ಮತ್ತೆ ಸಿಗಲ್ಲ..! ಹೊಸ POCO X7 ಖರೀದಿ ಮೇಲೆ ಬಂಪರ್ ಆಫರ್.. ಈಗಲೇ ಖರೀದಿಸಿ
ಪೊಕೊ ಪ್ರಿಯರಿಗೆ ಸಿಹಿಸುದ್ದಿ ಇದೆ. ಪೊಕೊ ತನ್ನ ಹೊಸ ಸ್ಮಾರ್ಟ್‌ಫೋನ್ ಮಾಡೆಲ್ ಪೊಕೊ X7 (POCO X7) ಅನ್ನು ಮೊದಲ ಬಾರಿಗೆ ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಕಂಪನಿಯು ಇಂದಿನಿಂದ (ಜನವರಿ 20) ಪ್ರಾರಂಭವಾಗಿರುವ ಮೊದಲ ದಿನದ ಮಾರಾಟದಲ್ಲಿ ಪೊಕೊ X7 5G ಫೋನಿನ ಖರೀದಿ ಮೇಲೆ ಒಂದು ದಿನದ ವಿಶೇಷ ಉಗುಗೊರೆಯನ್ನು ಘೋಷಿಸಿದೆ. ಕಂಪನಿಯು ಒಂದು ದಿನದ ಸ್ಪೆಷಲ್ ಆಫರ್ ಪ್ರಯುಕ್ತ ಮೊದಲ ದಿನವೇ ಈ ಫೋನ್ ಖರೀದಿಸುವ ಗ್ರಾಹಕರಿಗೆ ಮಾತ್ರ ಹೊಸ ಬೆಲೆ ಕಡಿತವನ್ನು ಘೋಷಿಸಿದೆ. ಈ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
ಕಂನಿಯು ಕಳೆದ ವಾರವಷ್ಟೇ ಪೊಕೊ X7 5G (POCO X7 5G) ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಇದು ಅಮೆಜಾನ್, ಇತರೆ ಆನ್‌ಲೈನ್ ಶಾಪಿಂಗ್ ಸೈಟ್ ಮತ್ತು ಆಫ್‌ಲೈನ್ ಸ್ಟೋರ್‌ಗಳಲ್ಲಿ ಇಂದಿನಿಂದ ಖರೀದಿಗೆ ಲಭ್ಯವಿದೆ. ಪೊಕೊ X7 ಫೋನಿನಲ್ಲಿ ವಿಶೇಷ ಒಂದು ದಿನದ ಬೆಲೆ ಕಡಿತವನ್ನು ಘೋಷಿಸಲಾಗಿದೆ. ಇದು ತನ್ನ ಮೊದಲ ದಿನದಲ್ಲಿ ಮಾರಾಟಕ್ಕೆ ಬಂದಿದೆ. ಈ ವಿಶೇಷ ಆಫರ್ ಒಂದು ದಿನಕ್ಕೆ ಮಾತ್ರ ಲಭ್ಯವಿದೆ.

19,999 ರೂ. ಆರಂಭಿಕ ಬೆಲೆಗೆ ಲಭ್ಯ
ಪೊಕೊ X7 ಸ್ಮಾರ್ಟ್‌ಫೋನ್ 19,999 ರೂ. ಆರಂಭಿಕ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಕಂಪನಿಯು 2000 ರೂ.ಗಳ ತ್ವರಿತ ರಿಯಾಯಿತಿ ನೀಡುತ್ತಿದೆ. ಈ ಅಪರೂಪದ ಅವಕಾಶವನ್ನು ನೀವು ಕಳೆದುಕೊಂಡರೆ, ನಾಳೆಯಿಂದ ನೀವು ಈ ಹೊಸ ಪೊಕೊ X7 ಫೋನನ್ನು ಬೇರೆ ಬೆಲೆಗೆ ಖರೀದಿಸಬೇಕಾಗುತ್ತದೆ. ಪೊಕೊ X7 ಫೋನಿನ 8GB + 128GB ಸ್ಟೋರೇಜ್ ರೂಪಾಂತರದ ಬೆಲೆ 21,999 ರೂ.ಗೆ ಲಭ್ಯವಿದೆ. ಈ ಫೋನಿನ 8GB + 256GB ಸ್ಟೋರೇಜ್ ರೂಪಾಂತರದ ಬೆಲೆ 23,999 ರೂ.ಗೆ ಮಾರಾಟವಾಗುತ್ತಿದೆ. ನೀವು ಹಳದಿ, ಕಾಸ್ಮಿಕ್ ಸಿಲ್ವರ್ ಮತ್ತು ಗ್ಲೇಸಿಯರ್ ಗ್ರೀನ್ ಬಣ್ಣಗಳಲ್ಲಿ ಈ ಫೋನ್ ಖರೀದಿಗೆ ಲಭ್ಯವಿದೆ.
ಅಮೆಜಾನ್‌ನಲ್ಲೂ ಭರ್ಜರಿ ರಿಯಾಯಿತಿ
ಪೊಕೊ X7 ಫೋನಿನ ಈ ಮೊದಲ ದಿನದ ಮಾರಾಟದೊಂದಿಗೆ ಇನ್ನೂ ಹೆಚ್ಚಿನ ಬೆಲೆ ಇಳಿಕೆ ಲಭ್ಯವಿದೆ. ನೀವು ಅಮೆಜಾನ್‌ನಲ್ಲಿ ಪೊಕೊ X7 ಫೋನನ್ನು 2000 ರೂ. ಬ್ಯಾಂಕ್ ಕಾರ್ಡ್ ಸ್ಪೆಷಲ್ ಆಫರ್ ನೀಡುತ್ತದೆ. ಇದರೊಂದಿಗೆ ಹೆಚ್ಚುವರಿಯಾಗಿ ಈ ಫೋನಿನಲ್ಲಿ 2,000 ರೂ.ಗಳ ಎಕ್ಸ್‌ಚೇಂಜ್ ಆಫರ್ ಸಹ ಲಭ್ಯವಿದೆ.
ಪೊಕೊ X7 5G ವೈಶಿಷ್ಟ್ಯಗಳು
ಪೊಕೊ X7 5G ಫೋನ್ 6.67 ಇಂಚಿನ ಡಿಸ್ಪ್ಲೇ ಹೊಂದಿದೆ. ಇದು 2712 × 1220 ಪಿಕ್ಸೆಲ್ ರೆಸಲ್ಯೂಶನ್, 3000 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್, 120Hz ರಿಫ್ರೆಶ್ ದರ ಮತ್ತು 240Hz ಟಚ್ ಸ್ಯಾಂಪ್ಲಿಂಗ್ ದರದ ಬೆಂಬಲ ಪಡೆದಿದೆ. ಈ ಡಿಸ್ಪ್ಲೇಯು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ರಕ್ಷಣೆ ಹೊಂದಿದೆ. ಈ ಮೊಬೈಲ್ ಮೀಡಿಯಾಟೆಕ್ ಡೈಮೆನ್ಸಿಟಿ 7300 ಅಲ್ಟ್ರಾ ಪ್ರೊಸೆಸರ್ ಹೊಂದಿದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 15 ಆಧಾರಿತ ಶಿಯೋಮಿ ಹೈಪರ್ ಓಎಸ್‌ನಲ್ಲಿ ಕೆಲಸ ಮಾಡುತ್ತವೆ. ಇದು ಗ್ರಾಫಿಕ್ಸ್‌ಗಾಗಿ ಮಾಲಿ G615 MC2 ಜಿಪಿಯು ಹೊಂದಿದೆ.
ಪೊಕೊ X7 5G ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಜೊತೆಗೆ 8 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ತೃತೀಯ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಮೊಬೈಲ್ 20 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಸಹ ಇದೆ. ಈ ಫೋನ್ 8GB RAM ಹೊಂದಿದೆ. ಜೊತೆಗೆ 128GB ಮತ್ತು 256GB ಸ್ಟೋರೇಜ್ ಆಯ್ಕೆ ಒಳಗೊಂಡಿದೆ.
ಪೊಕೊ X7 5G ಸ್ಮಾರ್ಟ್‌ಫೋನ್ 5500mAh ಸಾಮರ್ಥ್ಯ ಬ್ಯಾಟರಿ ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 45W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಈ ಫೋನ್ ನೀರು ಮತ್ತು ಧೂಳಿನ ವಿರುದ್ಧ ರಕ್ಷಣೆಗಾಗಿ IP66 + IP68 + IP69 ರೇಟಿಂಗ್ ಪಡೆದಿದೆ. ಇದು ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕ ಮತ್ತು ಇನ್ಫ್ರಾರೆಡ್ ಸಂವೇದಕ ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಇದು ಡ್ಯುಯಲ್ 4G VoLTE, ಯುಎಸ್‌ಬಿ ಟೈಪ್ ಸಿ ಆಡಿಯೊ, ಸ್ಟಿರಿಯೊ ಸ್ಪೀಕರ್‌ಗಳು, ಡಾಲ್ಬಿ ಅಟ್ಮಾಸ್, ಬ್ಲೂಟೂತ್ 5.4, ವೈ-ಫೈ 6 ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ.


Click it and Unblock the Notifications








