Home
ಸುದ್ದಿಜಾಲ

ನಾಳೆ POCO X7 ಸರಣಿ ಲಾಂಚ್; ಎಷ್ಟು ಫೋನ್‌ ಬರಲಿವೆ.. ಬೆಲೆ, ವಿಶೇಷತೆಗಳೇನು?

ಪೊಕೊ ತನ್ನ ಹೊಸ ಸರಣಿಯನ್ನು ಭಾರತದಲ್ಲಿ ಬಿಡುಗಡೆಗೆ ಸಿದ್ಧವಾಗಿದೆ. ಈ ಸರಣಿಯಲ್ಲಿ ಎರಡು ಹೊಸ ಮೊಬೈಲ್‌ಗಳು ದೇಶೀಯ ಮಾರುಕಟ್ಟೆಗೆ ಎಂಟ್ರಿ ಕೊಡಲಿವೆ. ಹೌದು, ಕಂಪನಿಯು ನಾಳೆ (ಜನವರಿ 9) ಪೊಕೊ X7 (POCO X7) ಸರಣಿಯನ್ನು ಅಧಿಕೃತವಾಗಿ ಅನಾವರಣಗೊಳಿಸಲಿದೆ. ಈ ಮೂಲಕ ಪೊಕೊ X7 (Poco X7) ಮತ್ತು ಪೊಕೊ X7 ಪ್ರೊ (Poco X7 Pro) ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಲಿದೆ. ಬನ್ನಿ, ಈ ಫೋನ್‌ಗಳ ಬೆಲೆ ಮತ್ತು ವಿಶೇಷತೆಗಳನ್ನು ತಿಳಿಯೋಣ.

ಹೊಸ ಫೋನ್‌ ಖರೀದಿಸಲು ಬಯಸುವ ಗ್ರಾಹಕರಿಗೆ, ಪೊಕೊ X7 ಸರಣಿಯು ಉತ್ತಮ ಆಯ್ಕೆಯಾಗಿದೆ. ಈ ಹೊಸ ಪೊಕೊ X7 ಸರಣಿಯು ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಕಂಪನಿಯು ಪೊಕೊ X7 ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ತನ್ನ ಅಧಿಕೃತ ಸಾಮಾಜಿಕ ಜಾಲತಾಣದ ಮೂಲಕ ಸ್ಟ್ರೀಮ್ ಮಾಡುತ್ತದೆ. ಈ ಮೊಬೈಲ್‌ ಹಸಿರು, ಬೆಳ್ಳಿ ಮತ್ತು ಕಪ್ಪು-ಹಳದಿ ಮಿಶ್ರಿತ ಬಣ್ಣದಲ್ಲಿ ಖರೀದಿಗೆ ಲಭ್ಯವಿದೆ. ನೀವು, ಆನ್‌ಲೈನ್ ಶಾಪಿಂಗ್ ಸೈಟ್ ಫ್ಲಿಪ್‌ಕಾರ್ಟ್‌ ಮೂಲಕ ಈ ಹೊಸ ಮೊಬೈಲ್‌ಗಳನ್ನು ಖರೀದಿಸಬಹುದು.

ನಾಳೆ POCO X7 ಸರಣಿ ಲಾಂಚ್; ಎಷ್ಟು ಫೋನ್‌ ಬರಲಿವೆ.. ಬೆಲೆ, ವಿಶೇಷತೆಗಳೇನು?

ಪೊಕೊ X7 ಸರಣಿಯ ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ಪೊಕೊ X7 ಮತ್ತು ಪೊಕೊ X7 ಪ್ರೊ ಸ್ಮಾರ್ಟ್‌ಫೋನ್‌ಗಳು 6.67 ಇಂಚಿನ ಓಎಲ್‌ಇಡಿ ಡಿಸ್ಪ್ಲೇ ಹೊಂದಿವೆ. ಇದು 1.5K ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ದರದ ಬೆಂಬಲ ಪಡೆದಿದೆ. ಈ ಡಿಸ್ಪ್ಲೇಯು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ರಕ್ಷಣೆಯನ್ನು ಹೊಂದಿರುತ್ತದೆ.

ಪ್ರೊಸೆಸರ್ ಸಾಮರ್ಥ್ಯ

ಪೊಕೊ X7 5G ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಅಲ್ಟ್ರಾ ಪ್ರೊಸೆಸರ್‌ ಹೊಂದಿದೆ. ಆದರೆ, ಪೊಕೊ X7 ಪ್ರೊ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 8400 ಅಲ್ಟ್ರಾ ಪ್ರೊಸೆಸರ್‌ ಹೊಂದಿದೆ. ಈ ಸ್ಮಾರ್ಟ್‌ಫೋನ್‌ಗಳು ಇತ್ತೀಚಿನಆಂಡ್ರಾಯ್ಡ್‌ 15 ಓಎಸ್‌ನಲ್ಲಿ ಕೆಲಸ ಮಾಡುತ್ತವೆ. ಈ ಮೊಬೈಲ್ 12GB RAM ಮತ್ತು 512GB ಸ್ಟೋರೇಜ್‌ ಆಯ್ಕೆಯನ್ನು ಒಳಗೊಂಡಿದೆ.

ಕ್ಯಾಮೆರಾ ಸೆಟಪ್

ಪೊಕೊ X7 ಸರಣಿಯು ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 8 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಲಭ್ಯವಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 32 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದೆ. ಆದರೆ, ಪೊಕೊ X7 5G ಸ್ಮಾರ್ಟ್‌ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ OIS ಬೆಂಬಲದೊಂದಿಗೆ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 20 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಲಭ್ಯವಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ಪೊಕೊ X7 5G ಮೊಬೈಲ್ 5110mAh ಸಾಮರ್ಥ್ಯ ಬ್ಯಾಟರಿ ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 45W ವೈರ್ಡ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಆದರೆ, ಪೊಕೊ X7 ಪ್ರೊ ಮೊಬೈಲ್ 6000mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯನ್ನು ಹೊಂದಿದೆ. ಇದನ್ನು ಚಾರ್ಜ್ ಮಾಡಲು, 90W ವೈರ್ಡ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಕಲ್ಪಿಸಲಾಗಿದೆ.

ಇತರೆ ವೈಶಿಷ್ಟ್ಯಗಳು

ಪೊಕೊ X7 5G ಸ್ಮಾರ್ಟ್‌ಫೋನ್ ಹಲವು ಎಐ (AI) ವೈಶಿಷ್ಟ್ಯಗಳನ್ನು ಹೊಂದಿದೆ. ಈ ಫೋನಿನಲ್ಲಿ ಎಐ ಇಮೇಜ್ ವಿಸ್ತರಣೆ, ಎಐ ಫಿಲ್ಮ್, ಎಐ ಎರೇಸ್ ಪ್ರೊ ಮತ್ತು ಇನ್ನಿತರ ಎಐ ಕ್ಯಾಮೆರಾ ವೈಶಿಷ್ಟ್ಯಗಳು ಲಭ್ಯವಿರುತ್ತವೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, ಬ್ಲೂಟೂತ್, ವೈ-ಫೈ ಮತ್ತು ಎನ್‌ಎಫ್‌ಸಿ ಸೇರಿದಂತೆ ಹಲವು ಆಯ್ಕೆಗಳನ್ನು ಒಳಗೊಂಡಿರುತ್ತದೆ.

ಪೊಕೊ X7 5G ಬೆಲೆ ಎಷ್ಟು?

ಪೊಕೊ X7 ಪ್ರೊ 5G ಫೋನನ್ನು ಭಾರತದಲ್ಲಿ 30,000 ರೂ.ಗಿಂತ ಕಡಿಮೆ ಬೆಲೆಗೆ ಬಿಡುಗಡೆ ಮಾಡಲಾಗುವುದು. ಪೊಕೊ X6 ಪ್ರೊ ಫೋನಿನ 8RAM + 256GB ಸ್ಟೋರೇಜ್‌ ರೂಪಾಂತವನ್ನು ಭಾರತದಲ್ಲಿ 26,999 ರೂ.ಗಳ ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ. ಇನ್ನು ಪೊಕೊ X6 ಫೋನಿನ 8RAM + 256GB ಸ್ಟೋರೇಜ್‌ ರೂಪಾಂತವನ್ನು 21,999 ರೂ. ಆರಂಭಿಕ ಬೆಲೆಗೆ ಪರಿಚಯಿಸಲಾಗಿದೆ. ಪೊಕೊ X7 5G ಅನ್ನು ಸಹ ಇದೇ ಬಜೆಟ್‌ನಲ್ಲಿ ಬರಲಿದೆ. ಮುಂಬರುವ ಈ ಸ್ಮಾರ್ಟ್‌ಫೋನ್‌ಗಳು ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಗೆ ಲಭ್ಯವಿರುತ್ತವೆ.

Best Mobiles in India

English summary
Poco X7 series launching in India tommorrow: Here are the price, specification, and much more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+