ಉಚಿತ ಇಂಟರ್‌ನೆಟ್‌ ಸೇವೆ ನೀಡುವ ಯೋಜನೆಗೆ ಅಸ್ತು ಎಂದ ಕೇಂದ್ರ ಸರ್ಕಾರ!

|

ಭಾರತದಲ್ಲಿ ಪ್ರತಿಯೊಬ್ಬ ನಾಗರಿಕರಿಗೂ ಉಚಿತ ಇಂಟರ್‌ನೆಟ್‌ ನೀಡುವ ಯೋಜನೆಗೆ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಕೇಂದ್ರದ ಮಹತ್ವದ PM-WANI WiFi ಯೋಜನೆ ಜಾರಿಗೆ ಸರ್ಕಾರ ಸಿದ್ದತೆ ನಡೆಸಿದೆ. ಇನ್ನು ಈ ಯೋಜನೆಗೆ ಪ್ರಧಾನ ಮಂತ್ರಿ ವೈ-ಫೈ ಆಕ್ಸೆಸ್ ನೆಟ್‌ವರ್ಕ್ ಇಂಟರ್ಫೇಸ್ ಎಂದು ಹೆಸರಿಸಲಾಗಿದೆ. ಇನ್ನು ಈ ಯೋಜನೆಯಡಿಯಲ್ಲಿ ದೇಶಾದ್ಯಂತ ಸಾರ್ವಜನಿಕ ವೈ-ಫೈ ನೆಟ್‌ವರ್ಕ್‌ಗಳನ್ನು ಸ್ಥಾಪಿಸಲು ಕೇಂದ್ರ ಕ್ಯಾಬಿನೆಟ್ ಈ ವಾರ ಅನುಮೋದನೆ ನೀಡಿದೆ.

ಇಂಟರ್‌ನೆಟ್

ಹೌದು, ದೇಶದ ನಾಗರಿಕರೆಲ್ಲರಿಗೂ ಉಚಿತವಾಗಿ ಇಂಟರ್‌ನೆಟ್‌ ವ್ಯವಸ್ಥೆ ಕಲ್ಫಿಸುವ ಪ್ರಧಾನ ಮಂತ್ರಿ ವೈ-ಫೈ ಆಕ್ಸೆಸ್ ನೆಟ್‌ವರ್ಕ್ ಇಂಟರ್ಫೇಸ್ ಯೋಜನೆಗೆ ಕೇಂದ್ರ ಸರ್ಕಾರ ಅಸ್ತು ಎಂದಿದೆ. ಕೇಂದ್ರದ ಈ ನಿರ್ಧಾರವೂ ದೇಶದ ‘ಐತಿಹಾಸಿಕ' ಕ್ರಮವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ, ಬಣ್ಣಿಸಿದ್ದಾರೆ. ಇನ್ನು ಈ ಯೋಜನೆಯು ತಂತ್ರಜ್ಞಾನ ಕ್ಷೇತ್ರದಲ್ಲಿ ಸಂಪೂರ್ಣವಾಗಿ ಕ್ರಾಂತಿಯನ್ನುಂಟು ಮಾಡುತ್ತದೆ ಮತ್ತು ದೇಶದ ವೈರ್‌ಲೆಸ್ ಸಂಪರ್ಕವನ್ನು ಗಣನೀಯವಾಗಿ ಸುಧಾರಿಸುತ್ತದೆ ಎಂದು ಹೇಳಿದ್ದಾರೆ. ಇನ್ನುಳಿದಂತೆ ಈ ಯೋಜನಯೆ ವಿಶೇಷತೆ ಬಗ್ಗೆ ತಿಳಿದುಕೊಳ್ಳೋಣ ಬನ್ನಿರಿ.

ಪ್ರಧಾನ ಮಂತ್ರಿ

ಪ್ರಧಾನ ಮಂತ್ರಿ ವೈ-ಫೈ ಆಕ್ಸೆಸ್ ನೆಟ್‌ವರ್ಕ್ ಇಂಟರ್ಫೇಸ್ ಯೋಜನೆ (PM-WANI) ಮೂಲಕ ದೇಶದ ನಾಗರಿಕರೆಲ್ಲರಿಊ ಸಾರ್ವಜನಿಕವಾಗಿ ಇಂಟರ್‌ನೆಟ್‌ ನೀಡುವ ಉದ್ದೇಶವನ್ನು ಹೊಂದಿದೆ. ಉಚಿತ ಇಂಟರ್‌ನೆಟ್‌ ದೊರೆಯುವುದರಿಂದ ಡಿಜಿಟಲ್‌ ಕ್ರಾಂತಿ ಸಾಕಾರವಾಗಲಿದೆ. ವಿಧ್ಯಾಭ್ಯಾಸ ಕ್ಕೆ ಅನುಕೂಲವಾಗುವುದಲ್ಲದೆ, ವ್ಯವಹಾರ ಹಾಗೂ ಇತರೆ ಕಾರ್ಯಗಳಿಗೆ ಉಪಯೋಗವಾಗಲಿದೆ. ಇನ್ನು ಈ ಯೋಜನೆಯನ್ನು ಸಾರ್ವಜನಿಕ ಡೇಟಾ ಕಚೇರಿಗಳ ಮೂಲಕ ಸಂಪರ್ಕವನ್ನು ಒದಗಿಸಲಾಗುವುದು ಎನ್ನಲಾಗಿದೆ.

ಯೋಜನೆ

ಇನ್ನು ಈ ಯೋಜನೆಯು ಪ್ರತಿಯೊಬ್ಬರಿಗೂ ವೈ-ಫೈ ಸೇವೆಯನ್ನು ಒದಗಿಸಲು ಅನುವು ಮಾಡಿಕೊಡುತ್ತದೆ. ಇದರಿಂದ ಸಣ್ಣ ಅಂಡಿಯಿಂದ ಹಿಡಿದು ದೊಡ್ಡ ಮಟ್ಟದ ಸ್ಟೋರ್‌ಗಳಿಗೂ ಕೂಡ ಆದಾಯವನ್ನು ಹೆಚ್ಚಿಸುತ್ತದೆ. ಅಲ್ಲದೆ ದೇಶದ ಯುವಕರಿಗೆ ತಡೆರಹಿತ ಇಂಟರ್ನೆಟ್ ಸಂಪರ್ಕವನ್ನು ಪಡೆಯುವುದನ್ನು ಖಚಿತಪಡಿಸುತ್ತದೆ. ಇದು ನಮ್ಮ ಡಿಜಿಟಲ್ ಇಂಡಿಯಾ ಮಿಷನ್ ಅನ್ನು ಸಹ ಬಲಪಡಿಸುತ್ತದೆ ಎಂದು ಪಿಎಂ ಮೋದಿ ಟ್ವೀಟ್ ನಲ್ಲಿ ತಿಳಿಸಿದ್ದಾರೆ.

ಕೇಂದ್ರದ PM-WANI ಯೋಜನೆಯ ವಿಶೇಷತೆ ಏನು?

ಕೇಂದ್ರದ PM-WANI ಯೋಜನೆಯ ವಿಶೇಷತೆ ಏನು?

* ದೇಶಾದ್ಯಂತ ಹರಡಿರುವ ಸಾರ್ವಜನಿಕ ದತ್ತಾಂಶ ಕಚೇರಿಗಳ (ಪಿಡಿಒ) ಮೂಲಕ ವೈ-ಫೈ ಸೇವೆಯನ್ನು ಒದಗಿಸಲು ಸಾರ್ವಜನಿಕ ದತ್ತಾಂಶವನ್ನು ಸಾರ್ವಜನಿಕ ದತ್ತಾಂಶ ಕಚೇರಿ ಒಟ್ಟುಗೂಡಿಸುವವರು ಸ್ಥಾಪಿಸುತ್ತಾರೆ.

* ಕೇಂದ್ರದ ಈ ಕ್ರಮವು ಸಾರ್ವಜನಿಕ ವೈ-ಫೈ ನೆಟ್‌ವರ್ಕ್ ಮೂಲಕ ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಸೇವೆಗಳ ಪ್ರಸರಣವನ್ನು ವೇಗಗೊಳಿಸುತ್ತದೆ ಮತ್ತು ಇದು ಡಿಜಿಟಲ್ ಇಂಡಿಯಾದತ್ತ ಮತ್ತೊಂದು ಹೆಜ್ಜೆಯಾಗಿದೆ.

* ಬಳಕೆದಾರರನ್ನು ನೋಂದಾಯಿಸಲು ಮತ್ತು ಹತ್ತಿರದ ಪ್ರದೇಶದಲ್ಲಿ WANI- ಕಂಪ್ಲೈಂಟ್ ವೈ-ಫೈ ಹಾಟ್‌ಸ್ಪಾಟ್‌ಗಳನ್ನು ಕಂಡುಹಿಡಿಯಲು ಮತ್ತು ಅವುಗಳನ್ನು ಇಂಟರ್ನೆಟ್ ಸೇವೆಯನ್ನು ಪ್ರವೇಶಿಸಲು ಅಪ್ಲಿಕೇಶನ್‌ನಲ್ಲಿ ಪ್ರದರ್ಶಿಸಲು ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಲಾಗುತ್ತದೆ.

* ಕೇಂದ್ರ ನೋಂದಾವಣೆ ಅಪ್ಲಿಕೇಶನ್ ಪೂರೈಕೆದಾರರು, ಪಿಡಿಒಎಗಳು ಮತ್ತು ಪಿಡಿಒಗಳ ವಿವರಗಳನ್ನು ನಿರ್ವಹಿಸುತ್ತದೆ. ಈ ಕೇಂದ್ರ ನೋಂದಾವಣೆಯನ್ನು ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ತಂತ್ರಜ್ಞಾನ ಅಭಿವೃದ್ಧಿ ಕೇಂದ್ರವಾದ ಸಿ-ಡೊಟ್ ಅಥವಾ ಸೆಂಟರ್ ಫಾರ್ ಡೆವಲಪ್‌ಮೆಂಟ್ ಫಾರ್ ಟೆಲಿಮ್ಯಾಟಿಕ್ಸ್ ನಿರ್ವಹಿಸುತ್ತದೆ.

* ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಸೇವೆಗಳನ್ನು ಒದಗಿಸಲು ಯಾವುದೇ ಪರವಾನಗಿ ಶುಲ್ಕವನ್ನು ವಿಧಿಸಲಾಗುವುದಿಲ್ಲ. ಆದ್ದರಿಂದ ಸಾರ್ವಜನಿಕ ವೈ-ಫೈ ಹಾಟ್‌ಸ್ಪಾಟ್‌ಗಳನ್ನು ಬಳಸುವುದರಿಂದ ದೇಶಾದ್ಯಂತ ಅದರ ನುಗ್ಗುವಿಕೆಯನ್ನು ಹೆಚ್ಚು ಪ್ರೋತ್ಸಾಹಿಸುತ್ತದೆ.

* ಪಿಡಿಒ ಪ್ರಮೇಯದಿಂದ ನೆಟ್‌ವರ್ಕ್ ಪ್ರವೇಶಿಸಲು ಬಯಸುವ ಗ್ರಾಹಕರು ಇಕೆವೈಸಿ ದೃಡೀಕರಣದ ನಂತರ ಮಾತ್ರ ಹಾಗೆ ಮಾಡಬಹುದು.

Best Mobiles in India

English summary
PM-WANI WiFi: The PM-WANI will not only boost the "ease of doing" business but also will do the "ease of living.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X