ಪೊಕೊ X5 ಪ್ರೊ ಬೆಲೆಯಲ್ಲಿ ಭರ್ಜರಿ ಡಿಸ್ಕೌಂಟ್..5,000mAh ಬ್ಯಾಟರಿ, 108ಎಂಪಿ ಕ್ಯಾಮೆರಾ!
ಆನ್‌ಲೈನ್ ಮಾರುಕಟ್ಟೆಯಲ್ಲಿಯೇ ಮುಂಚೂಣಿಯ ಇ ಕಾಮರ್ಸ್ ತಾಣ ಎಂದು ಬಿಂಬಿತವಾಗಿರುವ ಫ್ಲಿಪ್‌ಕಾರ್ಟ್ ಇಯರ್ ಎಂಡ್ ಸೇಲ್ ಮಾರಾಟ ಮೇಳವನ್ನು ಆಯೋಜಿಸಿ ಮೊಬೈಲ್ ಖರೀದಿದಾರರಿಗೆ ಭರ್ಜರಿ ಖುಷಿ ನೀಡಿದೆ. ಈ ಮಾರಾಟದಲ್ಲಿ ಆಯ್ದ ಕೆಲವು ಫೋನ್‌ಗಳು ಬೊಂಬಾಟ್ ರಿಯಾಯಿತಿ ದರದಲ್ಲಿ ಕಾಣಿಸಿಕೊಂಡಿದ್ದು, ಆ ಪೈಕಿ ಪೊಕೊ ಸಂಸ್ಥೆಯ ಪೊಕೊ X5 ಪ್ರೊ ಆಕರ್ಷಕ ಬೆಲೆ ಇಳಿಕೆ ಪಡೆದಿದೆ.
ಹೌದು, ಫ್ಲಿಪ್‌ಕಾರ್ಟ್ ತಾಣದಲ್ಲಿ ಪೊಕೊ X5 ಪ್ರೊ ಸ್ಮಾರ್ಟ್‌ಫೋನ್ ಶೇ. 30% ರಷ್ಟು ರಿಯಾಯಿತಿ ಪಡೆದುಕೊಂಡಿದೆ. ಹೀಗಾಗಿ 25,999ರೂ. ಬೆಲೆ ಹೊಂದಿರುವ 6 GB RAM + 128 GB ಸ್ಟೋರೇಜ್ ವೇರಿಯಂಟ್ ಫೋನ್ ಈಗ 17,999 ರೂ. ಬೆಲೆಯಲ್ಲಿ ಕಾಣಿಸಿಕೊಂಡಿದೆ. ಹಾಗೆಯೇ ಇದರೊಂದಿಗೆ ಇತರೆ ಹೆಚ್ಚುವರಿ ಕೊಡುಗೆಗಳು ಕೂಡಾ ಲಭ್ಯವಾಗಲಿವೆ.

ಅಂದಹಾಗೆ ಈ ಮೊಬೈಲ್ ಫೋನ್ ಸ್ನಾಪ್‌ಡ್ರಾಗನ್ 778G ಪ್ರೊಸೆಸರ್ ಪವರ್ ಅನ್ನು ಪಡೆದಿದ್ದು, 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಒಳಗೊಂಡಿದೆ. ಅಲ್ಲದೇ ತ್ರಿವಳಿ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಇದರ ಪ್ರಾಥಮಿಕ ಕ್ಯಾಮೆರಾವು 108 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇದೆ. ಇನ್ನುಳಿದಂತೆ ಈ ಫೋನ್ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.
ಪೊಕೊ X5 ಪ್ರೊ ಫೀಚರ್ಸ್ ಹೀಗಿವೆ
ಪೊಕೊ X5 ಪ್ರೊ ಸ್ಮಾರ್ಟ್‌ಫೋನ್ 6.7 ಇಂಚಿನ ಅಮೋಲೆಡ್ ಡಿಸ್‌ಪ್ಲೇ ಅನ್ನು ಹೊಂದಿದ್ದು, ಇದು ಗರಿಷ್ಠ ಬ್ರೈಟ್‌ನೆಸ್ ಆಯ್ಕೆ ಪಡೆದಿದೆ. ಹಾಗೆಯೇ ಈ ಫೋನ್ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ರ ರಕ್ಷಣೆ ಪಡೆದಿದ್ದು, ಡೈನಾಮಿಕ್ 120 Hz ರಿಫ್ರೆಶ್ ರೇಟ್ ಮತ್ತು ಡಾಲ್ಬಿ ವಿಷನ್‌ಗೆ ಸಪೋರ್ಟ್ ಸಹ ಒಳಗೊಂಡಿದೆ.

ಇನ್ನು ಪೊಕೊ X5 ಪ್ರೊ ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 778G ಪ್ರೊಸೆಸರ್ ಸಾಮರ್ಥ್ಯ ವನ್ನು ಪಡೆದಿದ್ದು, ಆಂಡ್ರಾಯ್ಡ್ 13 ಓಎಸ್ ಸಪೋರ್ಟ್ ಕೂಡಾ ಪಡೆದುಕೊಂಡಿದೆ. ಹಾಗೆಯೇ ಇದರಲ್ಲಿ ಅತ್ಯುತ್ತಮ ಗೇಮಿಂಗ್ ಅನುಭವ ಕೂಡಾ ಲಭ್ಯವಾಗಲಿದ್ದು, 6 GB RAM + 128 GB ROM ಸ್ಟೋರೇಜ್ ಆಯ್ಕೆ ಅನ್ನು ಪಡೆದುಕೊಂಡಿದೆ.
ಹಾಗೆಯೇ ಪೊಕೊ X5 ಪ್ರೊ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಒಳಗೊಂಡಿದ್ದು, ಈ ಫೋನ್ 108 ಮೆಗಾ ಪಿಕ್ಸೆಲ್ ಪ್ರಾಥಮಿಕ ಸೆನ್ಸರ್, ಇದು 8 ಮೆಗಾ ಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಸೆನ್ಸರ್ ಮತ್ತು 2 ಮೆಗಾ ಪಿಕ್ಸೆಲ್ ಮ್ಯಾಕ್ರೋ ಸೆನ್ಸರ್ ಆಯ್ಕೆ ಪಡೆದುಕೊಂಡಿದೆ. ಈ ಮೂಲಕ ಬಳಕೆದಾರರು 4K ವಿಡಿಯೋಗಳನ್ನು ಸಹ ಶೂಟ್ ಮಾಡಬಹುದು. ಇನ್ನು ಮುಂಭಾಗದಲ್ಲಿ 16 ಮೆಗಾ ಪಿಕ್ಸಲ್ ಸೆನ್ಸಾರ್‌ನ ಸೆಲ್ಫಿ ಕ್ಯಾಮೆರಾ ಸೌಲಭ್ಯವನ್ನು ಕೂಡಾ ಪಡೆದುಕೊಂಡಿದೆ.

ಅಲ್ಲದೇ ಪೊಕೊ X5 ಪ್ರೊ ಫೋನ್ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಒಳಗೊಂಡಿದ್ದು, ಉತ್ತಮ ಬ್ಯಾಟರಿ ಬ್ಯಾಕಪ್ ಪಡೆದುಕೊಳ್ಳಬಹುದಾಗಿದೆ. ಇದಕ್ಕೆ ಅನುಗುಣವಾಗಿ 67W ಸಾಮರ್ಥ್ಯದ ಫಾಸ್ಟ್ ಚಾರ್ಜರ್ ಸೌಲಭ್ಯ ಪಡೆದಿದ್ದು, ಇದು ಸುಮಾರು 15 ನಿಮಿಷದಲ್ಲಿ ಸ್ಮಾರ್ಟ್‌ಫೋನ್ ಅನ್ನು ಸುಮಾರು 50 ಪ್ರತಿಶತ ಚಾರ್ಜ್ ಮಾಡುತ್ತದೆ.
ಮೆಮೊರಿ ಆಯ್ಕೆ ಹಾಗೂ ಕಲರ್ ಆಯ್ಕೆ
ಪೊಕೊ X5 ಪ್ರೊ ಫೋನ್ 6 GB RAM + 128 GB ROM ಹಾಗೂ 8GB + 256GB ಸ್ಟೋರೇಜ್ ಆಯ್ಕೆಯ ವೇರಿಯಂಟ್‌ಗಳನ್ನು ಪಡೆದಿದೆ. ಹಾಗೆಯೇ ಗ್ರಾಹಕರು ಈ ಫೋನ್ ಅನ್ನು ಯೆಲ್ಲೋ, ಬ್ಲೂ ಹಾಗೂ ಬ್ಲ್ಯಾಕ್ ಕಲರ್ ಆಯ್ಕೆಯಲ್ಲಿ ಖರೀದಿ ಮಾಡಬಹುದಾಗಿದೆ.


Click it and Unblock the Notifications








