Home
ಸುದ್ದಿಜಾಲ

POCO X6 ಸರಣಿ ಸ್ಮಾರ್ಟ್‌ಫೋನ್‌ ಫಸ್ಟ್‌ ಸೇಲ್‌ ಪ್ರಾರಂಭ! ಜಬರ್ದಸ್ತ್‌ ಆಫರ್‌ ಲಭ್ಯ!

ಕಳೆದ ವಾರ ಭಾರತಕ್ಕೆ ಎಂಟ್ರಿ ನೀಡಿದ್ದ POCO X6 ಸರಣಿಯ ಸ್ಮಾರ್ಟ್‌ಫೋನ್‌ಗಳ ಫಸ್ಟ್‌ ಸೇಲ್‌ ಇಂದು (ಜನವರಿ 16) ಪ್ರಾರಂಭವಾಗಿದೆ. ಈ ಸರಣಿ POCO X6 5G ಮತ್ತು POCO X6 Pro 5G ಎರಡೂ ಸ್ಮಾರ್ಟ್‌ಫೋನ್‌ಗಳು ಕೂಡ ಇಂದಿನಿಂದ ಖರೀದಿಗೆ ಲಭ್ಯವಾಗುತ್ತಿವೆ. ಭಾರತದಲ್ಲಿ POCO X6 ಸರಣಿಯ ಆರಂಭಿಕ ಬೆಲೆಯು 21,999ರೂ.ಗಳಿಂದ ಪ್ರಾರಂಭವಾಗುತ್ತದೆ.

ಹೌದು, ಪೊಕೊ X6 ಸರಣಿಯ ಮೊದಲ ಮಾರಾಟ ಇಂದಿನಿಂದ ಪ್ರಾರಂಭವಾಗಲಿದೆ. ಫಸ್ಟ್‌ ಸೇಲ್‌ ಅಂಗವಾಗಿ ವಿವಿಧ ಆಫರ್‌ಗಳು ಕೂಡ ಲಭ್ಯವಾಗುತ್ತಿದ್ದು, ಫ್ಲಿಪ್‌ಕಾರ್ಟ್‌ ಮೂಲಕ ಖರೀದಿಸವಹುದಾಗಿದೆ. ಇನ್ನು ಈ ಸರಣಿ ಸ್ಮಾರ್ಟ್‌ಫೋನ್‌ಗಳು ನಾಲ್ಕು ವರ್ಷಗಳ ಭದ್ರತಾ ಪ್ಯಾಚ್ ನವೀಕರಣಗಳನ್ನು ಭರವಸೆ ನೀಡಿವೆ. ಹಾಗಾದ್ರೆ ಈ ಸ್ಮಾರ್ಟ್‌ಫೋನ್‌ ಫೀಚರ್ಸ್‌ ಹೇಗಿದೆ? ಫಸ್ಟ್‌ ಸೇಲ್‌ ಆಫರ್‌ ಏನಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

POCO X6 ಸರಣಿ ಫೋನ್‌ ಫಸ್ಟ್‌ ಸೇಲ್‌ ಪ್ರಾರಂಭ! ಜಬರ್ದಸ್ತ್‌ ಆಫರ್‌ ಲಭ್ಯ!

POCO X6 ಸರಣಿ ಫಸ್ಟ್‌ ಸೇಲ್‌ ಪ್ರಾರಂಭ! ಬೆಲೆ ಎಷ್ಟು?
ಪೊಕೊ X6 ಸ್ಮಾರ್ಟ್‌ಫೋನ್‌ ಬೆಲೆ ವಿವರ ಈ ಕೆಳಗಿನಂತಿದೆ.
8GB + 256GB ಸ್ಟೋರೇಜ್‌ ಆಯ್ಕೆಯ ಬೆಲೆ 21,999ರೂ ಆಗಿದೆ.
12GB + 256GB ಸ್ಟೋರೇಜ್‌ ಆಯ್ಕೆಯ ಬೆಲೆ 23,999ರೂ ಆಗಿದೆ.
12GB + 512GB ಸ್ಟೋರೇಜ್‌ ಆಯ್ಕೆಯ ಬೆಲೆ 24,999ರೂ ಆಗಿದೆ.

ಪೊಕೊ X6 ಪ್ರೊ 5G ಸ್ಮಾರ್ಟ್‌ಫೋನ್‌ ಬೆಲೆ ವಿವರ
8GB + 256GB ಸ್ಟೋರೇಜ್‌ ಆಯ್ಕೆಯ ಬೆಲೆ 26,999ರೂ ಆಗಿದೆ.
12GB + 512GB ಸ್ಟೋರೇಜ್‌ ಆಯ್ಕೆಯ ಬೆಲೆ 28,999ರೂ ಆಗಿದೆ.

ಫಸ್ಟ್‌ ಸೇಲ್‌ ಆಫರ್‌ ಏನು?
POCO X6 ಸರಣಿಯ ಸ್ಮಾರ್ಟ್‌ಫೋನ್‌ ಫಸ್ಟ್‌ ಸೇಲ್‌ ಪ್ರಯುಕ್ತು ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ವಹಿವಾಟುಗಳಿಗೆ ಫ್ಲಾಟ್ 2000ರೂ ತ್ವರಿತ ರಿಯಾಯಿತಿಯನ್ನು ನೀಡಲಾಗುತ್ತಿದೆ. ಇದರಿಂದ ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ಎರಡು ಸಾವಿರ ರೂ ಗಳಷ್ಟು ಬೆಲೆ ಕಡಿಮೆ ಆಗಲಿದೆ.

POCO X6 ಸರಣಿ ಫೋನ್‌ ಫಸ್ಟ್‌ ಸೇಲ್‌ ಪ್ರಾರಂಭ! ಜಬರ್ದಸ್ತ್‌ ಆಫರ್‌ ಲಭ್ಯ!

POCO X6 ಫೋನ್‌ ಫೀಚರ್ಸ್‌ ಹೇಗಿದೆ?
ಪೊಕೊ X6 ಫೋನ್‌ ಫೀಚರ್ಸ್‌ : ಪೊಕೊ X6 ಫೋನ್‌ 6.67 ಇಂಚಿನ ಡಿಸ್‌ಪ್ಲೇ ಹೊಂದಿದೆ. ಇದು ಸ್ನ್ಯಾಪ್‌ಡ್ರ್ಯಾಗನ್ 7 ಜೆನ್‌ 2 ಪ್ರೊಸೆಸರ್‌ ಪವರ್‌ ಪಡೆದಿದ್ದು, ಆಂಡ್ರಾಯ್ಡ್‌ 14 ಓಎಸ್‌ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇದು 8 GB RAM + 256 GB, 12 GB RAM + 256 GB ಹಾಗೂ 12 GB RAM + 512 GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಕೂಡಾ ಪಡೆದಿದೆ. ಈ ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸಲ್‌ ಆಗಿದ್ದು, ಮುಂಭಾದಲ್ಲಿ 16 ಮೆಗಾ ಪಿಕ್ಸಲ್‌ ಸೆಲ್ಫಿ ಕ್ಯಾಮೆರಾ ಸೌಲಭ್ಯ ಕೂಡಾ ಇದೆ. ಜೊತೆಗೆ 5,100mAh ಬ್ಯಾಟರಿ ಬ್ಯಾಕ್‌ಅಪ್‌ ಜೊತೆಗೆ 67W ಫಾಸ್ಟ್‌ ಚಾರ್ಜಿಂಗ್ ಸಪೋರ್ಟ್‌ ಇದೆ.

POCO X6 ಸರಣಿ ಫೋನ್‌ ಫಸ್ಟ್‌ ಸೇಲ್‌ ಪ್ರಾರಂಭ! ಜಬರ್ದಸ್ತ್‌ ಆಫರ್‌ ಲಭ್ಯ!

ಪೊಕೊ X6 ಪ್ರೊ 5G ಫೀಚರ್ಸ್‌ ಹೇಗಿದೆ?
ಪೊಕೊ X6 ಪ್ರೊ 5G ಮೊಬೈಲ್‌ 6.67 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಅನ್ನು ಒಳಗೊಂಡಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 8300 ಅಲ್ಟ್ರಾ ಪ್ರೊಸೆಸರ್‌ ವೇಗವನ್ನು ಹೊಂದಿದ್ದು, ಆಂಡ್ರಾಯ್ಡ್‌ 14 HyperOS ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 8GB RAM ಮತ್ತು 256GB, 12GB RAM 256GB ಹಾಗೂ 12GB RAM ಮತ್ತು 512GB ಆಂತರೀಕ ಸ್ಟೋರೇಜ್‌ ಆಯ್ಕೆ ಕಾಣಬಹುದಾಗಿದೆ. ಈ ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ರಚನೆ ಪಡೆದಿದ್ದು, ಇದರ ಪ್ರಾಥಮಿಕ ಕ್ಯಾಮೆರಾ 64 ಮೆಗಾಪಿಕ್ಸೆಲ್‌ ಸೆನ್ಸಾರ್‌ ಆಗಿದೆ. ಇನ್ನು ಮುಂಭಾಗದಲ್ಲಿ 16 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಒದಗಿಸಲಾಗಿದೆ. ಜೊತೆಗೆ 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಹೊಂದಿದ್ದು, ಇದಕ್ಕೆ ಪೂರಕವಾಗಿ 67W ಫಾಸ್ಟ್‌ ಚಾರ್ಜಿಂಗ್ ಸಪೋರ್ಟ್‌ ಮಾಡಲಿದೆ.

Best Mobiles in India

English summary
POCO X6 Series First Sale Today via Flipkart: Offers Details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+