Home
ಸುದ್ದಿಜಾಲ

Poco Pad 5G ಸೇಲ್; 3000 ಡಿಸ್ಕೌಂಟ್‌.. ಬೆಲೆಯೂ ಕಡಿಮೆ!

Poco Pad 5G Price: ಪ್ರಮುಖ ಸ್ಮಾರ್ಟ್‌ಫೋನ್ ತಯಾರಕ ಪೊಕೊ (Poco) ಇತ್ತೀಚೆಗೆ ತನ್ನ ಮೊದಲ ಟ್ಯಾಬ್ಲೆಟ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಹೊಸ ಪೊಕೊ ಪ್ಯಾಡ್ 5G (Poco Pad 5G) ಇದೀಗ ಖರೀದಿಗೆ ಲಭ್ಯವಿದೆ. ಕಂಪನಿಯು ಮೊದಲ ಮಾರಾಟದ ಭಾಗವಾಗಿ ಆಯ್ದ ಬ್ಯಾಂಕ್ ಕಾರ್ಡ್‌ಗಳ ಮೇಲೆ ರಿಯಾಯಿತಿ ಘೋಷಿಸಿದೆ. ನೀವು ಟ್ಯಾಬ್ಲೆಟ್ ಅನ್ನು ಇ ಕಾಮರ್ಸ್ ಪ್ಲಾಟ್‌ಫಾರ್ಮ್ ಫ್ಲಿಪ್‌ಕಾರ್ಟ್‌ ಮೂಲಕ ಖರೀದಿಸಬಹುದು. ಈ ಹೊಸ ಟ್ಯಾಬ್‌ನ ಬೆಲೆ, ಆಫರ್‌ಗಳು ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ ಬನ್ನಿ.

ಪೊಕೊ ಪ್ಯಾಡ್ 5G (Poco Pad 5G) ಟ್ಯಾಬ್ಲೆಟ್ 12.1 ಇಂಚಿನ ದೊಡ್ಡ ಡಿಸ್ಪ್ಲೇಯನ್ನು ಹೊಂದಿದೆ. ಇದು 120Hz ರಿಫ್ರೆಶ್ ದರದೊಂದಿಗೆ ಬರುತ್ತದೆ. ಕಂಪನಿಯು ಸ್ನಾಪ್‌ಡ್ರಾಗನ್ 7s Gen 2 ಪ್ರೊಸೆಸರ್ ಅನ್ನು ಅಳವಡಿಸಿದೆ. ಇದು 8GB RAM, 8 ಮೆಗಾಪಿಕ್ಸೆಲ್ ಮುಖ್ಯ ಮತ್ತು ಸೆಲ್ಫಿ ಕ್ಯಾಮೆರಾ, 33W ವೇಗದ ಚಾರ್ಜಿಂಗ್‌ನೊಂದಿಗೆ 10,000mAh ಸಾಮರ್ಥ್ಯದ ಬ್ಯಾಟರಿ ಸೇರಿದಂತೆ ಹಲವು ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.

Poco Pad 5G ಸೇಲ್; 3000 ಡಿಸ್ಕೌಂಟ್‌.. ಬೆಲೆಯೂ ಕಡಿಮೆ!

ಪೊಕೊ ಪ್ಯಾಡ್ 5G ಟ್ಯಾಬ್‌ನ ಬೆಲೆ ಮತ್ತು ಲಭ್ಯತೆ

  • 8GB ಮತ್ತು 128GB ಸ್ಟೋರೇಜ್ ಬೆಲೆ = 23,999 ರೂ.
  • 8GB ಮತ್ತು 256GB ಸ್ಟೋರೇಜ್ ಬೆಲೆ = 25,999 ರೂ.

ಪೊಕೊ ಪ್ಯಾಡ್ 5G ಟ್ಯಾಬ್ಲೆಟ್ ಪಿಸ್ತಾ ಗ್ರೀನ್ ಮತ್ತು ಕೋಬಾಲ್ಟ್ ಬ್ಲೂಸ್ ಎಂಬ ಎರಡು ಬಣ್ಣಗಳಲ್ಲಿ ಬಿಡುಗಡೆಯಾಗಿದೆ. ಇದು ಎರಡು ಸ್ಟೋರೇಜ್‌ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ. 8GB ಮತ್ತು 128GB ಸ್ಟೋರೇಜ್ ರೂಪಾಂತರದ ಬೆಲೆ 23,999 ರೂ.ಗೆ ಲಭ್ಯವಿದೆ. 8GB ಮತ್ತು 256GB ಸ್ಟೋರೇಜ್ ರೂಪಾಂತರವನ್ನು 25,999 ರೂ.ಗೆ ಖರೀದಿಸಬಹುದು.

ಡಿಸ್ಕೌಂಟ್‌ನೊಂದಿಗೆ ಪೊಕೊ ಪ್ಯಾಡ್ 5G ಟ್ಯಾಬ್‌ ಬೆಲೆ

  • 8GB ಮತ್ತು 128GB ಸ್ಟೋರೇಜ್ ಬೆಲೆ = 19,999 ರೂ.
  • 8GB ಮತ್ತು 256GB ಸ್ಟೋರೇಜ್ ಬೆಲೆ = 21,999 ರೂ.

ಕಂಪನಿಯು ಪೊಕೊ ಪ್ಯಾಡ್ 5G ಟ್ಯಾಬ್‌ ಖರೀದಿ ಮೇಲೆ ಬ್ಯಾಂಕ್ ಆಫರ್‌ಗಳನ್ನು ನೀಡುತ್ತಿದೆ. ಎಸ್‌ಬಿಐ, ಎಚ್‌ಡಿಎಫ್‌ಸಿ ಮತ್ತು ಐಸಿಐಸಿಐ ಬ್ಯಾಂಕ್ ಕಾರ್ಡ್‌ಗಳ ಮೂಲಕ ಪಾವತಿ ಮಾಡಿದರೆ 3,000 ರೂ.ಗಳ ಹೆಚ್ಚುವರಿ ಡಿಸ್ಕೌಂಟ್‌ ಪಡೆಯಬಹುದು. ಇನ್ನೂ, ವಿದ್ಯಾರ್ಥಿಗಳಿಗೆ ಹೆಚ್ಚುವರಿ 1,000 ರೂ.ಗಳ ರಿಯಾಯಿತಿಯನ್ನು ನೀಡುತ್ತಿದೆ. ಡಿಸ್ಕೌಂಟ್‌ನೊಂದಿಗೆ ನೀವು 8GB ಮತ್ತು 128GB ಸ್ಟೋರೇಜ್ ರೂಪಾಂತರವನ್ನು 19,999 ರೂ.ಗೆ ಖರೀದಿಸಬಹುದು. 8GB ಮತ್ತು 256GB ಸ್ಟೋರೇಜ್ ರೂಪಾಂತರವನ್ನು 21,999 ರೂ.ಗೆ ಖರೀದಿಸಬಹುದು.

ಪೊಕೊ ಪ್ಯಾಡ್ 5G ಟ್ಯಾಬ್‌ನ ವೈಶಿಷ್ಟ್ಯಗಳು

ಪೊಕೊ ಪ್ಯಾಡ್ 5G ಟ್ಯಾಬ್‌ 12.1 ಇಂಚಿನ 1.5K IPS LCD ಡಿಸ್ಪ್ಲೇಯನ್ನು ಹೊಂದಿದೆ. ಇದು 120Hz ರಿಫ್ರೆಶ್ ರೇಟ್, ಡಾಲ್ಬಿ ವಿಷನ್ ಮತ್ತು 600 ನಿಟ್‌ಗಳ ಗರಿಷ್ಠ ಬ್ರೈಟ್‌ನೆಸ್ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ರಕ್ಷಣೆಯೊಂದಿಗೆ ಬರುತ್ತದೆ. ಈ ಟ್ಯಾಬ್ಲೆಟ್ ಡಾಲ್ಬಿ ವಿಷನ್, ಡಾಲ್ಬಿ ಅಟ್ಮಾಸ್, ಕ್ವಾಡ್-ಸ್ಪೀಕರ್ ಸೆಟಪ್, ಎರಡು ಮೈಕ್ರೊಫೋನ್‌ಗಳು ಮತ್ತು 3.5 ಎಂಎಂ ಹೆಡ್‌ಫೋನ್ ಜ್ಯಾಕ್‌ಗೆ ಸಪೋರ್ಟ್‌ ಪಡೆದಿದೆ.

ಹೊಸ ಪೊಕೊ ಪ್ಯಾಡ್ ಸ್ನಾಪ್‌ಡ್ರಾಗನ್ 7s Gen 2 ಚಿಪ್‌ಸೆಟ್‌ ಅನ್ನು ಹೊಂದಿದೆ. ಈ ಪ್ಯಾಡ್ ಬಾಕ್ಸ್ ಹೊರಗೆ Android 14 ಆಧಾರಿತ HyperOS ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 8GB ಯ LPDDR4X RAM ಮತ್ತು 256GB UFS 2.2 ಸ್ಟೋರೇಜ್‌ ಒಳಗೊಂಡಿದೆ. ನೀವು ಮೀಸಲಾದ MicroSDXC ಸ್ಲಾಟ್ ಮೂಲಕ ವಿಸ್ತರಿಸಬಹುದಾಗಿದೆ.

8 ಮೆಗಾಪಿಕ್ಸೆಲ್ ಕ್ಯಾಮೆರಾ, 10,00mAh ಬ್ಯಾಟರಿ

ಪೊಕೊ ಪ್ಯಾಡ್ 5G ಟ್ಯಾಬ್‌ನ ಕ್ಯಾಮೆರಾ ರಚನೆ ಬಗ್ಗೆ ಹೇಳುವುದಾದರೆ, ಇದು 8 ಮೆಗಾ ಪಿಕ್ಸೆಲ್ ಹಿಂಬದಿಯ ಕ್ಯಾಮೆರಾವನ್ನು ಹೊಂದಿದೆ. ಸೆಲ್ಫಿ ಕ್ಲಿಕ್ಕಿಸಲು ಮತ್ತು ವಿಡಿಯೋ ಕರೆಗಳಿಗಾಗಿ ಈ ಟ್ಯಾಬ್‌ನ ಮುಂಭಾಗದಲ್ಲಿ 8 ಮೆಗಾ ಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ.

ಈ ಪೊಕೊ ಪ್ಯಾಡ್ 5G ಟ್ಯಾಬ್ಲೆಟ್ 10,00mAh ಸಾಮರ್ಥ್ಯ ದೊಡ್ಡ ಬ್ಯಾಟರಿಯನ್ನು ಹೊಂದಿದೆ. ಇದು 33W ವೇಗದ ಚಾರ್ಜಿಂಗ್ ಸಪೋರ್ಟ್ ಪಡೆದಿದೆ. ಈ ಪೊಕೊ ಪ್ಯಾಡ್ ಧೂಳು ಮತ್ತು ಸ್ಪ್ಲಾಶ್ ಪ್ರತಿರೋಧಕ್ಕಾಗಿ IP52 ರೇಟಿಂಗ್‌ನೊಂದಿಗೆ ಬರುತ್ತದೆ.

Best Mobiles in India

English summary
Poco Pad 5G Available With Rs 3000 Discount In First Sale: Know The Price After Discount
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+