Home
ಸುದ್ದಿಜಾಲ

ಪೊಕೊ C55 ಖರೀದಿಸೋಕೆ ಇದುವೇ ಬೆಸ್ಟ್‌ ಟೈಮ್‌.. ಆಫರ್‌ ಏನಿದೆ?

ಪೊಕೊ ಮೊಬೈಲ್‌ ಸಂಸ್ಥೆಯು ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಸ್ಥಾನ ಗಟ್ಟಿ ಮಾಡಿಕೊಂಡಿದೆ. ಪೊಕೊ ಸಂಸ್ಥೆಯು ಭಿನ್ನ ಮಾದರಿಯ ಫೋನ್‌ಗಳ ಆಯ್ಕೆಯನ್ನು ಗ್ರಾಹಕರಿಗೆ ನೀಡಿದ್ದು, ಅವುಗಳಲ್ಲಿ ಪೊಕೊ C ಸರಣಿಯ ಫೋನ್‌ಗಳು ಬಜೆಟ್‌ ದರದಲ್ಲಿ ಕಾಣಿಸಿಕೊಂಡಿವೆ. ಸದ್ಯ ಪೊಕೊ C55 ಆಕರ್ಷಕ ರಿಯಾಯಿತಿ ಪಡೆದಿದೆ.

ಹೌದು, ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ತಾಣದಲ್ಲಿ ಪೊಕೊ C55 ಮೊಬೈಲ್‌ ಶೇ. 39% ರಷ್ಟು ಡಿಸ್ಕೌಂಟ್‌ ಪಡೆದಿದೆ. 6GB RAM + 128GB ವೇರಿಯಂಟ್‌ ಫೋನ್‌ ಬೆಲೆಯು 13,999ರೂ. ಗಳು ಆಗಿದ್ದು, ಆದರೆ ಸದ್ಯ ಆಫರ್‌ನಲ್ಲಿ ಈ ಮೊಬೈಲ್‌ 8,499ರೂ. ಗಳ ವಿಶೇಷ ಪ್ರೈಸ್‌ ಟ್ಯಾಗ್‌ನಲ್ಲಿ ಖರೀದಿಗೆ ಲಭ್ಯ ಇದೆ.

ಪೊಕೊ C55 ಖರೀದಿಸೋಕೆ ಇದುವೇ ಬೆಸ್ಟ್‌ ಟೈಮ್‌.. ಆಫರ್‌ ಏನಿದೆ?

ಇನ್ನು ಪೊಕೊ C55 ಮೊಬೈಲ್‌ ಮೀಡಿಯಾ ಟೆಕ್ ಹೆಲಿಯೊ G85 ಪ್ರೊಸೆಸರ್‌ ಬಲದಲ್ಲಿ ಕಾರ್ಯ ನಿರ್ವಹಿಸಲಿದೆ. ಜೊತೆಗೆ ಇದು 5000 mAh ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ ಪಡೆದಿದೆ. ಹಾಗಾದರೆ ಪೊಕೊ C55 ಫೋನಿನ ಇನ್ನುಳಿದ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಪೊಕೊ C55 ಫೋನ್‌ ಡಿಸ್‌ಪ್ಲೇ ರಚನೆ :
ಪೊಕೊ C55 ಮೊಬೈಲ್‌ 6.71 ಇಂಚಿನ HD+ ಡಿಸ್‌ಪ್ಲೇ ಅನ್ನು ಹೊಂದಿದ್ದು, ಇದು 720 x 1650 ಪಿಕ್ಸೆಲ್ ರೆಸಲ್ಯೂಶನ್ ಪಡೆದಿದೆ. ಇದರ ಜೊತೆಗೆ 120Hz ಟಚ್‌ ಸ್ಯಾಂಪಲಿಂಗ್‌ ರೇಟ್‌ ಬೆಂಬಲಿದ್ದು, ಪಾಂಡಾ ಗ್ಲಾಸ್‌ ಲೇಯರ್‌ ಮೂಲಕ ಹೆಚ್ಚಿನ ರಕ್ಷಣೆ ಒದಗಿಸುತ್ತದೆ.

ಪೊಕೊ C55 ಫೋನ್‌ ಪ್ರೊಸೆಸರ್‌ ಪವರ್‌ :
ಪೊಕೊ C55 ಫೋನ್‌ ಮೊಬೈಲ್‌ ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೊ G85 ಪ್ರೊಸೆಸರ್‌ ಮೂಲಕ ಕಾರ್ಯನಿರ್ವಹಿಸಲಿದ್ದು, ಕಂಪೆನಿಯ ಸ್ವಂತ MIUI 13 ಲೇಯರ್‌ನೊಂದಿಗೆ ಆಂಡ್ರಾಯ್ಡ್ 12 ಆಪರೇಟಿಂಗ್ ಸಿಸ್ಟಮ್ ಮೂಲಕ ರನ್‌ ಆಗಲಿದೆ. ಅದರಂತೆ 6GB RAM ನೊಂದಿಗೆ 64GB ಹಾಗೂ 4GB ಯೊಂದಿಗೆ 64GB ಹಾಗೂ 128GB ಇಂಟರ್ನಲ್‌ ಸ್ಟೋರೇಜ್ ಸಾಮರ್ಥ್ಯ ಪಡೆದುಕೊಂಡಿದೆ. ಇದಿಷ್ಟೇ ಅಲ್ಲದೆ ಮೈಕ್ರೊ ಎಸ್‌ಡಿ ಕಾರ್ಡ್ ಸ್ಲಾಟ್‌ ಆಯ್ಕೆ ಸಹ ನೀಡಲಾಗಿದ್ದು, ಜೊತೆಗೆ RAM ಅನ್ನು 11GB ವರೆಗೆ ವಿಸ್ತರಿಸಬಹುದಾದ ಆಯ್ಕೆ ಸಹ ನೀಡಲಾಗಿದೆ.

ಪೊಕೊ C55 ಫೋನ್‌ ಕ್ಯಾಮೆರಾ ರಚನೆ
ಪೊಕೊ C55 ಮೊಬೈಲ್‌ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಹೊಂದಿದ್ದು, 50MP ಮುಖ್ಯ ಸೆನ್ಸರ್‌ f/1.8 ನೊಂದಿಗೆ ಕಂಡುಬಂದರೆ 2MP ಡೆಪ್ತ್ ಕ್ಯಾಮೆರಾವನ್ನು f/2.4 ಹೊಂದಿದೆ. ಇದರ ಜೊತೆಗೆ 5MP ಸೆಲ್ಫಿ ಕ್ಯಾಮೆರಾ ಆಯ್ಕೆ ಅನ್ನು ಈ ಫೋನ್‌ ಪಡೆದುಕೊಂಡಿದೆ.

ಪೊಕೊ C55 ಫೋನ್‌ ಬ್ಯಾಟರಿ ಸಾಮರ್ಥ್ಯ ಹಾಗೂ ಇತರೆ ಆಯ್ಕೆ :
ಪೊಕೊ C55 ಫೋನ್‌ 5000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿದ್ದು, ಇದಕ್ಕೆ ಪೂರಕವಾಗಿ 10W ಚಾರ್ಜಿಂಗ್ ಬೆಂಬಲ ಪಡೆದಿದೆ. ಇನ್ನುಳಿದಂತೆ ಈ ಫೋನ್ ರಿಯರ್‌ ಪ್ಯಾನಲ್‌ನಲ್ಲಿ ಫಿಂಗರ್‌ಪ್ರಿಂಟ್ ಸೆನ್ಸರ್‌ ಆಯ್ಕೆ ಸೌಲಭ್ಯ ಹೊಂದಿದ್ದು, IP52 ರೇಟಿಂಗ್‌ನೊಂದಿಗೆ ಇದು ಧೂಳು ಮತ್ತು ಸ್ಪ್ಲಾಶ್ ನಿರೋಧಕವಾಗಿದೆ.

ಪೊಕೊ C55 ಫೋನ್‌ ಬೆಲೆ ಹಾಗೂ ಲಭ್ಯತೆ
ಪೊಕೊ C55 ಸ್ಮಾರ್ಟ್‌ಫೋನ್‌ 4GB+64GB ವೇರಿಯಂಟ್‌ ಹಾಗೂ 6GB+128GB ವೇರಿಯಂಟ್‌ನ ಆಯ್ಕೆ ಪಡೆದಿದೆ. ಅಲ್ಲದೇ ಈ ಫೋನ್ ಫಾರೆಸ್ಟ್ ಗ್ರೀನ್, ಪವರ್ ಬ್ಲಾಕ್ ಮತ್ತು ಕೂಲ್ ಬ್ಲೂ ಎಂಬ ಮೂರು ಬಣ್ಣದ ಆಯ್ಕೆಯಲ್ಲಿ ಕಾಣಿಸಿಕೊಂಡಿದೆ.

Best Mobiles in India

English summary
POCO C55 available at discount price on flipkart. offer price and more details in kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+