ಪೊಕೊ ಸಂಸ್ಥೆಯು ಈ ಮೊಬೈಲ್‌ಗೆ ಈಗ ಶೇ. 50% ಡಿಸ್ಕೌಂಟ್ ಲಭ್ಯ!
ಇ ಕಾಮರ್ಸ್ ದೈತ್ಯ ಫ್ಲಿಪ್‌ಕಾರ್ಟ್ ವೆಬ್‌ಸೈಟ್ ವಿಶೇಷ ಸೇಲ್ ಆಯೋಜಿಸಿ ಆನ್‌ಲೈನ್ ಶಾಪಿಂಗ್ ಪ್ರಿಯರನ್ನು ಆಕರ್ಷಿಸುತ್ತವೆ ಸಾಗಿದೆ. ಸದ್ಯ ಹಬ್ಬದ ಸೇಲ್ ಇದ್ದು, ಈ ಮಾರಾಟ ಮೇಳದಲ್ಲಿ ಕೆಲವು ಮೊಬೈಲ್‌ಗಳಿಗೆ ಗಮನಾರ್ಹ ಡಿಸ್ಕೌಂಟ್ ಲಭ್ಯ ಮಾಡಿದೆ. ಅವುಗಳಲ್ಲಿ ಅಗ್ಗದ ಪೊಕೊ M5 ಫೋನ್ ಕೂಡಾ ಹೆಚ್ಚಿನ ಡಿಸ್ಕೌಂಟ್ ದರದಲ್ಲಿ ಖರೀದಿಗೆ ಲಭ್ಯ ಇದೆ.
ಹೌದು, ಫ್ಲಿಪ್‌ಕಾರ್ಟ್ ಪ್ಲಾಟ್‌ಫಾರ್ಮ್ ಆಯೋಜಿಸಿರುವ ಸೇಲ್‌ನಲ್ಲಿ ಪೊಕೊ M5 ಫೋನ್ ಶೇ. 50% ರಷ್ಟು ಡಿಸ್ಕೌಂಟ್ ಪಡೆದುಕೊಂಡಿದೆ. ಈ ಫೋನಿನ 6 GB RAM + 128 GB ಸ್ಟೋರೇಜ್ ಮಾಡೆಲ್ ಈಗ 9,499ರೂ. ಗಳಿಗೆ ಖರೀದಿ ಮಾಡಬಹುದಾಗಿದೆ. ಇದರೊಂದಿಗೆ ಈ ಮೊಬೈಲ್‌ಗೆ ಇತರೆ ಕೊಡುಗೆಗಳು ಲಭ್ಯ ಇದ್ದು, ಅವುಗಳನ್ನು ಪಡೆದುಕೊಂಡು, ಫೋನ್ ಖರೀದಿಸಲು ಮುಂದಾದರೆ, ಫೋನ್ 8,499ರೂ. ಗಳಿಗೆ ಲಭ್ಯ.

ಈ ಫೋನ್ ಐಸಿ ಬ್ಲೂ, ಪೊಕೊ ಹಳದಿ ಮತ್ತು ಪವರ್ ಬ್ಲ್ಯಾಕ್ ಬಣ್ಣದ ಆಯ್ಕೆಗಳಲ್ಲಿ ಖರೀದಿ ಮಾಡಬಹುದಾಗಿದೆ. ಅಲ್ಲದೇ ಇದು ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಹೊಂದಿದ್ದು, 50 ಮೆಗಾ ಪಿಕ್ಸೆಲ್ ಸೆನ್ಸಾರ್ ಪ್ರಾಥಮಿಕ ಕ್ಯಾಮೆರಾ ರಚನೆ ಪಡೆದುಕೊಂಡಿದೆ. ಇನ್ನುಳಿದಂತೆ ಪೊಕೊ M5 ಮೊಬೈಲ್‌ನ ಇತರೆ ಫೀಚರ್ಸ್ ಹೇಗಿವೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.
ಡಿಸ್‌ಪ್ಲೇ ರಚನೆ ಹೀಗಿದೆ
ಪೊಕೊ M5 ಮೊಬೈಲ್ 6.58 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಐಪಿಎಸ್ ಎಲ್‌ಸಿಡಿ ಡಿಸ್‌ಪ್ಲೇ ಅನ್ನು ಪಡೆದಿದ್ದು, ಇದು 1,080 x 2,400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದೆ. ಇದು 30Hz ನಿಂದ 90Hz ವರೆಗಿನ ವೇರಿಯಬಲ್ ರಿಫ್ರೆಶ್ ರೇಟ್ ಅನ್ನು ಸಪೋರ್ಟ್ ಇದೆ. ಈ ಡಿಸ್‌ಪ್ಲೇ 240Hz, DCI-P3 ಬಣ್ಣದ ಹರವುಗಳ ಟಚ್ ಸ್ಯಾಪ್ಲಿಂಗ್ ರೇಟ್ ಅನ್ನು ಒಳಗೊಂಡಿದೆ. ಇದು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ರಕ್ಷಣೆಯನ್ನು ಪಡೆದುಕೊಂಡಿದೆ.

ಪ್ರೊಸೆಸರ್ ಪವರ್
ಪೊಕೊ M5 ಮೊಬೈಲ್ ಆಕ್ಟಾ-ಕೋರ್ 6nm ಮೀಡಿಯಾ ಟೆಕ್ ಹಿಲಿಯೋ G99 SoC ಪ್ರೊಸೆಸರ್ ಬಲದ ಜೊತೆಗೆ ಆಂಡ್ರಾಯ್ಡ್ 12 ಬೆಂಬಲ ಪಡೆದಿದೆ. ಹಾಗೆಯೇ 6GB RAM ಮತ್ತು 128GB ಆಂತರೀಕ ಸ್ಟೋರೇಜ್ ವೇರಿಯಂಟ್ ಆಯ್ಕೆ ಪಡೆದಿದ್ದು, ಟರ್ಬೊ RAM ಫೀಚರ್ಸ್ ಅನ್ನು ಬಳಸಿಕೊಂಡು RAM ಅನ್ನು ವಿಸ್ತರಿಸಲು ಅವಕಾಶ ಇದೆ.
ಕ್ಯಾಮೆರಾ ರಚನೆ ಹೀಗಿದೆ
ಪೊಕೊ M5 ಮೊಬೈಲ್ ಮೂರು ರಿಯರ್ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇದೆ. ದ್ವಿತೀಯ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಹಾಗೂ ಮೂರನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಡೆಪ್ತ್ ಸೆನ್ಸಾರ್ ಅನ್ನು ಒಳಗೊಂಡಿದೆ. ಮುಂಭಾಗದಲ್ಲಿ 8 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಇದೆ.

ಬ್ಯಾಟರಿ ಹಾಗೂ ಇತರೆ ಆಯ್ಕೆಗಳು ಏನು
ಪೊಕೊದ ಈ ಫೋನ್ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಜೊತೆಗೆ 18W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಪಡೆದಿದೆ. ಇದರ ಬ್ಯಾಟರಿಯು ಒಂದೇ ಚಾರ್ಜ್‌ನಲ್ಲಿ ಎರಡು ದಿನಗಳ ಪ್ಲೇಟೈಮ್ ಅನ್ನು ಒದಗಿಸಲಿದೆ. ಇನ್ನು 5G, 4G LTE, Wi-Fi, ಬ್ಲೂಟೂತ್ v5, GPS/ A-GPS, ಇನ್‌ಫ್ರಾರೆಡ್ (IR) ಬ್ಲಾಸ್ಟರ್, USB ಟೈಪ್-C, ಮತ್ತು 3.5mm ಹೆಡ್‌ಫೋನ್ ಜ್ಯಾಕ್ ನಂತಹ ಕನೆಕ್ಟಿವಿಟಿ ಸೌಲಭ್ಯಗಳು ಇವೆ.


Click it and Unblock the Notifications








