ಇಂಡಿಯನ್‌ ಸ್ಪೇಸ್‌ ಅಸೋಸಿಯೇಷನ್‌ ಲಾಂಚ್‌ ಮಾಡಿದ ಪ್ರಧಾನಿ ಮೋದಿ!

|

ಪ್ರಧಾನಿ ನರೇಂದ್ರ ಮೋದಿ ಇಂದು ಇಂಡಿಯನ್‌ ಸ್ಪೇಸ್‌ ಅಸೋಸಿಯೇಷನ್‌ ಅನ್ನು ಲಾಂಚ್‌ ಮಾಡಿದ್ದಾರೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಇತಿಹಾಸ ಸೃಷ್ಟಿಸುವ ನಿಟ್ಟಿನಲ್ಲಿ ಈ ಅಸೋಶಿಯೇಷನ್‌ ಸಹಾಯಕವಾಗಲಿದೆ. ವಿಡಿಯೋ ಕಾನ್ಪರೆನ್ಸ್‌ ಮೂಲಕ ಉದ್ಘಾಟನೆ ಮಾಡಿದ ನಂತರ ಮಾತನಾಡಿದ ಪ್ರದಾನಿ ಮೋದಿ ಬಾಹ್ಯಾಕಾಶ ಕ್ಷೇತ್ರ ಭಾರತೀಯರ ಪ್ರಗತಿಯ ಮಾರ್ಗವಾಗಿದೆ ಎಂದು ಹೇಳಿದ್ದಾರೆ. ಸರ್ಕಾರ ತಂತ್ರಜ್ಞಾನ ಬಳಸಿ ದೇಶದ ರಕ್ಷಣಾ ವಲಯವನ್ನು ಬಾಹ್ಯಾಕಾಶದವರೆಗೆ ಮುನ್ನಡೆಸುವ ಕೆಲಸ ಮಾಡಲಿದೆ ಎಂದು ಹೇಳಿದ್ದಾರೆ.

ಬಾಹ್ಯಾಕಾಶ

ಹೌದು, ಭಾರತೀಯ ಬಾಹ್ಯಾಕಾಶ ಸಂಘವನ್ನು ಇಂದು ಉದ್ಘಾಟನೆ ಮಾಡಲಾಗಿದೆ. ಈ ಮೂಲಕ ಬಾರತೀಯ ಬಾಹ್ಯಾಕಾಶ ಸಮೂಹಕ್ಕೆ ಹೊಸ ಶಕ್ತಿಯಾಗುವತ್ತ ಭಾರತ ಹೆಜ್ಜೆ ಹಾಕಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಸರ್ಕಾರ ಮತ್ತು ಅದರ ಏಜೆನ್ಸಿಗಳನ್ನು ಸೇರಿಸಿ ಪಾಲುದಾರನಾಗುವುದಕ್ಕೆ ಇದು ಉತ್ತಮ ವೇದಿಕೆ ಆಗಿದೆ ಎನ್ನಲಾಗಿದೆ. ಈ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲೂ ಖಾಸಗಿಯವರಿಗೆ ಅವಕಾಶ ನೀಡುವುದಕ್ಕೆ ಅವಕಾಶ ನೀಡಿದೆ. ಹಾಗಾದ್ರೆ ಭಾರತೀಯ ಬಾಹ್ಯಾಕಾಶ ಸಂಘದ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಇಂಡಿಯನ್‌ ಸ್ಪೇಸ್‌ ಅಸೋಸಿಯೇಷನ್‌

ಇಂಡಿಯನ್‌ ಸ್ಪೇಸ್‌ ಅಸೋಸಿಯೇಷನ್‌ ಬಾಹ್ಯಾಕಾಶ ಮತ್ತು ಸ್ಯಾಟ್‌ಲೈಟ್‌ ಸಂಸ್ಥೆಗಳ ಒಂದು ಪ್ರಧಾನ ಉದ್ದಿಮೆಯಾಗಲಿದೆ ಎಂದು ಪ್ರಧಾನಮಂತ್ರಿ ಕಚೇರಿ ಹೇಳಿದೆ. ಭಾರತೀಯ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾಗವಹಿಸಲು ಬಯಸುವ ಕಂಪನಿಗಳನ್ನು ಇದು ಒಳ್ಳಗೊಂಡಿರಲಿದೆ ಎನ್ನಲಾಗಿದೆ. ಇದು ಭಾರತೀಯ ಬಾಹ್ಯಾಕಾಶ ಕ್ಷೇತ್ರದಲ್ಲಿ ಸರ್ಕಾರ ಮತ್ತು ಅದರ ಏಜೆನ್ಸಿಗಳನ್ನು ಸೇರಿ, ಎಲ್ಲ ಪಾಲುದಾರರನ್ನೂ ಒಳಗೊಂಡಿರಲಿದೆ ಎನ್ನುವ ಮಾತನ್ನು ಪ್ರಧಾನಮಂತ್ರಿ ಹೇಳಿದ್ದಾರೆ.

ಮೋದಿ

ಇನ್ನು ಈ ಕಾರ್ಯಕ್ರಮದಲ್ಲಿ ಮಾತನಾಡಿದ ಫ್ರಧಾನ ಮಂತ್ರಿ ಮೋದಿ ಖಾಸಗಿ ವಲಯದವರಿಗೆ ಸ್ಪೇಸ್‌ನಿಂದ ಹಿಡಿದು ರಕ್ಷಣಾ ವಲಯದವರೆಗೂ ಅವಕಾಶವನ್ನು ನೀಡುವುದಾಗಿ ಹೇಳಿದ್ದಾರೆ. ರಾಷ್ಟ್ರದ ಹಿತಾಸಕ್ತಿಯನ್ನು ಹಾಗೂ ವಿವಿಧ ಪಾಲುದಾರರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಹೊಸ ನಿರ್ಣಯಗಳ ಅವಶ್ಯಕತೆ ಇದೆ ಎಂದು ಪ್ರತಿಪಾದಿಸಿದರು. ಸದ್ಯ ಭಾರತವು ಎಲ್ಲಾ ವಲಯಗಳಲ್ಲೂ ಸಾಕಷ್ಟು ಸುಧಾರಣೆಗಳನ್ನು ಕಾಣುತ್ತಿದೆ. ಪ್ರತಿಯೊಂದು ಹಂತದಲ್ಲೂ '' ಆತ್ಮನಿರ್ಭರ್ ಭಾರತ್ '' ಅನ್ನು ಹೊಂದಿದೆ ಎಂದಿದ್ದಾರೆ.

ಬಾಹ್ಯಾಕಾಶ

ಇದಲ್ಲದೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಎಎಂಡ್‌ ಟು ಎಂಡ್‌ ಟೆಕ್ನಾಲಜಿಯನ್ನು ಹೊಂದಿರುವ ಕೆಲವೇ ದೇಶಗಳಲ್ಲಿ ಭಾರತವೂ ಕೂಡ ಸೇರಿದೆ ಎಂದು ಪ್ರಧಾನಿ ಹೇಳಿದ್ದಾರೆ. ಇದರಲ್ಲಿ ಪಾಲುದಾರರಾಗಿ, ಸರ್ಕಾರವು ಉದ್ಯಮ, ಯುವ ಆವಿಷ್ಕಾರಕರು, ಸ್ಟಾರ್ಟ್ ಅಪ್‌ಗಳಿಗೆ ಸಹಾಯ ಮಾಡುತ್ತಿದೆ. ಅಲ್ಲದೆ ಈ ಕಾರ್ಯವನ್ನು ಸರ್ಕಾರ ಇನ್ನು ಕೂಡ ಮುಂದುವರಿಸಲಿದೆ ಎಂದು ಹೇಳಿದ್ದಾರೆ. ಇನ್ನು ಬಾಹ್ಯಾಕಾಶ ಕ್ಷೇತ್ರದಲ್ಲಿ ಸುಧಾರಣೆಗಳ ಬಗ್ಗೆ ಸರ್ಕಾರದ ವಿಧಾನವು ನಾಲ್ಕು ಆಧಾರ ಸ್ತಂಭಗಳನ್ನು ಆಧರಿಸಿದೆ ಎಂದು ಹೇಳಿದರು.

ಅಸೋಸಿಯೇಷನ್‌

ಇನ್ನು ಇಂಡಿಯನ್‌ ಸ್ಪೇಸ್‌ ಅಸೋಸಿಯೇಷನ್‌ ಭಾರತವನ್ನು ಸ್ವಾವಲಂಬಿ ಮತ್ತು ತಾಂತ್ರಿಕವಾಗಿ ಮುಂದುವರಿಸಲು ಸಹಾಯ ಮಾಡಲಿದೆ. ಬಾಹ್ಯಾಕಾಶ ಮತ್ತು ಉಪಗ್ರಹ ತಂತ್ರಜ್ಞಾನಗಳಲ್ಲಿ ಸುಧಾರಿತ ಸಾಮರ್ಥ್ಯಗಳನ್ನು ಹೊಂದಿರುವ ದೇಶಿಯ ಮತ್ತು ಜಾಗತಿಕ ಸಂಸ್ಥೆಗಳಿಂದ ISpA ಪ್ರತಿನಿಧಿಸುತ್ತದೆ. ಇದರ ಸ್ಥಾಪಕ ಸದಸ್ಯರಲ್ಲಿ ಲಾರ್ಸನ್ ಮತ್ತು ಟ್ಯೂಬ್ರೊ, ನೆಲ್ಕೋ (ಟಾಟಾ ಗ್ರೂಪ್), ಒನ್ ವೆಬ್, ಭಾರತಿ ಏರ್‌ಟೆಲ್, ಮ್ಯಾಪ್‌ಮಿಂಡಿಯಾ, ವಾಲ್‌ಚಂದನಗರ್ ಇಂಡಸ್ಟ್ರೀಸ್ ಮತ್ತು ಅನಂತ್ ಟೆಕ್ನಾಲಜಿ ಲಿಮಿಟೆಡ್ ಸೇರಿವೆ. ಇತರ ಪ್ರಮುಖ ಸದಸ್ಯರಲ್ಲಿ ಗೋದ್ರೆಜ್, ಹ್ಯೂಸ್ ಇಂಡಿಯಾ, ಅಜಿಸ್ಟಾ-ಬಿಎಸ್‌ಟಿ ಏರೋಸ್ಪೇಸ್ ಪ್ರೈವೇಟ್ ಲಿಮಿಟೆಡ್, ಬಿಇಎಲ್, ಸೆಂಟಮ್ ಎಲೆಕ್ಟ್ರಾನಿಕ್ಸ್ ಮತ್ತು ಮ್ಯಾಕ್ಸರ್ ಇಂಡಿಯಾ ಕೂಡ ಸೇರಿವೆ.

Best Mobiles in India

English summary
ispa launched by prime minister modi, ispa launched, indian space association, indian space association launched, ಬಾಹ್ಯಾಕಾಶ

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X