ಆಗಸ್ಟ್ 21 ರಿಂದ ಅಂಚೆ ಪೇಮೆಂಟ್ ಬ್ಯಾಂಕ್' ಆರಂಭ!..ಖಾತೆ ತೆರೆಯಲು 5 ಕಾರಣಗಳು!!
ಆಗಸ್ಟ್ 21ರಂದು ಭಾರತೀಯ ಅಂಚೆಯ ಪಾವತಿ ಬ್ಯಾಂಕ್ ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಲಿದ್ದಾರೆ. 'ಐಪಿಪಿಬಿ (ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್- ಐಪಿಪಿಬಿ) ಸೇವೆಗಳನ್ನು ಉದ್ಘಾಟಿಸಲು ಪ್ರಧಾನಿ ಒಪ್ಪಿಕೊಂಡಿರುವ ಬಗ್ಗೆ ಸಂಪರ್ಕ ಸಚಿವಾಲಯದ ಮಾಹಿತಿ ಮೂಲಗಳು ತಿಳಿಸಿರುವುದಾಗಿ ಪ್ರಮುಖ ಪತ್ರಿಕೆಗಳು ವರದಿ ಮಾಡಿವೆ.
ಇನ್ನು ಹೆಚ್ಚು ಕಾಯಬೇಕಿಲ್ಲ. ಪ್ರತಿಯೊಂದು ಜಿಲ್ಲೆಯಲ್ಲಿ ಕನಿಷ್ಠ ಒಂದು ಶಾಖೆ ಇರಲಿದೆ. ಉಳಿತಾಯ ಖಾತೆಯಲ್ಲಿನ ಹಣವನ್ನು ನೇರವಾಗಿ ಮನೆ ಬಾಗಿಲಿಗೆ ತಂದುಕೊಡುವ ಹಾಗೂ ಮನೆ ಬಾಗಿಲಿಗೆ ಬಂದು ಹಣ ಪಡೆದು ಅದನ್ನು ಖಾತೆಗೆ ಜಮಾ ಮಾಡುವ ಅಂಚೆ ಪಾವತಿ ಬ್ಯಾಂಕ್ ಸೇವೆ ಶೀಘ್ರದಲ್ಲಿಯೇ ಆರಂಭವಾಗಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದೇಶದ ಎಲ್ಲಾ 1.55 ಲಕ್ಷ ಅಂಚೆ ಕಚೇರಿಗಳು, 650 ಪೇಮೆಂಟ್ಸ್ ಬ್ಯಾಂಕ್ ಶಾಖೆಗಳು ಪೇಮೆಂಟ್ಸ್ ಬ್ಯಾಂಕ್ ಸೇವೆಯನ್ನು ಒದಗಿಸಲಿವೆ. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಮನೆಬಾಗಲಿಗೆ ಡಿಜಿಟಲ್ ಪಾವತಿ ಸೇವೆ ಲಭ್ಯವಾಗಲಿದೆ. ಹಾಗಾದರೆ, 'ಐಪಿಪಿಬಿ' ಪೇಮೆಂಟ್ಸ್ ಬ್ಯಾಂಕ್ ಬಳಕೆ ಹೇಗೆ? ಗ್ರಾಹಕರಿಗೆ ಏನೆಲ್ಲಾ ಲಾಭ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಐಪಿಪಿಬಿ ಪೇಮೆಂಟ್ಸ್ ಬ್ಯಾಂಕ್!
ಗ್ರಾಹಕರು ಡೆಪಾಸಿಟ್ ಮಾಡಿದ ಹಣಕ್ಕೆ ಬಡ್ಡಿಹಣವನ್ನು ನಿಡುವ ಪೇಮೆಂಟ್ ಬ್ಯಾಂಕ್ ಆನ್‌ಲೈನ್ ಸೇವೆಗಳನ್ನು ನಿಡುತ್ತದೆ. ಆರ್‌ಬಿಐ ಅನುಮೋದತ ಕೆಲವೇ ಸಂಸ್ಥೆಗಳಲ್ಲಿ ಅಂಚೆ ಇಲಾಖೆಯ ಪೇಮೆಂಟ್ಸ್ ಬ್ಯಾಂಕ್ ಕೂಡ ಒಂದಾಗಿದ್ದು, ಜನರಿಂದ ಹಣವನ್ನು ಸ್ವೀಕರಿಸಬಹುದಾದ ಮತ್ತು ಬಡ್ಡಿಯನ್ನು ನಿಡಬೇಕಾದ ವ್ಯವಹಾರ ಇದಾಗಿದೆ.

1 ಲಕ್ಷ ಡೆಪಾಸಿಟ್!
ಯಾವುದೇ ಪೇಮೆಂಟ್ ಬ್ಯಾಂಕ್‌ಗಳಲ್ಲಿ 1 ಲ್ಕಷ ರೂಪಾಯಿಗಳ ವರೆಗೂ ಗ್ರಾಹಕರು ಹಣವನ್ನು ಡೆಪಾಸಿಟ್ ಮಾಡಿಡಬಹುದಾಗಿದೆ. ಗ್ರಾಹಕರು ಡೆಪಾಸಿಟ್ ಮಾಡಿದ ಹಣವನ್ನು ಯಾವಾಗಲಾದರೂ ವಾಪಸ್ ತೆಗೆದುಕೊಳ್ಳುವ ಅವಕಾಶವಿರುತ್ತದೆ ಇದಕ್ಕಾಗಿ ಎಟಿಎಂ ನೀಡಲಾಗುತ್ತದೆ. ಆದರೆ, ಠೇವಣಿ ಹಣದ ಆಧಾರದ ಮೇಲೆ ಸಾಲ ಪಡೆಯಲು ಇಲ್ಲ ಸಾಧ್ಯವಾಗುವುದಿಲ್ಲ.

ಮನೆಮನೆಗೆ ಡಿಜಿಟಲ್ ಪಾವತಿ!
ದೇಶದ ಎಲ್ಲಾ 1.55 ಲಕ್ಷ ಅಂಚೆ ಕಚೇರಿಗಳು, 650 ಪೇಮೆಂಟ್ಸ್ ಬ್ಯಾಂಕ್ ಶಾಖೆಗಳು ತೆರೆಯುತ್ತವೆ. ಇಷ್ಟಲ್ಲದೆ, ಪೋಸ್ಟ್‌ಮನ್ ಮತ್ತು ಗ್ರಾಮೀಣ ಅಂಚೆ ಸೇವಕರಿಗೆ ಪೇಮೆಂಟ್ಸ್ ಸೇವೆ ಒದಗಿಸುವ ಸಾಧನ ನೀಡಲಿದ್ದು, ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಮನೆಬಾಗಲಿಗೆ ಡಿಜಿಟಲ್ ಪಾವತಿ ಸೇವೆ ಲಭ್ಯವಾಗಲಿದೆ.

17 ಕೋಟಿ ಉಳಿತಾಯ ಖಾತೆಗಳಿಗೆ ಲಾಭ!
ಈಗಾಗಲೇ ಅಂಚೆ ಕಚೇರಿಯಲ್ಲಿ ಇರುವ 17 ಕೋಟಿ ಉಳಿತಾಯ ಖಾತೆಗಳಿಗೆ ಪೇಮೆಂಟ್ಸ್ ಬ್ಯಾಂಕ್ ವ್ಯವಸ್ಥೆಯ ಲಾಭ ಸಿಗಲಿದೆ. ಎನ್‌ಇಎಫ್‌ಟಿ, ಆರ್‌ಟಿಜಿಎಸ್, ಯುಪಿಐ ಮತ್ತು ಬಿಲ್ ಪಾವತಿ ಸೇವೆಗಳು ಈ ಎಲ್ಲಾ ಖಾತೆ ಬಳಕೆದಾರರಿಗೆ ಲಭ್ಯವಾಗಲಿದ್ದು, ಎಲ್ಲರೂ ಡಿಜಿಟಲ್ ಪ್ರಪಂಚಕ್ಕೆ ಕಾಲಿಡಲಿದ್ದಾರೆ.

ನಿಮ್ಮ ಹಣಕ್ಕೆ ಬಡ್ಡಿ ಎಷ್ಟು?
ಗ್ರಾಹಕರು ಉಳಿತಾಯ ಮಾಡುವ ಹಣಕ್ಕೆ ಏರ್‌ಟೆಲ್ ಪೇಮೆಂಟ್ ಬ್ಯಾಂಕ್ ಶೇ. 7.3 ರಷ್ಟು ಬಡ್ಡಿಯನ್ನು ನೀಡುತ್ತಿದ್ದರೆ, ಪೇಟಿಎಂ ಶೇ. 4ರಷ್ಟು ಬಡ್ಡಿ ನಿಗದಿಪಡಿಸಿದೆ. ಆದರೆ, ಸರ್ಕಾರಿ ಅಂಚೆ ಪೇಮೆಂಟ್ ಬ್ಯಾಂಕ್ ಶೇ. 5.5 ರಷ್ಟು ವಾರ್ಷಿಕ ಬಡ್ಡಿದರ ನಿಗದಿ ಪಡಿಸಿದೆ.


Click it and Unblock the Notifications








