ಪೊಕೊ X6 ಸರಣಿ ಬರ್ತಾ ಇದೆ ದಾರಿ ಬಿಡಿ:..ಟೆಕ್ ವಲಯದಲ್ಲಿ ಧೂಳೆಬ್ಬಿಸೋದು ಗ್ಯಾರಂಟಿ!
ಇತ್ತೀಚಿಗೆ ಪೊಕೊ ಕಂಪೆನಿ ಹೊಸ ಪೊಕೊ X6 ಸರಣಿ ಪರಿಚಯಿಸುವುದಕ್ಕೆ ತಯಾರಿ ನಡೆಸುತ್ತಿದೆ ಎಂದು ವರದಿಯಾಗಿತ್ತು. ಇದೀಗ ಈ ಸರಣಿ ಬಿಡುಗಡೆಯ ದಿನಾಂಕವನ್ನು ಫ್ಲಿಪ್‌ಕಾರ್ಟ್‌ನಲ್ಲಿನ ಟೀಸರ್ ಬಹಿರಂಗಪಡಿಸಿದೆ. ಇನ್ನು ಟೀಸರ್‌ನಲ್ಲಿನ ಮಾಹಿತಿಯಂತೆ ಜನವರಿ 11, 2023 ರಂದು ಪೊಕೊ X6 ಸರಣಿ ಭಾರತದಲ್ಲಿ ಬಿಡುಗಡೆ ಆಗೋದು ಪಕ್ಕಾ ಆಗಿದೆ.
ಹೌದು, ಪೊಕೊ X6 ಸರಣಿ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಈಗಾಗಲೇ ಫ್ಲಿಪ್‌ಕಾರ್ಟ್‌ನಲ್ಲಿ ಲಾಂಚ್ ಟೀಸರ್ ಕೂಡ ಕಾಣಿಸಿಕೊಂಡಿದೆ. ಇದರಲ್ಲಿ ಪೊಕೊ X6 ಪ್ರೊ ಸ್ಮಾರ್ಟ್‌ಫೋನ್ ಮೇಲೆ ಎಲ್ಲರ ಗಮನಬಿದ್ದಿದೆ. ಇದರ ಲುಕ್ ಹಾಗೂ ಸ್ಟನ್ನಿಂಗ್ ಫೀಚರ್ಸ್ ಟೆಕ್ ವಲಯದಲ್ಲಿ ಹೊಸ ಅಲೆಯನ್ನು ಎಬ್ಬಿಸುವ ಸೂಚನೆಯನ್ನು ನೀಡಿದೆ. ಹಾಗಾದ್ರೆ ಪೊಕೊ X6 ಪ್ರೊ ಸ್ಮಾರ್ಟ್‌ಫೋನ್‌ನಲ್ಲಿ ಯಾವೆಲ್ಲಾ ಫೀಚರ್ಸ್‌ಗಳನ್ನು ನಿರೀಕ್ಷಿಸಲಾಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಪೊಕೊ X6 ಪ್ರೊ ಫೀಚರ್ಸ್ ನಿರೀಕ್ಷೆ ಏನು?
ಪೊಕೊ X6 ಪ್ರೊ ಸ್ಮಾರ್ಟ್‌ಫೋನ್ 6.67 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 1220 x 2712 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದಲ್ಲಿರಲಿದೆ. ಇದರ ಸ್ಕ್ರಿನ್ ಟು ಬಾಡಿ ಅನುಪಾತ 90.1% ಇರಲಿದ್ದು, 20:9 ರಚನೆಯ ಅನುಪಾತದಲ್ಲಿ ಬರಲಿದೆ. ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್ ಬೆಂಬಲಿಸಲಿದ್ದು, 1800 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ನೀಡಲಿದೆ. ಜೊತೆಗೆ ಡಿಸ್‌ಪ್ಲೇಯ ಪಿಕ್ಸೆಲ್ ಸಾಂದ್ರತೆ 446 ppi ಇರಲಿದೆ.
ಪೊಕೊ X6 ಪ್ರೊ ಪ್ರೊಸೆಸರ್ ಯಾವುದು?
ಪೊಕೊ X6 ಪ್ರೊ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 8300 ಅಲ್ಟ್ರಾ ಚಿಪ್‌ಸೆಟ್ ಅನ್ನು ಹೊಂದಿರುತ್ತದೆ ಎಂದು ಕಂಪನಿಯು ಈಗಾಗಲೇ ದೃಢಪಡಿಸಿದೆ. ಇದು ಆಂಡ್ರಾಯ್ಡ್ 14 HyperOS ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 8GB RAM ಮತ್ತು 256GB, 12GB RAM 256GB ಹಾಗೂ 12GB RAM ಮತ್ತು 512GB ಇಂಟರ್ ಸ್ಟೋರೇಜ್‌ನಲ್ಲಿ ಬರಲಿದೆ ಎಂದು ವರದಿಯಾಗಿದೆ.

ಪೊಕೊ X6 ಪ್ರೊ ಕ್ಯಾಮೆರಾ ಸೆಟಪ್ ಏನಿದೆ?
ಪೊಕೊ X6 ಪ್ರೊ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ನೊಂದಿಗೆ ಬರುವ ನಿರೀಕ್ಷೆಯಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಶೂಟರ್ ಇರಲಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿರುತ್ತದೆ ಎನ್ನಲಾಗಿದೆ.
ಪೊಕೊ X6 ಪ್ರೊ ಬ್ಯಾಟರಿ ಮತ್ತು ಇತರೆ ಸೌಲಭ್ಯ ನಿರೀಕ್ಷೆ?
ಪೊಕೊ X6 ಪ್ರೊ ಸ್ಮಾರ್ಟ್‌ಫೋನ್ 5500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದೆ. ಇದು 67W ವೇಗದ ಚಾರ್ಜಿಂಗ್ ಬೆಂಬಲಿಸಲಿದೆ ಎಂಬ ನಿರೀಕ್ಷೆ ಇಡಲಾಗಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈಫೈ, ಬ್ಲೂಟೂತ್ 5.4, USB ಟೈಪ್-C, OTG ಅನ್ನು ಬೆಂಬಲಿಸಲಿದೆ. ಇದಲ್ಲದೆ ಇನ್ ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್, ಅಕ್ಸೆಲೆರೊಮೀಟರ್, ಪ್ರಾಕ್ಸಿಮಿಟಿ ಸೆನ್ಸಾರ್ ಹಾಗೂ ಗೈರೊ ಸೆನ್ಸಾರ್ ಮತ್ತು ಕಂಪಾಸ್ ಅನ್ನು ಒಳಗೊಂಡಿಲಿದೆ.

ಪೊಕೊ X6 ಪ್ರೊ ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ POCO X6 ಸರಣಿಯ ಬಿಡುಗಡೆ ದಿನಾಂಕವನ್ನು POCO ಅಧಿಕೃತವಾಗಿ ದೃಢಪಡಿಸಿಲ್ಲ. ಆದರೆ ಡಿವೈಸ್‌ನ ಮೈಕ್ರೋಸೈಟ್ ಈಗಾಗಲೇ ಫ್ಲಿಪ್‌ಕಾರ್ಟ್‌ನಲ್ಲಿ ಲೈವ್ ಆಗಿದ್ದು, ಇದರಲ್ಲಿ ಜನವರಿ 11ಕ್ಕೆ ಬಿಡುಗಡೆ ಎಂದು ಸೂಚಿಸಿರುವುದರಿಂದ ಅಂದೇ ಬಿಡುಗಡೆ ಆಗಲಿದೆ ಎಂದು ನಾವು ನಿರೀಕ್ಷಿಸಲಾಗಿದೆ. ಸದ್ಯದಲ್ಲೇ POCO ಸಂಸ್ಥೆಯಿಂದ ಅಧಿಕೃತ ಪ್ರಕಟಣೆ ಬರಲಿದೆ. ಇದರ ಬೆಲೆ ವಿವರಗಳು ಬಹಿರಂಗವಾಗಿಲ್ಲವಾದರೂ ಫೀಚರ್ಸ್ ನಿರೀಕ್ಷೆಗಳನ್ನು ಗಮನಿಸಿದರೆ ಇದು ಮಿಡ್‌ರೇಂಜ್ ಪ್ರೈಸ್‌ಟ್ಯಾಗ್‌ನಲ್ಲಿ ನಿರೀಕ್ಷಿಸಬಹುದು.


Click it and Unblock the Notifications








