Home
ಸುದ್ದಿಜಾಲ

ಇಂದು POCO M7 5G ಫಸ್ಟ್ ಸೇಲ್; 10,000ಕ್ಕಿಂತ ಕಡಿಮೆ ಬೆಲೆ.. ಆಫರ್, ಫೀಚರ್ಸ್ ಹೇಗಿವೆ ಗೊತ್ತಾ?

ಪೊಕೊ ಅಭಿಮಾನಿಗಳ ಕಾಯುವಿಕೆ ಮುಗಿಯಿತು! ಇತ್ತೀಚೆಗೆ ಭಾರತದಲ್ಲಿ ಬಿಡುಗಡೆಯಾಗಿರುವ ಹೊಸ 5G ಇಂದು ಅಧಿಕೃತವಾಗಿ ಗ್ರಾಹಕರ ಕೈ ಸೇರಲಿದೆ. ಹೌದು, ಕಂಪನಿಯು ಪೊಕೊ M7 5G (POCO M7 5G) ಫೋನನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. ಇದನ್ನು ಅಗ್ಗದ ಬಜೆಟ್ ವಿಭಾಗದಲ್ಲಿ ಪರಿಚಯಿಸಲಾಗಿದೆ. ಅಂದಹಾಗೆ, ಈ ಪೊಕೊ ಮೊಬೈಲ್ ಇಂದಿನಿಂದ (ಮಾರ್ಚ್ 7) ತನ್ನ ಮೊದಲ ಸೇಲ್ ಶುರು ಮಾಡಲಿದೆ. ಬನ್ನಿ, ಕಂಪನಿ ಏನೆಲ್ಲ ಆಫರ್ ನೀಡುತ್ತಿದೆ, ಬೆಲೆ ಎಷ್ಟು? ಮತ್ತು ವಿಶೇಷತೆಗಳನ್ನು ತಿಳಿಯೋಣ.

ಅಗ್ಗದ ದರದಲ್ಲಿ ಹೊಸ ಫೋನ್ ಖರೀದಿಸಲು ಬಯಸುವವರಿಗೆ ಪೊಕೊ M7 5G ಉತ್ತಮ ಆಯ್ಕೆಯಾಗಿದೆ. ಇದು ಎರಡು ಸ್ಟೋರೇಜ್ ಆಯ್ಕೆಗಳಲ್ಲಿ ಬರುತ್ತದೆ. ಈ ಫೋನಿನ ವಿಶೇಷತೆಗಳ ಬಗ್ಗೆ ಹೇಳುವುದಾದರೆ, ಈ ಮೊಬೈಲ್ 6.88 ಇಂಚಿನ ಡಿಸ್ಪ್ಲೇ ಹೊಂದಿದೆ. ಇದು ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 4 ಜೆನ್ 2 ಪ್ರೊಸೆಸರ್‌ನೊಂದಿಗೆ ಕೆಲಸ ಮಾಡುತ್ತದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಸೋನಿ ಕ್ಯಾಮೆರಾ ಲಭ್ಯವಿದೆ. ಇದರೊಂದಿಗೆ 8GB RAM + 128GB ಸ್ಟೋರೇಜ್, 5160mAh ಬ್ಯಾಟರಿ ಸೇರಿದಂತೆ ಹಲವು ವಿಶೇಷತೆಗಳೊಂದಿಗೆ ಮಾರಾಟಕ್ಕೆ ಸಿದ್ಧವಾಗಿದೆ.

ಇಂದು POCO M7 5G ಫಸ್ಟ್ ಸೇಲ್; 10,000ಕ್ಕಿಂತ ಕಡಿಮೆ ಬೆಲೆ.. ಆಫರ್ ಏನಿದೆ?

ಪೊಕೊ M7 5G ಬೆಲೆ ಮತ್ತು ಆಫರ್

6GB RAM + 128GB ಸ್ಟೋರೇಜ್ ಬೆಲೆ = 9,999 ರೂ.
8GB RAM + 128GB ಸ್ಟೋರೇಜ್ ಬೆಲೆ = 10,999 ರೂ.

ಪೊಕೊ M7 5G ಫೋನಿನ 6GB RAM ರೂಪಾಂತರವು 9,999 ರೂ.ಗೆ ಮಾರಾವಾಗಲಿದೆ. ಹಾಗೆಯೇ 8GB RAM ಮಾದರಿಯನ್ನು 10,999 ರೂ.ಗೆ ಖರೀದಿಸಬಹುದು. ಕಂಪನಿಯು ಮೊದಲ ಮಾರಾಟದ ಪ್ರಯುಕ್ತ ತನ್ನ ಅಭಿಮಾನಿಗಳಿಗೆ ಬೊಂಬಾಟ ಆಫ್ ಘೋಷಿಸಿದೆ. ಈ ಫೋನನ್ನು ಮೂರು ಬಣ್ಣ ಆಯ್ಕೆಗಳಲ್ಲಿ ಖರೀದಿಸಬಹುದು. ಇದು ಸ್ಯಾಟಿನ್ ಬ್ಲಾಕ್, ಮಿಂಟ್ ಗ್ರೀನ್ ಮತ್ತು ಓಷನ್ ಬ್ಲೂ ಬಣ್ಣಗಳಲ್ಲಿ ಬರುತ್ತದೆ. ಇ-ಕಾಮರ್ಸ್ ಸೈಟ್ ಫ್ಲಿಪ್‌ಕಾರ್ಟ್‌ ಮೂಲಕ ಇಂದು (ಮಾರ್ಚ್ 7) ಮಧ್ಯಾಹ್ನ 12 ಗಂಟೆಗೆ ಈ ಫೋನ್‌ ಅಧಿಕೃತವಾಗಿ ​​ತನ್ನ ಮಾರಾಟ ಪ್ರಾರಂಭಿಸಲಿದೆ.

ಪೊಕೊ M7 5G ವೈಶಿಷ್ಟ್ಯಗಳು

ಡಿಸ್ಪ್ಲೇ ಹೇಗಿದೆ

ಪೊಕೊ M7 5G ಸ್ಮಾರ್ಟ್‌ಫೋನ್ ಫೋನ್ 6.88 ಇಂಚಿನ ಡಿಸ್ಪ್ಲೇ ಹೊಂದಿದೆ. ಇದು 1,640 x 720 ಪಿಕ್ಸೆಲ್‌ಗಳ ಸ್ಕ್ರೀನ್ ರೆಸಲ್ಯೂಶನ್ ಬೆಂಬಲದೊಂದಿಗೆ ಹೊಂದಿದೆ. ಈ ಡಿಸ್ಪ್ಲೇಯು 120Hz ರಿಫ್ರೆಶ್ ದರ, 240Hz ಟಚ್ ಸ್ಯಾಂಪ್ಲಿಂಗ್ ದರ ಮತ್ತು 600 ನಿಟ್‌ಗಳ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಸಹ ಹೊಂದಿದೆ.

ಕ್ವಾಲ್ಕಾಮ್‌ ಪ್ರೊಸೆಸರ್

ಪೊಕೊ M7 5G ಸ್ಮಾರ್ಟ್‌ಫೋನ್ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 4 ಜೆನ್ 2 ಪ್ರೊಸೆಸರ್ ಹೊಂದಿದೆ. ಈ ಫೋನ್ ಆಂಡ್ರಾಯ್ಡ್ 14 ಆಧಾರಿತ ಶಿಯೋಮಿ ಹೈಪರ್ ಓಎಸ್‌ ಜೊತೆಗೆ ಕೆಲಸ ಮಾಡುತ್ತದೆ. ಗ್ರಾಫಿಕ್ಸ್‌ಗಾಗಿ ಇದು, ಅಡ್ರಿನೊ ಜಿಪಿಯು ಹೊಂದಿದೆ. ಈ ಮೊಬೈಲ್ 6GB RAM + 128GB ಮತ್ತು 8GB RAM + 128GB ಸ್ಟೋರೇಜ್ ಆಯ್ಕೆಗಳಲ್ಲಿ ಬರುತ್ತದೆ. ನೀವು ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ ಸ್ಟೋರೇಜ್ ಹೆಚ್ಚಿಸಬಹುದು.

ಇಂದು POCO M7 5G ಫಸ್ಟ್ ಸೇಲ್; 10,000ಕ್ಕಿಂತ ಕಡಿಮೆ ಬೆಲೆ.. ಆಫರ್ ಏನಿದೆ?

ಡ್ಯುಯಲ್ ಕ್ಯಾಮೆರಾ ಸೆಟಪ್

ಪೊಕೊ M7 5G ಮೊಬೈಲ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು 50 ಮೆಗಾಪಿಕ್ಸೆಲ್ ಸೋನಿ ಮುಖ್ಯ ಕ್ಯಾಮೆರಾ ಹೊಂದಿದೆ. ಜೊತೆಗೆ 2 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಸಹ ಲಭ್ಯವಿದೆ. ಈ ಫೋನಿನಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಲಭ್ಯವಿದೆ.

ಶಕ್ತಿಶಾಲಿ ಬ್ಯಾಟರಿ

ಪೊಕೊ M7 5G ಫೋನ್ 5160mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 33W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸುತ್ತದೆ. ಈ ಮೊಬೈಲ್ ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಹೊಂದಿದೆ. ನೀರು ಮತ್ತು ಧೂಳಿನಿಂದ ರಕ್ಷಣೆಗಾಗಿ IP52 ರೇಟಿಂಗ್ ಪಡೆದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಇದು 5G, 4G LTE, ಡ್ಯುಯಲ್ ಬ್ಯಾಂಡ್ ವೈ-ಫೈ, ಬ್ಲೂಟೂತ್ 5.4, ಜಿಪಿಎಸ್‌ ಮತ್ತು ಯುಎಸ್‌ಬಿ ಟೈಪ್ ಸಿ ಪೋರ್ಟ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

Best Mobiles in India

English summary
POCO M7 5G First Sale Start in india Today via Flipkart: check price, offers, specification and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+