Home
ಸುದ್ದಿಜಾಲ

ಬಿರುಗಾಳಿಯನ್ನೇ ಸೃಷ್ಟಿಸಿದ್ದ ಈ ಫೋನ್‌ ಭಾರತದಲ್ಲಿ ಇಂದಿನಿಂದ ಮಾರಾಟವಾಗಲಿದೆ!

ಕಳೆದ ವಾರ ಭಾರತದಲ್ಲಿ ಬಿಡುಗಡೆಯಾಗಿದ್ದ ಪೊಕೊ X5 ಪ್ರೊ ಸ್ಮಾರ್ಟ್‌ಫೋನ್‌ ಇಂದು (ಫೆ.13) ತನ್ನ ಫಸ್ಟ್‌ ಸೇಲ್‌ ನಡೆಸಲಿದೆ. ಇನ್ನು ಪೊಕೊ X5 ಪ್ರೊ ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 778GSoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು IR ಬ್ಲಾಸ್ಟರ್‌ ಒಳಗೊಂಡಿರುವ ಅಗ್ಗದ ಬೆಲೆಯ ಫೋನ್‌ಗಳಲ್ಲಿ ಒಂದಾಗಿದೆ. ಸದ್ಯ ಫ್ಲಿಪ್‌ಕಾರ್ಟ್‌ ಮೂಲಕ ತನ್ನ ಫಸ್ಟ್‌ ಸೇಲ್‌ ಆರಂಭಿಸಲಿದ್ದು, ಫಸ್ಟ್‌ ಸೇಳ್‌ ಪ್ರಯುಕ್ತ ವಿಶೇಷ ಆಫರ್‌ಗಳನ್ನು ಸಹ ನೀಡುತ್ತಿದೆ.

ಬಿರುಗಾಳಿಯನ್ನೇ ಸೃಷ್ಟಿಸಿದ್ದ ಈ ಫೋನ್‌ ಭಾರತದಲ್ಲಿ ಇಂದಿನಿಂದ ಮಾರಾಟವಾಗಲಿದೆ!

ಹೌದು, ಪೊಕೊ X5 ಪ್ರೊ ಸ್ಮಾರ್ಟ್‌ಫೋನಿನ ಮೊದಲ ಮಾರಾಟ (ಫೆ.13) ಇಂದಿನಿಂದ ಪ್ರಾರಂಭವಾಗಲಿದೆ. ಇದು ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 108 ಮೆಗಾಪಿಕ್ಸೆಲ್‌ ಸೆನ್ಸಾರ್‌ ಅನ್ನು ಒಳಗೊಂಡಿದೆ. ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 67W ವೇಗದ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ. ಇನ್ನುಳಿದಂತೆ ಈ ಸ್ಮರ್ಟ್‌ಫೋನ್‌ ಫಸ್ಟ್‌ ಸೇಲ್‌ನಲ್ಲಿ ಏನೆಲ್ಲಾ ಆಫರ್‌ ಲಭ್ಯವಾಗಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಪೊಕೊ X5 ಪ್ರೊ ಸ್ಮಾರ್ಟ್‌ಫೋನ್‌ ಫಸ್ಟ್‌ ಸೇಲ್‌ ಆಫರ್‌ ಏನಿದೆ?

ಪೊಕೊ X5 ಪ್ರೊ ಸ್ಮಾರ್ಟ್‌ಫೋನ್‌ ಫಸ್ಟ್‌ ಸೇಲ್‌ ಇಂದು (ಫೆ.13) ಮಧ್ಯಾಹ್ನ 12 ಗಂಟೆಗೆ ಫ್ಲಿಪ್‌ಕಾರ್ಟ್‌ನಲ್ಲಿ ನಡೆಯಲಿದೆ. ಇನ್ನು ಪೊಕೊ X5 ಪ್ರೊ ಸ್ಮಾರ್ಟ್‌ಫೋನ್‌ 6GB RAM ಮತ್ತು 128GB ರೂಪಾಂತರದ ಆಯ್ಕೆಗೆ 22,999ರೂ. ಹಾಗೂ 8GB RAM + 256GB ರೂಪಾಂತರದ ಆಯ್ಕೆಯು 24,999ರೂ.ಬೆಲೆಯನ್ನು ಹೊಂದಿದೆ. ಇನ್ನು ಫಸ್ಟ್‌ ಸೇಲ್‌ ಪ್ರಯುಕ್ತ ಗ್ರಾಹಕರು ICICI ಮತ್ತು HDFC ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಮೂಲಕ ಖರೀದಿಸಿದರೆ 2,000ರೂ.ವರೆಗಿನ ತ್ವರಿತ ರಿಯಾಯಿತಿ ದೊರೆಯಲಿದೆ. ಇದಲ್ಲದೆ ಫ್ಲಿಪ್‌ಕಾರ್ಟ್ ತಿಂಗಳಿಗೆ 3,645ರೂ.ಗಳಿಂದ ಪ್ರಾರಂಭವಾಗುವ ನೋ ಕಾಸ್ಟ್ ಇಎಂಐ ಆಯ್ಕೆಯನ್ನು ಸಹ ನೀಡುತ್ತಿದೆ.

ಬಿರುಗಾಳಿಯನ್ನೇ ಸೃಷ್ಟಿಸಿದ್ದ ಈ ಫೋನ್‌ ಭಾರತದಲ್ಲಿ ಇಂದಿನಿಂದ ಮಾರಾಟವಾಗಲಿದೆ!

ಪೊಕೊ X5 ಪ್ರೊ ಸ್ಮಾರ್ಟ್‌ಫೋನ್‌ ಫೀಚರ್ಸ್‌ ಹೇಗಿದೆ?

ಪೊಕೊ X5 ಪ್ರೊ ಸ್ಮಾರ್ಟ್‌ಫೋನ್‌ 6.67 ಇಂಚಿನ ಎಕ್ಸ್‌ಫಿನಿಟಿ ಡಿಸ್‌ಪ್ಲೇಯನ್ನು ಹೊಂದಿದೆ. ಇದು 120Hz ರಿಫ್ರೆಶ್ ರೇಟ್ ಬೆಂಬಲಿಸಲಿದ್ದು, 1920 PWM ಡಿಮ್ಮಿಂಗ್ ಅನ್ನು ನೀಡಲಿದೆ. ಇನ್ನು ಡಿಸ್‌ಪ್ಲೇ 900 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಹೊಂದಿದ್ದು, 240Hz ಟಚ್ ಸ್ಯಾಂಪ್ಲಿಂಗ್ ರೇಟ್‌ ಪಡದಿದೆ. ಈ ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇಯು HDR10+ ಬೆಂಬಲ ಮತ್ತು ಗೊರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್‌ ಅನ್ನು ಬೆಂಬಲಿಸಲಿದೆ.

ಪೊಕೊ X5 ಪ್ರೊ ಸ್ಮಾರ್ಟ್‌ಫೋನ್‌ ಕ್ಯಾಮೆರಾ ಸೆಟ್‌ಅಪ್‌ ಎಷ್ಟಿದೆ?

ಪೊಕೊ X5 ಪ್ರೊ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 108MP ಸೆನ್ಸಾರ್‌, ಎರಡನೇ ಕ್ಯಾಮೆರಾ 8MP ಅಲ್ಟ್ರಾ-ವೈಡ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 2MP ಮ್ಯಾಕ್ರೋ ಸೆನ್ಸಾರ್‌ ಅನ್ನು ಹೊಂದಿದೆ. ಇದಲ್ಲದೆ 16MP ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಹಿಂಭಾಗದ ಕ್ಯಾಮೆರಾ ಮೂಲಕ 30fps ನಲ್ಲಿ 4K ವೀಡಿಯೊಗಳನ್ನು ಶೂಟ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ.

ಬಿರುಗಾಳಿಯನ್ನೇ ಸೃಷ್ಟಿಸಿದ್ದ ಈ ಫೋನ್‌ ಭಾರತದಲ್ಲಿ ಇಂದಿನಿಂದ ಮಾರಾಟವಾಗಲಿದೆ!

ಪೊಕೊ X5 ಪ್ರೊ ಸ್ಮಾರ್ಟ್‌ಫೋನ್‌ ಬ್ಯಾಟರಿ ಬ್ಯಾಕ್‌ಅಪ್‌

ಪೊಕೊ X5 ಪ್ರೊ ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇದು 67W ವೇಗದ ಚಾರ್ಜಿಂಗ್‌ ಬೆಂಬಲಿಸಲಿದ್ದು, ಕೇವಲ 45 ನಿಮಿಷಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗುತ್ತದೆ ಎನ್ನಲಾಗಿದೆ. ಈ ಸ್ಮಾರ್ಟ್‌ಫೋನ್‌ ಡಾಲ್ಬಿ ಅಟ್ಮೋಸ್‌ ಬೆಂಬಲದೊಂದಿಗೆ ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳನ್ನು ಹೊಂದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಯುಎಸ್‌ಬಿ ಟೈಪ್-ಸಿ ಪೋರ್ಟ್ ಮತ್ತು 3.5 ಎಂಎಂ ಹೆಡ್‌ಫೋನ್ ಜ್ಯಾಕ್‌ ಅನ್ನು ಹೊಂದಿದೆ. ಇದಲ್ಲದೆ ಡ್ಯುಯಲ್-ಬ್ಯಾಂಡ್ Wi-Fi ಮತ್ತು ಬ್ಲೂಟೂತ್ 5.1 ವೈರ್‌ಲೆಸ್ ಸಂಪರ್ಕವನ್ನು ಬೆಂಬಲಿಸಲಿದೆ.

Best Mobiles in India

English summary
The device comes with the signature Poco design and an impressive specs sheet.know more details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+