ಶಿಯೋಮಿ ಪೊಕೊ ಫೋನಿನ ಒಳಗೆ ಏನೀದೆ..? ಶಾಕಿಂಗ್ ಸತ್ಯ ಬಿಚ್ಚಿಟ್ಟ ವಿಡಿಯೋ..!!
ಮಾರುಕಟ್ಟೆಗೆ ಹೊಸದಾಗಿ ಶಿಯೋಮಿ ಲಾಂಚ್ ಮಾಡಿರುವ ಪೊಕೊ F1 ಸ್ಮಾರ್ಟ್‌ಫೋನ್ ಮೊದಲ ಸೇಲ್‌ನಲ್ಲಿ ಈಗಾಗಲೇ ಕಾಣಿಸಿಕೊಂಡಿದೆ. ಈ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿಯೇ ಅತೀ ಕಡಿಮೆ ಬೆಲೆಗೆ ಮಾರಾಟವಾಗುತ್ತಿರುವ ಪ್ರೀಮಿಯಮ್ ಫೋನ್ ಎನ್ನಿಸಿಕೊಂಡಿದೆ. ಇದಲ್ಲದೇ ತನ್ನದೇ ವಿಶೇಷತಗಳಿಂದ ಕೂಡಿದೆ. ಇದೇ ಮೊದಲ ಬಾರಿಗೆ ಸ್ಮಾರ್ಟ್‌ಫೋನ್ ಗೇಮ್ ಆಡುವ ಸಂದರ್ಭದಲ್ಲಿ ಬಿಸಿಯಾಗಬಾರುದು ಎನ್ನುವ ಕಾರಣಕ್ಕೆ ಲಿಕ್ವೀಡ್ ಕೂಲಿಂಗ್ ಟೆಕ್ನಾಲಜಿಯನ್ನು ಬಳಕೆ ಮಾಡಿಕೊಳ್ಳಲಾಗಿದೆ.

ಈ ಹಿನ್ನಲೆಯಲ್ಲಿ ಶಿಯೋಮಿ ಪೊಕೊ F1 ಸ್ಮಾರ್ಟ್‌ಫೋನ್ ನಲ್ಲಿ ಇರುವ ವಿಶೇಷತೆಗಳನ್ನು ನೀವು ಇಷ್ಟು ದಿನ ಕೇಳಿದ್ರಿ, ಆದರೆ ಇಂದು ನಾವು ಫೋನ್ ಒಳಗೆ ಹೇಗಿದೆ. ಪೊಕೊ F1 ನಲ್ಲಿ ಶಿಯೋಮಿ ಹೇಳಿದ ಹಾಗೆ ಲಿಕ್ವೀಡ್ ಕೂಲಿಂಗ್ ಆಯ್ಕೆಯನ್ನು ನೋಡಬಹುದೇ ಎಂಬುದನ್ನು ತಿಳಿಸಲಿದ್ದೇವೆ, ಇಲ್ಲಿರುವ ವಿಡಿಯೋದಲ್ಲಿ ನೀವು ಪೊಕೊ ಫೋನಿನಲ್ಲಿ ಏನಿದೆ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ.

ಸುಳ್ಳು ಹೇಳದ ಶಿಯೋಮಿ:
ಕಡಿಮೆ ಬೆಲೆಗೆ ಸ್ಮಾರ್ಟ್‌ಫೋನ್ ಲಾಂಚ್ ಮಾಡುವ ಶಿಯೋಮಿ, ತನ್ನ ಫೋನಿನಲ್ಲಿ ಕಳಪೆ ಗುಣಮಟ್ಟದ ವಸ್ತುಗಳನ್ನು ನೀಡಲಿದೆ ಎನ್ನುವ ಮಾತು ಕೇಳಿ ಬಂದಿತ್ತು. ಆದರೆ ಇಂದು ಈ ವಿಡಿಯೋ ಅದಕ್ಕೆ ಅಪವಾದ ಎನ್ನುವಂತೆ ಇದೆ. ಇದರಲ್ಲಿ ಇರುವ ಎಲ್ಲಾ ಮಾಹಿತಿಯೂ ಸತ್ಯವಾಗಿದೆ.

ಲಿಕ್ವೀಡ್ ಕೂಲಿಂಗ್:
ಟಾಪ್ ಎಂಡ್ ಸ್ಮಾರ್ಟ್‌ಫೋನಿನಲ್ಲಿಯೂ ಇಲ್ಲದ ಲಿಕ್ವೀಡ್ ಕೂಲಿಂಗ್ ಟೆಕ್ನಾಲಜಿಯನ್ನು ಈ ಫೋನಿನ ಒಳಗೆ ನೋಡಬಹುದಾಗಿದೆ. ಅಲ್ಲದೇ ಟಾಪ್ ಎಂಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಇರಬೇಕಾದ ಎಲ್ಲಾ ಆಯ್ಕೆಗಳನ್ನು ಶಿಯೋಮಿ ಪೊಕೊ F1 ಸ್ಮಾರ್ಟ್‌ಫೋನ್ ಅಳವಡಿಸಿರುವುದನ್ನು ಕಾಣಬಹುದಾಗಿದೆ.
ವಿಡಿಯೋ ನೋಡಿ:
ಶಿಯೋಮಿ ಪೊಕೊ F1 ಸ್ಮಾರ್ಟ್‌ಫೋನ್ ಒಪನ್ ಮಾಡಿದರೆ ಯಾವ ರೀತಿಯಲ್ಲಿ ಕಾಣಿಸಿಕೊಳ್ಳಲಿದೆ ಎಂಬುದನ್ನು ಈ ವಿಡಿಯೋ ದಲ್ಲಿ ಹಂತ ಹಂತವಾಗಿ ತೋರಿಸಲಿದೆ. ಅಲ್ಲದೇ ಯಾವ ಯಾವ ಜಾಗದಲ್ಲಿ ಯಾವ ಭಾಗಗಳನ್ನು ಅಳವಡಿಸಲಾಗಿದೆ ಎಂಬುದನ್ನು ವಿವರಿಸಲಾಗಿದೆ.

ಬೆಸ್ಟ್:
ಸದ್ಯ ಮಾರುಕಟ್ಟೆಯಲ್ಲಿ ಇಷ್ಟು ಬೆಲೆಗೆ ಇದಕ್ಕಿಂತ ಬೆಸ್ಟ್ ಫೋನ್ ಇನ್ನೊಂದು ಸಿಗುವುದಿಲ್ಲ ಎಂದರೆ ತಪ್ಪಾಗುವುದಿಲ್ಲ. ಕ್ಯಾಮೆರಾ, ಸ್ವೀಕರ್, ಬ್ಯಾಟರಿ, ಫೇಸ್‌ಲಾಕ್‌ಗಾಗಿ ಇರುವ ಇನ್‌ಫಾರೆಡ್ ಸೆನ್ಸಾರ್ ಸೇರಿದಂತೆ ಎಲ್ಲಾ ಆಯ್ಕೆಗಳನ್ನು ಇದರಲ್ಲಿ ಕಾಣಬಹುದಾಗಿದೆ.

ವಿಶ್ವ ಮಾರುಕಟ್ಟೆಯನ್ನೇ ಅಲ್ಲಾಡಿಸಲಿದೆ ಪೊಕೊ F1: ರೂ.19,999ಕ್ಕೆ ಎಂಥಹ ಫೋನ್ ಗೊತ್ತಾ..!?
ಶಿಯೋಮಿ ಭಾರತೀಯ ಮಾರುಕಟ್ಟೆಯಲ್ಲಿ ಮಾಡಿದ ಜಾದೂವನ್ನು ಯಾರು ಮರೆಯುವಂತೆ ಇಲ್ಲ. ಇದೇ ಮಾದರಿಯಲ್ಲಿ ಹೊಸದೊಂದು ಟಾಪ್ ಎಂಡ್ ಗೇಮಿಂಗ್ ಸ್ಮಾರ್ಟ್‌ಫೋನ್ ಅನ್ನು ಬಳಕೆದಾರರಿಗೆ ನೀಡಲು ಪೊಕೊ ಬ್ರಾಂಡ್ ಅನ್ನು ಇಂದು ಜಾಗತಿಕವಾಗಿ ಲಾಂಚ್ ಮಾಡಿದೆ. ಈ ಬ್ರಾಂಡ್‌ನ ಮೊದಲ ಸ್ಮಾರ್ಟ್‌ಫೋನ್ ಆಗಿ ಪೊಕೊ F1 ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಿದೆ. ಈ ಸ್ಮಾರ್ಟ್‌ಫೋನ್ ವಿಶ್ವ ಮಾರುಕಟ್ಟೆಯಲ್ಲಿ ಶಿಯೋಮಿಗೆ ಪ್ರಥಮ ಸ್ಥಾನ ತಂದುಕೊಟ್ಟರು ತಪ್ಪಿಲ್ಲ.

ಟಾಪ್ ಎಂಡ್ ವಿಶೇಷತೆಗಳನ್ನು ಹೊಂದಿರುವ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಯಲ್ಲಿ ಬಳಕೆದಾರರಿಗೆ ಅತ್ಯಂತ ಕಡಿಮೆ ಬೆಲೆಗೆ ನೀಡುವ ಸಲುವಾಗಿ ಪೊಕೊ ಬ್ರಾಂಡ್ ಅನ್ನು ಹುಟ್ಟಿ ಹಾಕಲಾಗಿದೆ. ಈ ಹಿನ್ನಲೆಯಲ್ಲಿ ಮೊದಲಾಗಿ ಕಾಣಿಸಿಕೊಂಡಿರುವ ಪೊಕೊ FI ಸ್ಮಾರ್ಟ್‌ಫೋನ್ ಪರ್ಫರ್ಮೆನ್ಸ್‌ಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದೆ. ಇದಕ್ಕದಾಗಿಯೇ ಇದನ್ನು ಮಾಸ್ಟರ್ ಆಫ್ ಸ್ಪೀಡ್ ಎಂದು ಹೆಸರು ಪಡೆದುಕೊಂಡಿದೆ. ಬೆಲೆಯಲ್ಲಿ ಬೇರೆ ಯಾವುದೇ ಸ್ಮಾರ್ಟ್‌ಫೋನ್‌ಗಳು ಇದಕ್ಕೆ ಸೆಡ್ಡು ಹೊಡೆಯುವುದು ಸಾಧ್ಯವೇ ಇಲ್ಲ ಎಂದು ಮಾರುಕಟ್ಟೆ ತಜ್ಞರೇ ಬಣ್ಣಿಸಿದ್ದಾರೆ.

ಭಾರತದಲ್ಲಿಯೇ ಮೊದಲು:
ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಆದ್ಯತೆಯನ್ನು ಪಡೆದುಕೊಂಡಿರುವ ಹಿನ್ನಲೆಯಲ್ಲಿ ಶಿಯೋಮಿ, ತನ್ನ ನೂತನ ಸ್ಮಾರ್ಟ್‌ಫೋನ್ ಅನ್ನು ಜಾಗತಿಕವಾಗಿ ಭಾರತದಲ್ಲಿಯೇ ಲಾಂಚ್ ಮಾಡಿದೆ. ಈ ಮೂಲಕ ಭಾರತೀಯ ಮಾರುಕಟ್ಟೆಯ ಪ್ರಾಮುಖ್ಯತೆಯನ್ನು ಜಗತ್ತಿಗೆ ತೋರಿಸಲು ಮುಂದಾಗಿದೆ. ಮೊದಲಿಗೆ ಈ ಫೋನ್ ಇಲ್ಲಿ ಮಾರಾಟವಾಗಲಿದೆ. ಆನ್‌ಲೈನ್ ಸೇಲಿನಲ್ಲಿ ಪಡೆಯುವುದು ಕಷ್ಟ ಸಾಧ್ಯವಾಗಲಿದೆ.

ಪರ್ಫರ್ಮೆನ್ಸ್ ಸ್ಮಾರ್ಟ್‌ಫೋನ್:
ಪೊಕೊ FI ಸ್ಮಾರ್ಟ್‌ಫೋನ್ ಗೇಮರ್‌ಗಳಿಗೆ ವಿನ್ಯಾಸ ಮಾಡಲಾಗಿದ್ದು, ಇದಕ್ಕಾಗಿಯೇ ಸ್ನಾಪ್‌ಡ್ರಾಗನ್ 845 ಪ್ರೋಸೆಸರ್ ಅನ್ನು ಕಾಣಬಹುದಾಗಿದೆ. ಮಾರುಕಟ್ಟೆಯಲ್ಲಿ ಕೆಲವೇ ಸ್ಮಾರ್ಟ್‌ಫೋನ್‌ಗಳು ಈ ಪ್ರೋಸೆಸರ್ ಹೊಂದಿವೆ. ಇದಲ್ಲದೇ ಆಡ್ರಿನೋ 630 GPUವನ್ನು ನೀಡಲಾಗಿದ್ದು, 2.8GHz CPU ಬಳಕೆದಾರರಿಗೆ ವೇಗದ ಕಾರ್ಯಚರಣೆಯನ್ನು ನೀಡಲಿದ್ದು, ಮಾರುಕಟ್ಟೆಯ ಟಾಪ್ ಎಂಡ್ ಪ್ರೋಸೆಸರ್ ಇದಾಗಿದೆ.

ಗೇಮರ್ ಗಳ ಸ್ವರ್ಗ:
ಹೆಚ್ಚಿನ ಗೇಮ್ ಆಡುವ ಸಂದರ್ಭದಲ್ಲಿ ಬಿಸಿಯಾಗಬಾರದು ಎನ್ನುವ ಕಾರಣಕ್ಕಾಗಿ ಲಿಕ್ವೀಡ್ ಕೂಲಿಂಗ್ ಟೆಕ್ನಾಲಜಿಯನ್ನು ಬಳಕೆ ಮಾಡಿಕೊಳ್ಳಲಾಗಿದೆ. ಇದು ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಬಿಸಿ ಮಾಡುವುದನ್ನು ಕಡಿಮೆ ಮಾಡಲಿದೆ. ಇದರಿಂದಾಗಿ ಹೆಚ್ಚಿನ ಪ್ರಮಾಣದಲ್ಲಿ ಗೇಮ್‌ಗಳನ್ನು ಹೆಚ್ಚು ಹೊತ್ತು ಆಡಬಹುದಾಗಿದೆ. ಈ ಹೊಸ ತಂತ್ರಜ್ಞಾನ 300% ವೇಗದಲ್ಲಿ ಬಿಸಿಯನ್ನು ತಡೆಯಲಿದೆ. ಈ ವಿಚಾರದಲ್ಲಿ ಒನ್‌ಪ್ಲಸ್ 6 ಗಿಂತಲೂ ಬೆಸ್ಟ್ ಎನ್ನಲಾಗಿದೆ. ಸ್ಯಾಮ್‌ಸಂಗ್‌ಗೆ ಸಹ ಸೆಡ್ಡು ಹೊಡೆಯಲಿದೆ.

ಬೆಂಚ್ ಮಾರ್ಕ್:
ಪೊಕೊ FI ಸ್ಮಾರ್ಟ್‌ಫೋನ್ ಅಂಟಂಟು ಬೆಂಚ್ ಮಾರ್ಕ್ ನಲ್ಲಿ 2,91,302 ಅಂಕವನ್ನು ಪಡೆದುಕೊಂಡಿದೆ. ಈ ಮೂಲಕ ಮಾರುಕಟ್ಟೆಯಲ್ಲಿ ಲಭ್ಯವಿರುವ ಟಾಪ್ ಎಂಡ್ ಸ್ಮಾರ್ಟ್ಫೋನ್ ಎನ್ನಿಸಿಕೊಂಡಿದೆ. ಇದು ಬೆಸ್ಟ್ ಗೇಮಿಂಗ್ ಫೋನ್ ಎನ್ನುವುದಕ್ಕೆ ಯಾವುದೇ ಸಂಶಯವಿಲ್ಲ ಎನ್ನಲಾಗಿದೆ. ಒನ್‌ಪ್ಲಸ್ 6 ಗಿಂತಲೂ ಬೆಸ್ಟ್ ಎನ್ನುವ ಮಾತು ಕೇಳಬಂದಿದೆ.


ಪೊಕೊ FI ಇನ್‌ಫಾರೆಡ್ ಫೇಸ್ ಅನ್‌ಲಾಕ್
6.18 ಇಂಚಿನ FHD+ ಗುಣಮಟ್ಟದ ಡಿಸ್‌ಪ್ಲೇಯನ್ನು ನೀಡಲಾಗಿದೆ. ಇದಲ್ಲದೇ ಇನ್‌ಫಾರೆಡ್ ಫೇಸ್ ಆನ್‌ಲಾಕ್ ಅನ್ನು ಇದರಲ್ಲಿ ಅಳವಡಿಸಲಾಗಿದೆ. ಇದು ಕತ್ತಲೆಯಲ್ಲಿಯೂ ನಿಮ್ಮ ಫೇಸ್ ಅನ್ನು ಗುರುತಿಸಿ ಫೇಸ್‌ಆನ್‌ಲಾಕ್ ಮಾಡಲಿದೆ ಎನ್ನಲಾಗಿದೆ. ಅಲ್ಲದೇ ಬೇರೆ ಯಾರು ಸಹ ನಿಮ್ಮ ಫೋಟೋವನ್ನು ಕದ್ದು ಆನ್‌ಲಾಕ್ ಮಾಡಲಾಗದ ರೀತಿಯಲ್ಲಿ ವಿನ್ಯಾಸ ಮಾಡಲಾಗಿದೆ. ಇದಕ್ಕದಾಗಿ ಕ್ಯಾಮೆರಾವನ್ನು ಬಳಕೆ ಮಾಡಿಕೊಂಡಿಲ್ಲ ಎನ್ನಲಾಗಿದೆ. ಇದಕ್ಕದಾಗಿಯೇ ನೀಡಲಾಗದೆ. ನೋಚ್ ಬೇಡ ಎಂದರೆ ತೆಗೆದು ಬಿಡುವ ಆಯ್ಕೆಯನ್ನು ನೀಡಲಾಗಿದೆ.

ಬ್ಯಾಟರಿ:
ಪೊಕೊ FI ಸ್ಮಾರ್ಟ್‌ಫೋನ್ ಬ್ಯಾಟರಿ ಅತ್ಯುತ್ತಮವಾಗಿದೆ. ಇದಕ್ಕಾಗಿ ಇದರಲ್ಲಿ ಮಾರುಕಟ್ಟೆಯಲ್ಲಿ ಟಾಪ್ ಎಂಡ್ ಫೋನ್‌ಗಳಲ್ಲಿ ಇದರದಂತಹ 4000mAh ಬ್ಯಾಟರಿಯನ್ನು ನೀಡಿದ್ದು, ಇದು ಹೆಚ್ಚಿನ ಪ್ರಮಾಣದ ಬಾಳಿಕೆಯನ್ನು ನೀಡಲಿದೆ. ಫುಲ್ ಡೇ ಲೈಫ್ ನೀಡಲಿದೆ. ವೇಗವಾಗಿ ಚಾರ್ಜ್ ಆಗುವ ಸಲುವಾಗಿ ಕ್ವಿಕ್ ಚಾರ್ಜ್ 3.0ವನ್ನು ನೀಡಲಾಗಿದೆ.

4G +:
ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ 4G ಸೇವೆಯನ್ನು ಕಾಣಬಹುದಾಗಿದೆ. ಆದರೆ ಇದನ್ನು ಮೀರಿಸುವಂತೆ ಪೊಕೊ FI ಸ್ಮಾರ್ಟ್‌ಫೋನಿನಲ್ಲಿ 4G + ಸೇವೆಯನ್ನು ಮೊದಲ ಬಾರಿಗೆ ನೀಡುತ್ತಿದೆ. ಇದರಿಂದಾಗಿ ಬಳಕೆದಾರರು ಅತೀ ಹೆಚ್ಚು ವೇಗದ ಡೇಟಾವನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಅಲ್ಲದೇ ಡ್ಯುಯಲ್ VoLTE ಸೇವೆಯನ್ನು ಇದರಲ್ಲಿ ನೀಡಲಾಗಿದೆ. ಬೆಸ್ಟ್ ನೆಟ್‌ವರ್ಕ್ ಎನ್ನಬಹುದಾಗಿದೆ.

8GB RAM- 256GB ಇಂಟರ್ನಲ್:
ಮಾರುಕಟ್ಟೆಯಲ್ಲಿ ಬೆಸ್ಟ್ ಎನ್ನಿಸಿಕೊಳ್ಳಬಹುದಾದ LPDDR4X 8GB RAM ಅನ್ನು ಪೊಕೊ FI ಸ್ಮಾರ್ಟ್‌ಫೋನಿನಲ್ಲಿ ಕಾಣಬಹುದಾಗಿದೆ. ಇದಲ್ಲದೇ 256GB ಇಂಟರ್ನಲ್ ಮೆಮೊರಿಯನ್ನು ನೀಡಲಾಗುತ್ತಿದೆ. ಇದರಿಂದಾಗಿ ಹೆಚ್ಚಿನ ವೇಗದಲ್ಲಿ ಕಾರ್ಯನಿರ್ವಹಿಸುವುದಲ್ಲದೇ, ಹೆಚ್ಚು ಪ್ರಮಾಣದಲ್ಲಿ ಸೇವ್ ಮಾಡಿಕೊಳ್ಳುವ ಅವಕಾಶ ಮಾಡಿಕೊಟ್ಟಿದೆ. ಅಲ್ಲದೇ 256GB ವರೆಗೆ ಮೆಮೊರಿಯನ್ನು ವಿಸ್ತರಿಸಿಕೊಳ್ಳಬಹುದಾಗಿದೆ.

ಪೊಕೊ FI ಸ್ಮಾರ್ಟ್‌ಫೋನ್ ಡಿಸೈನ್:
ಹಾರ್ಡ್ ಕೋಟೆಡ್ ಪಾಲಿಕೋರ್ನೆಟ್ ಯೂನಿಬಾಡಿ ವಿನ್ಯಾಸವನ್ನು ಮಾಡಲಾಗಿದ್ದು, ಇದು ಬಿದ್ದರು ಒಡೆಯುವುದಿಲ್ಲ ಎನ್ನಲಾಗಿದೆ. ತುಂಬ ಗಟ್ಟಿಯಾಗಿ ನಿರ್ಮಿಸಲಾಗಿದೆ. USB -C ಅನ್ನು ಅಲ್ಲದೇ 3.5mm ಹೆಡ್‌ಪೋನ್ ಜಾಕ್ ಅನ್ನು ಇದರೊಂದಿಗೆ ನೀಡಲಾಗಿದೆ. ಒಟ್ಟು ನಾಲ್ಕು ಬಣ್ಣದಲ್ಲಿ ಈ ಸ್ಮಾರ್ಟ್‌ಫೋನ್ ಮಾರಾಟವಾಗಲಿದೆ. ಬಿದ್ದರು ಒಡೆಯ ಪೈಬರ್ ಅನ್ನು ನೀಡಲಾಗಿದೆ.


20 ಸೆಲ್ಫಿ ಕ್ಯಾಮೆರಾ:
ಪೊಕೊ FI ಸ್ಮಾರ್ಟ್‌ಫೋನಿನಲ್ಲಿ 20 ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. ಇದರಿಂದಾಗಿ ಬೆಸ್ಟ್ ಸೆಲ್ಪಿಗಳನ್ನು ತೆಗೆಯಬಹುದಾಗಿದೆ. ಇದಕ್ಕದಾಗಿ AI ಬ್ಯೂಟಿಫೈ ಅನ್ನು ಅಳವಡಿಸಲಾಗಿದ್ದು, ಬಳಕೆದಾರರು ಉತ್ತಮ ಸೆಲ್ಫಿಗಳನ್ನು ಕ್ಲಿಕಿಸಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗಿದೆ.

ಹೊಸ ಮಾದರಿಯ ಇನ್‌ಟರ್ಪೇಸ್:
ಪೊಕೊ FI ಸ್ಮಾರ್ಟ್‌ಫೋನಿನಲ್ಲಿ ಪೊಕೊ ಲಾಂಚರ್ ಅನ್ನು ನೀಡಲಾಗಿದೆ. ಇದರೊಂದಿಗೆ ಟಾರ್ಬೋ ಚಾರ್ಜರ್ ನೊಂದಿಗೆ ಕಾಣಿಸಿಕೊಳ್ಳಲಿದೆ. ಇದಕ್ಕಾಗಿಯೇ ಭಿನ್ನ ಮಾದರಿಯ ಲಾಂಚರ್ ಅನ್ನು ನೀಡಲಾಗಿದೆ. ಇದು ಬೆಸ್ಟ್ ಎನ್ನಿಸಿಕೊಳ್ಳಲಿದೆ. ಇದು ಟಾಪ್ ಎಂಡ್ ವಿಶೇಷತೆಗಳನ್ನು ಹೊಂದಿದೆ. ಕಲರ್ಗಳಲ್ಲೇ ಆಪ್‌ಗಳನ್ನು ಕಂಡು ಹಿಡಿಯಬಹುದಾಗಿದೆ. ಆಂಡ್ರಾಯ್ಡ್ p ಆಪ್‌ಡೇಟ್ ಪಡೆದುಕೊಳ್ಳಲಿದೆ.

ಪೊಕೊ FI ಸ್ಮಾರ್ಟ್‌ಫೋನ್ ಬೆಲೆ:
ಮೂರು ಆವೃತ್ತಿ ಆವೃತ್ತಿಯಲ್ಲಿ ಪೊಕೊ FI ಸ್ಮಾರ್ಟ್‌ಫೋನ್ ಮಾರಾಟವಾಗಲಿದ್ದು, 6GB RAM + 64GB ಕೇವಲ ರೂ.20,999ಕ್ಕೆ ದೊರೆಯಲಿದೆ, ಮಾರುಕಟ್ಟೆಯನ್ನು ಈ ಬೆಲೆಯೂ ಅಲ್ಲಾಡಿಸಲಿದೆ. ಇದರೊಂದಿಗೆ 6GB RAM + 128GB ಆವೃತ್ತಿಯೂ 23,999ಕ್ಕೆ ದೊರೆಯಲಿದೆ. ಇದರೊಂದಿಗೆ 8GB RAM+256GB ಆವೃತ್ತಿಯೂ ರೂ.28,999ಕ್ಕೆ ಮಾರಾಟವಾಗಲಿದೆ. ಇನ್ನೊಂದು ಮಾದರಿಯಲ್ಲಿ 8GB RAM+256GB ಆವೃತ್ತಿಯೂ ರೂ.29999ಕ್ಕೆ ದೊರೆಯಲಿದೆ.

ಬೆಲೆ
ರೂ,1000 ಕ್ಯಾಷ್ ಬ್ಯಾಕ್ ಸಹ ನೀಡಲಾಗಿದೆ. ಇದರೊಂದಾಗಿ ಗಿ 6GB RAM + 64GB ರೂ.19999ಕ್ಕೆ ದೊರೆಯಲಿದೆ ಎನ್ನಲಾಗಿದೆ. ಟಾಪ್ ಎಂಡ್ ಫೋನ್‌ವೊಂದು ಇಷ್ಟು ಕಡಿಮೆ ಬೆಲೆಗೆ ದೊರೆಯುವುದು ಸಾಧ್ಯವೇ ಇಲ್ಲ. 6GB RAM + 128GB ಆವೃತ್ತಿಯೂ 22,999ಕ್ಕೆ ಹಾಗೂ 8GB RAM+256GB ಆವೃತ್ತಿಯೂ ರೂ.27,999ಕ್ಕೆ ದೊರೆಯಯಲಿದೆ. ಅಲ್ಲದೇ ಜಿಯೋ 6T ಡೇಟಾವನ್ನು ನೀಡಲಿದೆ. ಇದು ಮೊದಲ ಸೇಲ್‌ನಲ್ಲಿ ಮಾತ್ರವೇ ಲಭ್ಯವಿರಲಿದೆ.


Click it and Unblock the Notifications








