9,000ಕ್ಕಿಂತ ಕಡಿಮೆ! ನಾಳೆ ಎರಡು ಹೊಸ POCO ಫೋನ್ ಲಾಂಚ್; ವಿಶೇಷತೆಗಳೇನು?
ಪೊಕೊ ಎರಡು ಹೊಸ ಫೋನ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಲು ಸಿದ್ಧವಾಗಿದೆ. ಇವುಗಳು ಪೊಕೊ M7 ಪ್ರೊ (POCO M7 Pro) ಮತ್ತು ಪೊಕೊ C75 5G (POCO C75 5G) ಹೆಸರಿನೊಂದಿಗೆ ದೇಶಿಯ ಮಾರುಕಟ್ಟೆಗೆ ಎಂಟ್ರಿ ಕೊಡಲಿವೆ. ಹೌದು, ಕಂಪನಿಯು ನಾಳೆ (ಡಿಸೆಂಬರ್ 17) ಈ ಮೊಬೈಲ್‌ಗಳನ್ನು ಅಧಿಕೃತವಾಗಿ ಲಾಂಚ್ ಮಾಡಲಿದೆ. ಈಗಾಗಲೇ, ಎರಡು ಫೋನ್‌ಗಳ ಬೆಲೆ ಕೂಡ ಬಹಿರಂಗವಾಗಿದೆ. ಕಂಪನಿಯು 10 ಸಾವಿರ ಮತ್ತು 15 ಸಾವಿರಕ್ಕಿಂತ ಕಡಿಮೆ ಬೆಲೆಯಲ್ಲಿ ಪರಿಚಯಿಸಲಿದೆ. ಬನ್ನಿ ಈ ಫೋನ್‌ಗಳ ವಿಶೇಷತೆಗಳನ್ನು ತಿಳಿಯೋಣ.
ಪೊಕೊ C75 5G ಫೋನ್ 4GB RAM + 128GB ಸ್ಟೋರೇಜ್ ರೂಪಾಂತರದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಈ ಫೋನ್ 50 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿರಲಿದೆ. ಇದು ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 4s ಜೆನ್ 2 ಪ್ರೊಸೆಸರ್‌ನಲ್ಲಿ ಕೆಲಸ ನಿರ್ವಹಿಸುತ್ತದೆ. ಈ ಫೋನಿನಲ್ಲಿ 6.68 ಇಂಚಿನ ಡಿಸ್ಪ್ಲೇ ಇದೆ. ಜೊತೆಗೆ 4GB ವರ್ಚುವಲ್ RAM, 128GB ಸ್ಟೋರೇಜ್, 5160mAh ಬ್ಯಾಟರಿ ಮತ್ತು 18W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಪೊಕೊ M7 ಪ್ರೊ ಮತ್ತು ಪೊಕೊ C75 5G ಬೆಲೆ
ಕಂಪನಿಯು ಪೋಸ್ಟರ್ ಮೂಲಕ ಪೊಕೊ C75 5G ಫೋನಿನ ಬೆಲೆಯನ್ನು ಬಹಿರಂಗಪಡಿಸಿದೆ. ಇದು 9,000 ರೂ. ಗಿಂತ ಕಡಿಮೆ ಬೆಲೆಗೆ ಬಿಡುಗಡೆಯಾಗಲಿದೆ. ಕಂಪನಿಯು ಈ ಅಗ್ಗದ 5G ಫೋನನ್ನು 8,999 ರೂ. ಅಥವಾ 8,499 ರೂ. ಆರಂಭಿಕ ಬೆಲೆಯಲ್ಲಿ ಮಾರಾಟ ಮಾಡುವ ನಿರೀಕ್ಷೆಯಿದೆ. ಪೊಕೊ M7 ಪ್ರೊ 5G ಮೊಬೈಲ್ 15,000 ರೂ.ಗಿಂತ ಕಡಿಮೆ ಬೆಲೆಗೆ ಬಿಡುಗಡೆಯಾಗುವ ಸಾಧ್ಯತೆಯಿದೆ. ಈ ಫೋನ್‌ಗಳು ಬಿಡುಗಡೆಯ ಬಳಿಕ ಫ್ಲಿಪ್ಕಾರ್ಟ್ ಮೂಲಕ ಮಾರಾಟವಾಗಲಿವೆ.
ಪೊಕೊ C75 5G ವೈಶಿಷ್ಟ್ಯಗಳು
ಡಿಸ್ಪ್ಲೇ ಹೇಗಿರಲಿದೆ
ಪೊಕೊ C75 5G ಸ್ಮಾರ್ಟ್‌ಫೋನ್ 6.68 ಇಂಚಿನ ಡಿಸ್ಪ್ಲೇ ಹೊಂದಿರುತ್ತದೆ. ಇದು ಹೆಚ್‌ಡಿ ಪ್ಲಸ್ ವಾಟರ್‌ಡ್ರಾಪ್ ಎಲ್‌ಸಿಡಿ ಡಿಸ್ಪ್ಲೇ ಆಗಿದೆ. ಡಿಸ್ಪ್ಲೇಯು 120Hz ರಿಫ್ರೆಶ್ ದರ, 240Hz ಟಚ್ ಸ್ಯಾಂಪ್ಲಿಂಗ್ ದರ ಮತ್ತು 600 ನಿಟ್ಸ್ ಬ್ರೈಟ್‌ನೆಸ್ ಬೆಂಬಲ ಹೊಂದಿದೆ.
ಪ್ರೊಸೆಸರ್ ಯಾವುದು?
ಪೊಕೊ C75 5G ಮೊಬೈಲ್ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 4s ಜೆನ್ 2 ಪ್ರೊಸೆಸರ್‌ನೊಂದಿಗೆ ಬಿಡುಗಡೆಯಾಗಲಿದೆ. ಇದು 4 ನ್ಯಾನೋಮೀಟರ್ ಫ್ಯಾಬ್ರಿಕೇಶನ್‌ಗಳಲ್ಲಿ ತಯಾರಿಸಿರುವ ಆಕ್ಟಾಕೋರ್ ಪ್ರೊಸೆಸರ್ ಆಗಿದೆ. ಈ ಮೊಬೈಲ್ ಆಂಡ್ರಾಯ್ಡ್ 14 ಆಧಾರಿತ ಹೈಪರ್ ಆಪರೇಟಿಂಗ್ ಸಿಸ್ಟಂನಲ್ಲಿ ಕೆಲಸ ಮಾಡುತ್ತದೆ. ಜೊತೆಗೆ ಆಂಡ್ರಾಯ್ಡ್ 16 ಬೆಂಬಲ ಸಹ ಬೆಂಬಲ ಹೊಂದಿರಲಿದೆ.
128GB ಸ್ಟೋರೇಜ್
ಪೊಕೊ C75 5G ಫೋನ್ 4GB RAM ನೊಂದಿಗೆ ಬಿಡುಗಡೆಯಾಗಿದೆ. ಇದರೊಂದಿಗೆ 4GB RAM ಬೂಸ್ಟ್ ತಂತ್ರಜ್ಞಾನ ಲಭ್ಯವಿರುತ್ತದೆ. ಅಂದರೆ, 4GB ಭೌತಿಕ RAM ಮತ್ತು 4GB ವರ್ಚುವಲ್ RAM ಮೂಲಕ 8GB RAM ಬಳಸಬಹುದು. ಈ ಫೋನ್ 64GB ಮತ್ತು 128GB ಸ್ಟೋರೇಜ್ ಆಯ್ಕೆ ಹೊಂದಿರುತ್ತದೆ.

ಡ್ಯುಯಲ್ ಕ್ಯಾಮೆರಾ ಸೆಟಪ್
ಪೊಕೊ C75 5G ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿರುತ್ತದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನ್ 5 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿರಲಿದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ಕಂಪನಿಯು ಪೊಕೊ C75 5Gಮೊಬೈಲ್ 5000mAh ಸಾಮರ್ಥ್ಯಕ್ಕಿಂತ ದೊಡ್ಡ ಬ್ಯಾಟರಿಯೊಂದಿಗೆ ಬಿಡುಗಡೆ ಮಾಡಲಿದೆ. ಮಾಹಿತಿಯ ಪ್ರಕಾರ, ಇದು 5160mAh ಬ್ಯಾಟರಿ ಹೊಂದಿರುತ್ತದೆ. ಇದನ್ನು ಚಾರ್ಜ್ ಮಾಡಲು, 18W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗುತ್ತದೆ.
ಪೊಕೊ M7 ಪ್ರೊ 5G ವೈಶಿಷ್ಟ್ಯಗಳು
ಪೊಕೊ M7 ಪ್ರೊ 5G ಮೊಬೈಲ್ 6.67 ಅಮೋಲೆಡ್ ಇಂಚಿನ ಡಿಸ್ಪ್ಲೇ ಹೊಂದಿರಲಿದೆ. ಇದು ಪೂರ್ಣ ಎಚ್‌ಡಿ ಪ್ಲಸ್ ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ದರದ ಬೆಂಬಲ ಹೊಂದಿದೆ. ಡಿಸ್ಪ್ಲೇಯು 2,100 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಸಪೋರ್ಟ್ ಪಡೆದಿದೆ. ಇದು ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ರಕ್ಷಣೆಯನ್ನು ಹೊಂದಿದೆ. ಈ ಮೊಬೈಲ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ.


Click it and Unblock the Notifications








