ಇಂದು POCO X7 ಸರಣಿ ಬಿಡುಗಡೆ; ಕ್ಯಾಮೆರಾ, ಬ್ಯಾಟರಿ, ಪ್ರೊಸೆಸರ್ ಸೂಪರ್.. ಕಡಿಮೆ ಬೆಲೆ, ವಿಶೇಷತೆಗಳೇನು?
ಪೊಕೊ ಭಾರತದಲ್ಲಿ ಹೊಸ ಸರಣಿಯನ್ನು ಬಿಡುಗಡೆಗೆ ಸಜ್ಜಾಗಿದೆ. ದೇಶೀಯ ಮಾರುಕಟ್ಟೆಗೆ ಈ ಸರಣಿಯಲ್ಲಿ ಎರಡು ಹೊಸ ಮೊಬೈಲ್‌ಗಳು ಎಂಟ್ರಿ ಕೊಡಲಿವೆ. ಹೌದು, ಕಂಪನಿಯು ಇಂದು ಪೊಕೊ X7 5G (POCO X7 5G) ಸರಣಿಯನ್ನು ಅಧಿಕೃತವಾಗಿ ರಿಲೀಸ್ ಮಾಡಲಿದೆ. ಇದರಲ್ಲಿ ಪೊಕೊ X7 5G (Poco X7 5G) ಮತ್ತು ಪೊಕೊ X7 ಪ್ರೊ 5G (Poco X7 Pro 5G) ಫೋನ್‌ಗಳನ್ನು ಪರಿಚಯಿಸಲಿದೆ. ಬನ್ನಿ, ಈ ಫೋನ್‌ಗಳ ಬೆಲೆ ಮತ್ತು ವಿಶೇಷತೆಗಳನ್ನು ತಿಳಿಯೋಣ.
ಪೊಕೊ X7 5G ಸರಣಿಯ ಸ್ಮಾರ್ಟ್‌ಫೋನ್ 6.67 ಇಂಚಿನ ಡಿಸ್ಪ್ಲೇ ಹೊಂದಿದೆ. ಇವು ಮೀಡಿಯಾ ಟೆಕ್‌ನ ಡೈಮೆನ್ಸಿಟಿ 7300 ಅಲ್ಟ್ರಾ ಮತ್ತು ಡೈಮೆನ್ಸಿಟಿ 8400 ಅಲ್ಟ್ರಾ ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತವೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಮತ್ತು 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಲಭ್ಯವಿದೆ. ಜೊತೆಗೆ 6000mAh ದೊಡ್ಡ ಬ್ಯಾಟರಿ ಮತ್ತು 90W ಫಾಸ್ಟ್ ಚಾರ್ಜಿಂಗ್ ಒಳಗೊಂಡಿದೆ. ನೀವು, ಫ್ಲಿಪ್‌ಕಾರ್ಟ್ ಮೂಲಕ ಈ ಹೊಸ ಮೊಬೈಲ್‌ಗಳನ್ನು ಖರೀದಿಸಬಹುದು.

ಪೊಕೊ X7 5G ಸರಣಿ ಬಿಡುಗಡೆ ವಿವರ
ಪೊಕೊ X7 5G ಸರಣಿಯು ಇಂದು ಸಂಜೆ 5.30 ಗಂಟೆಗೆ ಅನಾವರಣಗೊಳ್ಳಲಿದೆ. ಕಂಪನಿಯು ಇದಕ್ಕಾಗಿ ದೊಡ್ಡ ಕಾರ್ಯಕ್ರಮವನ್ನು ಆಯೋಜಿಸಿದೆ. ಈ ಹೊಸ ಪೊಕೊ X7 ಸರಣಿಯು ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಕಂಪನಿಯು ಪೊಕೊ X7 ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ತನ್ನ ಅಧಿಕೃತ ಸಾಮಾಜಿಕ ಜಾಲತಾಣದ ಮೂಲಕ ಸ್ಟ್ರೀಮ್ ಮಾಡುತ್ತದೆ. ನೀವು ಪೊಕೊ ಫೋನ್ ಬಿಡುಗಡೆ ಸಮಾರಂಭವನ್ನು ಈ ಕೆಳಗಿನ ಲಿಂಕ್‌ನಲ್ಲಿ, ಕಂಪನಿಯ ವೆಬ್‌ಸೈಟ್ ಮತ್ತು ಪೊಕೊ ಇಂಡಿಯಾ ಸಾಮಾಜಿಕ ಜಾಲತಾಣದಲ್ಲಿ ಲೈವ್ ವೀಕ್ಷಿಸಬಹುದು.
ಪೊಕೊ X7 5G ಫೋನಿನ ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ಪೊಕೊ X7 5G ಸ್ಮಾರ್ಟ್‌ಫೋನ್ 6.67 ಇಂಚಿನ ಓಎಲ್‌ಇಡಿ ಡಿಸ್ಪ್ಲೇ ಹೊಂದಿದೆ. ಇದು 1.5K ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ದರದ ಬೆಂಬಲ ಪಡೆದಿದೆ. ಈ ಡಿಸ್ಪ್ಲೇಯು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ರಕ್ಷಣೆಯನ್ನು ಹೊಂದಿದೆ.
ಪ್ರೊಸೆಸರ್ ಸಾಮರ್ಥ್ಯ
ಪೊಕೊ X7 5G ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಅಲ್ಟ್ರಾ ಪ್ರೊಸೆಸರ್ ಹೊಂದಿದೆ. ಈ ಸ್ಮಾರ್ಟ್‌ಫೋನ್ ಇತ್ತೀಚಿನಆಂಡ್ರಾಯ್ಡ್ 15 ಓಎಸ್‌ನಲ್ಲಿ ಕೆಲಸ ಮಾಡುತ್ತವೆ. ಈ ಮೊಬೈಲ್ 12GB RAM ಮತ್ತು 512GB ಸ್ಟೋರೇಜ್ ಆಯ್ಕೆಯನ್ನು ಒಳಗೊಂಡಿದೆ.
ಕ್ಯಾಮೆರಾ ಸೆಟಪ್
ಪೊಕೊ X7 5G ಮೊಬೈಲ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 8 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಲಭ್ಯವಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 32 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ಪೊಕೊ X7 5G ಸ್ಮಾರ್ಟ್‌ಫೋನ್ 5110mAh ಸಾಮರ್ಥ್ಯ ಬ್ಯಾಟರಿ ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 45W ವೈರ್ಡ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ.

ಪೊಕೊ X7 ಪ್ರೊ 5G ಫೋನಿನ ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ಪೊಕೊ X7 ಪ್ರೊ 5G ಸ್ಮಾರ್ಟ್‌ಫೋನ್ 6.67 ಇಂಚಿನ ಓಎಲ್‌ಇಡಿ ಡಿಸ್ಪ್ಲೇ ಹೊಂದಿದೆ. ಇದು 1.5K ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ದರದ ಬೆಂಬಲ ಪಡೆದಿದೆ. ಈ ಡಿಸ್ಪ್ಲೇಯು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ರಕ್ಷಣೆಯನ್ನು ಹೊಂದಿದೆ.
ಪ್ರೊಸೆಸರ್ ಸಾಮರ್ಥ್ಯ
ಪೊಕೊ X7 ಪ್ರೊ 5G ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 8400 ಅಲ್ಟ್ರಾ ಪ್ರೊಸೆಸರ್ ಹೊಂದಿದೆ. ಈ ಸ್ಮಾರ್ಟ್‌ಫೋನ್ ಇತ್ತೀಚಿನಆಂಡ್ರಾಯ್ಡ್ 15 ಓಎಸ್‌ನಲ್ಲಿ ಕೆಲಸ ಮಾಡುತ್ತವೆ. ಈ ಮೊಬೈಲ್ 12GB RAM ಮತ್ತು 512GB ಸ್ಟೋರೇಜ್ ಆಯ್ಕೆ ಒಳಗೊಂಡಿದೆ.
ಕ್ಯಾಮೆರಾ ಸೆಟಪ್
ಪೊಕೊ X7 5G ಸ್ಮಾರ್ಟ್‌ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ OIS ಬೆಂಬಲದೊಂದಿಗೆ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 20 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಲಭ್ಯವಿದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ಪೊಕೊ X7 ಪ್ರೊ 5G ಮೊಬೈಲ್ 6000mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯನ್ನು ಹೊಂದಿದೆ. ಇದನ್ನು ಚಾರ್ಜ್ ಮಾಡಲು, 90W ವೈರ್ಡ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ.
ಇತರೆ ವೈಶಿಷ್ಟ್ಯಗಳು
ಪೊಕೊ X7 5G ಮತ್ತು ಪೊಕೊ X7 ಪ್ರೊ ಸ್ಮಾರ್ಟ್‌ಫೋನ್ ಹಲವು ಎಐ (AI) ಫೀಚರ್ಸ್ ಹೊಂದಿದೆ. ಈ ಫೋನಿನಲ್ಲಿ ಎಐ ಇಮೇಜ್ ವಿಸ್ತರಣೆ, ಎಐ ಫಿಲ್ಮ್, ಎಐ ಎರೇಸ್ ಪ್ರೊ ಮತ್ತು ಇನ್ನಿತರ ಎಐ ಕ್ಯಾಮೆರಾ ವೈಶಿಷ್ಟ್ಯಗಳು ಲಭ್ಯವಿರುತ್ತವೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, ಬ್ಲೂಟೂತ್, ವೈ-ಫೈ ಮತ್ತು ಎನ್‌ಎಫ್‌ಸಿ ಸೇರಿದಂತೆ ಹಲವು ಆಯ್ಕೆಗಳನ್ನು ಒಳಗೊಂಡಿದೆ.
ಪೊಕೊ X7 5G ಮತ್ತು ಪೊಕೊ X7 ಪ್ರೊ 5G ಬೆಲೆ
ಪೊಕೊ X6 ಫೋನಿನ 8RAM + 256GB ಸ್ಟೋರೇಜ್ ರೂಪಾಂತವನ್ನು 21,999 ರೂ.ಗೆ ಪರಿಚಯಿಸಲಾಗಿದೆ. ಹೀಗಾಗಿ ಪೊಕೊ X7 5G ಸಹ ಇದೇ ಬೆಲೆಗೆ ಬರಲಿದೆ. ಪೊಕೊ X6 ಪ್ರೊ ಫೋನಿನ 8RAM + 256GB ಸ್ಟೋರೇಜ್ ರೂಪಾಂತವನ್ನು ಭಾರತದಲ್ಲಿ 26,999 ರೂ.ಗೆ ಬಿಡುಗಡೆ ಮಾಡಲಾಗಿದೆ. ಅದರಂತೆ ಪೊಕೊ X7 ಪ್ರೊ 5G ಫೋನನ್ನು ಭಾರತದಲ್ಲಿ 30,000 ರೂ.ಗಿಂತ ಕಡಿಮೆ ಬೆಲೆಗೆ ಬಿಡುಗಡೆ ಮಾಡಲಾಗುವುದು. ಮುಂಬರುವ ಈ ಸ್ಮಾರ್ಟ್‌ಫೋನ್‌ಗಳು ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟವಾಗಲಿವೆ.
ಒಪ್ಪೋ ರೆನೋ 13 ಸರಣಿ ಸಹ ಬಿಡುಗಡೆ
ಒಪ್ಪೋ ರೆನೋ 13 ಸರಣಿಯು ಇಂದು (ಜನವರಿ 9) ಭಾರತದಲ್ಲಿ ಬಿಡುಗಡೆಯಾಗಲಿದೆ. ಒಪ್ಪೋ ರೆನೋ 13 5G ಫೋನ್ ಮೀಡಿಯಾ ಟೆಕ್‌ನ ಡೈಮೆನ್ಷನ್ 8350 ಆಕ್ಟಾಕೋರ್ ಪ್ರೊಸೆಸರ್ ಹೊಂದಿದೆ. ಇದರೊಂದಿಗೆ 12GB RAM ಲಭ್ಯವಿರುತ್ತದೆ. ಈ ಫೋನನ್ನು ಈಗಾಗಲೇ ಚೀನಾದಲ್ಲಿ 6.59 ಇಂಚಿನ 1.5K ಅಲ್ಟ್ರಾ ಹೈ ಡೆಫಿನಿಷನ್ AMOLED ಡಿಸ್ಪ್ಲೇಯೊಂದಿಗೆ ಬಿಡುಗಡೆ ಮಾಡಲಾಗಿದೆ. ಇದು 120Hz ರಿಫ್ರೆಶ್ ದರವನ್ನು ಹೊಂದಿದೆ. ಈ ಮೊಬೈಲ್ 50 ಮೆಗಾಪಿಕ್ಸೆಲ್ ಸೋನಿ OIS ಕ್ಯಾಮೆರಾ ಮತ್ತು 50 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಹಾಗೆಯೇ 5,600mAh ಬ್ಯಾಟರಿ ಮತ್ತು 80W ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಇದನ್ನು 29,999 ರೂ.ಗೆ ಬಿಡುಗಡೆ ಮಾಡುವ ಸಾಧ್ಯತೆಯಿದೆ.


Click it and Unblock the Notifications








