Home
ಸುದ್ದಿಜಾಲ

Poco C55 : ಪೊಕೊ C55 ಸ್ಮಾರ್ಟ್‌ಫೋನ್‌ ಲಾಂಚ್‌ ಡೇಟ್‌ ಬಹಿರಂಗ! ಫೀಚರ್ಸ್‌ ನಿರೀಕ್ಷೆ ಏನು?

ಪೊಕೊ ಕಂಪೆನಿ ಭಾರತದಲ್ಲಿ ಮತ್ತೊಮ್ಮೆ ಸಂಚಲನ ಸೃಷ್ಟಸಿದೆ. ತನ್ನ ಪೊಕೊ C55 ಸ್ಮಾರ್ಟ್‌ಫೋನ್‌ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡುವ ಮೂಲಕ ಹೊಸ ಕ್ರೇಜ್‌ ಹುಟ್ಟುಹಾಕಿದೆ. ಸದ್ಯ ಪೊಕೊ C55 ಸ್ಮಾರ್ಟ್‌ಫೋನ್‌ ಇದೇ ಫೆಬ್ರವರಿ 21 ರಂದು ಬಿಡುಗಡೆಯಾಗಲಿದೆ ಎಂದು ಅಧಿಕೃತವಾಗಿ ದೃಡಪಡಿಸಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಆಕ್ಟಾ ಕೋರ್‌ ಮೀಡಿಯಾಟೆಕ್‌ ಹಿಲಿಯೋ G85SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ ಎಂದು ವರದಿಯಾಗಿದೆ.

ಪೊಕೊ C55 ಸ್ಮಾರ್ಟ್‌ಫೋನ್‌ ಲಾಂಚ್‌ ಡೇಟ್‌ ಬಹಿರಂಗ! ಫೀಚರ್ಸ್‌ ನಿರೀಕ್ಷೆ ಏನು?

ಹೌದು, ಪೊಕೊ C55 ಸ್ಮಾರ್ಟ್‌ಫೋನ್‌ ಇದೇ ಫೆಬ್ರವರಿ 21 ರಂದು ಫ್ಲಿಪ್‌ಕಾರ್ಟ್‌ ಮೂಲಕ ಲಾಂಚ್‌ ಆಗಲಿದೆ ಎಂದು ಹೇಳಲಾಗಿದೆ. ಈ ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಹೊಂದಿರುವ ಸಾದ್ಯತೆಯಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್‌ ಹೊಂದಿರಲಿದೆ ಎನ್ನಲಾಗಿದೆ. ಜೊತೆಗೆ ಈ ಸ್ಮಾರ್ಟ್‌ಫೋನ್‌ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿರುವ ನಿರೀಕ್ಷೆಯಿದೆ. ಹಾಗಾದ್ರೆ ಈ ಸ್ಮಾರ್ಟ್‌ಫೋನ್‌ ಯಾವೆಲ್ಲಾ ಫೀಚರ್ಸ್‌ ಹೊಂದಿರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಪೊಕೊ C55 ಡಿಸ್‌ಪ್ಲೇ ವಿಶೇಷತೆ ಏನು?

ಪೊಕೊ C55 ಸ್ಮಾರ್ಟ್‌ಫೋನ್‌ 6.71 ಇಂಚಿನ HD+ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 720 x 1650 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದಿದೆ. ಇನ್ನು ಡಿಸ್‌ಪ್ಲೇ 20:6:9 ರಚನೆಯ ಅನುಪಾತವನ್ನು ಹೊಂದಿದ್ದು, 500 ನೀಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಒಳಗೊಂಡಿರಲಿದೆ ಎಂದು ಅಂದಾಜಿಸಲಾಗಿದೆ.

ಪೊಕೊ C55 ಸ್ಮಾರ್ಟ್‌ಫೋನ್‌ ಲಾಂಚ್‌ ಡೇಟ್‌ ಬಹಿರಂಗ! ಫೀಚರ್ಸ್‌ ನಿರೀಕ್ಷೆ ಏನು?

ಪೊಕೊ C55 ಪ್ರೊಸೆಸರ್‌ ಯಾವುದು?

ಪೊಕೊ C55 ಸ್ಮಾರ್ಟ್‌ಫೋನ್‌ ಆಕ್ಟಾ-ಕೋರ್ ಮೀಡಿಯಾಟೆಕ್‌ ಹಿಲಿಯೋ G85SoC ಪ್ರೊಸೆಸರ್‌ ವೇಗವನ್ನು ಹೊಂದಿದೆ. ಇದು ಆಂಡ್ರಾಯ್ಡ್‌ 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 4GB RAM+ 64GB, 4GB RAM +128GB, ಮತ್ತು 6GB RAM +128GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯದ ಮೂರು ವೇರಿಯೆಂಟ್‌ ಆಯ್ಕೆಗಳಲ್ಲಿ ಬರುವ ನಿರೀಕ್ಷೆಯಿದೆ. ಇದಲ್ಲದೆ ಮೆಮೊರಿ ಕಾರ್ಡ್‌ ಮೂಲಕ 512GB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.

ಪೊಕೊ C55 ಕ್ಯಾಮೆರಾ ಸೆಟ್‌ಅಪ್‌ ಏನಿದೆ?

ಪೊಕೊ C55 ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಪಡೆದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದೆ. ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್‌ ಡೆಪ್ತ್‌ ಸೆನ್ಸಾರ್‌ ಸಾಮರ್ಥ್ಯವನ್ನು ಪಡೆದಿದೆ. ಇದಲ್ಲದೆ 5 ಮೆಗಾಪಿಕ್ಸೆಲ್ ಸೆನ್ಸಾರ್ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿರಲಿದೆ.

ಪೊಕೊ C55 ಸ್ಮಾರ್ಟ್‌ಫೋನ್‌ ಲಾಂಚ್‌ ಡೇಟ್‌ ಬಹಿರಂಗ! ಫೀಚರ್ಸ್‌ ನಿರೀಕ್ಷೆ ಏನು?

ಪೊಕೊ C55 ಬ್ಯಾಟರಿ ಬ್ಯಾಕ್‌ಅಪ್‌

ಪೊಕೊ C55 ಸ್ಮಾರ್ಟ್‌ಫೋನ್‌ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದೆ. ಇದು 10W ವೇಗದ ಚಾರ್ಜಿಂಗ್‌ ಬೆಂಬಲಿಸಲಿದೆ ಎಂದು ಅಂದಾಜಿಸಲಾಗಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್‌, ಬ್ಲೂಟೂತ್‌, ವೈಫೈ, ಯುಎಸ್‌ಬಿ ಸಿ ಪೋರ್ಟ್‌ ಅನ್ನು ಬೆಂಬಲಿಸಲಿದೆ. ಇದಲ್ಲದೆ FM ರೇಡಿಯೊ, 3.5mm ಹೆಡ್‌ಫೋನ್ ಜ್ಯಾಕ್‌ ಅನ್ನು ಒಳಗೊಂಡಿರಲಿದೆ ಎನ್ನಲಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಕಪ್ಪು, ನೀಲಿ, ಪುದೀನ ಮತ್ತು ನೇರಳೆ ಬಣ್ಣದ ಆಯ್ಕೆಗಳಲ್ಲಿ ಬರಲಿದೆ. ಇದರ ಬೆಲೆ ಎಷ್ಟಿರಲಿದೆ ಅನ್ನೊದು ಇನ್ನು ಬಹಿರಂಗವಾಗಿಲ್ಲ.

ಇದಲ್ಲದೆ ಪೊಕೊ ಕಂಪೆನಿಯು ಇತ್ತೀಚಿಗೆ ಭಾರತದಲ್ಲಿ ಪೊಕೊ X5 ಪ್ರೊ 5G ಸ್ಮಾರ್ಟ್‌ಫೋನ್‌ ಪರಿಚಯಿಸಿದೆ. ಈ ಸ್ಮಾರ್ಟ್‌ಫೋನ್‌ 6.67 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಎಕ್ಸ್‌ಫಿನಿಟಿ ಅಮೋಲೆಡ್‌ ಡಿಸ್‌ಪ್ಲೇಯನ್ನು ಒಳಗೊಂಡಿದೆ. ಇದು 900 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಅನ್ನು ನೀಡಲಿದೆ. ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 67W ವೇಗದ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ.

Best Mobiles in India

English summary
Flipkart has confirmed that the Poco C55 launch will take place on February 21 and its sale will be held through its online platform.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+