POCO: ಭಾರತಕ್ಕೆ ಸೈಲೆಂಟ್ ಎಂಟ್ರಿ ಕೊಟ್ಟ ಪೊಕೊ M6 5G! ಹೊಸ ವರ್ಷಕ್ಕೂ ಮುನ್ನವೇ ಅಬ್ಬರ ಗ್ಯಾರಂಟಿ!
ವರ್ಷಾಂತ್ಯದ ವೇಳೆಯಲ್ಲಿ ಹಲವು ಸ್ಮಾರ್ಟ್‌ಫೋನ್ ಬ್ರ್ಯಾಂಡ್‌ಗಳು ಟೆಕ್ ವಲಯದಲ್ಲಿ ಧೂಳೆಬ್ಬಿಸುತ್ತಿವೆ. ಹೊಸ ವರ್ಷಕ್ಕೆ ಹೊಸ ಫೋನ್ ಖರೀದಿಸುವವರಿಗೆ ಹಲವು ಆಯ್ಕೆಗಳನ್ನು ನೀಡುವುದಕ್ಕೆ ತಾ ಮುಂದು ನಾ ಮುಂದು ಎಂದು ಪೈಪೋಟಿ ನಡೆಸುತ್ತಿದೆ. ಈ ಪೈಪೋಟಿಗೆ ಪೊಕೊ ಕೂಡ ಸೇರ್ಪಡೆ ಆಗಿದ್ದು, ಹೊಸ ಪೊಕೊ M6 5G ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ.
ಹೌದು, ಪೊಕೊ M6 5G ಸ್ಮಾರ್ಟ್‌ಫೋನ್ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಆಗಿದೆ. ಈ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 6100+ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು 5,000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬರಲಿದ್ದು, 18W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಹಾಗಾದ್ರೆ ಈ ಸ್ಮಾರ್ಟ್‌ಫೋನ್ ಯಾವೆಲ್ಲಾ ಫೀಚರ್ಸ್ ಬೆಂಬಲಿಸಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಪೊಕೊ M6 5G ಡಿಸ್‌ಪ್ಲೇ ಹೇಗಿದೆ?
POCO M6 5G ಸ್ಮಾರ್ಟ್‌ಫೋನ್ 6.74 ಇಂಚಿನ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್ ಬೆಂಬಲಿಸಲಿದ್ದು, 600nits ಗರಿಷ್ಠ ಬ್ರೈಟ್‌ನೆಸ್ ನೀಡಲಿದೆ. ಇನ್ನು ಡಿಸ್‌ಪ್ಲೇ 180Hz ಟಚ್ ಸ್ಯಾಂಪ್ಲಿಂಗ್ ರೇಟ್‌ನೊಂದಿಗೆ ಬರಲಿದ್ದು, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್ ಪಡೆದುಕೊಂಡಿದೆ.
ಪೊಕೊ M6 5G ಪ್ರೊಸೆಸರ್ ಯಾವುದು?
ಪೊಕೊ M6 5G ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 6100+ ಪ್ರೊಸೆಸರ್ ವೇಗವನ್ನು ಹೊಂದಿದೆ. ಇದು ಆಂಡ್ರಾಯ್ಡ್ 13 ಆಧಾರಿತ MIUI 14 ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 4GB RAM ಮತ್ತು 128GB, 6GB RAM ಮತ್ತು 128GB ಹಾಗೂ 8GB RAM ಮತ್ತು 256GB ಇಂಟರ್ ಸ್ಟೋರೇಜ್ ವೇರಿಯೆಂಟ್ ಆಯ್ಕೆಗಳಲ್ಲಿ ಬರಲಿದೆ. ಇದಲ್ಲದೆ ಮೈಕ್ರೋ-SD ಕಾರ್ಡ್ ಸ್ಲಾಟ್ ಮೂಲಕ 1TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವುದಕ್ಕೆ ಅವಕಾಶ ನೀಡಿದೆ.

ಪೊಕೊ M6 5G ಕ್ಯಾಮೆರಾ ಸೆಟಪ್ ಏನಿದೆ?
ಪೊಕೊ M6 5G ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ. ಇನ್ನು ಕ್ಯಾಮೆರಾದೊಂದಿಗೆ PDAF ಮತ್ತು LED ಫ್ಲ್ಯಾಷ್ ಅನ್ನು ಸಹ ನೀಡಲಿದೆ. ಇದಲ್ಲದೆ 5 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದೆ.
ಪೊಕೊ M6 5G ಬ್ಯಾಟರಿ ಮತ್ತು ಇತರೆ
ಪೊಕೊ M6 5G ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 18W ವೇಗದ ಚಾರ್ಜಿಂಗ್ ಅನ್ನು ನೀಡುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ Wi-Fi 5, ಡ್ಯುಯಲ್ ಸಿಮ್, 5G SA & NSA, LTE, GSM, WCMDA, ಬ್ಲೂಟೂತ್ 5.3, ಮತ್ತು GPS ಜೊತೆಗೆ GLONASS, Beidou, ಮತ್ತು Galileo ಬೆಂಬಲವನ್ನು ಒಳಗೊಂಡಿದೆ. ಇದಲ್ಲದೆ ಸ್ಪ್ಲಾಶ್ ಪ್ರತಿರೋಧ, ಧೂಳಿನ ರಕ್ಷಣೆಯಂತಹ ಹೆಚ್ಚುವರಿ ವೈಶಿಷ್ಟ್ಯಗಳನ್ನು ನೀಡುತ್ತದೆ.
ಬೆಲೆ ಮತ್ತು ಲಭ್ಯತೆ
POCO M6 5G ಸ್ಮಾರ್ಟ್‌ಫೋನ್ ಭಾರತದಲ್ಲಿ 4GB RAM ಮತ್ತು 128GB ಸ್ಟೋರೇಜ್ ಸಾಮರ್ಥ್ಯದ ಆಯ್ಕೆಗೆ 9,499ರೂ ಬೆಲೆಯನ್ನು ಹೊಂದಿದೆ. ಇದರ 6GB RAM ಮತ್ತು 128GB ಸ್ಟೋರೇಜ್ ಆಯ್ಕೆಯು 10,499ರೂ ಬೆಲೆಯಲ್ಲಿ ಬರಲಿದೆ. ಇದಲ್ಲದೆ 8GB RAM ಮತ್ತು 256GB ಸ್ಟೋರೇಜ್ ಆಯ್ಕೆಯು 12,499ರೂ ಬೆಲೆಯನ್ನು ಪಡೆದುಕೊಂಡಿದೆ. ಇದನ್ನು ಫ್ಲಿಪ್‌ಕಾರ್ಟ್‌ನಲ್ಲಿ ಡಿಸೆಂಬರ್ 26, 2023 ರಂದು ಮಧ್ಯಾಹ್ನ 12 ಗಂಟೆಯ ನಂತರ ಖರೀದಿಸಬಹುದಾಗಿದೆ. ಈ ಫೋನ್ ಓರಿಯನ್ ಬ್ಲೂ ಮತ್ತು ಗ್ಯಾಲಕ್ಟಿಕ್ ಬ್ಲ್ಯಾಕ್ ಕಲರ್ ಆಯ್ಕೆಗಳಲ್ಲಿ ಖರೀದಿಸಬಹುದು.
ಲಾಂಚ್ ಆಫರ್ ಏನಿದೆ
ಈ ಸ್ಮಾರ್ಟ್‌ಫೋನ್ ಲಾಂಚ್ ಆಫರ್‌ನಲ್ಲಿ POCO M6 5G ಅನ್ನು ಖರೀದಿಸುವ ಏರ್‌ಟೆಲ್ ಪ್ರಿಪೇಯ್ಡ್ ಬಳಕೆದಾರರು 50GB ಡೇಟಾದ ವಿಶೇಷ ಬೋನಸ್ ಅನ್ನು ಸ್ವೀಕರಿಸುತ್ತಾರೆ. ಇದರೊಂದಿಗೆ ICICI ಡೆಬಿಟ್/ಕ್ರೆಡಿಟ್ ಕಾರ್ಡ್‌ಗಳು/EMI ವಹಿವಾಟುಗಳ ಮೂಲಕ ಖರೀದಿಸಗೆ 1,000 ರಿಯಾಯಿತಿಯನ್ನು ಪಡೆದುಕೊಳ್ಳಬಹುದು. ಗ್ರಾಹಕರಿಗೆ ಎಕ್ಸ್‌ಚೇಂಜ್ ಆಫರ್ ಅನ್ನು ಕೂಡ ನೀಡಲಾಗುವುದು ಎಂದು ಪೊಕೊ ಕಂಪೆನಿ ಹೇಳಿಕೊಂಡಿದೆ.


Click it and Unblock the Notifications








