Home
ಸುದ್ದಿಜಾಲ

POCO: 50MP ಕ್ಯಾಮೆರಾ, ದೊಡ್ಡ ಡಿಸ್ಪ್ಲೇ.. ಕಡಿಮೆ ಬೆಲೆಗೆ ಹೊಸ ಫೋನ್! ಲಾಂಚ್ ಯಾವಾಗ?

ಪೊಕೋ (POCO) ಕಂಪನಿಯು ಹೊಸ ಮೊಬೈಲ್‌ ಬಿಡುಗಡೆಗೆ ತಯಾರಿ ನಡೆಸುತ್ತಿದೆ. ಈ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ತನ್ನ 'C' ಸರಣಿಯನ್ನು ವಿಸ್ತರಿಸಲು ಮುಂದಾಗಿದೆ. ಇದು, ಪೊಕೋ C75 (POCO C75) ಹೆಸರಿನೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಮುಂಬರುವ ಪೊಕೋ C75 ಕಡಿಮೆ ಬಜೆಟ್ ಸ್ಮಾರ್ಟ್‌ಫೋನ್ ಆಗಿರಲಿದೆ. ಬಿಡುಗಡೆಗೂ ಮುನ್ನವೇ, ಈ ಫೋನಿನ ಫೋಟೋ ಮತ್ತು ಪ್ರಮುಖ ವೈಶಿಷ್ಟ್ಯಗಳು ಸೋರಿಕೆಯಾಗಿವೆ. ಬನ್ನಿ, ಈ ಫೋನ್ ಯಾವೆಲ್ಲಾ ವಿಶೇಷತೆಗಳನ್ನು ಹೊಂದಿದೆ ಎನ್ನುವುದನ್ನು ತಿಳಿಯೋಣ.

ಕಂಪನಿಯು ತನ್ನ ಗ್ರಾಹಕರ ಬಜೆಟ್‌ ಗಮನದಲ್ಲಿಟ್ಟುಕೊಂಡು ಪೊಕೋ C75 ಫೋನನ್ನು ಪರಿಚಯಿಸುತ್ತಿದೆ. ಈ ಮೊಬೈಲ್ 6.88 ಇಂಚಿನ ದೊಡ್ಡ ಡಿಸ್ಪ್ಲೇಯನ್ನು ಹೊಂದಿರಲಿದೆ. ಇದು ಮೀಡಿಯಾ ಟೆಕ್ ಹೆಲಿಯೊ G85 ಆಕ್ಟಾಕೋರ್ ಪ್ರೊಸೆಸರ್‌ನೊಂದಿಗೆ ಕೆಲಸ ನಿರ್ವಹಿಸಲಿದೆ. ಈ ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದು ಎಲ್ಇಡಿ ಫ್ಲ್ಯಾಶ್ ಹೊಂದಿರುವ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಒಳಗೊಂಡಿದೆ. ಇದರೊಂದಿಗೆ, ಈ ಪೋನ್ 5,160mAh ಬ್ಯಾಟರಿ ಮತ್ತು 18W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

POCO: 50MP ಕ್ಯಾಮೆರಾ, ದೊಡ್ಡ ಡಿಸ್ಪ್ಲೇ.. ಕಡಿಮೆ ಬೆಲೆಗೆ ಹೊಸ ಫೋನ್!

ಸೋರಿಕೆಯಾದ ಫೋಟೋದಲ್ಲಿ, ಪೊಕೋ C75 ಸ್ಮಾರ್ಟ್‌ಫೋನ್ ಅನ್ನು ಮೂರು ಬಣ್ಣಗಳಲ್ಲಿ ಕಾಣಬಹುದು. ಈ ಮೊಬೈಲ್ ಅನ್ನು ಕಪ್ಪು, ಗೋಲ್ಡ್ (ಚಿನ್ನ) ಮತ್ತು ಹಸಿರು ಬಣ್ಣಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಹಿಂದಿನ ಪ್ಯಾನೆಲ್‌ನಲ್ಲಿ ವೃತ್ತಾಕಾರದ ಕ್ಯಾಮೆರಾ ಸೆಟಪ್‌ ಗೋಚರಿಸುತ್ತದೆ. ಇದರಲ್ಲಿ ಕೇವಲ ಎರಡು ಸಂವೇದಕಗಳು ಮಾತ್ರ ಲಭ್ಯವಿರುತ್ತವೆ.

ಪೊಕೋ C75 ಫೋನಿನ ವೈಶಿಷ್ಟ್ಯಗಳು (ಸೋರಿಕೆ)

ಡಿಸ್ಪ್ಲೇ ವಿವರ

ಪೊಕೋ C75 ಸ್ಮಾರ್ಟ್‌ಫೋನ್ 6.88 ಇಂಚಿನ ದೊಡ್ಡ ಡಿಸ್ಪ್ಲೇಯೊಂದಿಗೆ ಬಿಡುಗಡೆಯಾಗುವ ಸಾಧ್ಯತೆಯಿದೆ. ಸೋರಿಕೆಯ ಪ್ರಕಾರ, ಇದು ಎಚ್‌ಡಿ ಪ್ಲಸ್ ರೆಸಲ್ಯೂಶನ್ ಹೊಂದಿರುವ ಎಲ್‌ಸಿಡಿ ಡಿಸ್ಪ್ಲೇ ಆಗಿದೆ. ಇದನ್ನು 'U' ಆಕಾರದ ವಾಟರ್‌ಡ್ರಾಪ್ ನಾಚ್ ವಿನ್ಯಾಸದಲ್ಲಿ ಮಾಡಲಾಗುವುದು. ಈ ಫೋನ್ ಡಿಸ್ಪ್ಲೇ 120Hz ರಿಫ್ರೆಶ್ ದರದ ಬೆಂಬಲವನ್ನು ಹೊಂದಿರಲಿದೆ.

ಪ್ರೊಸೆಸರ್ ಸಾಮರ್ಥ್ಯ

ವರದಿಯ ಪ್ರಕಾರ, ಪೊಕೋ C75 ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಹೆಲಿಯೊ G85 ಆಕ್ಟಾಕೋರ್ ಪ್ರೊಸೆಸರ್‌ನೊಂದಿಗೆ ಕಾರ್ಯನಿರ್ವಹಿಸುವ ಸಾಧ್ಯತೆಯಿದೆ. ಇದನ್ನು 12 ನ್ಯಾನೊಮೀಟರ್ ಫ್ಯಾಬ್ರಿಕೇಶನ್‌ಗಳ ಮೇಲೆ ನಿರ್ಮಿಸಲಾಗಿದೆ. 8 ಕೋರ್ ಪ್ರೊಸೆಸರ್ ಎರಡು 2GHz ಕಾರ್ಟೆಕ್ಸ್ A75 ಕೋರ್‌ಗಳನ್ನು ಮತ್ತು ಆರು 1.8GHz ಕಾರ್ಟೆಕ್ಸ್ A55 ಅನ್ನು ಒಳಗೊಂಡಿದೆ.

ಸ್ಟೋರೇಜ್ ಆಯ್ಕೆ

ಈ ಮೊಬೈಲ್ ಅನ್ನು ಎರಡು ಸ್ಟೋರೇಜ್‌ ರೂಪಾಂತರಗಳಲ್ಲಿ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಬಹುದು. ಮಾಹಿತಿಯ ಪ್ರಕಾರ, ಫೋನಿನ ಮೂಲ ರೂಪಾಂತರವು 6GB RAM ಜೊತೆಗೆ 128GB ಸ್ಟೋರೇಜ್‌ ಅನ್ನು ಹೊಂದಿರಲಿದೆ. ಜೊತೆಗೆ, ಟಾಪ್ ಮಾಡೆಲ್ 8GB RAM ಮತ್ತು 256GB ಸ್ಟೋರೇಜ್‌ನೊಂದಿಗೆ ಬಿಡುಗಡೆಯಾಗಿದೆ. ಇತ್ತೀಚೆಗೆ ಫೋನಿನ 8GB ರೂಪಾಂತರವನ್ನು ಬೆಂಚ್‌ಮಾರ್ಕಿಂಗ್ ಸೈಟ್ ಗೀಕ್‌ಬೆಂಚ್‌ನಲ್ಲಿ ಪಟ್ಟಿ ಮಾಡಲಾಗಿದೆ.

ಕ್ಯಾಮೆರಾ ಸೆಟಪ್

ಪೊಕೋ C75 ಫೋನಿನಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಇರಲಿದೆ. ಇದು ಎಲ್ಇಡಿ ಫ್ಲ್ಯಾಶ್‌ನೊಂದಿಗೆ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಹೊಂದಿರಲಿದೆ. ಜೊತೆಗೆ, 0.08 ಮೆಗಾಪಿಕ್ಸೆಲ್ ಆಕ್ಸಿಲರಿ ಲೆನ್ಸ್ ಇರುತ್ತದೆ. ಈ ಸ್ಮಾರ್ಟ್‌ಫೋನ್ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 13 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ಹೊಂದಿರುತ್ತದೆ.

ಬ್ಯಾಟರಿ ಬ್ಯಾಕಪ್

ಮುಂಬರುವ ಪೊಕೋ C75 ಸ್ಮಾರ್ಟ್‌ಫೋನ್ 5,160mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದೆ. ಈ ದೊಡ್ಡ ಬ್ಯಾಟರಿಯನ್ನು ವೇಗವಾಗಿ ಚಾರ್ಜ್ ಮಾಡಲು, 18W ವೇಗದ ಚಾರ್ಜಿಂಗ್ ತಂತ್ರಜ್ಞಾನವನ್ನು ಒದಗಿಸಲಾಗುತ್ತದೆ.

ಇತರೆ ವೈಶಿಷ್ಟ್ಯಗಳು

ಪೋಕೋ C75 ಫೋನಿನಲ್ಲಿ NFC ಬೆಂಬಲವನ್ನು ಸಹ ಒದಗಿಸಬಹುದು. ಈ ಫೋನಿನಲ್ಲಿ 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಮತ್ತು ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸಂವೇದಕವನ್ನು ಸಹ ನೀಡಲಾಗುತ್ತದೆ.

Best Mobiles in India

English summary
POCO C75 smartphones india launch soon. image and specifications leaked before launch
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+