ಬರಲಿದೆ ಎನ್ನಲಾಗಿದೆ. ಇದು ಬಿಟ್ ಕಾಯಿನ್ ಬಳಕೆದಾರರಿಗೆ ವಿವಿಧ ಮಾದರಿಯಲ್ಲಿ ಸಹಾಯಕ್ಕೆ ಬರಲಿದೆ ಎನ್ನಲಾಗಿದೆ.

ಸದ್ಯ ಭಾರತದಲ್ಲಿ ಒಂದು ಬಿಟ್ ಕಾಯಿನ್ ಮೊತ್ತ 10 ಲಕ್ಷ ರೂಗಳಾಗಿದೆ. ಆದರೆ ಬಿಟ್ ಕಾಯಿನ್ ಮೇಲೆ ಹೂಡಿಕೆ ಮಾಡುವ ಮುನ್ನ ಅದರ ಬಗ್ಗೆ ಸಂಫೂರ್ಣ ಜ್ಞಾನವನ್ನು ಹೊಂದುವುದು ತೀರಾ ಅಗತ್ಯವಾಗಿದೆ. ಇದರಲ್ಲಿ ಯಾಮಾರಿದರೆ ಹಣವನ್ನು ಭಾರೀ ಪ್ರಮಾಣದಲ್ಲಿ ಕಳೆದುಕೊಳ್ಳಬೇಕಾಗುತ್ತದೆ.

ವೈರಲ್‌ ವಿಡಿಯೋ..! ಆಪಲ್‌ಗೆ ತಿಳಿಯದ ಐಫೋನ್‌ X ನಲ್ಲಿ ಜಪಾನಿ ರೆಕಾರ್ಡ್‌ ಮಾಡಿದ್ದೇನು..?

English summary
Pluto Exchange is India’s first Bitcoin trading app-based wallet to enable mobile transactions. The app-based wallet enables bitcoin transactions using a mobile number which makes it quite handy for smartphone users
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot