ಪೊಕೊದ ಈ ಫೋನ್ ಖರೀದಿಸಿದರೆ ಉಚಿತವಾಗಿ ಸಿಗಲಿದೆ ಏರ್‌ಟೆಲ್ ಪ್ರಿಪೇಯ್ಡ್ ಬಂಡಲ್ ಪ್ಲಾನ್
ಮೊಬೈಲ್ ಮಾರುಕಟ್ಟೆಯಲ್ಲಿ ಹೊಸ ಸಂಚಲನಕ್ಕೆ ಕಾರಣವಾಗುವ ನಿರ್ಧಾರವನ್ನು ಪೊಕೊ ಕಂಪೆನಿ ತೆಗೆದುಕೊಂಡಿದೆ. ಟೆಲಿಕಾಂ ದೈತ್ಯ ಎನಿಸಿಕೊಂಡಿರುವ ಏರ್‌ಟೆಲ್ ಜೊತೆಗೆ ಕೈ ಜೋಡಿಸಿರುವ ಪೊಕೊ ಕಂಪೆನಿ ತನ್ನ Poco M6 5G ಫೋನ್ ಖರೀದಿಸುವವರಿಗೆ ವಿಶೇಷ ಏರ್‌ಟೆಲ್ ಪ್ರಿಪೇಯ್ಡ್ ಬಂಡಲ್ ಅನ್ನು ನೀಡಲಾಗುವುದು ಎಂದು ಘೋಷಣೆ ಮಾಡಿದೆ.
ಹೌದು, Poco M6 5G ಸ್ಮಾರ್ಟ್‌ಫೋನ್ ಅನ್ನು ಏರ್‌ಟೆಲ್ ಪ್ರಿಪೇಯ್ಡ್ ಬಂಡಲ್‌ನೊಂದಿಗೆ ನೀಡಲಾಗುವುದು ಎಂದು ಹೇಳಿದೆ. ಈ ಪ್ಲಾನ್ ಮೂಲಕ ಪೊಕೊ ಸ್ಮಾರ್ಟ್‌ಫೋನ್ ಬಳಕೆದಾರರು 50GB ಒನ್ ಟೈಂ ಮೊಬೈಲ್ ಡೇಟಾವನ್ನು ಪಡೆದುಕೊಳ್ಳಬಹುದಾಗಿದೆ. ಹಾಗಾದ್ರೆ ಪೊಕೊ ಫೋನ್‌ನೊಂದಿಗೆ ಲಭ್ಯವಾಗುವ ಏರ್‌ಟೆಲ್ ಪ್ರಿಪೇಯ್ಡ್ ಬಂಡಲ್ ಪ್ಲಾನ್ ವಿವರಗಳೇನು? ಇದನ್ನು ಪಡೆದುಕೊಳ್ಳುವುದು ಹೇಗೆ ಎನ್ನುವ ವಿವರಗಳನ್ನು ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

POCO ಕಂಪೆನಿ ಭಾರ್ತಿ ಏರ್‌ಟೆಲ್‌ನೊಂದಿಗೆ ಪಾಲುದಾರಿಕೆಯನ್ನು ಹೊಂದುವ ಮೂಲಕ ಹೊಸ ಅಲೆ ಕ್ರಿಯೆಟ್ ಮಾಡಿದೆ. ಅದರಂತೆ ಕಳೆದ ವರ್ಷ ಬಿಡುಗಡೆ ಮಾಡಿದ್ದ POCO M6 5G ಫೋನ್ ಖರೀದಿಸುವ ಗ್ರಾಹಕರಿಗೆ ಈ ಪ್ಲಾನ್ ಲಭ್ಯವಾಗಲಿದೆ. ಅಂದರೆ POCO M6 5G ಸ್ಮಾರ್ಟ್‌ಫೋನ್‌ನ ಜೊತೆಗೆ ನಿಮಗೆ ಏರ್‌ಟೆಲ್‌ನ ಪ್ರಿಪೇಯ್ಡ್ ಪ್ಲಾನ್‌ನ ಪ್ರಯೋಜನಗಳು ಉಚಿತವಾಗಿ ದೊರೆಯಲಿವೆ. ಇದರಲ್ಲಿ ಈ ಸ್ಮಾರ್ಟ್‌ಫೋನಿನ 4GB + 128GB ರೂಪಾಂತರದ ಆಯ್ಕೆಯು ನಿಮಗೆ ಫ್ಲಿಪ್‌ಕಾರ್ಟ್‌ನಲ್ಲಿ ಕೇವಲ 8799ರೂ ಬೆಲೆಯಲ್ಲಿ ಸಿಗಲಿದೆ.
POCO M6 5G ಸ್ಮಾರ್ಟ್‌ಫೋನ್ ಅನ್ನು ಮಾರ್ಚ್ 10 ರಿಂದ 8,799ರೂ ಬೆಲೆಗೆ ಮಾರಾಟ ಮಾಡಲಾಗುವುದು. ಈ ಫೋನ್ ಖರೀದಿಸುವ ಎಲ್ಲಾ ಏರ್‌ಟೆಲ್ ಪ್ರಿಪೇಯ್ಡ್ ಗ್ರಾಹಕರು ಏರ್‌ಟೆಲ್‌ನಿಂದ ಒಂದು ಬಾರಿ 50 GB ಮೊಬೈಲ್ ಡೇಟಾವನ್ನು ಪಡೆಯಲಿದ್ದಾರೆ. ಈ ಕೊಡುಗೆಯನ್ನು ಏರ್‌ಟೆಲ್ ಸಿಮ್ ಬಳಸುವ ಗ್ರಾಹಕರು ಮಾತ್ರ ಪಡೆಯಲು ಸಾಧ್ಯವಾಗಲದೆ. ಒಂದು ವೇಳೆ ನಿಮಗೂ ಕೂಡ ಏರ್‌ಟೆಲ್‌ನ ಈ ಪ್ರಯೋಜನವನ್ನು ಪಡೆಯುವ ಬಯಕೆಯಿದ್ದರೆ ಏರ್‌ಟೆಲ್‌ನಿಂದ ಹೋಂ ಡೆಲಿವರಿ ಮೂಲಕ ಸಿಮ್ ಖರೀದಿಸಬಹುದಾಗಿದೆ.
ಏರ್‌ಟೆಲ್ ಪ್ರಿಪೇಯ್ಡ್ ಬಂಡಲ್ ಪ್ಲಾನ್‌ನ ಪ್ರಯೋಜನಗಳೇನು?
ಪೊಕೊ ಮೊಬೈಲ್ ನೊಂದಿಗೆ ಬರುವ ವಿಶೇಷ ಏರ್‌ಟೆಲ್ ಪ್ರಿಪೇಯ್ಡ್ ಪ್ಲಾನ್ ತನ್ನ ಗ್ರಾಹಕರಿಗೆ 50GB ಒಂದು-ಬಾರಿ ಮೊಬೈಲ್ ಡೇಟಾ ಪ್ರಯೋಜನವನ್ನು ನೀಡಲಿದೆ. Poco M6 5G ಯ ಏರ್‌ಟೆಲ್-ವಿಶೇಷ ಆವೃತ್ತಿಯು ಭಾರತದಲ್ಲಿ ಮಾರ್ಚ್ 10 ರಿಂದ ರೂ.ಗೆ ಲಭ್ಯವಿರುತ್ತದೆ ಎಂದು ಕಂಪನಿ ದೃಢಪಡಿಸಿದೆ.

Poco M6 5G ಮೊಬೈಲ್ ಫೀಚರ್ಸ್ ಹೇಗಿದೆ?
Poco M6 5G ಸ್ಮಾರ್ಟ್‌ಫೋನ್ 6.74 ಇಂಚಿನ HD+ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇಯು 1,600 x 720 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಬೆಂಬಲಸಲಿದೆ. ಇನ್ನು ಡಿಸ್‌ಪ್ಲೇ, 600 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಲೆವೆಲ್ ಅನ್ನು ಒಳಗೊಂಡಿದೆ. ಇದಲ್ಲದೆ ಡಿಸ್‌ಪ್ಲೇಯು 180Hz ಟಚ್ ಸ್ಯಾಂಪ್ಲಿಂಗ್ ರೇಟ್ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ರಕ್ಷಣೆಯನ್ನು ಹೊಂದಿದೆ.
ಇನ್ನು Poco M6 5G ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 6100+ SoC ಪ್ರೊಸೆಸರ್ ವೇಗವನ್ನು ಹೊಂದಿದೆ. ಇದು ಮಾಲಿ-G57 MC2 GPU ಸಪೋರ್ಟ್ ಪಡೆದಿದ್ದು, ಆಂಡ್ರಾಯ್ಡ್ 13-ಆಧಾರಿತ MIUI 14 ನಲ್ಲಿ ರನ್ ಆಗಲಿದೆ. ಹಾಗೆಯೆ 4GB RAM + 128GB ಮತ್ತು 8GB RAM + 256GB ಇಂಟರ್ ಸ್ಟೋರೇಜ್ ಆಯ್ಕೆಯಲ್ಲಿ ಲಭ್ಯವಿದೆ.
ಈ ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಇದಲ್ಲದೆ ಹಿಂಭಾಗದಲ್ಲಿ LED ಫ್ಲ್ಯಾಷ್ ಯೂನಿಟ್ ಅನ್ನು ಹೊಂದಿದೆ. ಇದರೊಂದಿಗೆ 5 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಇನ್ನು ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 18W ವೈರ್ಡ್ ಚಾರ್ಜಿಂಗ್ ಬೆಂಬಲಿಸಲಿದೆ.


Click it and Unblock the Notifications








