ಪ್ಲೂಟೊಗೆ ಮತ್ತೆ ‘ಗ್ರಹ’ ಎಂಬ ಗೌರವ ನೀಡಲು ವಿಜ್ಞಾನಿಗಳ ಒತ್ತಾಯ!..ಏಕೆ ಗೊತ್ತಾ?

|

2006ರಲ್ಲಿ ಅಂತರರಾಷ್ಟ್ರೀಯ ಖಗೋಳವಿಜ್ಞಾನ ಒಕ್ಕೂಟ (ಐಎಯು) 2006ರಲ್ಲಿ ನಿರ್ಧರಿಸಿದಂತೆ ಗ್ರಹಗಳ ಪಟ್ಟಿಯಿಂದ ಹೊರಬಿದ್ದಿದ್ದ ಪ್ಲೂಟೊಗೆ ಮತ್ತೆ 'ಗ್ರಹ' ಎಂಬ ಗೌರವ ನೀಡಬೇಕು' ಎಂದು ವಿಜ್ಞಾನಿಗಳು ಒತ್ತಾಯಿಸಿದ್ದಾರೆ. ಕೆಲ ತಪ್ಪು ವಿಶ್ಲೇಷಣೆಯ ಪರಿಣಾಮದಿಂದಾಗಿ ಪ್ಲೂಟೊವು ಗ್ರಹದ ಸ್ಥಾನಮಾನ ಕಳೆದುಕೊಂಡಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಪ್ಲೂಟೋ ಗ್ರಹವೆಂಬುವುದರಲ್ಲಿ ಅನುಮಾನವೇ ಇಲ್ಲ. ಪ್ಲೂಟೊ ಒಂದು ಕುತೂಹಲಕರ ಗ್ರಹವಾಗಿದ್ದು, ನಮ್ಮ ಭೂಮಿಯಲ್ಲಿ ಮಾತ್ರ ನೀರಿದೆ ಎಂಬುದು ಸಹ ಸುಳ್ಳಾಗಿದೆ. ಇತ್ತೀಚಿನ ವರದಿಗಳ ಪ್ರಕಾರ, ಪ್ಲೂಟೋದಲ್ಲಿಯೂ ನೀರಿರುವ ಸಂಗತಿ ತಿಳಿದುಬಂದಿದೆ. ಹಾಗಾಗಿ, ಪ್ಲೂಟೊವನ್ನು ಮತ್ತೆ ಗ್ರಹಗಳ ಪಟ್ಟಿಗೆ ಸೇರಿಸಿ, ಗ್ರಹದ ಸ್ಥಾನಮಾನ ನೀಡಬೇಕು ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಪ್ಲೂಟೊಗೆ ಮತ್ತೆ ‘ಗ್ರಹ’ ಎಂಬ ಗೌರವ ನೀಡಲು ವಿಜ್ಞಾನಿಗಳ ಒತ್ತಾಯ!..ಏಕೆ ಗೊತ್ತಾ?

ಕಾರಣಗಳಿಂದ ಕ್ರಿ.ಶ.2006ರಲ್ಲಿ ಸೌರವ್ಯೂಹದಿಂದ ಹೊರಹೋಗಿದ್ದ ಪ್ಲೂಟೋ ಮತ್ತೆ ನಮ್ಮ ಸೌರವ್ಯೂಹದ ಅತ್ಯಂತ ಕೊನೆಯ ಗ್ರಹ ಎಂಬ ಪಡೆಯುವ ಸಾಧ್ಯತೆಗಳು ಇದೀಗ ಹೆಚ್ಚಾಗಿವೆ. ಹಾಗಾದರೆ, 2006ರಲ್ಲಿ ಖಗೋಳ ವಿಜ್ಞಾನ ಒಕ್ಕೂಟ ಪ್ಲೂಟೊವನ್ನು ಗ್ರಹಗಳ ಪಟ್ಟಿಯಿಂದ ತೆಗೆದದ್ದು ಏಕೆ? ಇತ್ತೀಚಿನ ಸಂಶೋಧನೆಗಳು ಯಾವುವು ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಗ್ರಹಗಳ ಪಟ್ಟಿಯಿಂದ ತೆಗೆದದ್ದು ಏಕೆ?

ಗ್ರಹಗಳ ಪಟ್ಟಿಯಿಂದ ತೆಗೆದದ್ದು ಏಕೆ?

2006ರಲ್ಲಿ ಅಂತರರಾಷ್ಟ್ರೀಯ ಖಗೋಳವಿಜ್ಞಾನ ಒಕ್ಕೂಟವೂ ಪ್ಲೂಟೊವನ್ನು ಗ್ರಹಗಳ ಪಟ್ಟಿಯಿಂದ ತೆಗೆದಿತ್ತು.ನಕ್ಷತ್ರವೊಂದನ್ನು ಗ್ರಹವೆಂದು ಪರಿಗಣಿಸಲು ಅದು ಸ್ಪಷ್ಟವಾಗಿ ಒಂದು ಸುತ್ತು ಪರಿಭ್ರಮಿಸಬೇಕು ಮತ್ತು ತನ್ನ ಪರಿಧಿಯೊಳಗೆ ದೊಡ್ಡ ಗುರುತ್ವಾಕರ್ಷಣ ಬಲ ಹೊಂದಿರಬೇಕು. ಪ್ಲೂಟೊ ಈ ಲಕ್ಷಣ ಹೊಂದಿಲ್ಲ ಎಂದು ಐಎಯು ಹೇಳಿತ್ತು.

ಪ್ಲೂಟೊ ಒಂದು ಗ್ರಹ

ಪ್ಲೂಟೊ ಒಂದು ಗ್ರಹ

ಕ್ರಿ.ಶ.2006ರಲ್ಲಿ ಸೌರವ್ಯೂಹದಿಂದ ಹೊರಹೋಗಿದ್ದ ಪ್ಲೂಟೋ ಮತ್ತೆ ನಮ್ಮ ಸೌರವ್ಯೂಹದ ಅತ್ಯಂತ ಕೊನೆಯ ಗ್ರಹ ಎಂಬ ಪಡೆಯುವ ಸಾಧ್ಯತೆಗಳು ಹೆಚ್ಚಾಗಿವೆ. ಇತ್ತೀಚಿಗೆ ಪ್ಲೂಟೋ ಸಮೀಪ ಹಾದುಹೋಗುತ್ತಿದ್ದ 'ನ್ಯೂ ಹೊರೈಜನ್' ಎಂಬ ನೌಕೆ ಅದರ ಎಲ್ಲಾ ರೀತಿಯ ವಿವರಗಳನ್ನು ನೀಡುವುದರ ಮೂಲಕ ಅದು ಗ್ರಹವೆಂಬ ನಿರ್ಧಾರಕ್ಕೆ ಬರಲಾಗಿದೆ.

ಅನುಮಾನವೇ ಇಲ್ಲ

ಅನುಮಾನವೇ ಇಲ್ಲ

ನಾಸಾ ವಿಜ್ಞಾನಿಗಳ ಪ್ರಕಾರ ಪ್ಲೂಟೋ ಗ್ರಹವೆಂಬುವುದರಲ್ಲಿ ಅನುಮಾನವೇ ಇಲ್ಲ ಎಂಬ ಸೂಚನೆ ಸಿಕ್ಕಿದ್ದೇ ತಡ,ಪ್ಲೂಟೋವನ್ನು ಸೌರವ್ಯೂಹದ ಒಳಕ್ಕೆ ಸೇರಿಸಿಕೊಳ್ಳಲು ಒತ್ತಡ ಹೆಚ್ಚಾಗುತ್ತಿದೆ. ಜಾನ್ಸ್ ಹಾಫಕಿನ್ಸ್ ವಿಶ್ವವಿದ್ಯಾಲಯದ ಖಗೋಳ ವಿಜ್ಞಾನಿಗಳುಸೇರಿದಂತೆ ಪ್ಲೂಟೋ ಗ್ರಹವೆಂಬ ಅಪಾರ ಅಭಿಮಾನವಿಟ್ಟುಕೊಂಡಿದ್ದ ಅಭಿಮಾನಿಗಳಿಗೆ ಇದೀಗ ತುಂಬಾ ಸಂತೋಷವಾಗಿದೆ.

ಪ್ಲೂಟೋದಲ್ಲಿಯೂ ನೀರು

ಪ್ಲೂಟೋದಲ್ಲಿಯೂ ನೀರು

ನಮ್ಮ ಭೂಮಿಯಲ್ಲಿ ಮಾತ್ರ ನೀರಿದೆ ಎಂಬುದು ಸಹ ಸುಳ್ಳಾಗಿದೆ. ಇತ್ತೀಚಿನ ವರದಿಗಳ ಪ್ರಕಾರ, ಪ್ಲೂಟೋದಲ್ಲಿಯೂ ನೀರಿರುವ ಸಂಗತಿ ತಿಳಿದಿದೆ. ಭೂಮಿಯಿಂದ ಸುಮಾರು 575 ಕೋಟಿ ಕಿ.ಮೀ.ದೂರವಿರುವ ಅತ್ಯಂತ ಪುಟ್ಟ ಗ್ರಹ ಪ್ಲೂಟೋದಲ್ಲಿ ಭೂಮಿಯಲ್ಲಿರುವ ಎಲ್ಲಾ ಸಮುದ್ರಗಳ ನೀರಿಗಿಂತ ಸಾಕಷ್ಟು ಪಟ್ಟು ಹೆಚ್ಚಿದೆ ಎಂದು ತಿಳಿದುಬಂದಿದೆ.

ಮಂಜುಗಡ್ಡೆಯಿಂದ ಆವೃತವಾಗಿದೆ.

ಮಂಜುಗಡ್ಡೆಯಿಂದ ಆವೃತವಾಗಿದೆ.

ಪ್ಲೂಟೋ ಗ್ರಹದ ಭ್ರಮಣೆಯ ಅವಧಿ 6 ದಿನಗಳಾಗಿದ್ದು, ಪರಿಭ್ರಮಣೆಯ ಅವಧಿ ಸುಮಾರು 250 ವರ್ಷಗಳಾಗಿವೆ. ಕೇಂದ್ರದಲ್ಲಿ ಗಟ್ಟಿಯಾದ ಶಿಲೆಯಿಂದ ಸುತ್ತ ಹೆಪ್ಪುಗಟ್ಟಿದ ನೀರಿನ ಮಂಜುಗಡ್ಡೆಯಿಂದ ಆವೃತವಾಗಿದೆ. ಇದಕ್ಕೆ ಚಾರನ್ ಎಂಬ ಪುಟ್ಟ ಚಂದ್ರನಿದ್ದು ಇವೆರಡೂ ಜೋಡಿ ಆಕಾಶಕಾಯಗಳ ಹಾಗೇ ಕಂಡುಬರುತ್ತವೆ.

Best Mobiles in India

English summary
Should Pluto be reclassified a planet again? UCF scientist Philip Metzger says yes based on his research.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X