POCO F7 ಫೀಚರ್ಸ್ ಲೀಕ್: 7000mAh ಬ್ಯಾಟರಿ.. 512GB ಸ್ಟೋರೇಜ್.. ಕಡಿಮೆ ಬೆಲೆ!
ಪೊಕೊ ತನ್ನ ಗ್ರಾಹಕರಿಗೆ ಭರ್ಜರಿ ಸಿಹಿಸುದ್ದಿ ನೀಡಿಲಿದೆ. ಎರಡು ಹೊಸ ಮೊಬೈಲ್‌ಗಳು ಮಾರುಕಟ್ಟೆಗೆ ಎಂಟ್ರಿ ಕೊಡಲಿವೆ. ಹೌದು, ಕಂಪನಿಯು ತನ್ನ 'X' ಸರಣಿಯಲ್ಲಿ ಹೊಸ ಸ್ಮಾರ್ಟ್‌ಫೋನ್‌ಗಳನ್ನು ಅನಾವರಣಗೊಳಿಸಲು ಸಿದ್ಧತೆ ನಡೆಸುತ್ತಿದೆ. ಇದರಲ್ಲಿ ಪೊಕೊ X7 (Poco X7) ಮತ್ತು ಪೊಕೊ X7 ಪ್ರೊ (Poco X7 Pro) ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಲಾಗುತ್ತದೆ. ಇವು 2025ರ ಜನವರಿಯಲ್ಲಿ ಜಾಗತಿಕ ಮಾರುಕಟ್ಟೆಗೆ ಬರುವ ಸಾಧ್ಯತೆಯಿದೆ. ಈ ಪೈಕಿ ಪೊಕೊ X7 5G ಫೋನಿನ ಪ್ರಮುಖ ವಿಶೇಷತೆಗಳನ್ನು ಬಹಿರಂಗಪಡಿಸಲಾಗಿದೆ.
ಪೊಕೊ X7 5G ಮೊಬೈಲ್ ಮೂರು ಬಣ್ಣಗಳಲ್ಲಿ ಬಿಡುಗಡೆಯಾಗಲಿದೆ. ನೀವು ಹಸಿರು, ಬೆಳ್ಳಿ ಮತ್ತು ಕಪ್ಪು-ಹಳದಿ ಮಿಶ್ರಿತ ಬಣ್ಣದಲ್ಲಿ ಖರೀದಿಸಬಹುದು. ಈ ಫೋನಿನ ಡಿಸೈನ್ Redmi Note 14 Pro 5G ನಂತೆಯೇ ಕಾಣುತ್ತದೆ. ವಿಶೇಷವೆಂದರೆ, ಕಳೆದ ವರ್ಷ ಬಿಡುಗಡೆಯಾಗಿದ್ದ Poco X6 5G ಸಹ Redmi Note 13 Pro ಫೋನಿನ ಮರುಬ್ರಾಂಡೆಡ್ ಆಗಿದೆ. ಟಿಪ್‌ಸ್ಟರ್ ಈ ಹೊಸ ಫೋನಿನ ವೈಶಿಷ್ಟ್ಯಗಳನ್ನು ಹಂಚಿಕೊಂಡಿದ್ದಾರೆ. ಈ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಪೊಕೊ X7 5G ಸರಣಿ ಬಿಡುಗಡೆ ಯಾವಾಗ?
ಕಂಪನಿಯು ಹೊಸ ಪೊಕೊ X7 5G ಸರಣಿಯನ್ನು ಹೊಸ ವರ್ಷಕ್ಕೆ (ಜನವರಿ 2025) ಬಿಡುಗಡೆ ಮಾಡಲಿದೆ. ಮೊದಲು ಜಾಗತಿಕ ಮತ್ತು ಭಾರತೀಯ ಮಾರುಕಟ್ಟೆಗೆ ಪೊಕೊ X7 ಮತ್ತು ಪೊಕೊ X7 ಪ್ರೊ ಫೋನ್‌ಗಳು ಬರುವ ಸಾಧ್ಯತೆಯಿದೆ. ಆದರೆ, ಕಂಪನಿಯು ಈ ಬಗ್ಗೆ ಅಧಿಕೃತ ಘೋಷಣೆ ಮಾಡಿಲ್ಲ. ಇನ್ನು Poco X6 ಸರಣಿಯನ್ನು ಕಳೆದ ವರ್ಷ (2024) ಜನವರಿ ತಿಂಗಳಲ್ಲಿ ರಿಲೀಸ್ ಮಾಡಲಾಗಿತ್ತು.
ಪೊಕೊ X7 5G ಫೋನಿನ ವೈಶಿಷ್ಟ್ಯಗಳು
ಮುಂಬರುವ ಪೊಕೊ X7 5G ಫೋನಿನ ಡಿಸೈನ್ ಮತ್ತು ಬಣ್ಣಗಳ ಆಯ್ಕೆಯ ಹೊರತಾಗಿ, ಟಿಪ್‌ಸ್ಟರ್ ಪೋಸ್ಟ್‌ನಲ್ಲಿ ಪೊಕೊ X7 5Gಯಪ್ರಮುಖ ವೈಶಿಷ್ಟ್ಯಗಳನ್ನು ಸಹ ಹಂಚಿಕೊಳ್ಳಲಾಗಿದೆ. ಅವು ಈ ಕೆಳಗಿನಂತಿವೆ.
ಡಿಸ್ಪ್ಲೇ ವಿವರ
ಪೊಕೊ X7 5G ಮೊಬೈಲ್ 6.67 ಇಂಚಿನ 1.5K ಅಮೋಲೆಡ್ ಡಿಸ್ಪ್ಲೇಯನ್ನು ಹೊಂದಿರಲಿದೆ. ಇದು ಫೋನ್ HDR10+ ಬೆಂಬಲ ಮತ್ತು 120Hz ರಿಫ್ರೆಶ್ ದರವನ್ನು ಸಹ ಹೊಂದಿರಲಿದೆ. ಡಿಸ್ಪ್ಲೇಯು TUV ರೈನ್‌ಲ್ಯಾಂಡ್ ಐ ಕೇರ್ ಪ್ರಮಾಣೀಕರಿಸಲ್ಪಟ್ಟಿದೆ. ಹಾಗೆಯೇ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ರಕ್ಷಣೆಯನ್ನು ಹೊಂದಿದೆ.
ಪ್ರೊಸೆಸರ್ ಸಾಮರ್ಥ್ಯ
ಪೊಕೊ X7 5G ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಅಲ್ಟ್ರಾ ಪ್ರೊಸೆಸರ್‌ನೊಂದಿಗೆ ಬಿಡುಗಡೆಯಾಗುವ ಸಾಧ್ಯತೆಯಿದೆ. ಇದು 700,000 ಅಂಕಗಳನ್ನು ಮೀರಿದ AnTuTu ಸ್ಕೋರ್ ಹೊಂದಿರುತ್ತದೆ. ಈ ಸ್ಮಾರ್ಟ್‌ಫೋನ್ 12GB RAM ಮತ್ತು 512GB ಸ್ಟೋರೇಜ್ ಆಯ್ಕೆಯನ್ನು ಒಳಗೊಂಡಿರಲಿದೆ.
ಕ್ಯಾಮೆರಾ ಸೆಟಪ್
ಹೊಸ ಪೊಕೊ X7 5G ಸ್ಮಾರ್ಟ್‌ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿರುತ್ತದೆ. ಈ ಫೋನಿನಲ್ಲಿ OIS ಬೆಂಬಲದೊಂದಿಗೆ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಇರಲಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಮೊಬೈಲ್ 20 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿರುತ್ತದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ಪೊಕೊ X7 5G ಮೊಬೈಲ್ 5110mAh ಸಾಮರ್ಥ್ಯ ಬ್ಯಾಟರಿಯೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 45W ವೈರ್ಡ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗುತ್ತದೆ.
ಇತರೆ ವೈಶಿಷ್ಟ್ಯಗಳು
ಪೊಕೊ X7 5G ಫೋನ್ ಹಲವು ಎಐ (AI) ವೈಶಿಷ್ಟ್ಯಗಳನ್ನು ಹೊಂದಿರುತ್ತದೆ. ಇದರಲ್ಲಿ ಎಐ ಇಮೇಜ್ ವಿಸ್ತರಣೆ, ಎಐ ಫಿಲ್ಮ್, ಎಐ ಎರೇಸ್ ಪ್ರೊ ಮತ್ತು ಇನ್ನಿತರ ಎಐ ಕ್ಯಾಮೆರಾ ವೈಶಿಷ್ಟ್ಯಗಳನ್ನು ಸಹ ಒಳಗೊಂಡಿರುತ್ತದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, ಬ್ಲೂಟೂತ್, ವೈ-ಫೈ ಮತ್ತು ಎನ್‌ಎಫ್‌ಸಿ ಸೇರಿದಂತೆ ಹಲವು ಆಯ್ಕೆಗಳನ್ನು ಹೊಂದಿರಲಿದೆ.
ಪೊಕೊ X7 5G ಬೆಲೆ ಎಷ್ಟು?
ಪೊಕೊ X7 5G ಅನ್ನು ಪೊಕೊ X7 F6 ಫೋನಿನ ಉತ್ತರಾಧಿಕಾರಿಯಾಗಿ ಬಿಡುಗಡೆ ಮಾಡಲಾಗುತ್ತದೆ. ಪೊಕೊ X7 F6 ಮೊಬೈಲ್ ಈ ವರ್ಷದ ಮೇ ತಿಂಗಳಲ್ಲಿ ಲಾಂಚ್ ಆಗಿತ್ತು. ಇದರ ಬೆಲೆ 29,999 ರೂ. ಆಗಿದೆ. ಪೊಕೊ X7 5G ಅನ್ನು ಸಹ ಇದೇ ಬಜೆಟ್‌ನಲ್ಲಿ ಬರಲಿದೆ.


Click it and Unblock the Notifications








