ಆನ್‌ಲೈನಿನಲ್ಲಿ ಪಾಸ್‌ಪೋರ್ಟ್‌!..ಪೊಲೀಸ್ ದೃಢೀಕರಣ ಬೇಕಿಲ್ಲ, ಹಣವೂ ಖರ್ಚಾಗಲ್ಲ!

|

ದೇಶದಲ್ಲೇ ಅತಿ ಹೆಚ್ಚು ಪಾಸ್‌ಪೋರ್ಟ್‌ ವಿತರಿಸುವ ರಾಜ್ಯದಲ್ಲಿ ಕರ್ನಾಟಕ ಪ್ರಥಮ ಸ್ಥಾನದಲ್ಲಿದ್ದು, 2017- 18ನೇ ಸಾಲಿನಲ್ಲಿ ರಾಜ್ಯದಲ್ಲಿ 7.34 ಲಕ್ಷ ಮಂದಿಗೆ ಪಾಸ್‌ಪೋರ್ಟ್‌ ವಿತರಿಸಲಾಗಿದೆ. ಈಗ ಆನ್‌ಲೈನ್‌ ಮೂಲಕ ಯಾವುದೇ ಸ್ಥಳದಿಂದ ಪಾಸ್‌ ಪೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಬಹುದಿರುವುದರಿಂದ ಪಾಸ್‌ಪೋರ್ಟ್ ಮಾಡಿಸುವವರ ಪ್ರಮಾಣ ಕೂಡ ಹೆಚ್ಚಾಗಿದೆ ಎಂದು ರಾಜ್ಯ ಪಾದೇಶಿಕ ಪಾಸ್‌ಪೋರ್ಟ್‌ ಅಧಿಕಾರಿ ಭರತ್‌ ಕುಮಾರ್‌ ಕುಟಾಟಿ ಅವರು ಹೇಳಿದ್ದಾರೆ.

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯು (ಎಫ್ಕೆಸಿಸಿಐ) ಬುಧವಾರ ಹಮ್ಮಿಕೊಂಡಿದ್ದ ಸಂವಾದದಲ್ಲಿ ಮಾತನಾಡಿದ ಭರತ್‌ ಕುಮಾರ್‌ ಕುಟಾಟಿ ಅವರು, ಸಾರ್ವಜನಿಕರು ಆನ್‌ಲೈನ್‌ ಮೂಲಕ ಯಾವುದೇ ಸ್ಥಳದಿಂದ ಈಗ ಸುಲಭವಾಗಿ ಪಾಸ್‌ ಪೋರ್ಟ್‌ಗೆ ಅರ್ಜಿ ಸಲ್ಲಿಸಬಹುದು. ಹಿಂದೆ ಪೊಲೀಸರು ಮನೆಗೆ ಭೇಟಿ ನೀಡಿ ಪರಿಶೀಲಿಸಿ ದೃಢೀಕರಿಸುವುದು ಕಡ್ಡಾಯವಾಗಿತ್ತು. ಆದರೆ, ಈಗ ಅಂತಹ ನಿಯಮವಿಲ್ಲ. ಇದರಿಂದ ಪಾಸ್‌ಪೋರ್ಟ್ ಮಾಡಿಸುವುದು ಬಹಳ ಸರಳವಾಗಿದೆ ಎಂದು ಹೇಳಿದರು.

ಆನ್‌ಲೈನಿನಲ್ಲಿ ಪಾಸ್‌ಪೋರ್ಟ್‌!..ಪೊಲೀಸ್ ದೃಢೀಕರಣ ಬೇಕಿಲ್ಲ, ಹಣವೂ ಖರ್ಚಾಗಲ್ಲ!

ಈಗ ಅರ್ಜಿದಾರರ ವಿರುದ್ಧ ಯಾವುದಾದರೂ ಕ್ರಿಮಿನಲ್‌ ಪ್ರಕರಣ ದಾಖಲಾಗಿದೆಯೇ ಎಂಬ ಬಗ್ಗೆ ಪೊಲೀಸರಿಂದ ನೇರವಾಗಿ ಮಾಹಿತಿ ಪಡೆಯಲಾಗುತ್ತದೆ. ಇದರಿಂದಾಗಿ ಪೊಲೀಸರು ಅರ್ಜಿದಾರರ ಮನೆಗೆ ತೆರಳಿ ಇಲ್ಲವೇ ಅರ್ಜಿದಾರರನ್ನು ಠಾಣೆಗೆ ಕರೆಸಿ ಮಾಹಿತಿ ಪಡೆಯುವ ಅಗತ್ಯವಿಲ್ಲ. ಈ ಬಗ್ಗೆ ಟ್ವಿಟರ್‌ನಲ್ಲಿ ಮಾಹಿತಿ ನೀಡಲಾಗಿದ್ದು, ಮೊಬೈಲ್ ಆಪ್ ಮೂಲಕವೇ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಿ ಎಂದು ಹೇಳಿದರು. ಹಾಗಾದರೆ, ಮೊಬೈಲ್‌ ಆಪ್‌ನಲ್ಲೇ ಪಾಸ್‌ ಪೋರ್ಟ್‌ಗೆ ಅರ್ಜಿ ಸಲ್ಲಿಕೆ ಹೇಗೆ ಎಂಬುದನ್ನು ಮುಂದೆ ತಿಳಿಯಿರಿ.

'ಎಂಪಾಸ್‌ಪೋರ್ಟ್ ಸೇವಾ' (Mpassportseva)!!

'ಎಂಪಾಸ್‌ಪೋರ್ಟ್ ಸೇವಾ' (Mpassportseva)!!

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಇದೇ ಮಂಗಳವಾರ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವುದಕ್ಕಾಗಿ 'ಎಂಪಾಸ್‌ಪೋರ್ಟ್ ಸೇವಾ' ಎಂಬ ಮೊಬೈಲ್ ಆಪ್‌ಗೆ ಚಾಲನೆ ನೀಡಿದ್ದಾರೆ. ಕೇಂದ್ರ ಸರ್ಕಾರದ ಈ 'ಎಂಪಾಸ್‌ಪೋರ್ಟ್ ಸೇವಾ' (Mpassportseva) ಆಪ್‌ ಸಹಾಯದಿಂದ ಮೊಬೈಲ್‌ನಲ್ಲಿಯೇ ಪಾಸ್‌ಪೋರ್ಟ್ ಪಡೆಯಬಹುದಾಗಿದೆ.

ಹೇಗಿದೆ ಮೊಬೈಲ್ ಆಪ್?

ಹೇಗಿದೆ ಮೊಬೈಲ್ ಆಪ್?

'ಎಂಪಾಸ್‌ಪೋರ್ಟ್ ಸೇವಾ' (Mpassportseva) ಆಪ್‌ ಅನ್ನು ಮೊಬೈಲ್‌ಗೆ ಡೌನ್‌ಲೋಡ್ ಮಾಡಿಕೊಂಡರೆ, ಈ ಆಪ್‌ಗೆ ನೀವು ರಿಜಿಸ್ಟರ್ ಆಗುವುದಕ್ಕೆ ಕೇಳಿಕೊಳ್ಳುತ್ತದೆ. ಒಮ್ಮೆ ನೀವು ಪಾಸ್‌ಪೋರ್ಟ್ ಕಚೇರಿ, ಹೆಸರು, ಹುಟ್ಟಿದ ದಿನ, ಇಮೇಲ್‌ ವಿಳಾಸಗಳನ್ನು ನೀಡಿ ನಿಮ್ಮ ಗುರುತನ್ನು ದಾಖಲಿಸಿ ಯುಸರ್‌ನೇಮ್ ಮತ್ತು ಪಾಸ್‌ವರ್ಡ್ ಅನ್ನು ಪಡೆದುಕೊಳ್ಳಬಹುದು

ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಕೆ!

ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಕೆ!

'ಎಂಪಾಸ್‌ಪೋರ್ಟ್ ಸೇವಾ' ಮೊಬೈಲ್ ಆಪ್‌ನಲ್ಲಿ ನೀವು ಲಾಗಿನ್ ಆದ ನಂತರ ನೀವು ನೇರವಾಗಿ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಬಹುದಾಗಿದೆ. ಯೂಸರ್ ಅಪ್ಲಿಕೇಷನ್ ಆಯ್ಕೆಯನ್ನು ತೆರೆದು, ಹೊಸದಾಗಿ ಪಾರ್ಸ್‌ಪೋರ್ಟ್ ಅರ್ಜಿದಾರನೇ ಅಥವಾ ಮತ್ತೊಮ್ಮೆ ಪಾಸ್‌ಪೋರ್ಟ್‌ಗೆ ಅರ್ಜಿಯನ್ನು ಸಲ್ಲಿಸುತ್ತಿದ್ದಾರ ಎಂಬ ಮಾಹಿತಿಯನ್ನು ತುಂಬಿ ಮುಂದುವರೆಯಬಹುದಾಗಿದೆ.

ಯಾವ ರೀತಿಯ ಪಾಸ್‌ಪೋರ್ಟ್?

ಯಾವ ರೀತಿಯ ಪಾಸ್‌ಪೋರ್ಟ್?

ಹೊಸದಾಗಿ ಪಾರ್ಸ್‌ಪೋರ್ಟ್ ಅರ್ಜಿದಾರನೇ ಅಥವಾ ಮತ್ತೊಮ್ಮೆ ಪಾಸ್‌ಪೋರ್ಟ್‌ಗೆ ಅರ್ಜಿಯನ್ನು ಸಲ್ಲಿಸುತ್ತಿದ್ದಾರ ಎಂಬ ಆಯ್ಕೆಯ ಕೆಳಗೆ ಮತ್ತೆರಡು ಆಯ್ಕೆಗಳನ್ನು ನೀಡಲಾಗಿದೆ. ಸಾಮಾನ್ಯ ಅಥವಾ ತತ್ಕಾಲ್ ಪಾಸ್‌ಪೋರ್ಟ್ ಬೇಕೆ ಮತ್ತು ಎಷ್ಟು ಪೇಜ್ ಹೊಂದಿರುವ ಪಾರ್ಸ್‌ಪೋರ್ಟ್‌ಗಾಗಿ ಅರ್ಜಿ ಸಲ್ಲಿಸುತ್ತಿದ್ದೀರಾ ಎಂಬ ಮಾಹಿತಿಯನ್ನು ಕೇಳುತ್ತದೆ.

ಪಾಸ್‌ಪೋರ್ಟ್ ಪಡೆಯುವಿಕೆ!

ಪಾಸ್‌ಪೋರ್ಟ್ ಪಡೆಯುವಿಕೆ!

ಮೇಲೆ ತಿಳಿಸಿದ ಮಾಹಿತಿಗಳನ್ನು ಅರ್ಜಿಯಲ್ಲಿ ತುಂಬಿದ ನಂತರ ಅರ್ಜಿದಾರರು ತಮ್ಮ ವೈಯಕ್ತಿಕ ಮಾಹಿತಿಯನ್ನು ತುಂಬಲು ಅನುಮತಿ ನೀಡಲಾಗುತ್ತದೆ. ನಿಮ್ಮ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ ಹಾಗೂ ಮೊಬೈಲ್‌ ಆಪ್‌ನಲ್ಲಿ ಕೇಳಿರುವ ನಿಮ್ಮ ಎಲ್ಲಾ ಗುರುತು ವಿಳಾಸಗಳನ್ನು ತುಂಬಿ ಪಾರ್ಸ್‌ಪೋರ್ಟ್‌ಗಾಗಿ ಅರ್ಜಿಯನ್ನು ಪೂರ್ಣಗೊಳಿಸಬಹುದು.

ಅರ್ಜಿ ಟ್ರ್ಯಾಕ್ ಮಾಡಬಹುದು!

ಅರ್ಜಿ ಟ್ರ್ಯಾಕ್ ಮಾಡಬಹುದು!

'ಎಂಪಾಸ್‌ಪೋರ್ಟ್ ಸೇವಾ' ಮೊಬೈಲ್ ಆಪ್‌ ಮೂಲಕ ಪಾರ್ಸ್‌ಪೋರ್ಟ್‌ಗಾಗಿ ಅರ್ಜಿಯನ್ನು ಪೂರ್ಣಗೊಳಿಸಿದ ನಂತರ, ಪಾಸ್‌ಪೋರ್ಟ್ ಕಚೇರಿಯಿಂದ ನಿಮ್ಮ ಅರ್ಜಿ ವಿಲೇವಾರಿ ಬಗ್ಗೆ ನೀವು ಟ್ರ್ಯಾಕ್ ಮಾಡಬಹುದು, ನಿಮ್ಮ ಅರ್ಜಿ ಯಾವ ಹಂತದಲ್ಲಿದೆ? ಯಶಸ್ವಿ ವೆರಿಫಿಕೇಷನ್ ಆಗಿದೆಯಾ? ಡೆಲಿವರಿ ಯಾವಾಗ ಎಂಬ ಮಾಹಿತಿಗಳನ್ನು ನೀವು ಪಡೆಯಬಹುದು.!

ಇತರೆ ಏನೆಲ್ಲಾ ಸೇವೆಗಳು ಲಭ್ಯ?

ಇತರೆ ಏನೆಲ್ಲಾ ಸೇವೆಗಳು ಲಭ್ಯ?

'ಎಂಪಾಸ್‌ಪೋರ್ಟ್ ಸೇವಾ' ಮೊಬೈಲ್ ಆಪ್‌ನಲ್ಲಿ ಮೇಲೆ ತಿಳಿಸಿದ ಎಲ್ಲಾ ಸೇವೆಗಳ ಜೊತೆಯಲ್ಲಿ ಡಾಕ್ಯುಮೆಂಟ್ ಅಡ್ವೈಸರ್, ಲೊಕೇಟ್ ಸೆಂಟರ್, ಸಂಪರ್ಕ ಪಡೆಯಬಹುದಾದ ಹಲವು ಸೇವೆಗಳನ್ನು ನೀಡಲಾಗಿದೆ. ಪ್ರಸ್ತುತ ಆಂಡ್ರಾಯ್ಡ್ ಮತ್ತು ಐಒಎಸ್ ಎರಡು ಮಾದರಿಗಳಲ್ಲಿಯೇ ಈ 'ಎಂಪಾಸ್‌ಪೋರ್ಟ್ ಸೇವಾ' ಆಪ್ ಲಭ್ಯವಿದೆ.

Best Mobiles in India

English summary
Did you know that the police need not visit your house to complete the verification process if you are a passport applicant? The Regional Passport Office (RPO). to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X