POCO C75 ಬಿಡುಗಡೆ ದಿನಾಂಕ ಪ್ರಕಟ; ಕೇವಲ 9000 ರೂ.! ಹೇಗಿವೆ ಫೀಚರ್ಸ್?
ಪೊಕೋ (POCO) ಹೊಸ ಮೊಬೈಲ್ ಬಿಡುಗಡೆಗೆ ಸಿದ್ಧವಾಗಿದೆ. ಕಂಪನಿಯು ಪೊಕೋ C75 (POCO C75) ಅನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ. ಈ ಮೂಲಕ ತನ್ನ 'C' ಸರಣಿಯನ್ನು ವಿಸ್ತರಿಸಲಿದೆ. ಹೌದು, ಕಂಪನಿಯೇ ತನ್ನ ಮುಂಬರುವ ಪೊಕೋ C75 ಫೋನಿನ ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಿದೆ. ಇದೇ ಅಕ್ಟೋಬರ್ 25 ರಂದು ಪೊಕೋ C75 ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಕಂಪನಿಯು 9 ಸಾವಿರ ರೂ.ಗಳ ಬಜೆಟ್‌ನಲ್ಲಿ ಫೋನನ್ನು ಪರಿಚಯಿಸಲಿದೆ. ಬನ್ನಿ, ಈ ಫೋನಿನಲ್ಲಿ ಯಾವೆಲ್ಲಾ ವಿಶೇಷತೆಗಳಿವೆ ಎನ್ನುವುದನ್ನು ತಿಳಿಯೋಣ.
ಕಂಪನಿಯು ಬಜೆಟ್ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಪೊಕೋ C75 ಅನ್ನು ಅನಾವರಣಗೊಳಿಸುತ್ತಿದೆ. ಈ ಫೋನ್ ಮೀಡಿಯಾ ಟೆಕ್ ಹೆಲಿಯೊ G85 ಪ್ರೊಸೆಸರ್ ಹೊಂದಿರಲಿದೆ. ಇದು 6.88 ಇಂಚಿನ ದೊಡ್ಡ ಡಿಸ್ಪ್ಲೇಯೊಂದಿಗೆ ಬರುತ್ತದೆ. ಇದರಲ್ಲಿ 8GB RAM + 256GB ಸ್ಟೋರೇಜ್ ಲಭ್ಯವಿರಲಿದೆ. ಈ ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಮತ್ತು 50 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿದೆ. ಜೊತೆಗೆ 5160mAh ಬ್ಯಾಟರಿ, 18W ಚಾರ್ಜಿಂಗ್ ಮುಂತಾದ ವಿಶೇಷತೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ.

ಪೊಕೊ C75 ಫೋನಿನ ಬೆಲೆ
ಕಂಪನಿಯು ಸಾಮಾಜಿಕ ಜಾಲತಾಣದಲ್ಲಿ ಪೊಕೋ C75 ಬೆಲೆಯನ್ನು ಬಹಿರಂಗಪಡಿಸಿದೆ. ಈ ಫೋನಿನ ಆರಂಭಿಕ ಬೆಲೆ ಸುಮಾರು 9,100 ರೂ. ($ 109) ಆಗಿದೆ. ಇದು ಫೋನಿನ 6GB RAM + 128GB ಸ್ಟೋರೇಜ್ ರೂಪಾಂತರದ ಬೆಲೆಯಾಗಿದೆ. 8GB RAM + 256GB ಸ್ಟೋರೇಜ್ ರೂಪಾಂತರವನ್ನು 10,800 ರೂಗೆ ($129) ಬಿಡುಗಡೆ ಮಾಡಲಾಗುವುದು. ಈ ಫೋನ್ ಜಾಗತಿಕ ಮಾರುಕಟ್ಟೆಯಲ್ಲಿ ಕಪ್ಪು, ಗೋಲ್ಡ್ (ಚಿನ್ನ) ಮತ್ತು ಹಸಿರು ಬಣ್ಣಗಳಲ್ಲಿ ಮಾರಾಟವಾಗಲಿದೆ.
ಪೊಕೋ C75 ಫೋನಿನ ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ಪೊಕೋ C75 ಸ್ಮಾರ್ಟ್‌ಫೋನ್ 6.88 ಇಂಚಿನ ಎಚ್‌ಡಿ ಪ್ಲಸ್ ರೆಸಲ್ಯೂಶನ್ ಡಿಸ್ಪ್ಲೇಯನ್ನು ಹೊಂದಿರಲಿದೆ. ದೊಡ್ಡ ಪರದೆಯ ಮೇಲೆ ಬಿಡುಗಡೆಯಾಗಲಿದೆ. ಇದು ಎಲ್‌ಸಿಡಿ ಪ್ಯಾನೆಲ್ ಆಗಿದ್ದು, 120Hz ರಿಫ್ರೆಶ್ ದರದ ಬೆಂಬಲ ಪಡೆದಿದೆ.
ಪ್ರೊಸೆಸರ್ ಸಾಮರ್ಥ್ಯ
ಕಂಪನಿಯು ಪೊಕೋ C75 ಫೋನಿನಲ್ಲಿ ಮೀಡಿಯಾ ಟೆಕ್ ಹೆಲಿಯೊ G85 ಆಕ್ಟಾ ಕೋರ್ ಪ್ರೊಸೆಸರ್ ಅನ್ನು ಅಳವಡಿಸುವ ಸಾಧ್ಯತೆಯಿದೆ. ಈ ಫೋನ್ ಆಂಡ್ರಾಯ್ಡ್ 14 ಓಎಸ್‌ನಲ್ಲಿ ಕೆಲಸ ಮಾಡಲಿದೆ. ಇದು 2GHz ಗಡಿಯಾರದ ವೇಗದಲ್ಲಿ ಕೆಲಸ ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ.
ಸ್ಟೊರೇಜ್ ಆಯ್ಕೆ
ಪೊಕೋ C75 ಫೋನ್ ಎರಡು ಸ್ಟೋರೇಜ್ ರೂಪಾಂತರಗಳಲ್ಲಿ ಖರೀದಿಗೆ ಲಭ್ಯವಿರುತ್ತದೆ. ಮೂಲ ಮಾದರಿಯು 128GB ಸ್ಟೋರೇಜ್‌ನೊಂದಿಗೆ 6GB RAM ಹೊಂದಿರುತ್ತದೆ. ಟಾಪ್ ವೇರಿಯಂಟ್ 256GB ಸ್ಟೋರೇಜ್‌ನೊಂದಿಗೆ 8GB RAM ಹೊಂದಿರುತ್ತದೆ. ಪ್ರಸ್ತುತ, ವರ್ಚುವಲ್ RAM ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ಕ್ಯಾಮೆರಾ ಸೆಟಪ್
ಪೊಕೋ C75 ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದು ವೃತ್ತದ ಆಕಾರದಲ್ಲಿದೆ. ಎಲ್ಇಡಿ ಫ್ಲ್ಯಾಷ್‌ನೊಂದಿಗೆ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾವನ್ನು ಹೊಂದಿದೆ. ಮತ್ತು 0.08 ಮೆಗಾಪಿಕ್ಸೆಲ್ ಸೆಕೆಂಡರಿ ಲೆನ್ಸ್ ಇರುತ್ತದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 13 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ಹೊಂದಿರುತ್ತದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ಪೊಕೋ C75 ಮೊಬೈಲ್ 5160mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರುತ್ತದೆ. ಈ ಬ್ಯಾಟರಿಯನ್ನು ವೇಗವಾಗಿ ಚಾರ್ಜ್ ಮಾಡಲು, 18W ಚಾರ್ಜಿಂಗ್ ಬೆಂಬಲವನ್ನು ಹೊಂದಿದೆ.
ಇತರೆ ವೈಶಿಷ್ಟ್ಯಗಳು
ಪೋಕೋ C75 ಫೋನ್ ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸಂವೇದಕ ಮತ್ತು 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಹೊಂದಿರಲಿದೆ. ಜೊತೆಗೆ, ಎನ್ಎಫ್‌ಸಿ (NFC) ಬೆಂಬಲವನ್ನು ಸಹ ಒದಗಿಸಲಾಗುತ್ತದೆ.


Click it and Unblock the Notifications








