Home
ಸುದ್ದಿಜಾಲ

ಇಂದು POCO C71 ಬಿಡುಗಡೆ; ಬೆಲೆ ಇಷ್ಟೇನಾ?, ವಿಶೇಷತೆಗಳೇನು ಗೊತ್ತಾ?

ಟೆಕ್ ಬ್ರ್ಯಾಂಡ್ ಪೊಕೊ ಇಂದು ಭಾರತದಲ್ಲಿ ಹೊಚ್ಚ ಹೊಸ ಫೋನ್ ಬಿಡುಗಡೆ ಮಾಡಲಿದೆ. ವಿಶೇಷವೆಂದರೆ, ಇದು ಅತ್ಯಂತ ಅಗ್ಗದ ಬೆಲೆಯನ್ನು ಹೊಂದಿರುತ್ತದೆ. ಹೌದು, ಬಹುನಿರೀಕ್ಷಿತ ಪೊಕೊ C71 (POCO C71) ಸ್ಮಾರ್ಟ್‌ಫೋನ್ ಇಂದು (ಏಪ್ರಿಲ್ 4) ಅಧಿಕೃತವಾಗಿ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಇದು ಕಳೆದ ವರ್ಷ ಬಿಡುಗಡೆಯಾಗಿದ್ದ ಪೊಕೊ C61 (POCO C61) ಫೋನಿನ ಉತ್ತರಾಧಿಕಾರಿಯಾಗಿದೆ. ಮೊದಲೇ ಹೇಳಿದಂತೆ, ಇದು 7,000 ರೂ.ಗಿಂತ ಕಡಿಮೆ ಬೆಲೆ ಹೊಂದಿರುತ್ತದೆ. ಈ ಫೋನ್ ಯಾವೆಲ್ಲಾ ವಿಶೇಷತೆಗಳನ್ನು ಹೊಂದಿದೆ ನೋಡೋಣ ಬನ್ನಿ.

ಪೊಕೊ C71 ಸ್ಮಾರ್ಟ್‌ಫೋನ್ ಮೂರು ಬಣ್ಣಗಳಲ್ಲಿ ಬಿಡುಗಡೆಯಾಗಲಿದೆ. ಇದು ಪವರ್ ಬ್ಲ್ಯಾಕ್, ಕೂಲ್ ಬ್ಲೂ ಮತ್ತು ಡೆಸರ್ಟ್ ಗೋಲ್ಡ್ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿರುತ್ತದೆ. ಈ ಫೋನಿನ ವಿಶೇಷತೆಗಳ ಬಗ್ಗೆ ಹೇಳುವುದಾದರೆ, ಇದು ದೊಡ್ಡ ಡಿಸ್ಪ್ಲೇ, ಶಕ್ತಿಯುತ ಬ್ಯಾಟರಿ ಮತ್ತು ಅತ್ಯುತ್ತಮ ಕ್ಯಾಮೆರಾ ಸೆಟಪ್ ಸೇರಿದಂತೆ ಹಲವು ಅತ್ಯುತ್ತಮ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಮೊಬೈಲ್ ಸ್ಪ್ಲಿಟ್ ಗ್ರಿಡ್ ಮಾದರಿ ವಿನ್ಯಾಸ ಹೊಂದಿದೆ. ಇದು IP52 ರೇಟಿಂಗ್, ಡ್ಯುಯಲ್ ಕ್ಯಾಮೆರಾ ಸೆಟಪ್ ಒಳಗೊಂಡಿದೆ. ಅಗ್ಗದ ಮೊಬೈಲ್ ಇಷ್ಟಪಡುವವರಿಗೆ ಪೊಕೊ C71 ಉತ್ತಮ ಆಯ್ಕೆಯಾಗಿದೆ. ಈ ಫೋನಿನ ಬೆಲೆ ತಿಳಿಯಲು ಮುಂದೆ ಓದಿ.

ಇಂದು POCO C71 ಬಿಡುಗಡೆ; ಬೆಲೆ ಇಷ್ಟೇನಾ?, ವಿಶೇಷತೆಗಳೇನು ಗೊತ್ತಾ?

ಪೊಕೊ C71 ವೈಶಿಷ್ಟ್ಯಗಳು (ನಿರೀಕ್ಷಿತ)

ಡಿಸ್ಪ್ಲೇ ವಿವರ

ಪೊಕೊ C71 ಮೊಬೈಲ್ ಇಂಚಿನ 6.88 ಇಂಚಿನ ಡಿಸ್ಪ್ಲೇ ಹೊಂದಿದೆ. ಇದು 120Hz ರಿಫ್ರೆಶ್‌ ದರದ ಬೆಂಬಲದೊಂದಿಗೆ ಬರುತ್ತದೆ. ವಿಶೇಷವೆಂದರೆ, ಅಗ್ಗದ ಬಜೆಟ್‌ ವಿಭಾಗದಲ್ಲಿ ಅತಿದೊಡ್ಡ ಡಿಸ್ಪ್ಲೇ ಹೊಂದಿರುವ ಫೋನ್ ಇದಾಗಿದೆ.

ಪ್ರೊಸೆಸರ್ ಸಾಮರ್ಥ್ಯ

ಪೊಕೊ C71 ಸ್ಮಾರ್ಟ್‌ಫೋನ್ ಆಕ್ಟಾ ಕೋರ್ ಪ್ರೊಸೆಸರ್ ಹೊಂದಿದೆ. ಇದು ಶಕ್ತಿಯುತ ಕಾರ್ಯಕ್ಷಮತೆಯನ್ನು ನೀಡುತ್ತದೆ. ಈ ಪೊಕೊ ಮೊಬೈಲ್ ಆಂಡ್ರಾಯ್ಡ್ 15 ಆಪರೇಟಿಂಗ್ ಸಿಸ್ಟಮ್‌ನೊಂದಿಗೆ ಕೆಲಸ ಮಾಡಲಿದೆ. ಇದು 2 ವರ್ಷಗಳ ಓಎಸ್ ನವೀಕರಣಗಳು ಮತ್ತು 4 ವರ್ಷಗಳ ಭದ್ರತಾ ನವೀಕರಣಗಳನ್ನು ಪಡೆಯಲಿದೆ. ಈ ಫೋನ್ 6GB RAM ಮತ್ತು 6GB ವರ್ಚುವಲ್ RAM ಹೊಂದಿದೆ. ಒಟ್ಟು 12GB RAM ಬಳಸಬಹುದು. ಹಾಗೆಯೇ ಮೈಕ್ರೊ ಎಸ್‌ಡಿ ಕಾರ್ಡ್ ಮೂಲಕ 2TB ವರೆಗೆ ಸ್ಟೋರೇಜ್ ಹೆಚ್ಚಿಸಬಹುದು.

ಕ್ಯಾಮೆರಾ ಸೆಟಪ್

ಪೊಕೊ C71 ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 32 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಲಭ್ಯವಿದೆ. ಹಾಗೆಯೇ ದ್ವಿತೀಯ ಕ್ಯಾಮೆರಾ ಸಹ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನಿನಲ್ಲಿ 8 ಮೆಗಾಪಿಕ್ಸೆಲ್ ಸೆಲ್ಫಿ ಶೂಟರ್ ಇದೆ. ಈ ಫೋನಿನಲ್ಲಿ ಒಟ್ಟು 7 ಫಿಲ್ಮ್ ಫಿಲ್ಟರ್‌ಗಳು ಇವೆ.

ಬ್ಯಾಟರಿ ಮತ್ತು ಚಾರ್ಜಿಂಗ್

ಪೊಕೊ C71 ಸ್ಮಾರ್ಟ್‌ಫೋನ್ 5,200mAh ಸಾಮರ್ಥ್ಯ ಬ್ಯಾಟರಿಯೊಂದಿಗೆ ಭಾರತದಲ್ಲಿ ಬಿಡುಗಡೆಯಾಗಲಿದೆ. ಇದು ಈ ಅಗ್ಗದ ಬಜೆಟ್ ವಿಭಾಗದಲ್ಲಿನ ಈವರೆಗಿನ ದೊಡ್ಡ ಬ್ಯಾಟರಿ ಎಂದು ಹೇಳಲಾಗಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 15W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಈ ಮೊಬೈಲ್ ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಹೊಂದಿದೆ. ಹಾಗೆಯೇ 3.5 ಎಂಎಂ ಆಡಿಯೊ ಜ್ಯಾಕ್, ಡ್ಯುಯಲ್ ಬ್ಯಾಂಡ್ ವೈ-ಫೈ ಸೇರಿದಂತೆ ಹಲವು ಸೌಲಭ್ಯಗಳನ್ನು ಹೊಂದಿದೆ.

7,000 ರೂ.ಗಿಂತ ಕಡಿಮೆ ಬೆಲೆಯ ಫೋನ್?

ನೂತನ ಪೊಕೊ C71 ಫೋನ್ ಅಗ್ಗದ ಬೆಲೆಗೆ ಬಿಡುಗಡೆಯಾಗಲಿದೆ. ಈ ಫೋನಿನ ಬೆಲೆಯ ಬಗ್ಗೆ ಕಂಪನಿಯು ಈವರೆಗೆ ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲ. ಆದರೆ ಈ ಫೋನ್ 7,000 ರೂ.ಗಳ ಬಜೆಟ್ ವಿಭಾಗದಲ್ಲಿ ಮಾರುಕಟ್ಟೆಗೆ ಬರುವ ಸಾಧ್ಯತೆಯಿದೆ. ಇನ್ನು ಪೊಕೊ C71 ಮೊಬೈಲ್ ಆನ್‌ಲೈನ್ ಶಾಪಿಂಗ್ ಸೈಟ್ ಫ್ಲಿಪ್‌ಕಾರ್ಟ್‌ ಮೂಲಕ ಮಾರಾಟವಾಗಲಿದೆ.

ಇಂದು POCO C71 ಬಿಡುಗಡೆ; ಬೆಲೆ ಇಷ್ಟೇನಾ?, ವಿಶೇಷತೆಗಳೇನು ಗೊತ್ತಾ?

ರೆಡ್ಮಿ A5 ಬದಲಾಗಿ ಪೊಕೊ C71 ಬಿಡುಗಡೆ

ಶಿಯೋಮಿ ಇತ್ತೀಚೆಗೆ ಅಗ್ಗದ ಬೆಲೆಯಲ್ಲಿ ರೆಡ್ಮಿ A5 (Redmi A5) ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಈ ರೆಡ್ಮಿ A5 ಮೊಬೈಲ್ ಬೆಲೆ ಸಹ 7,000 ರೂ.ಗಿಂತ ಕಡಿಮೆ ಇದೆ. ಈ ಮೊಬೈಲ್ 6.88 ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. 120Hz ವರೆಗಿನ ರಿಫ್ರೆಶ್ ದರವನ್ನು ಹೊಂದಿದೆ. ಇದು ಯುನಿಸಾಕ್ T7250 ಆಕ್ಟಾ-ಕೋರ್ ಪ್ರೊಸೆಸರ್‌ನೊಂದಿಗೆ ಕೆಲಸ ಮಾಡುತ್ತದೆ. ಈ ಫೋನಿನಲ್ಲಿ 32 ಮೆಗಾಪಿಕ್ಸೆಲ್ ಕ್ಯಾಮೆರಾ, 5200mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಇದು ಈಗಾಗಲೇ ಹಲವಾರು ದೇಶಗಳ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿದೆ. ಈ ಫೋನ್ ಭಾರತದಲ್ಲಿ ಇಂದು ಪೊಕೊ C71 (POCO C71) ಆಗಿ ಬಿಡುಗಡೆಯಾಗಲಿದೆ.

ರೆಡ್ಮಿ A5 ಮೊಬೈಲ್ ಮಿಡ್‌ನೈಟ್ ಬ್ಲಾಕ್ ಮತ್ತು ಸ್ಯಾಂಡಿ ಗೋಲ್ಡ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ. ಇದು ನಯವಾದ ವಿನ್ಯಾಸ ಹೊಂದಿದೆ. ಫ್ಲಾಟ್ ಫ್ರೇಮ್ ಮತ್ತು ವರ್ಧಿತ ಕ್ಯಾಮೆರಾ ಡೆಕೊದೊಂದಿಗೆ ಬರುತ್ತದೆ. ಈ ಫೋನ್ ಮ್ಯಾಟ್, ಕಲೆ ನಿರೋಧಕ ಮೇಲ್ಮೈಯನ್ನು ಹೊಂದಿದೆ. ಲೇಕ್ ಗ್ರೀನ್ ಮತ್ತು ಓಷನ್ ಬ್ಲೂ ರೂಪಾಂತರಗಳು ಪ್ರಕೃತಿಯಿಂದ ಸ್ಫೂರ್ತಿ ಪಡೆಯುತ್ತವೆ. ಈ ಫೋನಿನ ಬೆಲೆ ಮತ್ತು ಇನ್ನಿತರ ವಿಶೇಷತೆಗಳು ಈ ಕೆಳಗಿನಂತಿವೆ.

ರೆಡ್ಮಿ A5 ಫೋನಿನ ವೈಶಿಷ್ಟ್ಯಗಳು

ರೆಡ್ಮಿ A5 ಸ್ಮಾರ್ಟ್‌ಫೋನ್ 6.88 ಇಂಚಿನ ಡಿಸ್ಪ್ಲೇ ಹೊಂದಿದೆ. ಇದು ಎಚ್‌ಡಿ ಪ್ಲಸ್ ಐಪಿಎಸ್ ಎಲ್‌ಸಿಡಿ ಸ್ಕ್ರೀನ್ ಆಗಿದೆ. ಈ ಡಿಸ್ಪ್ಲೇಯು 1,640 x 720 ಪಿಕ್ಸೆಲ್‌ಗಳ ರೆಸಲ್ಯೂಶನ್ ಬೆಂಬಲ ಪಡೆದಿದೆ. ಇದರೊಂದಿಗೆ 120Hz ರಿಫ್ರೆಶ್ ದರ, 240Hz ಟಚ್ ಸ್ಯಾಂಪ್ಲಿಂಗ್ ದರ, ಡಿಸಿ ಡಿಮ್ಮಿಂಗ್ ಮತ್ತು ಕಣ್ಣಿನ ರಕ್ಷಣೆಯೊಂದಿಗೆ ಬರುತ್ತದೆ. ಈ ರೆಡ್ಮಿ A5 ಮೊಬೈಲ್ ಯುನಿಸಾಕ್ T7250 ಆಕ್ಟಾ-ಕೋರ್ ಪ್ರೊಸೆಸರ್ ಹೊಂದಿದೆ. ಇದನ್ನು 12 ನ್ಯಾನೊಮೀಟರ್ ಫ್ಯಾಬ್ರಿಕೇಶನ್‌ಗಳ ಆಧಾರದ ಮೇಲೆ ನಿರ್ಮಿಸಲಾಗಿದೆ. ಈ ಮೊಬೈಲ್ ಆಂಡ್ರಾಯ್ಡ್ 15 (ಗೋ ಆವೃತ್ತಿ) ಆಪರೇಟಿಂಗ್ ಸಿಸ್ಟಮ್‌ನೊಂದಿಗೆ ಕೆಲಸ ಮಾಡುತ್ತದೆ. ಗ್ರಾಫಿಕ್ಸ್‌ಗಾಗಿ ಈ ಫೋನ್, ಮಾಲಿ G57 MP1 ಜಿಪಿಯು ಸಹ ಹೊಂದಿದೆ.

ರೆಡ್ಮಿ A5 ಫೋನ್ ಅದ್ಭುತ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 32 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಇದರೊಂದಿಗೆ ಸೆಕೆಂಡರಿ ಕ್ಯಾಮೆರಾ ಮತ್ತು ಎಲ್‌ಇಡಿ (LED) ಫ್ಲ್ಯಾಶ್ ಇದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 8 ಮೆಗಾಪಿಕ್ಸೆಲ್ ಕ್ಯಾಮೆರಾ ಲಭ್ಯವಿದೆ. ಈ ರೆಡ್ಮಿ ಫೋನ್ 3GB ಮತ್ತು 4GB RAM ನೊಂದಿಗೆ ಬರುತ್ತದೆ. ಈ ಫೋನಿನಲ್ಲಿ 64GB ಮತ್ತು 128GB ಸ್ಟೋರೇಜ್ ಆಯ್ಕೆ ಒಳಗೊಂಡಿದೆ. ನೀವು ಮೈಕ್ರೋ ಎಸ್‌ಡಿ ಕಾರ್ಡ್​​ ಮೂಲಕ 2TB ವರೆಗೆ ಸ್ಟೋರೇಜ್ ವಿಸ್ತರಿಸುವ ಸೌಲಭ್ಯ ಹೊಂದಿದೆ.

ರೆಡ್ಮಿ A5 ಫೋನ್ 5200mAh ಸಾಮರ್ಥ್ಯದ ದೊಡ್ಡ ಬ್ಯಾಟರಿ ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 15W ವೇಗದ ಚಾರ್ಜಿಂಗ್ ಸೌಲಭ್ಯವನ್ನು ಒದಗಿಸಲಾಗಿದೆ. ಈ ರೆಡ್ಮಿ A5 ಮೊಬೈಲ್ ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಹೊಂದಿದೆ. ಹಾಗೆಯೇ 3.5mm ಆಡಿಯೋ ಜ್ಯಾಕ್, ಎಫ್‌ಎಂ ರೇಡಿಯೋ ಇದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಫೋನ್ ಡ್ಯುಯಲ್ ಸಿಮ್ (ನ್ಯಾನೋ + ಮೈಕ್ರೋ ಎಸ್‌ಡಿ), ಡ್ಯುಯಲ್ 4G VoLTE, ವೈ-ಫೈ, ಬ್ಲೂಟೂತ್ 5.2, ಜಿಪಿಎಸ್, ಗ್ಲೋನಾಸ್, ಗೆಲಿಲಿಯೋ, ಯುಎಸ್‌ಬಿ ಟೈಪ್ ಸಿ ಪೋರ್ಟ್ ಸೇರಿದಂತೆ ಹಲವು ಸೌಲಭ್ಯಗಳನ್ನು ಹೊಂದಿದೆ.

Best Mobiles in India

English summary
POCO C7 Launching in India Today at 12 PM: Here is everything you can expect
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+