Poco X2: ಶೀಘ್ರದಲ್ಲೇ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ ಪೊಕೊ X2 ಸ್ಮಾರ್ಟ್‌ಫೋನ್‌!

|

ಶಿಯೋಮಿ ಕಂಪೆನಿಯ ಸಬ್‌ ಬ್ರ್ಯಾಂಡ್‌ ಆಗಿದ್ದ ಸದ್ಯ ಇದೀಗ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿರುವ ಪೊಕೊ ಕಂಪೆನಿ ತನ್ನ ಹೊಸ ಆವೃತ್ತಿಯ ಸ್ಮಾರ್ಟ್‌ಫೋನ್‌ ಪೊಕೊ X2 ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಅಲ್ಲದೆ ಪೊಕೊ X2 ಭಾರತದಲ್ಲಿ ಫೆಬ್ರವರಿ 4 ರಂದು ಬಿಡುಗಡೆಯಾಗಲಿದೆ ಎಂದು ಕಂಪೆನಿ ಈಗಾಗಲೇ ಸ್ಪಷ್ಟ ಪಡಿಸಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ರೆಡ್‌ಮಿ K30, 4G ವೆರಿಯೆಂಟ್‌ ಆಯ್ಕೆಯ ಸ್ಮಾರ್ಟ್‌ಫೋನ್‌ನ ರಿ ಬ್ರ್ಯಾಂಡೆಡ್‌ ಆಗಿದೆ ಎಂಬ ಗಾಸಿಪ್‌ ಇತ್ತಾದರೂ ಅದಕ್ಕೆಲ್ಲಾ ಪೊಕೊ ತನ್ನ ಫೀಚರ್ಸ್‌ ಬಹಿರಂಗ ಪಡಿಸುವ ಮೂಲಕ ತೆರೆ ಎಳೆದಿದೆ.

ಹೌದು

ಹೌದು ಪೊಕೊ ಕಂಪೆನಿ ತನ್ನ ಹೊಸ ಸ್ಮಾರ್ಟ್‌ಫೋನ್‌ ಪೊಕೊ X2 ಬಿಡುಗಡೆ ಮಾಡುವ ದಿನಾಂಕವನ್ನ ಬಹಿರಂಗ ಪಡಿಸಿದೆ. ಈ ಸ್ಮಾರ್ಟ್‌ಫೋನ್ ಭಾರತದ ಮಾರುಕಟ್ಟೆಯಲ್ಲಿ ಫೆಬ್ರವರಿ 4 ರಂದು ಬಿಡುಗಡೆಯಾಗಲಿದ್ದು, ಹೊಸ ಮಾದರಿಯ ಆಕರ್ಷಕ ಫೀಚರ್ಸ್‌ಗಳನ್ನ ಒಳಗೊಂಡಿರಲಿದ್ದು, ಪೊಕೊ ಎಕ್ಸ್ 2 120 Hz ರಿಫ್ರೆಶ್ ರೇಟ್‌ನ ಡಿಸ್‌ಪ್ಲೇ ಹೊಂದಿರಲಿದೆ ಎಂದು ಕಂಪೆನಿ ಹೇಳಿಕೊಂಡಿದ್ದು, ಸದ್ಯ ಈ ಸ್ಮಾರ್ಟ್‌ಫೋನ್‌ ಯಾವೆಲ್ಲಾ ಫೀಚರ್ಸ್‌ಗಳನ್ನ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ನೋಡಿ

ಡಿಸ್‌ಪ್ಲೇ

ಡಿಸ್‌ಪ್ಲೇ

ಪೊಕೊ X2 ಸ್ಮಾರ್ಟ್‌ಫೋನ್‌ 1080x2400 ರೆಸಲ್ಯೂಶನ್‌ ಹೊಂದಿರುವ 6.67 ಇಂಚಿನ ಫುಲ್‌ ಎಚ್‌ಡಿ ಡಿಸ್‌ಪ್ಲೇ ಯನ್ನ ಹೊಂದಿದ್ದು, ಡ್ಯುಯಲ್ ಪಂಚ್-ಹೋಲ್ ಡಿಸ್‌ಪ್ಲೇ ಕ್ಯಾಮೆರಾ ಫೀಚರ್ಸ್‌ ಒಳಗೊಂಡಿದ್ದು, ನ್ಯಾರೋ ಬೆಜೆಲ್‌ ವಿನ್ಯಾಶವನ್ನ ಒಳಗೊಂಡಿರಲಿದೆ. ಇನ್ನು ಈ ಡಿಸ್‌ಪ್ಲೇ ಟು ಬಾಡಿ ರೇಶಿಯೋ ಉತ್ತಮವಾಗಿದ್ದು, ವೀಡಿಯೋ ವೀಕ್ಷಣೆಗೆ ಉತ್ತಮ ಅನುಭವ ನೀಡಲಿದೆ ಎಂದು ಕಂಪೆನಿ ಹೇಳಿಕೊಂಡಿದೆ.

ಪ್ರೊಸೆಸರ್‌

ಪ್ರೊಸೆಸರ್‌

ಇನ್ನು ಈ ಸ್ಮಾರ್ಟ್‌ಫೋನ್‌ ಕ್ವಾಲ್‌ಕಾಮ್‌ ಸ್ನಾಪ್‌ಡ್ರಾಗನ್‌ 730G ಪ್ರೊಸೆಸರ್‌ ಹೊಂದಿದ್ದು, ಆಂಡ್ರಾಯ್ಡ್‌10 ಒಎಸ್‌ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಜೊತೆಗೆ 6GB RAM ಮತ್ತು 64GB ಸಂಗ್ರಹಣಾ ಸಾಮರ್ಥ್ಯವನ್ನು ಹೊಂದಿದ್ದು, ಮೆಮೊರಿ ಕಾರ್ಡ್‌ ಮೂಲಕ ವಿಸ್ತರಿಸಬಹುದಾದ ಸಂಗ್ರಹಣಾ ಸಾಮರ್ಥ್ಯದ ಬಗ್ಗೆ ಯಾವುದೇ ಮಾಹಿತಿಯನ್ನ ಕಂಪೆನಿ ಹಂಚಿಕೊಂಡಿಲ್ಲ.

ಕ್ಯಾಮೆರಾ ಮಾದರಿ

ಕ್ಯಾಮೆರಾ ಮಾದರಿ

ಈ ಸ್ಮಾರ್ಟ್‌ಫೋನ್‌ ಕ್ವಾಡ್‌ ರಿಯರ್‌ ಕ್ಯಾಮೆರಾ ಸೆಟ್‌ಆಪ್‌ ಹೊಂದಿದ್ದು, ಮೊದಲನೇ ಕ್ಯಾಮೆರಾ 64 ಮೆಗಾ ಪಿಕ್ಸೆಲ್‌ ಸೆನ್ಸಾರ್, ಎರಡನೇ ಕ್ಯಾಮೆರಾ 2ಮೆಗಾ ಪಿಕ್ಸೆಲ್‌, ಮೂರನೇ ಕ್ಯಾಮೆರಾ 8 ಮೆಗಾ ಪಿಕ್ಸೆಲ್‌ ,ಮತ್ತು ನಾಲ್ಕನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಹೊಂದಿದ್ದು, ಅಲ್ಟ್ರಾ ವೈಡ್‌ ಆಂಗಲ್‌ ಲೆನ್ಸ್‌ ಹೊಂದಿದೆ. ಜೊತೆಗೆ ಇದು ಡ್ಯುಯಲ್ ಸೆಲ್ಫಿ ಕ್ಯಾಮೆರಾ ಹೊಂದಿದ್ದು, ಮೊದಲನೇ ಕ್ಯಾಮೆರಾ 20ಮೆಗಾ ಪಿಕ್ಸೆಲ್‌, ಎರಡನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಹೊಂದಿದೆ.

ಬ್ಯಾಟರಿ ಮತ್ತ ಇತರೆ

ಬ್ಯಾಟರಿ ಮತ್ತ ಇತರೆ

ಪೊಕೊ X2 ಸ್ಮಾರ್ಟ್‌ಫೋನ್‌ 4500 mAh ಬ್ಯಾಟರಿ ಪ್ಯಾಕ್‌ಆಪ್‌ ಹೊಂದಿದ್ದು, 27W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 3.5 ಎಂಎಂ ಹೆಡ್‌ಫೋನ್ ಜ್ಯಾಕ್, ಯುಎಸ್‌ಬಿ-ಸಿ ಫೋರ್ಟ್‌, ವೈಫೈ, ಹಾಟ್‌ಸ್ಪಾಟ್ ಅನ್ನು ಬೆಂಬಲಿಸಲಿದ್ದು, ಹೆಚ್ಚಿನ ಕನೆಕ್ಟಿವಿಟಿ ಆಯ್ಕೆಗಳ ಬಗ್ಗೆ ಕಂಪೆನಿ ಹೇಳಿಕೊಂಡಿಲ್ಲ. ಸದ್ಯ ಈ ಸ್ಮಾರ್ಟ್‌ಫೋನ್‌ ಪೆಬ್ರವರಿ 4ರಂದು ಬಿಡುಗಡೆಯಾಗಲಿದೆ.

Most Read Articles
Best Mobiles in India

English summary
The 120Hz refresh rate on Poco X2 further hints that it is a rebranded version of Redmi K30 4G variant.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X