ಪ್ರಧಾನಿ ಮೋದಿಯವರಿಂದ ನೂತನ 'ಸರ್ಕಾರಿ ಆಪ್' ಬಿಡುಗಡೆ!.ಎಲ್ಲರೂ ಡೌನ್‌ಲೋಡ್ ಮಾಡಲೇಬೇಕು!!
ಭಾರತದಲ್ಲಿ ಮೊಬೈಲ್ ಆಡಳಿತ ಹಾಗೂ ಡಿಜಿಟಲ್ ಇಂಡಿಯಾ ಕಾರ್ಯಕ್ರಮ ಪ್ರಚುರ ಪಡಿಸುವ ಉದ್ದೇಶದೊಂದಿಗೆ ‘ಉಮಂಗ್’ ಎಂಬ ಆಪ್ ಅನ್ನು ಪ್ರಧಾನಿ ಮೋದಿ ಅವರು ಇಂದು ಬಿಡುಗಡೆ ಮಾಡಿದ್ದಾರೆ.!
ಭಾರತದಲ್ಲಿ ಮೊಬೈಲ್ ಆಡಳಿತ ಹಾಗೂ ಡಿಜಿಟಲ್ ಇಂಡಿಯಾ ಕಾರ್ಯಕ್ರಮ ಪ್ರಚುರ ಪಡಿಸುವ ಉದ್ದೇಶದೊಂದಿಗೆ 'ಉಮಂಗ್' ಎಂಬ ಆಪ್ ಅನ್ನು ಪ್ರಧಾನಿ ಮೋದಿ ಅವರು ಇಂದು ಬಿಡುಗಡೆ ಮಾಡಿದ್ದಾರೆ.! ಸೈಬರ್ ಸ್ಪೇಸ್ ಜಾಗತಿಕ ಸಮಾವೇಶದಲ್ಲಿ ಸರ್ಕಾರದ ನೂತನ ಆಪ್ ಬಿಡುಗಡೆಯಾಗಿದೆ.!!
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸೇವೆಗಳನ್ನು ಉಮಂಗ್ ಒಂದೇ ಆಪ್‌ನಲ್ಲಿ ಪಡೆಯಬಹುದಾಗಿದ್ದು, ತಂತ್ರಜ್ಞಾನದ ಮೂಲಕ ಜನರಿಗೆ ತಲುಪಿಸುವ ಸೇವೆಗಳನ್ನು ಉತ್ತಮಗೊಳಿಸುವಲ್ಲಿ ಡಿಜಿಟಲ್ ಇಂಡಿಯಾ ಜಗತ್ತಿನಲ್ಲೇ ಅತಿ ದೊಡ್ಡ ಯೋಜನೆ ಎಂದು ಮೋದಿ ಅವರು ಹೇಳೀದ್ದಾರೆ.!!

ಹಾಗಾದರೆ, ಪ್ರಧಾನಿ ಮೋದಿ ಅವರು ಇಂದು ಬಿಡುಗಡೆ ಮಾಡಿರುವ ಆಪ್ ಉಮಂಗ್ ಎಂದರೆ ಏನು? ಉಮಂಗ್ ಆಪ್‌ನಿಂದ ಜನರಿಗೆ ಏನೆಲ್ಲಾ ಸೇವೆಗಳು ದೊರೆಯಲಿವೆ? ಮತ್ತು ಉಮಂಗ್ ಆಪ್ ಯಾವಾಗ ಬಳಕೆ ಮಾಡುವುದು ಹೇಗೆ ಎಂಬ ಮಾಹಿತಿಗಳನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಏನಿದು ಉಮಂಗ್ ಆಪ್!!
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಹಾಗೂ ರಾಷ್ಟ್ರೀಯ ಇ-ಆಡಳಿತ ವಿಭಾಗ 'ಉಮಂಗ್' (UMANG -Unified Mobile Application for New-age Governance) ಆಪ್ ಅನ್ನು ಬಿಡುಗಡೆ ಮಾಡಿವೆ. ಮೊಬೈಲ್ ಆಡಳಿತ ಹಾಗೂ ಡಿಜಿಟಲ್ ಇಂಡಿಯಾದ ಮುಖ್ಯ ಆಪ್‌ಗಳಲ್ಲಿ ಒಂದಾಗಿರಲಿದೆ.!!

ಆಪ್‌ನಲ್ಲಿ 100ಕ್ಕೂ ಹೆಚ್ಚು ಸೇವೆ!!
ಹೊಸದಾಗಿ ಬಿಡುಗಡೆಯಾಗಿರುವ ಉಮಂಗ್' ಆಪ್‌ನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ 100ಕ್ಕೂ ಹೆಚ್ಚು ಸೇವೆಗಳನ್ನು ಪಡೆಯಬಹುದು ಎಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಹೇಳಿದೆ. ಆನ್‌ಲೈನ್ ಮಹತ್ತರ ಕಾರ್ಯಗಳಲಿಗೆ ಈ ಆಪ್ ಉಪಯೋಗವಾಗಲಿದೆ.!!

ಪ್ರಮುಖ ಇ-ಸೇವೆಗಳು!!
ಡಿಜಿ ಲಾಕರ್, ಆದಾಯ ತೆರಿಗೆ ಸಲ್ಲಿಕೆ, ಬಿಲ್ ಪಾವತಿ, ಗ್ಯಾಸ್ ಸಿಲಿಂಡರ್ ಬುಕ್ಕಿಂಗ್, ಪಿಎಫ್ ಮಾಹಿತಿ ಹಾಗೂ ಆಧಾರ್ ಸಂಪರ್ಕಿತ ಸೇವೆಗಳು ಸೇರಿ ಸರ್ಕಾರದ ಬಹುತೇಕ ಎಲ್ಲ ಇ-ಸೇವೆಗಳನ್ನು 'ಉಮಂಗ್' ಒಂದೇ ಆಪ್‌ನಲ್ಲಿ ನೀಡಲಾಗಿದೆ. ಹಾಗಾಗಿ, ಸರ್ಕಾರಿ ಕಾರ್ಯಗಳೆಲ್ಲಾ ಇನ್ನು ಒಂದೇ ಆಪ್‌ನಲ್ಲಿ ಎನ್ನಬಹುದು.!!

ಗ್ರಾಹಕ ಸೇವೆ ಸಹ ಸಿಗಲಿದೆ!!
'ಉಮಂಗ್' ಒಂದೇ ಆಪ್‌ನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ 100ಕ್ಕೂ ಹೆಚ್ಚು ಸೇವೆಗಳನ್ನು ಪಡೆಯಬಹುದಾಗಿದ್ದು, ಜತೆಗೆ ಬೆಳಿಗ್ಗೆ 8ರಿಂದ ರಾತ್ರಿ 8ರ ವರೆಗೂ ಗ್ರಾಹಕರ ಅನುಮಾನಗಳನ್ನು ಬಗೆಹರಿಸಲು ಸಹ ಸಹಾಯ ಸಿಗಲಿದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ತಿಳಿಸಿದೆ.!!

ಲಾಗಿನ್ ಆಗುವುದು ಹೇಗೆ?
ಪ್ಲೇ ಸ್ಟೋರ್ ಮೂಲಕ 'ಉಮಂಗ್' ಆಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದ್ದು, ಆಂಡ್ರಾಯ್ಡ್, ಐಒಎಸ್ ಮತ್ತು ವಿಂಡೋಸ್ ಮಾದರಿಗೆ ಈ ಆಪ್ ಲಭ್ಯವಿದೆ. ಇನ್‌ಸ್ಟಾಲ್ ಮಾಡಿದ ನಂತರ ಮೊಬೈಲ್ ಸಂಖ್ಯೆ ಮತ್ತು ಪಿನ್ ನೀಡಿ ಅಥವಾ ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ ಲಾಗಿನ್ ಆಗಬಹುದು.!!


Click it and Unblock the Notifications








