Home
ಸುದ್ದಿಜಾಲ

'ಫೋಕೊಫೋನ್' ಹೆಸರಿನಡಿಯಲ್ಲಿ ಶಿಯೋಮಿ ಹೊಸ ಫೋನ್ ಪರಿಚಯಿಸುತ್ತಿರುವುದು ಏಕೆ?

By Bhaskar N J

ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಹನಿಕೇಕ್‌ಗಳಂತೆ ಮಾರಾಟವಾಗುತ್ತಿರುವ ಶಿಯೋಮಿ ಸ್ಮಾರ್ಟ್‌ಪೋನ್‌ಗಳ ಸಾಲಿಗೆ ಕಂಪೆನಿಯ ಮತ್ತೊಂದು ವಿಶೇಷ ಸ್ಮಾರ್ಟ್‌ಫೋನ್ ಶೀಘ್ರವೇ ಸೇರ್ಪಡೆಯಾಗಲಿದೆ.ಈಗಾಗಲೇ ಹಲವು ಬ್ರ್ಯಾಂಡ್ ಹೆಸರುಗಳಡಿಯಲ್ಲಿ ಫೋನ್‌ಗಳನ್ನು ಲಾಂಚ್ ಮಾಡಿರುವ ಶಿಯೋಮಿ ಇದೀಗ ಹೊಸ ಬ್ರ್ಯಾಂಡ್ ಸ್ಮಾರ್ಟ್‌ಫೋನ್ ಒಂದನ್ನು ಮಾರುಕಟ್ಟೆಗೆ ಪರಿಚಯಿಸುತ್ತದೆ.

ಇಲ್ಲಿಯವರೆಗೂ ರೆಡ್‌ಮಿ, ಮಿ ಮತ್ತು ಮಿಕ್ಸ್ ಬ್ರ್ಯಾಂಡ್ ಹೆಸರುಗಳಡಿಯಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುತ್ತಿದ್ದ ಶಿಯೋಮಿ ಕಂಪೆನಿ ಇದೀಗ 'ಫೋಕೊಫೋನ್' ಎಂಬ ಹೊಸ ಬ್ರ್ಯಾಂಡ್ ಹೆಸರನ್ನು ಹುಟ್ಟುಹಾಕುತ್ತಿದೆ. 'ಫೋಕೊಫೋನ್ ಎಫ್1' ಎಂಬ ಸ್ಮಾರ್ಟ್‌ಫೋನ್ ಒಂದನ್ನು ಶಿಯೋಮಿ ಶೀಘ್ರದಲ್ಲೇ ಬಿಡುಗಡೆ ಮಾಡಿ ಮದ್ಯಮ ಬೆಲೆ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯನ್ನು ಆಕ್ರಮಿಸಿಕೊಳ್ಳಲು ಮುಂದಾಗಿದೆ.

'ಫೋಕೊಫೋನ್' ಹೆಸರಿನಡಿಯಲ್ಲಿ ಶಿಯೋಮಿ ಹೊಸ ಫೋನ್ ಪರಿಚಯಿಸುತ್ತಿರುವುದು ಏಕೆ?

'ಫೋಕೊಫೋನ್' ಎಂಬ ಹೊಸ ಬ್ರ್ಯಾಂಡ್ ಹೆಸರಿನಡಿಯಲ್ಲಿ ಶಿಯೋಮಿಯ ಸ್ಮಾರ್ಟ್‌ಫೋನ್ ಒಂದು ಬಿಡುಗಡೆಯಾಗುತ್ತಿರುವುದು ಮಾರುಕಟ್ಟೆಯಲ್ಲಿ ಮತ್ತೆ ಭಾರೀ ಕುತೋಹಲ ಮೂಡಲು ಕಾರಣವಾಗುತ್ತಿದೆ. ಹಾಗಾದರೆ, ಶಿಯೋಮಿಯ ಫೋಕೊಫೋನ್ ಎಫ್1 ಸ್ಮಾರ್ಟ್‌ಫೋನ್ ಹೇಗಿದೆ? ಶಿಯೋಮಿ ಹೊಸ ಬ್ರ್ಯಾಂಡ್ ಅನ್ನು ಪರಿಚಯಿಸುತ್ತಿರುವುದೇಕೆ? ಫೋಕೊಫೋನ್ ಎಫ್1 ಸ್ಮಾರ್ಟ್‌ಫೋನ್ ಬೆಲೆ ಎಷ್ಟು ಎಂಬ ಪೂರ್ಣ ಮಾಹಿತಿಯನ್ನು ಮುಂದೆ ತಿಳಿಯಿರಿ.

ನೂತನ ಬ್ರ್ಯಾಂಡ್ ಪರಿಚಯವೇಕೆ?

ನೂತನ ಬ್ರ್ಯಾಂಡ್ ಪರಿಚಯವೇಕೆ?

ಒನ್‌ಪ್ಲಸ್, ಸ್ಯಾಮ್‌ಸಂಗ್ ಕಂಪೆನಿಗಳ ಮಧ್ಯಮ ವರ್ಗದ ಸ್ಮಾರ್ಟ್‌ಪೋನ್‌ಗಳಿಗೆ ಸೆಡ್ಡುಹೊಡೆಯುವ ಸಲುವಾಗಿ ಹೊಸ ಬ್ರ್ಯಾಂಡ್ ಹೆಸರಿನಡಿಯಲ್ಲಿ ಶಿಯೋಮಿ ಈ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುತ್ತಿದೆ ಎನ್ನಲಾಗಿದೆ. ವಿಶ್ವದಾದ್ಯಂತ ಏಕ ಕಾಲದಲ್ಲಿ ಒಂದು ಬ್ರ್ಯಾಂಡ್ ಅನ್ನು ಪರಿಚಯಿಸಿ ಬಜೆಟ್ ಸ್ಮಾರ್ಟ್‌ಫೋನ್ ಹಣೆಪಟ್ಟಿ ಕಳೆದುಕೊಳ್ಳುವ ಯೋಚನೆಯಲ್ಲಿ ಶಿಯೋಮಿ ಕಂಪೆನಿ ಇದೆ ಎನ್ನಲಾಗಿದೆ. ಹಾಗಾಗಿ, ಹೊಸ ಬ್ರ್ಯಾಂಡ್ ಹೆಸರಿನ 'ಫೋಕೊಫೋನ್' ಶಿಯೋಮಿಯ ಪ್ರೀಮಿಯಂ ಸ್ಮಾರ್ಟ್‌ಫೋನ್ ಆಗಿರಲಿದೆ.!

ಫೋಕೊಫೋನ್ ಎಫ್ 1 ವಿನ್ಯಾಸ!

ಫೋಕೊಫೋನ್ ಎಫ್ 1 ವಿನ್ಯಾಸ!

18:9ರ ಆಕಾರ ಅನುಪಾತದಲ್ಲಿ 2160 × 1080 ಪಿಕ್ಸೆಲ್ ಸಾಮರ್ಥ್ಯದ 5.99-ಇಂಚಿನ ಐಪಿಎಸ್ ಎಲ್‌ಸಿಡಿ ಡಿಸ್‌ಪ್ಲೇಯನ್ನು 'ಫೋಕೊಫೋನ್ ಎಫ್1' ಸ್ಮಾರ್ಟ್‌ಫೋನ್ ಹೊಂದಿದೆ ಎನ್ನಲಾಗಿದೆ. ಹಿಂಬಾಗದಲ್ಲಿ ಫಿಂಗರ್‌ಪ್ರಿಂಟ್ ಆಯ್ಕೆ ಮತ್ತು ಡ್ಯುಯಲ್ ಕ್ಯಾಮೆರಾಗಳನ್ನು ಹೊಂದಿರುವ ಈ ಸ್ಮಾರ್ಟ್‌ಪೋನ್ ವಿನ್ಯಾಸ ಹೈ ಎಂಡ್ ಸ್ಮಾರ್ಟ್‌ಫೋನ್‌ಗಳಂತಿದೆ.

ಪ್ರೊಸೆಸರ್ ಮತ್ತು RAM!

ಪ್ರೊಸೆಸರ್ ಮತ್ತು RAM!

ಫೋಕೊಫೋನ್ ಎಫ್1 ಫೋನ್ ಶಿಯೋಮಿಯ ಹೈ ಎಂಡ್ ಸ್ಮಾರ್ಟ್‌ಫೋನ್ ಆಗಿರುವುದರಿಂದ, ಕ್ವಾಲ್ಕಾಮ್ ಕಂಪೆನಿಯ ಸ್ನ್ಯಾಪ್‌ಡ್ರಾಗನ್ 845 SOC ಪ್ರೊಸೆಸರ್ ಅನ್ನು ನೀಡಲಾಗಿದೆ. ಜೊತೆಗೆ 6GB RAM ಮತ್ತು 64GB ಹಾಗೂ 128GB ವೆರಿಯಂಟ್‌ಟ್‌ಗಳಲ್ಲಿ ಸ್ಮಾರ್ಟ್‌ಪೋನ್ ಬಿಡುಗಡೆಯಾಗುತ್ತಿದೆ ಎಂದು ಹೇಳಲಾಗಿದೆ.

20MP ಸೆಲ್ಫಿ ಕ್ಯಾಮೆರಾ

20MP ಸೆಲ್ಫಿ ಕ್ಯಾಮೆರಾ

ಫೋಕೊಫೋನ್ ಎಫ್1 ಸ್ಮಾರ್ಟ್‌ಫೋನಿನ ಚಿತ್ರಗಳ ಮೂಲಕ ಈ ಸ್ಮಾರ್ಟ್‌ಫೋನ್ 12MP ಮತ್ತು 5MP ಡ್ಯುಯಲ್ ರಿಯರ್ ಕ್ಯಾಮೆರಾಗಳನ್ನು ಹೊಂದಿದೆ. ಇನ್ನು ಸ್ಮಾರ್ಟ್‌ಫೋನಿನ ಸೆಲ್ಫಿ ಕ್ಯಾಮೆರಾಗೆ ಹೆಚ್ಚು ಒತ್ತನ್ನು ನೀಡಲಾಗಿದ್ದು 20MP ಕ್ಯಾಮೆರಾ ಇದಾಗಿದೆ, ಈ ಫೋನಿನಲ್ಲಿ ಕ್ಯಾಮರಾ ತಂತ್ರಜ್ಞಾನವೆ ಹೆಚ್ಚು ವಿಶೇಷ ಎಂದು ಶಿಯೋಮಿ ಮೂಲಗಳು ತಿಳಿಸಿವೆ.

4000mAh ಬ್ಯಾಟರಿ!

4000mAh ಬ್ಯಾಟರಿ!

ಮೊಬೈಲ್ ಬಳಕೆದಾರರ ನಿರೀಕ್ಷೆಗೆ ತಕ್ಕಂತೆ ಫೋಕೊಫೋನ್ ಎಫ್1 ಸ್ಮಾರ್ಟ್‌ಫೋನಿನಲ್ಲಿ 4000mAH ಶಕ್ತಿಯ ಬ್ಯಾಟರಿಯನ್ನು ನೀಡಲಾಗಿದೆ. ಬ್ಯಾಟರಿ ತಂತ್ರಜ್ಞಾನದಲ್ಲಿ ಸುಧಾರಣೆ ತಂದಿರುವ ಶಿಯೋಮಿ ಕಂಪೆನಿ ಫಾಸ್ಟ್‌ಚಾರ್ಜಿಂಗ್ ತಂತ್ರಜ್ಞಾನದ ಜೊತೆಗೆ ಬ್ಯಾಟರಿ ಉಳಿಸುವ ತಂತ್ರಜ್ಞಾನವನ್ನು ಸ್ಮಾರ್ಟ್‌ಪೋನಿನಲ್ಲಿ ನೀಡಿದೆ ಎನ್ನಲಾಗಿದೆ.

 ಇತರೆ ಫೀಚರ್ಸ್ ಮತ್ತು ಬೆಲೆ

ಇತರೆ ಫೀಚರ್ಸ್ ಮತ್ತು ಬೆಲೆ

ಆಂಡ್ರಾಯ್ಡ್ 8.1 ಓರಿಯೊ ಆಧಾರಿತ MIUI 9ನ, ಫೇಸ್‌ಅನ್‌ಲಾಕ್, ಬ್ಯಾಂಡ್ 40 LTE ಬೆಂಬಲವನ್ನು ಒಳಗೊಂಡಿರುವ ಈ ಸ್ಮಾರ್ಟ್‌ಫೋನ್ ಇತರೆ ಎಲ್ಲಾ ಸಾಮಾನ್ಯ ಹೈ ಎಂಡ್ ಫೀಚರ್ಸ್‌ಗಳನ್ನು ಹೊಂದಿದೆ. ಇಷ್ಟೆಲ್ಲಾ ಫೀಚರ್ಸ್ ಹೊಂದಿರಬಹುದಾದ ಈ ಸ್ಮಾರ್ಟ್‌ಪೋನಿನ ಆರಂಭಿಕ ಬೆಲೆ 33,600 ರೂಪಾಯಿಗಳಿಂದ ಶುರುವಾಗಲಿದೆ ಎಂದು ಹೇಳಲಾಗಿದೆ.

Best Mobiles in India

English summary
Pocophone F1 has an identical camera setup as of the Xiaomi Redmi Note 5 Pro. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+