ಡಿಜಿಟಲ್‌ ಇಂಡಿಯಾಗಾಗಿ ನಾಲ್ಕು ಹೊಸ ಯೋಜನೆಗಳನ್ನು ಪರಿಚಯಿಸಿದ ಪ್ರಧಾನಿ ಮೋದಿ!

|

ಕಳೆದ ಕೆಲವು ವರ್ಷಗಳಿಂದ ಕೇಂದ್ರ ಸರ್ಕಾರ ಡಿಜಿಟಲ್‌ ಇಂಡಿಯಾಗೆ ಹೆಚ್ಚಿನ ಒತ್ತನ್ನು ನೀಡುತ್ತಿದೆ. ಇದೇ ಕಾರಣಕ್ಕೆ ಹಲವು ವಲಯಗಳನ್ನು ಡಿಜಿಟಲೀಕರಣ ಮಾಡಲಾಗಿದೆ. ಇದಲ್ಲದೆ ಡಿಜಿಟಲೀಕರಣಕ್ಕೆ ಸಂಬಂಧಪಟ್ಟ ಅನೇಕ ಡಿಜಿಟಲ್‌ ಪ್ಲಾನ್‌ಗಳನ್ನು ಪ್ರಾರಂಬಿಸಿದೆ. ಇದೀಗ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದಲ್ಲಿ ಡಿಜಿಟಲ್‌ ಇಂಡಿಯಾ ವೀಕ್‌ 2022 ಅನ್ನು ಉದ್ಘಾಟನೆ ಮಾಡಿದ್ದಾರೆ. ಈ ಮೂಲಕ ಭಾರತದಲ್ಲಿ ನಾಲ್ಕು ಹೊಸ ಡಿಜಿಟಲ್ ಪ್ಲಾನ್‌ಗಳನ್ನು ಪ್ರಾರಂಭಿಸಿದ್ದಾರೆ.

ಮೋದಿ

ಹೌದು, ಪ್ರಧಾನಿ ನರೇಂದ್ರ ಮೋದಿ ಡಿಜಿಟಲ್‌ ಇಂಡಿಯಾದ ಸಾಕಾರಕ್ಕಾಗಿ ನಾಲ್ಕು ಹೊಸ ಪ್ಲಾನ್‌ಗಳನ್ನು ಲಾಂಚ್‌ ಮಾಡಿದ್ದಾರೆ. ಇವುಗಳನ್ನು ಡಿಜಿಟಲ್ ಇಂಡಿಯಾ ಭಾಷಿನಿ, ಡಿಜಿಟಲ್ ಇಂಡಿಯಾ ಜೆನೆಸಿಸ್, ಇಂಡಿಯಾಸ್ಟಾಕ್‌.ಗ್ಲೋಬಲ್‌ ಮತ್ತು ಮೈಸ್ಕೀಮ್‌ ಎಂದು ಹೆಸರಿಸಲಾಗಿದೆ. ಈ ನಾಲ್ಕು ಯೋಜನೆಗಳು ಕೂಡ ವಿವಿಧ ರೀತಿಯಲ್ಲಿ ಕಾರ್ಯನಿರ್ವಹಿಸಲಿದ್ದು, ಡಿಜಿಟಲ್‌ ಇಂಡಿಯಾದ ಭಾಗವಾಗಿದೆ. ಇದರಿಂದ ಡಿಜಿಟಲ್‌ ಇಂಡಿಯಾವನ್ನು ವಿಸ್ತರಿಸುವುದಕ್ಕೆ ಅವಕಾಶ ಸಿಗಲಿದೆ ಎನ್ನಲಾಗಿದೆ.

ಪ್ರಧಾನಿ

ಪ್ರಧಾನಿ ನರೇಂದ್ರ ಮೋದಿ ಗುಜರಾತ್‌ನ ಗಾಂಧಿನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಪ್ಲಾನ್‌ಗಳನ್ನು ಪರಿಚಯಿಸಿದ್ದಾರೆ. ಡಿಜಿಟಲ್‌ ಇಂಡಿಯಾ ವೀಕ್‌ 2022 ಕಾರ್ಯಕ್ರಮವನ್ನು ಉದ್ಘಾಟಿಸಿದ ಮೋದಿ ಅವರು ಈ ಪ್ಲಾನ್‌ಗಳನ್ನು ಪರಿಚಯಿಸಿದ್ದಾರೆ. ಇದರಲ್ಲಿ ಡಿಜಿಟಲ್‌ ಇಂಡಿಯಾ ಭಾಷಿನಿ ಪ್ಲಾನ್‌ ಧ್ವನಿ ಆಧಾರಿತ ಪ್ರವೇಶವನ್ನು ನೀಡಲಿದೆ. ಅಲ್ಲದೆ ಭಾರತೀಯ ಭಾಷೆಗಳಲ್ಲಿ ಡಿಜಿಟಲ್‌ ಸೇವೆಗಳನ್ನು ಪಡೆಯಲು ಅವಕಾಶ ನೀಡಲಿದೆ. ಹಾಗೆಯೇ ಡಿಜಿಟಲ್ ಇಂಡಿಯಾ ಜೆನೆಸಿಸ್ ಹೊಸ ಸ್ಮಾರ್ಟ್‌ಆಪ್‌ಗಳಿಗೆ ಸಪೋರ್ಟ್‌ ಮಾಡಲಿದೆ. ಹಾಗಾದ್ರೆಬ ಮೋದಿ ಪರಿಚಯಿಸಿರುವ ಹೊಸ ಡಿಜಿಟಲ್‌ ಪ್ಲಾನ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಡಿಜಿಟಲ್ ಇಂಡಿಯಾ ಭಾಷಿಣಿ ಸ್ಕೀಮ್‌

ಡಿಜಿಟಲ್ ಇಂಡಿಯಾ ಭಾಷಿಣಿ ಸ್ಕೀಮ್‌

ದೇಶದ ಜನತೆಗಾಗಿ ಪ್ರಧಾನಿ ನರೇಂದ್ರ ಮೋದಿ ಡಿಜಿಟಲ್ ಇಂಡಿಯಾ ಭಾಷಿಣಿ ಸ್ಕೀಮ್‌ ಅನ್ನು ಪರಿಚಯಿಸಿದೆ. ಈ ಪ್ಲಾನ್‌ ನಿಮಗೆ ಧ್ವನಿ ಆಧಾರಿತ ಪ್ರವೇಶ ಸೇರಿದಂತೆ ಭಾರತೀಯ ಭಾಷೆಗಳಲ್ಲಿ ಇಂಟರ್ನೆಟ್ ಮತ್ತು ಡಿಜಿಟಲ್ ಸೇವೆಗಳಿಗೆ ಸುಲಭ ಪ್ರವೇಶವನ್ನು ನೀಡಲಿದೆ. ಜೊತೆಗೆ ಇದರಲ್ಲಿ ನೀವು ಭಾರತೀಯ ಭಾಷೆಗಳಲ್ಲಿ ಕಂಟೆಂಟ್‌ ಅನ್ನು ಕ್ರಿಯೆಟ್‌ ಮಾಡುವುದಕ್ಕೆ ಸಹಾಯ ಮಾಡಲಿದೆ. ಜೊತೆಗೆ, ಮಲ್ಟಿ ಲ್ಯಾಂಗ್ವೇಜ್‌ ಡೇಟಾಸೆಟ್‌ಗಳನ್ನು ಕ್ರಿಯೆಟ್‌ ಮಾಡುವ ಮೂಲಕ ಭಾರತೀಯ ಭಾಷೆಗಳಿಗೆ AI ಆಧಾರಿತ ಭಾಷಾ ಟೆಕ್ನಾಲಕಿ ಸಲ್ಯೂಶನ್‌ ನೀಡುವುದಕ್ಕಾಗಿ ಈ ಸ್ಕೀಮ್‌ ಗಮನಹರಿಸುತ್ತದೆ. ಡಿಜಿಟಲ್ ಇಂಡಿಯಾ ಭಾಷಿನಿ ಸ್ಕೀಮ್‌ ಭಾಷಾದಾನ ಎಂಬ ಕ್ರೌಡ್‌ಸೋರ್ಸಿಂಗ್ ಉಪಕ್ರಮದ ಮೂಲಕ ಈ ಡೇಟಾಸೆಟ್‌ಗಳನ್ನು ನಿರ್ಮಿಸಲು ಸಕ್ರಿಯಗೊಳಿಸುತ್ತದೆ ಎಂದು ಸರ್ಕಾರ ಹೇಳಿದೆ.

ಡಿಜಿಟಲ್ ಇಂಡಿಯಾ ಜೆನೆಸಿಸ್

ಡಿಜಿಟಲ್ ಇಂಡಿಯಾ ಜೆನೆಸಿಸ್

ಡಿಜಿಟಲ್ ಇಂಡಿಯಾ ಜೆನೆಸಿಸ್ ಯೋಜನೆ ಹೊಸದಾಗಿ ಪ್ರಾರಂಭಿಸುವ ಸ್ಟಾರ್ಟ್‌ಅಪ್‌ಗಳಿಗೆ ಸಹಾಯಕವಾಗಲಿದೆ. ಈ ಯೋಜನೆಯ ಮೂಲಕ ಭಾರತದ ಶ್ರೇಣಿ-II ಮತ್ತು ಶ್ರೇಣಿ-III ನಗರಗಳಲ್ಲಿ ಅನ್ವೇಷಿಸಲು, ಬೆಂಬಲಿಸಲು, ಬೆಳೆಯಲು ಮತ್ತು ಯಶಸ್ವಿ ಸ್ಟಾರ್ಟ್‌ಅಪ್‌ಗಳನ್ನು ಮಾಡುವ ಪ್ರಯತ್ನಕ್ಕಾಗಿ ಇದನ್ನು ಪರಿಚಯಿಸಲಾಗಿದೆ. ಇದನ್ನು ರಾಷ್ಟ್ರೀಯ ಡೀಪ್-ಟೆಕ್ ಸ್ಟಾರ್ಟ್‌ಅಪ್ ಪ್ಲಾಟ್‌ಫಾರ್ಮ್ ಅನ್ನು ರಚಿಸುವುದಕ್ಕೆ ಉದ್ದೇಶಿಸಲಾಗಿದೆ. ಇನ್ನು ಈ ಪ್ಲಾನ್‌ ಒಟ್ಟು 750ರೂ. ಕೋಟಿ ವೆಚ್ಚವನ್ನು ಹೊಂದಿದೆ ಎನ್ನಲಾಗಿದೆ.

ಇಂಡಿಯಾಸ್ಟಾಕ್‌.ಗ್ಲೋಬಲ್‌

ಇಂಡಿಯಾಸ್ಟಾಕ್‌.ಗ್ಲೋಬಲ್‌

ಇಂಡಿಯಾಸ್ಟಾಕ್‌.ಗ್ಲೋಬಲ್‌ ಪ್ಲಾನ್‌ ಹೆಸರೇ ಸೂಚಿಸುವಂತೆ ಭಾರತವನ್ನು ಜಾಗತಿಕ ಮಟ್ಟದಲ್ಲಿ ನಾಯಕನನ್ನಾಗಿ ಮಾಡುವ ಕ್ರಮವಾಗಿದೆ. ಈ ಪ್ಲಾನ್‌ ಮೂಲಕ ಭಾರತದಲ್ಲಿ ಡಿಜಿಟಲ್‌ ಇಂಡಿಯಾದ ಅಡಿಯಲ್ಲಿ ಜಾರಿಗೊಳಿಸಲಾದ ಎಲ್ಲಾ ಯೋಜನೆಗಳ ಮಾಹಿತಿಯನ್ನು ಹೊಂದಿರುತ್ತದೆ. ಅಂದರೆ ಆಧಾರ್, UPI, ಡಿಜಿಲಾಕರ್, ಕೋವಿನ್ ವ್ಯಾಕ್ಸಿನೇಷನ್ ಪ್ಲಾಟ್‌ಫಾರ್ಮ್, ಸರ್ಕಾರಿ ಇ-ಮಾರ್ಕೆಟ್‌ಪ್ಲೇಸ್ (GeM), DIKSHA ಪ್ಲಾಟ್‌ಫಾರ್ಮ್ ಮತ್ತು ಆಯುಷ್ಮಾನ್ ಭಾರತ್ ಡಿಜಿಟಲ್ ಹೆಲ್ತ್ ಮಿಷನ್‌ ಯೋಜನೆಗಳ ಜಾಗತಿಕ ಭಂಡಾರವಾಗಿದೆ. ಈ ಪ್ಮಾನ್‌ ಜಾಗತಿಕವಾಗಿ ಜನಸಂಖ್ಯೆಯ ಪ್ರಮಾಣದಲ್ಲಿ ಹೇಗೆ ಡಿಜಿಟಲ್ ಪರಿವರ್ತನೆ ಯೋಜನೆಗಳನ್ನು ನಿರ್ಮಿಸುವುದಕ್ಕೆ ಸಹಾಯ ಮಾಡಲಿದೆ ಎನ್ನಲಾಗಿದೆ. ಈ ತಂತ್ರಜ್ಞಾನ ಮೂಲಕ ಇಂತಹ ತಂತ್ರಜ್ಞಾನ ಪರಿಹಾರಗಳನ್ನು ಹುಡುಕುತ್ತಿರುವ ಇತರ ದೇಶಗಳಿಗೆ ಅಪಾರ ಸಹಾಯವನ್ನು ಮಾಡುವುದಕ್ಕೆ ಸಹಾಯ ಮಾಡಲಿದೆ.

ಮೈಸ್ಕೀಮ್

ಮೈಸ್ಕೀಮ್

ಮೈಸ್ಕೀಮ್‌ ಎನ್ನುವುದು ಸರ್ಕಾರಿ ಪ್ಲಾನ್‌ಗಲಿಗೆ ಪ್ರವೇಶವನ್ನು ನೀಡುಯವ ಹೊಸ ಸೇವಾ ಶೋಧನೆ ವೇದಿಕೆಯಾಗಿದೆ. ಈ ಪ್ಲಾನ್‌ ಒನ್‌ ಸ್ಟಾಪ್‌ ಸರ್ಚ್‌ ಮತ್ತು ಡಿಸ್ಕವರಿ ಪೋರ್ಟಲ್ ಅನ್ನು ಒದಗಿಸುವ ಗುರಿಯನ್ನು ಹೊಂದಿದೆ. ಇದರಲ್ಲಿ ಬಳಕೆದಾರರು ತಾವು ಯಾವ ಸ್ಕೀಮ್‌ಗಳಿಗೆ ಅರ್ಹರಾಗಿದ್ದೇವೆ ಅನ್ನೊದನ್ನ ಸರ್ಚ್‌ ಮಾಡಬಹುದಾಗಿದೆ. ಇದರೊಂದಿಗೆ ಪ್ರಧಾನಿ ಮೋದಿ ಮೇರಿ ಪೆಹಚಾನ್ ಪ್ಲಾನ್‌ ಅನ್ನು ಕೂಡ ಘೋ‍ಷಣೆ ಮಾಡಿದ್ದಾರೆ. ಈ ಪ್ಲಾನ್‌ ಮೂಲಕ ಮಲ್ಟಿ ಆನ್‌ಲೈನ್ ಅಪ್ಲಿಕೇಶನ್‌ಗಳು ಅಥವಾ ಸೇವೆಗಳಿಗೆ ಒಂದೇ ಸೆಟ್ ರುಜುವಾತುಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ.

C2S ಪ್ರೋಗ್ರಾಂ

C2S ಪ್ರೋಗ್ರಾಂ

ಮೋದಿ ಬಿಡುಗಡೆ ಮಾಡಿರುವ ನಾಲ್ಕು ಯೋಜನೆಗಳಲ್ಲಿ ಚಿಪ್ಸ್ ಟು ಸ್ಟಾರ್ಟ್ಅಪ್ (C2S) ಕೂಡ ಒಂದಾಗಿದೆ. C2S ಪ್ರೋಗ್ರಾಂ ಬೆಂಬಲಿತವಾಗಿರುವ 30 ಸಂಸ್ಥೆಗಳ ಮೊದಲ ಸಮೂಹವನ್ನು ಪ್ರಧಾನಿ ಮೋದಿ ಘೋಷಿಸಿದ್ದಾರೆ. ಇನ್ನು C2S ಪ್ರೋಗ್ರಾಂ ಪದವಿ, ಸ್ನಾತಕೋತ್ತರ ಮತ್ತು ಸಂಶೋಧನಾ ಹಂತಗಳಲ್ಲಿಯೇ ಸೆಮಿಕಂಡಕ್ಟರ್ ಚಿಪ್‌ಗಳ ವಿನ್ಯಾಸದ ಕ್ಷೇತ್ರದ ಬಗ್ಗೆ ತರಬೇತಿ ಮಾಡುವ ಗುರಿಯನ್ನು ಹೊಂದಿದೆ. ಅಲ್ಲದೆ ಭಾರತದಲ್ಲಿ ಅರೆವಾಹಕ ವಿನ್ಯಾಸದ ಕ್ಷೇತ್ರದಲ್ಲಿ ಕೆಲಸ ಮಾಡುವ ಸ್ಟಾರ್ಟ್‌ಅಪ್‌ಗಳ ಬೆಳವಣಿಗೆಯನ್ನು ಉತ್ತೇಜಿಸುವ ಗುರಿಯನ್ನು ಒಳಗೊಂಡಿದೆ.

ಮೋದಿ

ಪ್ರಧಾನಿ ನರೇಂದ್ರ ಮೋದಿ ಇಂದು ಉದ್ಘಾಟನೆ ಮಾಡಿರುವ ನಾಲ್ಕು ಯೋಜನೆಗಳು ಕೂಡ ಡಿಜಿಟಲ್‌ ಇಂಡಿಯಾದ ಉಪಕ್ರಮದ ಭಾಗವಾಗಿದೆ. ಡಿಜಿಟಲ್‌ ಇಂಡಿಯಾವನ್ನು ಇನ್ನಷ್ಟು ವಿಸ್ತರಿಸುವುದಕ್ಕೆ ಸಹಾಯ ಮಾಡಲಿದೆ. ಡಿಜಿಟಲ್‌ ಇಂಡಿಯಾವನ್ನು ಎಲ್ಲಾ ಯುವಜನತೆಗೆ ತಲುಪಿಸುವ ಗುರಿಯನ್ನು ಒಂದಿದೆ. ಅಲ್ಲದೆ ಎಲ್ಲಾ ರೀತಿಯ ಸೇವೆಗಳು ಒಂದೇ ಡಿಜಿಟಲ್‌ ವೇದಿಕೆಯಲ್ಲಿ ದೊರೆಯುವಂತೆ ಮಾಡುವ ಗುರಿಯನ್ನು ಹೊಂದಿದೆ.

ಡಿಜಿಟಲ್‌

ಇನ್ನು ಡಿಜಿಟಲ್‌ ಇಂಡಿಯಾ ವೀಕ್‌ 2022 ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಭಾರತ ಮುಂದಿನ ಮೂರು-ನಾಲ್ಕು ವರ್ಷಗಳಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪಾದನೆಯನ್ನು 300 ಶತಕೋಟಿ ಡಾಲರ್‌ಗಿಂತ ಹೆಚ್ಚಿನ ಮಟ್ಟಕ್ಕೆ ಕೊಂಡೊಯ್ಯುವ ಗುರಿ ಹೊಂದಿದೆ ಎಂದು ಹೇಳಿದರು. ಅಲ್ಲದೆ ಭಾರತವು ಚಿಪ್ ತೆಗೆದುಕೊಳ್ಳುವ ಸ್ಥಾನದಿಂದ ಚಿಪ್ ಅನ್ನು ತಯಾರಿಸಿ ಮಾರುವ ಮಾರುಕಟ್ಟೆಯಾಗಿ ಬದಲಾಗಲು ಬಯಸುತ್ತದೆ ಎಂದು ಹೇಳಿದ್ದಾರೆ.

Best Mobiles in India

English summary
Prime Minister Narendra Modi inaugurated Digital India Week 2022 in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X