ಭಾರತಕ್ಕೆ ಎಂಟ್ರಿ ಕೊಟ್ಟ ಪೊಕೊ X4 ಪ್ರೊ 5G ಫೋನ್! ಬೆಲೆ ಎಷ್ಟು?
ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಪೊಕೊ ಕಂಪೆನಿ ವೈವಿಧ್ಯಮಯ ಸ್ಮಾರ್ಟ್‌ಫೋನ್‌ಗಳಿಗೆ ಹೆಸರುವಾಸಿಯಾಗಿದೆ. ತನ್ನ ವಿಭಿನ್ನ ಮಾದರಿಯ ಫೋನ್‌ಗಳನ್ನು ಪರಿಚಯಿಸಿ ಸ್ಮಾರ್ಟ್‌ಫೋನ್ ಪ್ರಿಯರ ಗಮನ ಸೆಳೆದಿದೆ. ಸದ್ಯ ಇದೀಗ ಭಾರತದಲ್ಲಿ ತನ್ನ ಹೊಸ ಪೊಕೊ X4 ಪ್ರೊ 5G ಫೋನ್ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್ ಅನ್ನು ಈ ವರ್ಷದ ಆರಂಭದಲ್ಲಿ ನಡೆದಿದ್ದ ಮೊಬೈಲ್ ವರ್ಲ್ಡ್ ಕಾಂಗ್ರೆಸ್ (MWC 2022) ನಲ್ಲಿ ಅನಾವರಣಗೊಳಿಸಲಾಗಿತ್ತು. ಇದೀಗ ಭಾರತದಲ್ಲಿ ಬಿಡುಗಡೆ ಮಾಡಿದೆ.

ಹೌದು, ಪೊಕೊ ಕಂಪೆನಿ ಭಾರತದಲ್ಲಿ ಹೊಸ ಪೊಕೊ X4 ಪ್ರೊ 5G ಫೋನ್ ಲಾಂಚ್ ಮಾಡಿದೆ. ಈ ಸ್ಮಾರ್ಟ್‌ಫೋನ್ 6.67 ಇಂಚಿನ ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 695 SoC ಪ್ರೊಸೆಸರ್ ಬಲವನ್ನು ಪಡೆದಿದೆ. ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇನ್ನು ಈ ಸ್ಮಾರ್ಟ್‌ಫೋನ್ ಆರಂಭಿಕ ಬೆಲೆ 18,999ರೂ.ಗಳಿಂದ ಪ್ರಾರಂಭವಾಗಲಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ
ಪೊಕೊ X4 ಪ್ರೊ 5G ಸ್ಮಾರ್ಟ್‌ಫೋನ್ 2400 x 1080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.67 ಇಂಚಿನ ಫುಲ್ HD+ ಡಿಸ್‌ಪ್ಲೇ ಹೊಂದಿದೆ. ಇನ್ನು ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್ ಹೊಂದಿದ್ದು, 360Hz ಟಚ್ ಸ್ಯಾಂಪ್ಲಿಂಗ್ ರೇಟ್ ಒಳಗೊಂಡಿದೆ.

ಪ್ರೊಸೆಸರ್ ಯಾವುದು?
ಪೊಕೊ X4 ಪ್ರೊ 5G ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 695 SoC ಪ್ರೊಸೆಸರ್ ಬಲವನ್ನು ಪಡೆದಿದೆ. ಇದು ಆಂಡ್ರಾಯ್ಡ್ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 8GB RAM ಮತ್ತು 128GB ಇಂಟರ್ ಸ್ಟೋರೇಜ್ ಅನ್ನು ಹೊಂದಿದೆ. ಇದಲ್ಲದೆ ಮೆಮೊರಿ ಕಾರ್ಡ್ ಬೆಂಬಲದೊಂದಿಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.

ಕ್ಯಾಮೆರಾ
ಈ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಕ್ಯಾಮೆರಾ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸಾರ್ ಅನ್ನು ಒಳಗೊಂಡಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಕೂಡ ಹೊಂದಿದೆ.

ಬ್ಯಾಟರಿ ಮತ್ತು ಇತರೆ
ಇನ್ನು ಈ ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 67W ವೇಗದ ಚಾರ್ಜಿಂಗ್‌ಗೆ ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G, 5G, ಬ್ಲೂಟೂತ್ 5.1, ವೈಫೈ< ಹಾಟ್‌ಸ್ಪಾಟ್, ಡ್ಯುಯಲ್ ಸ್ಪೀಕರ್, 3.5mm ಹೆಡ್‌ಫೋನ್ ಜ್ಯಾಕ್ ಹಾಗೂ ಹೈ-ರೆಸ್ ಆಡಿಯೊ ಪ್ರಮಾಣೀಕರಣವನ್ನು ಹೊಂದಿದೆ.

ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ ಪೊಕೊ X4 ಪ್ರೊ 5G ಸ್ಮಾರ್ಟ್‌ಫೋನ್ 6GB RAM ಮತ್ತು 64GB ಸ್ಟೋರೇಜ್ ರೂಪಾಂತರದ ಆಯ್ಕೆಗೆ 18,999ರೂ. ಬೆಲೆ ಹೊಂದಿದೆ. ಇನ್ನು ಈ ಫೋನ್‌ನ 6GB RAM ಮತ್ತು 128GB ಸ್ಟೋರೇಜ್ ರೂಪಾಂತರದ ಬೆಲೆ 19,999ರೂ.ಆಗಿದೆ. ಹಾಗೆಯೇ 8GB RAM ಮತ್ತು 128GB ಸ್ಟೋರೇಜ್ ರೂಪಾಂತರವು 21,999ರೂ. ಬೆಲೆಯಲ್ಲಿ ಲಭ್ಯವಾಗಲಿದೆ. ಇನ್ನು ಈ ಫೋನ್ ಕಪ್ಪು, ನೀಲಿ ಮತ್ತು ಹಳದಿ ಬಣ್ಣಗಳ ಆಯ್ಕೆಯಲ್ಲಿ ಬರಲಿದೆ. ಇದು ಫ್ಲಿಪ್‌ಕಾರ್ಟ್ ಮೂಲಕ ಏಪ್ರಿಲ್ 5, 2022 ರಿಂದ ಮಾರಾಟವಾಗಲಿದೆ. ಇನ್ನು ಲಾಂಚ್ ಆಫರ್‌ನಲ್ಲಿ HDFC ಬ್ಯಾಂಕ್ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಮೇಲೆ 1,000 ರೂಪಾಯಿ ರಿಯಾಯಿತಿ ದೊರೆಯಲಿದೆ.


Click it and Unblock the Notifications








