9000ಕ್ಕಿಂತ ಕಡಿಮೆ! ಕ್ಯಾಮೆರಾ, ಬ್ಯಾಟರಿ ಫೀಚರ್ಸ್ ತಿಳಿದ್ರೆ ಖುಷಿ ಆಗುತ್ತೆ; ಯಾವ ಫೋನ್?
ಪೊಕೊ ಸಂಸ್ಥೆಯು ಭಾರತದಲ್ಲಿ ಎರಡು ಹೊಸ ಫೋನ್‌ಗಳನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಇವು ಪೊಕೊ C75 5G (POCO C75 5G) ಮತ್ತು ಪೊಕೊ M7 ಪ್ರೊ (POCO M7 Pro) ಎಂಬ ಹೆಸರಿನೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡಲಿವೆ. ಹೌದು, ಕಂಪನಿಯು ಇದೇ ಡಿಸೆಂಬರ್ 17 ರಂದು ಈ ಮೊಬೈಲ್‌ಗಳನ್ನು ಅನಾವರಣಗೊಳಿಸಲಿದೆ. ಈ ಪೈಕಿ ಪೊಕೊ C75 5G ಫೋನಿನ ಬೆಲೆಯನ್ನು ಬಿಡುಗಡೆಗೂ ಮೊದಲೇ, ಬಹಿರಂಗಪಡಿಸಲಾಗಿದೆ. ಇದು ಅಗ್ಗದ ಬೆಲೆಯನ್ನು ಹೊಂದಿರಲಿದೆ. ಈ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
ಪೊಕೊ C75 5G ಮೊಬೈಲ್ 4GB RAM ಮತ್ತು 128GB ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಈ ಫೋನ್ 50 ಮೆಗಾಪಿಕ್ಸೆಲ್ ಡ್ಯುಯಲ್ ಕ್ಯಾಮೆರಾ ಹೊಂದಿರುತ್ತದೆ. ಇದು ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 4s ಜೆನ್ 2 ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. ಫೋನಿನಲ್ಲಿ 6.68 ಇಂಚಿನ ಡಿಸ್ಪ್ಲೇ ಲಭ್ಯವಿದೆ. ಜೊತೆಗೆ 4GB ವರ್ಚುವಲ್ RAM, 128GB ಸ್ಟೋರೇಜ್, 5160mAh ಬ್ಯಾಟರಿ ಮತ್ತು 18W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಪೊಕೊ C75 5G ಬೆಲೆ ಎಷ್ಟಿರಲಿದೆ?
ಪೊಕೊ C75 5G ಫೋನಿನ ಬೆಲೆಯು ಪೋಸ್ಟರ್ ಮೂಲಕ ಬಹಿರಂಗವಾಗಿದೆ. ಅದರಂತೆ 9,000 ರೂ. ಗಿಂತ ಕಡಿಮೆ ಬೆಲೆಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ. ಕಂಪನಿಯು ಈ ಅಗ್ಗದ 5G ಫೋನನ್ನು 8,999 ರೂ. ಅಥವಾ 8,499 ರೂ. ಆರಂಭಿಕ ಬೆಲೆಯಲ್ಲಿ ಮಾರಾಟ ಮಾಡುವ ಸಾಧ್ಯತೆಯಿದೆ.
ಪೊಕೊ C75 5G ವೈಶಿಷ್ಟ್ಯಗಳು (ಸೋರಿಕೆ)
ಡಿಸ್ಪ್ಲೇ ವಿವರ
ಪೊಕೊ C75 5G ಮೊಬೈಲ್ 6.68 ಇಂಚಿನ ಡಿಸ್ಪ್ಲೇ ಹೊಂದಿರಲಿದೆ. ಇದು ಹೆಚ್‌ಡಿ ಪ್ಲಸ್ ವಾಟರ್‌ಡ್ರಾಪ್ ಎಲ್‌ಸಿಡಿ ಡಿಸ್ಪ್ಲೇ ಆಗಿರಲಿದೆ. ಡಿಸ್ಪ್ಲೇಯು 120Hz ರಿಫ್ರೆಶ್ ದರ, 240Hz ಟಚ್ ಸ್ಯಾಂಪ್ಲಿಂಗ್ ದರ ಮತ್ತು 600 ನಿಟ್ಸ್ ಬ್ರೈಟ್‌ನೆಸ್ ಬೆಂಬಲ ಹೊಂದಿದೆ.
ಪ್ರೊಸೆಸರ್ ಸಾಮರ್ಥ್ಯ
ಮುಂಬರುವ ಪೊಕೊ C75 5G ಫೋನನ್ನು ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 4s ಜೆನ್ 2 ಪ್ರೊಸೆಸರ್‌ನೊಂದಿಗೆ ಬಿಡುಗಡೆಯಾಗಲಿದೆ. ಇದು 4 ನ್ಯಾನೋಮೀಟರ್ ಫ್ಯಾಬ್ರಿಕೇಶನ್‌ಗಳಲ್ಲಿ ತಯಾರಿಸಿರುವ ಆಕ್ಟಾಕೋರ್ ಪ್ರೊಸೆಸರ್ ಆಗಿದೆ. ಇತ್ತೀಚೆಗೆ ಬಿಡುಗಡೆಯಾದ Redmi A4 5G ಫೋನ್ ಇದೇ ಪ್ರೊಸೆಸರ್ ಹೊಂದಿದೆ. ಈ ಮೊಬೈಲ್ ಆಂಡ್ರಾಯ್ಡ್ 14 ಆಧಾರಿತ ಹೈಪರ್ ಆಪರೇಟಿಂಗ್ ಸಿಸ್ಟಂನಲ್ಲಿ ಕೆಲಸ ಮಾಡುತ್ತದೆ. ಜೊತೆಗೆ ಆಂಡ್ರಾಯ್ಡ್ 16 ಬೆಂಬಲ ಸಹ ಬೆಂಬಲ ಹೊಂದಿರಲಿದೆ.
ಸ್ಟೋರೇಜ್ ಆಯ್ಕೆ
ಪೊಕೊ C75 5G ಸ್ಮಾರ್ಟ್‌ಫೋನ್ 4GB RAM ನೊಂದಿಗೆ ಬಿಡುಗಡೆಯಾಗಿದೆ. ಇದರೊಂದಿಗೆ 4GB RAM ಬೂಸ್ಟ್ ತಂತ್ರಜ್ಞಾನ ಲಭ್ಯವಿರುತ್ತದೆ. ಅಂದರೆ, 4GB ಭೌತಿಕ RAM ಮತ್ತು 4GB ವರ್ಚುವಲ್ RAM ಮೂಲಕ 8GB RAM ಬಳಸಬಹುದು. ಈ ಫೋನ್ 64GB ಮತ್ತು 128GB ಸ್ಟೋರೇಜ್ ಆಯ್ಕೆ ಹೊಂದಿರುತ್ತದೆ.
ಕ್ಯಾಮೆರಾ ಸೆಟಪ್
ಪೊಕೊ C75 5G ಮೊಬೈಲ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿರುತ್ತದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನ್ 5 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿರಲಿದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ಕಂಪನಿಯು ಪೊಕೊ C75 5G ಫೋನನ್ನು 5000mAh ಸಾಮರ್ಥ್ಯಕ್ಕಿಂತ ದೊಡ್ಡ ಬ್ಯಾಟರಿಯೊಂದಿಗೆ ಬಿಡುಗಡೆ ಮಾಡಲಿದೆ. ಮಾಹಿತಿಯ ಪ್ರಕಾರ, ಇದು 5160mAh ಬ್ಯಾಟರಿ ಹೊಂದಿರುತ್ತದೆ. ಇದನ್ನು ಚಾರ್ಜ್ ಮಾಡಲು, 18W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗುತ್ತದೆ.


Click it and Unblock the Notifications








