Home
ಸುದ್ದಿಜಾಲ

7000ಕ್ಕಿಂತ ಕಡಿಮೆ! 2TB ಸ್ಟೋರೇಜ್.. 5200mAh ಬ್ಯಾಟರಿ.. ನಾಳೆ POCO C71 ಲಾಂಚ್

ಪೊಕೊ ಕಂಪನಿಯು ನಾಳೆ ಹೊಸ ಅಗ್ಗದ ಫೋನ್ ಬಿಡುಗಡೆ ಮಾಡಲಿದೆ. ಇತ್ತೀಚೆಗೆ ಈ ಫೋನಿನ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದೆ. ಹೌದು, ನೂತನ ಪೊಕೊ C71 (POCO C71) ಮೊಬೈಲ್ ನಾಳೆ (ಏಪ್ರಿಲ್ 4) ದೇಶೀಯ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ. ಕಂಪನಿಯು ಇದನ್ನು ಕಳೆದ ವರ್ಷ ಬಿಡುಗಡೆಯಾಗಿದ್ದ ಪೊಕೊ C61 (POCO C61) ಫೋನಿನ ಉತ್ತರಾಧಿಕಾರಿಯಾಗಿ ಪರಿಚಯಿಸುತ್ತಿದೆ. ಇದರ ಬೆಲೆ 7,000 ರೂ.ಗಿಂತ ಕಡಿಮೆ ಇರುತ್ತದೆ. ಈ ಫೋನಿನ ನಿರೀಕ್ಷಿತ ಬೆಲೆ ಮತ್ತು ವಿಶೇಷತೆಗಳನ್ನು ತಿಳಿಯಲು ಮುಂದೆ ಓದಿ.

ಅಗ್ಗದ ಸ್ಮಾರ್ಟ್‌ಫೋನ್ ಬಯಸುವ ಗ್ರಾಹಕರಿಗೆ ಪೊಕೊ C71 ಉತ್ತಮ ಆಯ್ಕೆಯಾಗಿದೆ. ಅಗ್ಗದ ಬೆಲೆಯನ್ನು ಹೊಂದಿದ್ದರೂ ಸಹ ಈ ಫೋನ್ ದೊಡ್ಡ ಡಿಸ್ಪ್ಲೇ, ಶಕ್ತಿಯುತ ಬ್ಯಾಟರಿ ಮತ್ತು ಅತ್ಯುತ್ತಮ ಕ್ಯಾಮೆರಾ ಸೆಟಪ್ ಸೇರಿದಂತೆ ಹಲವು ಅತ್ಯುತ್ತಮ ವೈಶಿಷ್ಟ್ಯಗಳೊಂದಿಗೆ ಬರಲಿದೆ. ಇದು ಸ್ಪ್ಲಿಟ್ ಗ್ರಿಡ್ ಮಾದರಿ ವಿನ್ಯಾಸ ಹೊಂದಿದೆ. ಈ ಮೊಬೈಲ್ ಮೂರು ಬಣ್ಣಗಳಲ್ಲಿ ಬರಲಿದೆ. ಪವರ್ ಬ್ಲ್ಯಾಕ್, ಕೂಲ್ ಬ್ಲೂ ಮತ್ತು ಡೆಸರ್ಟ್ ಗೋಲ್ಡ್ ಬಣ್ಣಗಳ ಆಯ್ಕೆಯಲ್ಲಿ ಖರೀದಿಸಬಹುದು. ಇದು IP52 ರೇಟಿಂಗ್, ಡ್ಯುಯಲ್ ಕ್ಯಾಮೆರಾ ಸೆಟಪ್ ಸೇರಿದಂತೆ ಹಲವು ವೈಶಿಷ್ಟ್ಯಗಳೊಂದಿಗೆ ನಾಳೆ (ಏಪ್ರಿಲ್ 4) ಭಾರತದಲ್ಲಿ ಬಿಡುಗಡೆಯಾಗಲಿದೆ.

7000ಕ್ಕಿಂತ ಕಡಿಮೆ! 2TB ಸ್ಟೋರೇಜ್.. 5200mAh ಬ್ಯಾಟರಿ.. ನಾಳೆ POCO C71 ಲಾಂಚ್

ಪೊಕೊ C71 ವೈಶಿಷ್ಟ್ಯಗಳು

ಪೊಕೊ C71 ಸ್ಮಾರ್ಟ್‌ಫೋನ್ ಇಂಚಿನ 6.88 ಇಂಚಿನ ಡಿಸ್ಪ್ಲೇ ಹೊಂದಿರಲಿದೆ. ಇದು 120Hz ರಿಫ್ರೆಶ್‌ ದರದ ಬೆಂಬಲದೊಂದಿಗೆ ಬರುತ್ತದೆ. ಇದು ಅಗ್ಗದ ಬಜೆಟ್‌ ವಿಭಾಗದಲ್ಲಿ ಅತಿದೊಡ್ಡ ಡಿಸ್ಪ್ಲೇ ಹೊಂದಿರುವ ಫೋನ್ ಆಗಿದೆ. ಪೊಕೊ C71 ಮೊಬೈಲ್ ಆಕ್ಟಾ ಕೋರ್ ಪ್ರೊಸೆಸರ್ ಹೊಂದಿರಲಿದೆ. ಇದು ಶಕ್ತಿಯುತ ಕಾರ್ಯಕ್ಷಮತೆಯನ್ನು ನೀಡುತ್ತದೆ. ಈ ಸ್ಮಾರ್ಟ್‌ಫೋನ್ 6GB RAM ಮತ್ತು 6GB ವರ್ಚುವಲ್ RAM ಹೊಂದಿರಲಿದೆ. ನೀವು ಒಟ್ಟು 12GB RAM ಬಳಸಬಹುದು. ನೀವು ಮೈಕ್ರೊ ಎಸ್‌ಡಿ ಕಾರ್ಡ್ ಮೂಲಕ 2TB ವರೆಗೆ ಸ್ಟೋರೇಜ್ ವಿಸ್ತರಿಸಬಹುದು.

ಪೊಕೊ C71 ಫೋನ್ 32 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಹೊಂದಿರಲಿದೆ. ಇದರೊಂದಿಗೆ ದ್ವಿತೀಯ ಕ್ಯಾಮೆರಾ ಸಹ ಇರುರುತ್ತದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನಿನಲ್ಲಿ 8 ಮೆಗಾಪಿಕ್ಸೆಲ್ ಸೆಲ್ಫಿ ಶೂಟರ್ ಲಭ್ಯವಿರುತ್ತದೆ. ಈ ವೈಶಿಷ್ಟ್ಯಗಳಲ್ಲಿ ಒಟ್ಟು 7 ಫಿಲ್ಮ್ ಫಿಲ್ಟರ್‌ಗಳು ಇರಲಿವೆ. ಈ ಪೊಕೊ ಸ್ಮಾರ್ಟ್‌ಫೋನ್ 5200mAh ಸಾಮರ್ಥ್ಯ ಬ್ಯಾಟರಿಯನ್ನು ಹೊಂದಿರಲಿದೆ. ಈ ಬೆಲೆ ವಿಭಾಗದಲ್ಲಿ ಈವರೆಗಿನ ದೊಡ್ಡ ಬ್ಯಾಟರಿ ಎಂದು ಹೇಳಲಾಗಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 15W ವೇಗದ ಚಾರ್ಜಿಂಗ್ ಸೌಲಭ್ಯ ನೀಡಲಾಗಿದೆ.

7000ಕ್ಕಿಂತ ಕಡಿಮೆ! 2TB ಸ್ಟೋರೇಜ್.. 5200mAh ಬ್ಯಾಟರಿ.. ನಾಳೆ POCO C71 ಲಾಂಚ್

ಪೊಕೊ C71 ಮೊಬೈಲ್ ಆಂಡ್ರಾಯ್ಡ್ 15 ಆಪರೇಟಿಂಗ್ ಸಿಸ್ಟಮ್‌ನೊಂದಿಗೆ ಕೆಲಸ ಮಾಡಲಿದೆ. ಇದು 2 ವರ್ಷಗಳ ಓಎಸ್ ನವೀಕರಣಗಳು ಮತ್ತು 4 ವರ್ಷಗಳ ಭದ್ರತಾ ನವೀಕರಣಗಳನ್ನು ಪಡೆಯಲಿದೆ. ಈ ಮೊಬೈಲ್ ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಹೊಂದಿದೆ. ಇದರೊಂದಿಗೆ 3.5 ಎಂಎಂ ಆಡಿಯೊ ಜ್ಯಾಕ್, ಡ್ಯುಯಲ್ ಬ್ಯಾಂಡ್ ವೈ-ಫೈ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿರುತ್ತದೆ.

ಪೊಕೊ C71 ಬೆಲೆ ಎಷ್ಟು?

ಪೊಕೊ C71 ಸ್ಮಾರ್ಟ್‌ಫೋನ್ ಅಗ್ಗದ ಬೆಲೆಯನ್ನು ಹೊಂದಿರಲಿದೆ. ಆದರೆ, ಕಂಪನಿಯು ಈ ಫೋನಿನ ಬೆಲೆಯ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ಪ್ರಕಟಿಸಿಲ್ಲ. ಆದರೆ ಈ ಫೋನ್ 7,000 ರೂ.ಗಳ ಬಜೆಟ್ ವಿಭಾಗದಲ್ಲಿ ಮಾರುಕಟ್ಟೆಗೆ ಬರುವ ಸಾಧ್ಯತೆಯಿದೆ. ಬಿಡುಗಡೆ ಬಳಿಕ ಆನ್‌ಲೈನ್ ಶಾಪಿಂಗ್ ಸೈಟ್ ಫ್ಲಿಪ್‌ಕಾರ್ಟ್‌ ಮೂಲಕ ಮಾರಾಟವಾಗಲಿದೆ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+