Home
ಸುದ್ದಿಜಾಲ

ಪೋಕೋ ಎಫ್ 1 ಗೆ ಭರ್ಜರಿ ರಿಯಾಯಿತಿ – 2000 ರುಪಾಯಿ ಕಡಿಮೆ ಬೆಲೆ

By Gizbot Bureau

ಚೀನಾದ ಸ್ಮಾರ್ಟ್ ಫೋನ್ ಬ್ರ್ಯಾಂಡ್ ಶಿಯೋಮಿಯ ಅತ್ಯಂತ ಶಕ್ತಿಶಾಲಿ ಸ್ಮಾರ್ಟ್ ಫೋನ್ ಭಾರತದಲ್ಲಿ ಲಭ್ಯವಿದೆ. ಅದುವೇ ಪೋಕೋ ಎಫ್ 1. ಹೌದು ಇದೀಗ ಪೋಕೋ ಎಫ್ 1 ಫೋನ್ ನ್ನು 2,000 ರುಪಾಯಿ ರಿಯಾಯಿತಿ ಬೆಲೆಯಲ್ಲಿ ಖರೀದಿಸುವ ಅವಕಾಶ ಗ್ರಾಹಕರಿಗೆ ಲಭ್ಯವಿದೆ.

ಪೋಕೋ ಎಫ್ 1 ಗೆ ಭರ್ಜರಿ ರಿಯಾಯಿತಿ – 2000 ರುಪಾಯಿ ಕಡಿಮೆ ಬೆಲೆ

ಪೋಕೋ ಡೇಸ್ ಸೇಲ್ ನ ಭಾಗವಾಗಿ ಈ ಆಫರ್ ಲಭ್ಯವಾಗುತ್ತಿದ್ದು ಜೂನ್ 5 ರಿಂದ ಜೂನ್ 9 ರ ವರೆಗೆ ಈ ಸೇಲ್ ನಡೆಯಲಿದೆ. ಬೇಸ್ ಮಾಡೆಲ್ ಆಗಿರುವ 6ಜಿಬಿ ಮೆಮೊರಿ ಮತ್ತು 64ಜಿಬಿ ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆಯ ಫೋನ್ ನ್ನು ಈ ಸೇಲ್ ನಲ್ಲಿ ರುಪಾಯಿ 17,999 ಕ್ಕೆ ಮಾರಾಟ ಮಾಡಲಾಗುತ್ತಿದೆ. ಫ್ಲಿಪ್ ಕಾರ್ಟ್ ಮತ್ತು ಶಿಯೋಮಿಯ ಅಧಿಕೃತ ಆನ್ ಲೈನ್ ಸ್ಟೋರ್ ಎಂಐ.ಕಾಮ್ ಎರಡರಲ್ಲೂ ಕೂಡ ಪೋಕೋ ಎಫ್ 1 ಇದೇ ಬೆಲೆಗೆ ಲಭ್ಯವಾಗುತ್ತದೆ.

ಕ್ವಾಲ್ಕಂನ ಫ್ಲ್ಯಾಗ್ ಶಿಪ್ ಪ್ರೊಸೆಸರ್ ಮತ್ತು ಸ್ನ್ಯಾಪ್ ಡ್ರ್ಯಾಗನ್ 845 ನಲ್ಲಿ ರನ್ ಆಗುವ ಅತೀ ಕಡಿಮೆ ಬೆಲೆಯ ಹ್ಯಾಂಡ್ ಸೆಟ್ ಎಂದರೆ ಅದು ಪೋಕೋ ಎಫ್1. ಇದೀಗ 6ಜಿಬಿ ಮೆಮೊರಿ ವೇರಿಯಂಟ್ ನ ಪೋಕೋ ಎಫ್1 ಸ್ಮಾರ್ಟ್ ಫೋನಿಗೆ ಮಾತ್ರವೇ 2,000 ರುಪಾಯಿಯ ರಿಯಾಯಿತಿ ಬೆಲೆ ಲಭ್ಯವಿದೆ. ಇದನ್ನು ಹೊರತುಪಡಿಸಿ, ಪೋಕೋ ಎಫ್ 1 ಎರಡು ವಿಭಿನ್ನ ಸ್ಟೋರೇಜ್ ಆಯ್ಕೆಗಳಲ್ಲಿ ಲಭ್ಯವಾಗುತ್ತದೆ- 6GBRAM/128GB ಮತ್ತು 8GB RAM/265GB. 6GB RAM ಮತ್ತು 128GB ಸ್ಟೋರೇಜ್ ಆಯ್ಕೆಯ ಫೋನ್ ರುಪಾಯಿ 20,999ಗೆ ಮತ್ತು 8GB RAM ಮತ್ತು 256GB ಸ್ಟೋರೇಜ್ ವೇರಿಯಂಟ್ ನ ಫೋನ್ ರುಪಾಯಿ 27,999 ಕ್ಕೆ ಖರೀದಿಸುವ ಅವಕಾಶವಿದೆ. .

ಬೇಸ್ ವೇರಿಯಂಟ್ ಪೋಕೋ ಎಫ್ 1 ಮೂರು ವಿಭಿನ್ನ ಬಣ್ಣಗಳ ಆಯ್ಕೆಯಲ್ಲಿ ಎಂಐ.ಕಾಮ್ ನಲ್ಲಿ ಲಭ್ಯವಿದೆ – ರೋಸ್ಸೋ ರೆಡ್, ಗ್ರಾಫೈಟ್ ಬ್ಲಾಕ್ ಮತ್ತು ಸ್ಟೀಲ್ ಬ್ಲೂ. ಆದರೆ ಫ್ಲಿಪ್ ಕಾರ್ಟ್ ನಲ್ಲಿ ಕೇವಲ ಗ್ರಾಫೈಟ್ ಬ್ಲಾಕ್ ಆಯ್ಕೆ ಮಾತ್ರವೇ ಲಭ್ಯವಿದೆ.

ಕಳೆದ ತಿಂಗಳು ಕಂಪೆನಿಯು 6GB RAM ಮತ್ತು 128GB ಇಂಟರ್ನಲ್ ಸ್ಟೋರೇಜ್ ವೇರಿಯಂಟ್ ನ ಪೋಕೋ ಎಫ್ 1 ಗೆ 2,000 ರುಪಾಯಿ ಬೆಲೆಯನ್ನು ಇಳಿಕೆ ಮಾಡಿತ್ತು. ಅದಾದ ನಂತರ 20,999 ರುಪಾಯಿಗೆ ಪೋಕೋ ಎಫ್ 1 ನ್ನು ಮಾರಾಟ ಮಾಡಲಾಗುತ್ತಿತ್ತು.

ಶಿಯೋಮಿ ಪೋಕೋ ಎಫ್1 ವೈಶಿಷ್ಟ್ಯತೆಗಳು:

ಪೋಕೋ ಎಫ್ 1 ಗೆ ಪಾಲಿಕಾರ್ಬೋನೇಟ್ ಯುನಿಬಾಡಿ ಡಿಸೈನ್ ಹೊಂದಿದೆ ಮತ್ತು 6.18-ಇಂಚಿನ ಸ್ಕ್ರೀನ್ ಹೊಂದಿದ್ದು FHD+ ರೆಸಲ್ಯೂಷನ್ (2340 x 1080 ಪಿಕ್ಸಲ್ಸ್) ಜೊತೆಗೆ ನಾಚ್ ಡಿಸ್ಪ್ಲೇಯನ್ನು ಹೊಂದಿದೆ ಮತ್ತು ಅದರ ಆಸ್ಪೆಕ್ಟ್ ಅನುಪಾತ19:9 ಆಗಿದೆ. ಕ್ವಾಲ್ಕಂನ 2.8Ghz 10nn ಫಿನ್ ಫೆಟ್ ಸ್ನ್ಯಾಪ್ ಡ್ರ್ಯಾಗನ್ 845 ಪ್ರೊಸೆಸರ್ ಜೊತೆಗೆ Adreno 630 GPU ನಿಂದ ಇದು ಪವರ್ ಫುಲ್ ಆಗಿದೆ.

ಇದು ಪೋಕೋ MIUI ನಲ್ಲಿ ರನ್ ಆಗುತ್ತದೆ. ಇದು ಶಿಯೋಮಿಯ ನೇವಿಟ್ ಕಸ್ಟಮ್ ಯುಐ ಜೊತೆಗೆ ಪೋಕೋ ಲಾಂಚರ್ ನ್ನು ಹೊಂದಿದ್ದು ಆಂಡ್ರಾಯ್ಡ್ 8.1 ಓರಿಯೋ ಆಧಾರಿತವಾಗಿದೆ. ಆಪ್ ಡ್ರಾಯರ್ ಮತ್ತು ಕಸ್ಟಮೈಸೇಷನ್ ವೈಶಿಷ್ಟ್ಯತಗಳನ್ನು ಒಳಗೊಂಡಿದೆ. 4000mAh ನ ಬ್ಯಾಟರಿ ಸಾಮರ್ಥ್ಯವಿದ್ದು 8 ಘಂಟೆಗಳ ಗೇಮಿಂಗ್, 30 ಘಂಟೆಗಳ ಟಾಕ್ ಟೈಮ್ ಮತ್ತು 15 ದಿನಗಳ ಸ್ಟ್ಯಾಂಡ್ ಮೈ ಸಮಯವನ್ನು ಹೊಂದಿದೆ ಜೊತೆಗೆ ಕ್ವಿಕ್ ಚಾರ್ಜ್ 3.0 ಗೆ ಬೆಂಬಲ ನೀಡುತ್ತದೆ.

ಇನ್ನು ಕ್ಯಾಮರಾ ವಿಚಾರಕ್ಕೆ ಬರುವುದಾದರೆ ಶಿಯೋಮಿ ಪೋಕೋ ಎಫ್ 1 ನಲ್ಲಿ ಸೆಲ್ಫೀ ಕ್ಯಾಮರಾವು 20 ಮೆಗಾಪಿಕ್ಸಲ್ ನ ಸೆನ್ಸರ್ ಜೊತೆಗೆ ಬ್ಯೂಟಿಫಿಕೇಷನ್ ಫೀಚರ್ ನ್ನು ಹೊಂದಿದೆ. ಹಿಂಭಾಗದಲ್ಲಿ ಡುಯಲ್ ಕ್ಯಾಮರಾ ಸೆಟ್ ಅಪ್ ನ್ನು ಹೊಂದಿದ್ದು ಕೃತಕ ಬುದ್ದಿಮತ್ತೆ ಬೆಂಬಲಿತ ಫೀಚರ್ 12 ಮೆಗಾಪಿಕ್ಸಲ್ ಸೋನಿ IMX363 ಸೆನ್ಸರ್ ನ್ನು ಒಳಗೊಂಡಿದೆ ಮತ್ತು 5-ಮೆಗಾಪಿಕ್ಸಲ್ ಸೆಕೆಂಡರಿ ಸೆನ್ಸರ್ ನ್ನು ಕೂಡ ಇದು ಹೊಂದಿದ್ದು ಡುಯಲ್ ಪಿಕ್ಸಲ್ ಆಟೋಫೋಕಸ್ ಫೀಚರ್ ನ್ನು ಮತ್ತು ರಿಯಲ್ ಟೈಮ್ ಎಐ-ಫೋಟೋಗ್ರಫಿಯನ್ನು ಒಳಗೊಂಡಿದೆ. ಕ್ಯಾಮರಾಗಳು 206 ಸೀನ್ ಗಳನ್ನು ಗುರುತಿಸುವ ಮೂಲಕ ಫೋಟೋ ಕ್ಯಾಪ್ಚರ್ ಮಾಡುವ ಸಾಮರ್ಥ್ಯವನ್ನು ಹೊದಿವೆ.

Best Mobiles in India

English summary
Poco F1 Gets Another Price Cut, Now Available For Rs. 17,999
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+